How to Grow Coriander: ಸುಲಭವಾಗಿ ಕೊತ್ತಂಬರಿ ಸೊಪ್ಪು ಬೆಳೆಯುವ ವಿಧಾನ ಹೀಗಿದೆ..

ಮಾರ್ಚ್ ಕೊನೆಯ ಭಾಗದಿಂದ ಸೆಪ್ಟೆಂಬರ್ ತಿಂಗಳ ಮೊದಲ ಭಾಗದವರೆಗೆ ಕೊತ್ತಂಬರಿ ಬೀಜಗಳನ್ನು ಹಾಕಲು ಸೂಕ್ತ ಕಾಲ. ನಿರಂತರ ಎಲೆಗಳ ಪೂರೈಕೆ ಬೇಕಿದ್ದರೆ, ಪ್ರತಿ ಮೂರು ವಾರಕ್ಕೊಮ್ಮೆ ಸ್ವಲ್ಪ ಪ್ರಮಾಣದ ಬೀಜಗಳನ್ನು ಬಿತ್ತನೆ ಮಾಡುತ್ತಿರಿ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

 • Share this:
  ಕೊತ್ತಂಬರಿ ಏಷ್ಯಾದ ಅಡುಗೆಗಳಲ್ಲಿ , ಮುಖ್ಯವಾಗಿ ಭಾರತೀಯ, ಚೈನೀಸ್ ಮತ್ತು ಥಾಯ್‌ನಲ್ಲಿ ಬಳಸಲಾಗುತ್ತದೆ. ನಮ್ಮ ದಿನನಿತ್ಯದ ಅಡುಗೆಗಳಲ್ಲಿ ಕೊತ್ತಂಬರಿಗೊಂದು ಜಾಗ ಇದ್ದೇ ಇದೆ, ಅದರ ಎಲೆ ಮತ್ತು ಕಾಂಡ ಎರಡೂ ಅಡುಗೆಗೆ ಒಳ್ಳೆಯ ಸುವಾಸನೆ ಮತ್ತು ರುಚಿ ನೀಡುತ್ತವೆ. ಇತ್ತೀಚಿನ ದಿನಗಳಲ್ಲಿ ಕಿಚನ್ ಗಾರ್ಡನ್ ಅಥವಾ ಮನೆಯಲ್ಲೇ ಸೊಪ್ಪು ತರಕಾರಿ ಬೆಳೆದುಕೊಳ್ಳುವ ಹವ್ಯಾಸ ಹೆಚ್ಚುತ್ತಿದೆ. ಕೊತ್ತಂಬರಿ ಸೊಪ್ಪನ್ನು ಕೂಡ ಮನೆಯಲ್ಲಿ ಸುಲಭವಾಗಿ ಬೆಳೆಯಬಹುದು. ಆ ಕುರಿತ ಮಾಹಿತಿ ಇಲ್ಲಿದೆ.

  ಗಿಡದ ವಿಧ ಬಹಳ ಮುಖ್ಯ: ಕೊತ್ತಂಬರಿ (ಸಿಲ್ಯಾಂಟ್ರೊ) ಗಿಡವನ್ನು ಅದರ ಎಲೆಗಳು ಅಥವಾ ಬೀಜಕ್ಕಾಗಿ ಬೆಳೆಯಲಾಗುತ್ತದೆ. ಆದರೆ ನೀವು ಕೊತ್ತಂಬರಿ ಗಿಡವನ್ನು ಸೊಪ್ಪಿಗಾಗಿ ಬೆಳೆಸುತ್ತಿದ್ದೀರೋ ಅಥವಾ ಎಲೆಗಾಗಿ ಬೆಳೆಸುತ್ತಿದ್ದೀರೋ ಎಂಬುವುದನ್ನು ಮೊದಲು ನಿರ್ಧರಿಸಿಕೊಳ್ಳಿ. ಅದೇಕೆ, ಗಿಡದಲ್ಲಿ ಸೊಪ್ಪು ಬೀಜ ಎರಡೂ ಬರುತ್ತದೆಯಲ್ಲಾ ಎನ್ನುತ್ತೀರಾ? ಹೌದು ಅಂತಿಮವಾಗಿ ಎಲ್ಲಾ ಗಿಡಗಳು ಬೀಜವನ್ನು ಬಿಡುತ್ತವೆ. ಆದರೆ ಅದರಲ್ಲೂ ವೈವಿಧ್ಯವಿದೆ. ಅಂದರೆ, ಒಂದು ವಿಧದ ಬೀಜವು ಬೇಗನೆ ಬೀಜಗಳನ್ನು ಉತ್ಪಾದಿಸುತ್ತದೆ, ಆದರೆ ಬೀಜ ಬಿಡುತ್ತಿದ್ದಂತೆ ಎಲೆಗಳ ಉತ್ಪಾದನೆ ನಿಂತು ಹೋಗುತ್ತದೆ. ಆದರೆ ಬೀಜವನ್ನು ನಿಧಾನವಾಗಿ ಉತ್ಪಾದಿಸುವ ಗಿಡಗಳಲ್ಲಿ ಎಲೆಗಳು ಬಹಳ ಸಮಯದವರೆಗೆ ಬೆಳೆಯುತ್ತವೆ. ನೀವು ಅಡುಗೆಗೆ ಕೊತ್ತಂಬರಿ ಸೊಪ್ಪು ಬೇಕೆಂದು ಕೊತ್ತಂಬರಿ ಗಿಡವನ್ನು ಬೆಳೆಸುವುದಾದರೆ, ಬಹುಕಾಲ ಸೊಪ್ಪನ್ನು ನೀಡುವ ಪ್ರಭೇದದ ಗಿಡವನ್ನು ಬೆಳೆಸಬೇಕು.

  ‘ಕ್ಯಾಲಿಪ್ಸೋ’ ಅಥವಾ ‘ಲೀಶರ್’ ಪ್ರಭೇದದ ಕೊತ್ತಂಬರಿ ಎಲೆಗಳ ಉತ್ಪಾದನೆಯಲ್ಲಿ ಉತ್ತಮ ಮಟ್ಟದವು, ಆದರೆ ‘ಸ್ಯಾಂಟೋ’ ಎಂಬ ಪ್ರಭೇದ ದೊಡ್ಡ ಹೂಗಳನ್ನು ಬಿಟ್ಟು, ಬೇಗ ಬೀಜಗಳನ್ನು ಉತ್ಪಾದಿಸುತ್ತದೆ. ಹಾಗಾಗಿ, ಯಾವ ಉದ್ದೇಶಕ್ಕಾಗಿ ಕೊತ್ತಂಬರಿ ಗಿಡವನ್ನು ನೆಡುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಬೀಜವನ್ನು ಆಯ್ಕೆ ಮಾಡಿಕೊಳ್ಳಿ.

  ಕೊತ್ತಂಬರಿ ಬೆಳೆಯುವುದು ಹೇಗೆ? : ಕೊತ್ತಂಬರಿ ಗಿಡಕ್ಕೆ ಸೂರ್ಯನ ಬಿಸಿಲು ಬಹಳ ಉತ್ತಮ, ಆದರೆ ತುಂಬಾ ಬಿಸಿಲಿದ್ದಾಗ ಅದಕ್ಕೆ ಕೊಂಚ ಕಾಲ ನೆರಳಿನ ಅಗತ್ಯವು ಕೂಡ ಇರುತ್ತದೆ. ಬಿಸಿಲಿನ ಒತ್ತಡ ಹೆಚ್ಚಾದರೆ ಕೊತ್ತಂಬರಿ ಗಿಡಗಳು ಬಹಳ ಬೇಗನೆ ಬೀಜ ಉತ್ಪಾದಿಸುತ್ತವೆ. ಹಾಗಾಗಿ ಸೊಪ್ಪಿಗಾಗಿ ಬೆಳೆಸುವ ಗಿಡಗಳಿಗೆ ನೆರಳು ಕೂಡ ಬೇಕು.

  ಬೀಜ ಹಾಕುವ ವಿಧಾನ: ಮಾರ್ಚ್ ಕೊನೆಯ ಭಾಗದಿಂದ ಸೆಪ್ಟೆಂಬರ್ ತಿಂಗಳ ಮೊದಲ ಭಾಗದವರೆಗೆ ಕೊತ್ತಂಬರಿ ಬೀಜಗಳನ್ನು ಹಾಕಲು ಸೂಕ್ತ ಕಾಲ. ನಿರಂತರ ಎಲೆಗಳ ಪೂರೈಕೆ ಬೇಕಿದ್ದರೆ, ಪ್ರತಿ ಮೂರು ವಾರಕ್ಕೊಮ್ಮೆ ಸ್ವಲ್ಪ ಪ್ರಮಾಣದ ಬೀಜಗಳನ್ನು ಬಿತ್ತನೆ ಮಾಡುತ್ತಿರಿ. ಕೊತ್ತಂಬರಿ ಎಲೆಗಳ ಉತ್ಪಾದನೆಗೆ ಉತ್ತಮವಾದ ಕಾಲವೆಂದರೆ ವಸಂತಕಾಲ ಮತ್ತು ಶರತ್ಕಾಲ. ಕೊತ್ತಂಬರಿ ಗಿಡಗಳನ್ನು ಟ್ರೇಗಳಲ್ಲಿ ಬೆಳೆಸಿ ನೆಡುವುದಕ್ಕಿಂತ, ನೇರವಾಗಿ ಬಿತ್ತನೆ ಮಾಡಿದರೆ ಚೆನ್ನಾಗಿ ಬೆಳೆಯುತ್ತದೆ. ಚೆನ್ನಾಗಿ ಬರಿದಾದ, ಫಲವತ್ತಾದ ಮಣ್ಣಿನಲ್ಲಿ ಬಿತ್ತನೆ ಮಾಡಿ. ಮಣ್ಣು ಫಲವತ್ತಾಗಬೇಕೆಂದರೆ, ಗಾರ್ಡನ್ ಕಂಪೋಸ್ಟ್ ಅಥವಾ ಚೆನ್ನಾಗಿ ಕೊಳೆತ ಗೊಬ್ಬರ ಹಾಕಿ. ಮಣ್ಣಿನ ಮೇಲ್ಮೈಯಲ್ಲಿ ಗಡ್ಡೆಗಳು ಅಥವಾ ಕಲ್ಲುಗಳಿದ್ದರೆ ತೆಗೆದು ಹಾಕಿ, ಆ ಜಾಗ ನುಣ್ಣಗೆ ಇರುವಂತೆ ನೋಡಿಕೊಳ್ಳಿ. ಬೀಜಗಳನ್ನು ಸಸ್ಯಗಳು ಮತ್ತು ಸಾಲುಗಳ ನಡುವೆ ಅನುಕ್ರಮವಾಗಿ 20 ಸೆಂ. ಮೀ ಅಂತರ ಬಿಟ್ಟು ಒಂದೊಂದು ಗುಂಪಲ್ಲಿ ಐದೈದು ಬೀಜಗಳನ್ನು ಇಟ್ಟು ಬಿತ್ತಬೇಕು.

  ಇದನ್ನೂ ಓದಿ: Potato Juice: ಆಲೂಗೆಡ್ಡೆ ಜ್ಯೂಸ್ ಸೇವನೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

  ಕೊತ್ತಂಬರಿ ಗಿಡವನ್ನು ಕುಂಡಗಳಲ್ಲಿ ಅಥವಾ ವಿವಿಧೋದ್ದೇಶ ಕಾಂಪೋಸ್ಟ್ ಬಳಸಿ ಟ್ರೇಗಳಲ್ಲೂ ಬೆಳೆಸಬಹುದು. ಅವುಗಳು ಆಳವಾದ ಬೇರುಗಳನ್ನು ಹೊಂದಿರುವುದರಿಂದ , ಕುಂಡ ಕನಿಷ್ಟ 25 ಸೆಂ ಮೀ ಆಳ ಹೊಂದಿರಬೇಕು. ನೀವು ಕಾಂಪೋಸ್ಟ್ ಮೇಲ್ಮೈಯಲ್ಲಿ ಬೀಜಗಳನ್ನು ಹರಡಿ, ಬಳಿಕ ಮುಚ್ಚಿ, ಚೆನ್ನಾಗಿ ನೀರು ಹಾಕಬೇಕು. 25 ಸೆಂ ಮೀ ವ್ಯಾಸದ ಕುಂಡದಲ್ಲಿ, ಪ್ರತೀ ಕುಂಡಕ್ಕೆ ನೀವು 5 ಬೀಜಗಳನ್ನು ಬಿತ್ತಬಹುದು.

  ಕೊತ್ತಂಬರಿ ಗಿಡದ ಆರೈಕೆ: ಕೊತ್ತಂಬರಿ ಬೀಜಗಳು ಮೊಳಕೆ ಒಡೆಯಲು ಮೂರು ವಾರಗಳು ಬೇಕು. ತೆಳ್ಳಗಿನ ಎಳೆಯ ಸಸ್ಯಗಳು , 20 ಸೆಂ ಮೀ ಅಂತರದಲ್ಲಿ ಅವುಗಳ ಪೂರ್ಣ ಗಾತ್ರಕ್ಕೆ ಬೆಳೆಯಲು ಅನುಕೂಲ ಮಾಡಿ ಕೊಡುತ್ತದೆ. ಎಂದಿಗೂ ಮಣ್ಣನ್ನು ಒಣಗಲು ಬಿಡಬೇಡಿ, ನೀರು ಹಾಕುತ್ತಿರಿ. ಹೂ ಬಿಟ್ಟರೆ ಕೂಡಲೇ ಕಿತ್ತು ಹಾಕಿ, ಆಗ ಎಲೆಗಳು ಚೆನ್ನಾಗಿ ಬೆಳೆಯುತ್ತವೆ. ಮಣ್ಣು ಪೌಷ್ಟಿಕಾಂಶಯುಕ್ತವಾಗಿದ್ದರೆ ಅವುಗಳಿಗೆ ಹೆಚ್ಚಿನ ಪೋಷಣೆ ಬೇಕಿಲ್ಲ, ಆದರೆ ಗಿಡ ಸೊರಗಿದಂತೆ ಕಂಡ ಬಂದರೆ ದ್ರವ ಸಾವಯವ ಗೊಬ್ಬರಗಳನ್ನು ಹಾಕುವ ಮೂಲಕ ಅವುಗಳ ಬೆಳವಣಿಗಗೆ ಉತ್ತೇಜನ ನೀಡಿ.

  ಕೊತ್ತಂಬರಿ ಕಟಾವು: ಗಿಡವು ಸಾಕಷ್ಟು ದೊಡ್ಡದಾದಾಗ ಮತ್ತು ಎಲೆಗಳು ಬಲಿತಾಗ ಕಟಾವು ಮಾಡಬಹುದು. ಗಿಡದಿಂದ ಕೇವಲ ಎಲೆಗಳನ್ನಷ್ಟೇ ತೆಗೆಯಬಹುದು ಅಥವಾ ಎಲೆ ಮತ್ತು ಕಾಂಡ ಎರಡನ್ನೂ ಕಿತ್ತು ಬಳಸಬಹುದು. ನೀವು ಬೀಜಕ್ಕಾಗಿ ಗಿಡ ಬೆಳೆಸಿದ್ದರೆ, ಕಟಾವು ಮಾಡಲು ಹೂಗಳು ಸಾಯುವ ವರೆಗೆ ಕಾಯಬೇಕು. ಕಾಂಡವನ್ನು ಕತ್ತರಿಸಿ, ಗಿಡದ ತಲೆಯ ಭಾಗವನ್ನು ಪೇಪರ್ ಬ್ಯಾಗ್‍ನಲ್ಲಿ ಇಡಿ, ಕಾಂಡಗಳು ಬ್ಯಾಗ್‍ನಿಂದ ಹೊರಗಿರಬೇಕು. ಕಾಂಡ ಮತ್ತು ಬ್ಯಾಗನ್ನು ಜೊತೆಯಾಗಿ ಕಟ್ಟಿ, ತಣ್ಣಗಿನ ಒಣ ಜಾಗದಲ್ಲಿ ತಲೆ ಕೆಳಗಾಗಿ ನೇತು ಹಾಕಿ. ಮೂರು ವಾರದ ನಂತರ ಬ್ಯಾಗನ್ನು ಕುಲುಕಿರಿ. ಒಣ ಬೀಜಗಳು ಹೂವಿನಿಂದ ಬಿದ್ದು, ಬ್ಯಾಗ್‍ನ ತಳಬಾಗದಲ್ಲಿ ನಿಲ್ಲುತ್ತವೆ. ಅವುಗಳನ್ನು ಒಣ ಜಾಗದಲ್ಲಿಟ್ಟು ವಸಂತ ಕಾಲದಲ್ಲಿ ಮತ್ತೆ ಬಿತ್ತನೆಗೆ ಬಳಸಬಹುದು.
  Published by:Kavya V
  First published: