ಸೌಂದರ್ಯ ಪ್ರತಿಯೊಬ್ಬರಿಗೂ ಬಹಳ ಮುಖ್ಯ. ಸುಂದರವಾಗಿ ಕಾಣಬೇಕು ಎಂದು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಪಾರ್ಲರ್ಗಳಿಗೆ ಹೋಗಿ ಫೆಶೀಯಲ್, ಬ್ಲೀಚ್ ಎಲ್ಲವನ್ನು ಪ್ರಯತ್ನ ಮಾಡುತ್ತಾರೆ. ಅದರ ಜೊತೆಗೆ ಕೆಲವರು ಇನ್ನಷ್ಟು ಸುಂದರವಾಗಿ ಕಾಣಬೇಕು ಎನ್ನುವ ಕಾರಣಕ್ಕಾಗಿ ಅತಿಯಾಗಿ ಮೇಕಪ್ ಮಾಡಿಕೊಳ್ಳುತ್ತಾರೆ. ಅವರು ಮೇಕಪ್ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳಿಗೂ ಮೇಕಪ್ ಹೆಚ್ಚು ಮಾಡುತ್ತಾರೆ. ತಾವು ಮಾತ್ರವಲ್ಲದೆ, ತಮ್ಮ ಜತೆಗೆ ಬರುವ ಮಕ್ಕಳು ಕೂಡ ಸುಂದರವಾಗಿ ಕಾಣಬೇಕು ಎನ್ನುವ ಆಸೆಯಲ್ಲಿ ಮಕ್ಕಳಿಗೂ ಲಿಪ್ ಸ್ಟಿಕ್, ಮುಖಕ್ಕೆ ಫೌಂಡೇಶನ್ ಹಾಕಿ ಮೇಕಪ್ ಮಾಡುತ್ತಾರೆ. ಉದಾಹರಣೆಗೆ ಕೃಷ್ಣ ಜನ್ಮಾಷ್ಟಮಿ ದಿನ ಮಕ್ಕಳನ್ನು ಸುಂದರವಾಗಿ ತಯಾರು ಮಾಡಿ ಸಂತೋಷ ಪಡುತ್ತಾರೆ. ಆದರೆ ಮಕ್ಕಳಿಗೆ ಈ ಮೇಕಪ್ ಮಾಡುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಅವರ ಅರಿವಿಗೆ ಬಂದಿಲ್ಲ.
ಮಕ್ಕಳಿಗೆ ಅತಿಯಾಗಿ ಮೇಕಪ್ ಮಾಡಿದರೆ, ಅದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹದ ಹೊರಗಿನ ಭಾಗವು ಸುಂದರವಾಗಿ ಕಂಡರೂ ಒಳಗಿನ ಆರೋಗ್ಯಕ್ಕೆ ಹಾನಿ ಆಗುವುದು ಒಳ್ಳೆಯದಲ್ಲ. ಮಕ್ಕಳಿಗೆ ಮೇಕಪ್ ಮಾಡುವುದರಿಂದ ಆಗುವ ಕೆಟ್ಟ ಪರಿಣಾಮಗಳು ಎಂಬುದು ಇಲ್ಲಿದೆ.
ಮೇಕಪ್ ನಲ್ಲಿರುವ ಕೆಲವೊಂದು ಅಂಶಗಳಿಂದಾಗಿ ಮಕ್ಕಳ ಚರ್ಮವು ಒಣಗಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಅದರಿಂದಾಗಿ ಚರ್ಮದಲ್ಲಿ ತುರಿಕೆ ಉಂಟಾಗುತ್ತದೆ. ಅಲ್ಲದೇ ಚರ್ಮ ಕೆಂಪಾಗಿ ಹೆಚ್ಚು ಕಿರಿಕಿರಿ ಉಂಟಾಗುತ್ತದೆ.iದು ಚರ್ಮವನ್ನು ಹಾಳು ಮಾಡುತ್ತದೆ. ಹೀಗೆ ಚರ್ಮ ಒಣಗುವುದರಿಂದ ನಿಮಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಮಕ್ಕಳು ಸಣ್ಣವರಿಂದಾಗ ಮೇಕಪ್ ಅಭ್ಯಾಸವಾದರೆ ಮುಂದಿನ ದಿನಗಳಲ್ಲಿ ಮೊಡವೆ ಸೇರಿದಂತೆ ಬೇರೆ ಚರ್ಮದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ನಿಮ್ಮ ಉಗುರಿನ ಅಂದ ಹೆಚ್ಚಿಸಲು ಇಲ್ಲಿದೆ ಸೂಪರ್ ಐಡಿಯಾ
ಬೇರೆಯವರಿಗೆ ಹೋಲಿಸಿದರೆ ಮಕ್ಕಳ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಹೆಚ್ಚು ಮೇಕಪ್ ಮಾಡುವುದರಿಂದ ಚರ್ಮದ ಆರೋಗ್ಯ ಬಹು ಬೇಗ ಹಾಳಾಗುತ್ತದೆ, ಮಕ್ಕಳಿಗೆ ತುರಿಕೆ, ದದ್ದು ಮುಂತಾದ ರೋಗಗಳು ಬರುತ್ತದೆ. ಇತ್ತೀಚಿನ ಪೋಷಕರು ಮಕ್ಕಳಿಗೆ ಸಮಯ ಸಿಕ್ಕಾಗೆಲ್ಲ ಮೇಕಪ್ ಮಾಡಿ ಫೋಟೋ ತೆಗೆಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗೆ ಪದೇ ಪದೇ ಮುಖಕ್ಕೆ ಬಣ್ಣ ಹಚ್ಚುವುದು ಅವರಿಗೆ ತೊಂದರೆ ಉಂಟಾಗುತ್ತದೆ.
ಮಕ್ಕಳ ಚರ್ಮದಲ್ಲಿ ಹೀರಿಕೊಳ್ಳುವಿಕೆಯು ಶೇ.10ರಷ್ಟು ಹೆಚ್ಚಾಗಿರುವುದು. ಇದರಿಂದ ಲಿಪ್ ಸ್ಟಿಕ್ ನ ರಾಸಾಯನಿಕ ಹೆಚ್ಚು ಅಪಾಯಕಾರಿ. ಕೇವಲ ಲಿಪ್ಸ್ಟಿಕ್ ಅಲ್ಲದೇ ಎಲ್ಲ ಮೇಕಪ್ ಉತ್ಪನ್ನಗಳಲ್ಲಿ ವಿಷಕಾರಿ ಅಂಶಗಳಿರುವ ಕಾರಣ ಮಕ್ಕಳ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಮಕ್ಕಳ ಚರ್ಮ ಸೂಕ್ಷ್ಮವಾಗಿರುವುದರಿಂದ ಬಹು ಬೇಗನೆ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ