Health Tips: ಕೊರೊನಾ ಲಸಿಕೆ ಪಡೆದ ನಂತರ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ಉತ್ತಮ

Coronavirus: ಕೊರೊನಾ ಲಸಿಕೆಯನ್ನು ತೆಗೆದುಕೊಂಡ ನಂತರ ಕೆಲವೊಂದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸುತ್ತದೆ. ಜ್ವರ, ಮೈ ಕೈ ನೋವು ಸಾಮಾನ್ಯವಾಗಿ ಬರುತ್ತದೆ, ಆದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Corona Vaccination: ಕೊರೊನಾ ಕೇವಲ ಭಾರತ ಮಾತ್ರವಲ್ಲದೆ ಈ ಪ್ರಪಂಚದಲ್ಲಿ ಇರುವ ಪ್ರತಿಯೊಂದು ದೇಶಗಳನ್ನು ಕೂಡ ಕಾಡಿಸುತ್ತಿದೆ. ಸುಮಾರು ಒಂದು ವರ್ಷಗಳಿಂದ ಜನರ ನಿದ್ದೆ ಗೆಡಿಸಿರುವುದು ಸತ್ಯ. ಹಲವಾರು ಜನರು ಈ ಕೊರೊನಾ ಮಹಾಮಾರಿ ಸೋಂಕಿಗೆ ತುತ್ತಾಗಿ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ, ಇನ್ನು ಕೆಲವರು ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ಪ್ರತಿಯೊಬ್ಬರ ಬದುಕನ್ನು ಬದಲಾಯಿಸಿದೆ. ಅದೆಷ್ಟೋ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ, ಇನ್ನು ಕೆಲವರು ಬದುಕಿದ್ದರೂ ಎಲ್ಲವನ್ನು ಕಳೆದುಕೊಂಡಿದ್ದಾರೆ. ಕೊರೊನಾ ಮೊದಲ ಅಲೆ ಒಂದು ರೀತಿಯ ಪರಿಣಾಮ ಬೀರಿದರೆ, ಎರಡನೆ ಅಲೆ ಮತ್ತೊಂದು ರೀತಿ. ಜನರ ಬದುಕನ್ನು ಬುಡಮೇಲು ಮಾಡಿದೆ ಈ ಕೊರೊನಾ. ಆದರೆ ವಿಜ್ಞಾನಿಗಳು ಮಾತ್ರ ನಮ್ಮ ಬೆಂಬಿಡದ ಪ್ರರಿಶ್ರಮದ ಮೂಲಕ ಲಸಿಕೆಯನ್ನು ತಯಾರಿಸಿದ್ದಾರೆ. ಈಗಾಗಲೇ ಭಾರತದಲ್ಲಿ ಹೆಚ್ಚಿನ ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಕೊರೊನಾ ಲಸಿಕೆಯನ್ನು ತೆಗೆದುಕೊಂಡ ನಂತರ ಕೆಲವೊಂದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸುತ್ತದೆ. ಜ್ವರ, ಮೈ ಕೈ ನೋವು ಸಾಮಾನ್ಯವಾಗಿ ಬರುತ್ತದೆ, ಆದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ. ಲಸಿಕೆ ತೆಗೆದುಕೊಂಡ ನಂತರ ವಿಶ್ರಾಂತಿ ಮಾಡಿ, ಹಾಗೂ ಹೆಚ್ಚು ಪೋಷಕಾಂಶಯುಕ್ತ ಆಹಾರವನ್ನು ಸೇವನೆ ಮಾಡಿ.

ಹಾಗಾದ್ರೆ ಲಸಿಕೆ ಪಡೆದ ನಂತರ ಯಾವ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ ಎಂಬುದು  ಇಲ್ಲಿದೆ.

ಹಸಿರು ತರಕಾರಿಗಳು ಹಾಗೂ ಸೊಪ್ಪುಗಳು

ಸೊಪ್ಪು ಮತ್ತು  ತರಕಾರಿಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ರೀತಿಯ ತರಕಾರಿ ಹಾಗೂ ಸೊಪ್ಪುಗಳಲ್ಲಿ ಹೆಚ್ಚಾದ ನಾರಿನಂಶ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಇದ್ದು. ಅದು ದೇಹಕ್ಕೆ ಅಗತ್ಯವಿರುವ ವಿಟಮಿನ್ ಎ, ಸಿ, ಕೆ, ಮೆಗ್ನೀಷಿಯಂ, ಉರಿಯೂತ ಹಾಗೂ ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟಬಲ್ಲ ಶಕ್ತಿಯನ್ನು ಹೊಂದಿದೆ.

ಅರಿಶಿಣ

ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ಸಹ ಅರಿಶಿನವನ್ನು ಬಳಸುವುದು ಸಾಮಾನ್ಯವಾಗಿದೆ. ಅರಿಶಿಣವನ್ನು ಅಡುಗೆ ಮನೆಗಳಲ್ಲಿ ಪ್ರತಿಯೊಂದು ಆಹಾರ ಪದಾರ್ಥವನ್ನು ತಯಾರಿಸುವಾಗ ಬಳಸಲಾಗುತ್ತದೆ. ಅರಿಶಿನ ದಲ್ಲಿರುವ ಕುರ್ಕುಮಿನ್ ಎನ್ನುವ ಪದಾರ್ಥವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಒಳ್ಳೆಯ ಆರೋಗ್ಯಕರ ಪ್ರಯೋಜವನ್ನು ನೀಡುತ್ತದೆ.

ಇದನ್ನೂ ಓದಿ: ತ್ವಚೆಯ ಅಂದ ಹೆಚ್ಚಿಸಲು ಬೆಳಗ್ಗೆ ಈ ಪಾನೀಯಗಳನ್ನು ಸೇವಿಸಿ

ಬೆಳ್ಳುಳ್ಳಿ

ಹೆಚ್ಚಾಗಿ ಪ್ರತಿ ಅಡುಗೆಯಲ್ಲಿ ಬೆಳ್ಳುಳ್ಳಿಯಲ್ಲಿ ಬಳಕೆ ಮಾಡಲಾಗುತ್ತದೆ. ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ  ಗುಣವನ್ನು ಹೊಂದಿದೆ. ರಕ್ತವನ್ನು  ಶುದ್ಧ ಮಾಡಿ, ರಕ್ತದಲ್ಲಿ ಅಧಿಕವಾಗಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಲ್ಲದೇ,  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

ಎಳನೀರು

ಕೊರೊನಾ ಲಸಿಕೆ ಹಾಕಿಸಿಕೊಂಡ ನಂತರ ದೇಹದಲ್ಲಿ ನೀರಿನ ಪ್ರ,ಮಾಣ ಕಡಿಮೆಯಾಗುತ್ತದೆ. ಹೆಚ್ಚು ಆಯಾಸವಾಗುತ್ತದೆ. ಇದಕ್ಕೆ ಪರಿಹಾರ ಎಳನೀರು ಕುಡಿಯುವುದು. ಎಳನೀರನ್ನು ಕುಡಿಯುವುದರಿಂದ ದೇಹ ನಿರ್ಜಲೀಕರಣ ಆಗದಂತೆ ಕಾಪಾಡುತ್ತದೆ. ಅಲ್ಲದೇ, ಈ ನೀರಿನಲ್ಲಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲ ಗುಣಗಳಿದ್ದು, ಹೇರಳವಾದ ವಿಟಮಿನ್ ಗಳಿವೆ. ದೇಹಕ್ಕೆ ಅತ್ಯಂತ ಅಗತ್ಯವಿರುವ ವಿಟಮಿನ್ ಸಿ, ಪಾಸ್ಪರಸ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ ಗಳು ಸಮೃದ್ಧವಾಗಿದೆ.

ಹಣ್ಣುಗಳು

ನಮಗೆ ಹೆಚ್ಚು ವಿಟಮಿನ್ ಗಳು ಹಾಗೂ ಪ್ರೊಟೀನುಗಳು ಬೇಕು ಎಂದರೆ ಅದಕ್ಕೆ ಹಣ್ಣುಗಳ ಸೇವನೆ ಮಾಡುವುದು ಉತ್ತಮ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಹಣ್ಣುಗಳು ಪ್ರಮುಖಪಾತ್ರವಹಿಸುತ್ತದೆ. ಕೊರೊನಾ ಸಮಯದಲ್ಲಿ ವಿಟಮಿನ್ ಮತ್ತು ರೋದ ನಿರೋಧಕ ಶಕ್ತಿಯ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ ಹಾಗಾಗು ಲಸಿಕೆ ಪಡೆದ ನಂತರ ಮಾತ್ರವಲ್ಲದೇ, ಪ್ರತಿ ದಿನ ನಿಯಮಿತವಾಗಿ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯ ಅಭ್ಯಾಸ.
Published by:Sandhya M
First published: