Travel Tips:ಬಸ್​ನಲ್ಲಿ ಹೋಗುವಾಗ ವಾಂತಿ ಮಾಡ್ತೀರಾ? ಹಾಗಾದ್ರೆ ಅದಕ್ಕೆ ಇಲ್ಲಿದೆ ಪರಿಹಾರ

How To Prevent Motion Sickness: ಈ ರೋಗದ ಎಲ್ಲ  ಸಮಸ್ಯೆಗಳನ್ನು ತಡೆಯುವುದು ಅಸಾಧ್ಯವಾದರೂ, ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಲು ಈ ಕೆಳಗಿನ ಸಲಹೆಗಳು ನಿಮಗೆ ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಲನೆಯ ಕಾಯಿಲೆಯನ್ನ(Motion sickness) ಕೆಲವೊಮ್ಮೆ ಕಾರಿನ ಅನಾರೋಗ್ಯ ಎಂದು ಕರೆಯಲಾಗುತ್ತದೆ,ಇದು ಟ್ರಾವೆಲ್(Travel)​ ಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದು ಮಕ್ಕಳಲ್ಲಿ(Childrens) ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರು ಮತ್ತು ಮೈಗ್ರೇನ್‌ಗೆ  ಹೊಂದಿರುವ ಜನರಲ್ಲಿ ಸಹ ಇದು ಸಾಮಾನ್ಯ. ನೀವು ಗಮನಿಸಿ ನೋಡಿ ಹೆಚ್ಚಿನ ಜನರಿಗೆ ಬಸ್​ ಪ್ರಯಾಣ ಮಾಡುವಾಗ ವಾಂತಿಯಾಗುತ್ತದೆ. ಅದನ್ನು ತಡೆಯಲು ಅವರು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ.

ಈ ಕಾಯಿಲೆಯ ಲಕ್ಷಣಗಳು ಯಾವುವು?

ವಾಕರಿಕೆ

ವಾಂತಿ

ತಲೆ

ತಿರುಗುವಿಕೆ

ಬೆವರುವುದು

ಕಾರಣಗಳೇನು?

 ಡೀಸೆಲ್ ಮತ್ತು ಪೆಟ್ರೋಲ್ ವಾಸನೆ 

ಬಸ್ಸು ಅಥವಾ ಕಾರಿನಲ್ಲಿ ಚಲುಸುತ್ತಿರುವ ವಿಚಿತ್ರ ಅನುಭವಗಳಾಗುವುದು ಸಾಮಾನ್ಯ. ಅಷ್ಟೇ ಅಲ್ಲ, ಪ್ರಯಾಣ ಮಾಡುವಾಗ ಏನಾದರೂ ಕುಡಿದರೆ ಅಥವಾ ತಿಂದರೆ  ಬಹು ಬೇಗ ವಾಂತಿಯಾಗುತ್ತದೆ.  ನಿಮಗೆ ಪೆಟ್ರೋಲ್, ಡೀಸೆಲ್ ನಂತಹ ವಾಸನೆ  ಬಂದರೂ ಸಹ ತಡೆಯಲು ಆಗುವುದಿಲ್ಲ. ಆ ವಾಸನೆಗಳು ಸಮಸ್ಯೆ ಇರುವವರಿಗೆ ಹೆಚ್ಚು ತೊಂದರೆಯನ್ನು ಮಾಡುತ್ತದೆ.

ಇದನ್ನೂ ಓದಿ: ಟಾಯ್ಲೆಟ್​ನಲ್ಲಿ ಮೊಬೈಲ್ ಬಳಕೆ ಮಾಡುವ ಅಭ್ಯಾಸವಿದ್ರೆ ಇದನ್ನು ನೀವು ಓದಲೇಬೇಕು

ಏನಾದರೂ ತಿಂದು ಪ್ರಯಾಣ ಮಾಡಿದರೆ ವಾಂತಿ ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಅದಕ್ಕಾಗಿಯೇ ಅವರು ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸುತ್ತಾರೆ. ಆದರೆ ಇದು ತಪ್ಪು, ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸುವುದು ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಅದಕ್ಕಾಗಿಯೇ ಪ್ರಯಾಣದ ಸಮಯಕ್ಕಿಂತ ಸ್ವಲ್ಪ ಮೊದಲು ಏನನ್ನಾದರೂ ತಿನ್ನುವುದು ಉತ್ತಮ.

ಲಘು ಆಹಾರವನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ತಾಜಾ ಹಣ್ಣಿನ ಸೇವನೆಯು  ನಿಮಗೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಹಣ್ಣುಗಳು ಅಥವಾ ಹಣ್ಣಿನ ರಸಗಳು ಹೊಟ್ಟೆಯನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಈ ರೋಗವನ್ನು ತಡೆಗಟ್ಟಲು  ಇಲ್ಲಿದೆ ಟಿಪ್ಸ್  

ಈ ರೋಗದ ಎಲ್ಲ  ಸಮಸ್ಯೆಗಳನ್ನು ತಡೆಯುವುದು ಅಸಾಧ್ಯವಾದರೂ, ಕಾಯಿಲೆಯ ತೀವ್ರತೆಯನ್ನು ಕಡಿಮೆ ಮಾಡಲು ಈ ಕೆಳಗಿನ ಸಲಹೆಗಳು ನಿಮಗೆ ಸಹಾಯ ಮಾಡುತ್ತದೆ.

ಅತಿಯಾದ ಮದ್ಯಪಾನ ಮತ್ತು  ನಿಮ್ಮ ಆರೋಗ್ಯಕ್ಕೆ ಸೂಕ್ತವಲ್ಲದ ಆಹಾರಗಳನ್ನು ಪ್ರಯಾಣ ಮಾಡುವ ಮೊದಲು ಸೇವನೆ ಮಾಡಬೇಡಿ. ಮಸಾಲೆಯುಕ್ತ ಅಥವಾ ಹೆಚ್ಚು ಕೊಬ್ಬಿನ ಅಂಶಗಳಿರುವ ಆಹಾರಗಳನ್ನು ಪ್ರಯಾಣ ಮಾಡುವಾಗ ತಿನ್ನುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ ಇದು ವಾಕರಿಕೆಯನ್ನು ಹೆಚ್ಚು ಮಾಡುತ್ತದೆ.

ಅಲ್ಲದೇ ಹೆಚ್ಚು ಪರಿಮಳ ಇರುವ ಆಹಾರ  ಪದಾರ್ಥಗಳನ್ನು ತಿನ್ನಬೇಡಿ ಅಥವಾ ಅದನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಡಿ. ಆ ಆಹಾರ ಪದಾರ್ಥಗಳು ವಾಕರಿಕೆಗೆ ಕಾರಣವಾಗುತ್ತದೆ.  ನೀವು ಪ್ರಯಾಣ ಮಾಡುವಾಗ ನಿಮಗೆ ಬೇಕಾದ ಸೀಟ್​ನಲ್ಲಿ ಕುಳಿತುಕೊಳ್ಳಿ. ಉದಾಹರಣೆಗೆ ಬಸ್​ನ ಕಿಟಕಿಯ ಪಕ್ಕ ಹೀಗೆ. ಏಕೆಂದರೆ ಕೆಲವು ಭಾಗಗಲಲ್ಲಿ ನಿಮಗೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಇನ್ನು ಕೆಲವೊಮ್ಮೆ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಪ್ರಯಾಣದ ದಿಕ್ಕಿನ ಹಿಮ್ಮುಖವಾಗಿ ಕುಳಿತುಕೊಳ್ಳಬೇಡಿ. ಕಾರಿನ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದು ಮುಖ್ಯ. ನೀವು ಈ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ, ಪ್ರಯಾಣ ಮಾಡುವಾಗ  ಓದುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಕಾರು ಅಥವಾ  ಬಸ್​ನಲ್ಲಿ ಪ್ರಯಾಣಿಸುವಾಗ ಹೆಚ್ಚು ಆಕಾಶವನ್ನು ನೋಡಿ.

ಇದನ್ನೂ ಓದಿ: ನೀವು ಬೆಳಗಿನ ತಿಂಡಿ ತಿನ್ನೋದ್ರಲ್ಲಿ ಈ ತಪ್ಪುಗಳನ್ನು ಮಾಡ್ತಿದ್ರೆ ತೂಕ ಹೆಚ್ಚಾಗಬಹುದು ಎಚ್ಚರ.

ರಾತ್ರಿಯಲ್ಲಿ ಪ್ರಯಾಣಿಸಲು ಪ್ರಯತ್ನಿಸಿ ಇದರಿಂದ ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ಸುಲಭವಾಗಿ ನಿದ್ರಿ ಮಾಡಬಹುದು. ನಿಮಗೆ ಈ ಸಮಸ್ಯೆಯಿದ್ದಲ್ಲಿ ಇದರ ಬಗ್ಗೆ ಮಾತನಾಡುತ್ತಿರುವವರಿಂದ ದೂರ ಇರಿ. ಇಲ್ಲದಿದ್ದಲ್ಲಿ ನಿಮ್ಮ ಸಮಸ್ಯೆ ಇನ್ನು ಹೆಚ್ಚಾಗುತ್ತದೆ.
Published by:Sandhya M
First published: