Foods to boost metabolism: ನಿಮ್ಮ ಮೆಟಾಬಲಿಸಮ್ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ

Weight Loss: ಚಯಾಪಚಯ ದರವನ್ನು ಹೆಚ್ಚಿಸಲು ಪ್ರೋಟೀನ್ ಅತ್ಯಂತ ಪರಿಣಾಮಕಾರಿ ಪೋಷಕಾಂಶಗಳಲ್ಲಿ ಒಂದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಚಯಾಪಚಯ  ಕ್ರಿಯೆಯ ಬಗ್ಗೆ ಬಹಳಷ್ಟು ಕೇಳಿರುತ್ತೇವೆ ಮತ್ತು ನಮ್ಮಲ್ಲಿ ಅದರ ಬಗ್ಗೆ ಹಲವಾರು ಗೊಂದಲಗಳಿರುತ್ತವೆ.  ಚಯಾಪಚಯ ಕ್ರಿಯೆ ಎಂದರೆ  ನಿಮ್ಮ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲದೆ ಬೇರೇನೂ ಅಲ್ಲ. ಚಯಾಪಚಯ ಕಡಿಮೆಯಾಗುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ ಮತ್ತು ನೀವು ಹೆಚ್ಚು ಕ್ಯಾಲೊರಿಗಳನ್ನು ಸೇವಿಸದಿದ್ದರೂ ಸಹ ನಿಮ್ಮ  ತೂಕ ಹೆಚ್ಚಾಗುತ್ತದೆ. ನೆನಪಿಡಿ, ನಮ್ಮ ಚಯಾಪಚಯ ಕ್ರಿಯೆಯು ಎಷ್ಟು ವೇಗವಾಗಿ ನಡೆಯುತ್ತದೆಯೋ ಅಷ್ಟು ವೇಗವಾಗಿ ನಾವು ನಮ್ಮ ಕ್ಯಾಲೊರಿಗಳನ್ನು ಸುಡುತ್ತೇವೆ.

ವ್ಯಾಯಾಮ ಮತ್ತು ಸಮತೋಲಿತ ಆಹಾರ  ಕ್ರಮ ಯಾವಾಗಲೂ ಸಹಾಯ ಮಾಡುತ್ತದೆ, ಆದರೆ ಆರೋಗ್ಯಕರ ಡಯೆಟ್  ಇಲ್ಲದೆ ಏನೂ ಕೆಲಸ ಮಾಡುವುದಿಲ್ಲ. ಪೌಷ್ಟಿಕ ತಜ್ಞರ ಪ್ರಕಾರ ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಆಹಾರಗಳನ್ನು ಪಟ್ಟಿ  ಇಲ್ಲಿದೆ.

ಮೊಟ್ಟೆ

ಚಯಾಪಚಯವನ್ನು ಹೆಚ್ಚಿಸಲು ಪ್ರೋಟೀನ್ ಭರಿತ ಆಹಾರಗಳು ಅತ್ಯುತ್ತಮ ಆಯ್ಕೆಗಳಲ್ಲಿ ಒಂದು. ಮೊಟ್ಟೆಗಳಲ್ಲಿ ಪ್ರೋಟೀನ್‌ ಸಮೃದ್ಧವಾಗಿವೆ, ಪ್ರತಿ ಬೇಯಿಸಿದ ಮೊಟ್ಟೆಯು 6.29 ಗ್ರಾಂ (ಜಿ)  ಪ್ರೋಟೀನ್ ಹೊಂದಿರುತ್ತದೆ.  ಇದು ಅವರ ಚಯಾಪಚಯವನ್ನು ವೇಗಗೊಳಿಸಲು ಉತ್ತಮ ಮಾರ್ಗ. ಚಯಾಪಚಯ ದರವನ್ನು ಹೆಚ್ಚಿಸಲು ಪ್ರೋಟೀನ್ ಅತ್ಯಂತ ಪರಿಣಾಮಕಾರಿ ಪೋಷಕಾಂಶಗಳಲ್ಲಿ ಒಂದು. ಮೊಟ್ಟೆಯ ಬಿಳಿಭಾಗದಲ್ಲಿರುವ ಕವಲೊಡೆದ ಚೈನ್ ಅಮೈನೊ ಆಸಿಡ್‌ಗಳನ್ನು ಹೊಂದಿರುವ ಕಾರಣ ಅದು  ನಿಮ್ಮ ಚಯಾಪಚಯ ಕ್ರಿಯೆಯನ್ನು  ಹೆಚ್ಚು ಮಾಡುತ್ತದೆ.

ಶುಂಠಿ

ಊಟಕ್ಕೆ ಶುಂಠಿಯನ್ನು ಸೇರಿಸುವುದರಿಂದ ದೇಹದ ಉಷ್ಣತೆ ಮತ್ತು ಚಯಾಪಚಯ ದರವನ್ನು ಹೆಚ್ಚಿಸಬಹುದು ಹಾಗೂ  ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ  ತೂಕ ಇಳಿಸಿಕೊಳ್ಳಲು ಮತ್ತು  ಚಯಾಪಚಯ ಕ್ರಿಯೆ ವೃದ್ಧಿಸಿಕೊಳ್ಳಲು ಶುಂಠಿ ಪರಿಣಾಮಕಾರಿಯಾಗಿ ಸಹಾಯ ಮಾಡಿದೆ. ಶುಂಠಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಇದು ದೇಹದ ಆರೋಗ್ಯಕ್ಕೆ ಉಪಯುಕ್ತ.

ಗ್ರೀನ್ ಟೀ

ಇತ್ತೀಚಿನ ವರ್ಷಗಳಲ್ಲಿ  ನಡೆದ ಸಂಶೋಧನೆಯಲ್ಲಿ ಗ್ರೀನ್ ಟೀ ಆರೋಗ್ಯದ ಮೇಲೆ ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಸಾಬೀತಾಗಿದೆ. ಟೈಪ್ 2 ಡಯಾಬಿಟಿಸ್ ಇರುವ 63 ಜನರನ್ನು ಒಳಗೊಂಡ ಒಂದು ಸಣ್ಣ-ಪ್ರಮಾಣದ ಅಧ್ಯಯನ ಪ್ರಕಾರ ಪ್ರತಿದಿನ 4 ಕಪ್ ಗ್ರೀನ್ ಟೀ ಕುಡಿಯುವುದರಿಂದ ದೇಹದ ತೂಕ, ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ), ಸೊಂಟದ ಗಾತ್ರ ಮತ್ತು ಸಿಸ್ಟೊಲಿಕ್ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಕೂದಲು ಸಮೃದ್ಧವಾಗಿ ಬೆಳೆಯಲು ಕ್ಯಾಸ್ಟರ್ ಆಯಿಲ್ ಬಳಕೆ ಉತ್ತಮ ಆಯ್ಕೆ

ಗ್ರೀನ್ ಟೀ ಕುಡಿಯುವುದರಿಂದ ಉಂಟಾಗುವ ಇತರ ಪ್ರಯೋಜನಗಳು

ಉರಿಯೂತದ ಗುಣಲಕ್ಷಣಗಳನ್ನು ಗ್ರೀನ್ ಟೀ ಹೊಂದಿದ್ದು ಬಹಳ ಪರಿಣಾಮಕಾರಿಯಾಗಿದೆ.ಆ್ಯಂಟಿ ಆಕ್ಸೈಡ್ ಗುಣವಿದೆ.ಆಂಟಿಮೈಕ್ರೊಬಿಯಲ್ ಚಟುವಟಿಕೆಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ನೀಡುತ್ತದೆಹೃದಯ ಮತ್ತು ಬಾಯಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಕಾಫಿ

ಕಾಫಿಯಲ್ಲಿ ಕೆಫೀನ್ ಅಂಶವಿರುವ ಕಾರಣ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ.  ಕೆಫೀನ್ ಸೇವನೆಯು  ದೇಹದ ಶಕ್ತಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಚಯಾಪಚಯ ಕ್ರಿಯೆ ಹೆಚ್ಚಲು ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಡಿಕಾಫಿನೇಟೆಡ್ ಕಾಫಿಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದಿಲ್ಲ. ಅಲ್ಲದೆ, ಕೆನೆ ಅಥವಾ ಸಕ್ಕರೆಯನ್ನು ಸೇರಿಸುವುದರಿಂದ ಅದರ ಕ್ಯಾಲೋರಿ ಅಂಶ ಹೆಚ್ಚಾಗುತ್ತದೆ, ಇದು ಚಯಾಪಚಯ ಕ್ರಿಯೆಯ ವಿರುದ್ಧ ಕೆಲಸ ಮಾಡಬಹುದು.

ಪಾಲಕ್, ಎಲೆಕೋಸು ಮತ್ತು ಇತರ ಎಲೆಗಳ ಹಸಿರು ಸೊಪ್ಪುಗಳು  ಅವುಗಳ ಕಬ್ಬಿಣದ ಅಂಶದಿಂದಾಗಿ ಚಯಾಪಚಯವನ್ನು ಹೆಚ್ಚಿಸಬಹುದು. ಚಯಾಪಚಯ, ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಬ್ಬಿಣವು ಅತ್ಯಗತ್ಯವಾಗಿದೆ.  ಎಲೆಗಳ ಸೊಪ್ಪುಗಳು ಹೀಮ್ ಅಲ್ಲದ ಅಥವಾ ಪ್ರಾಣಿ-ಅಲ್ಲದ ಕಬ್ಬಿಣದ ಮೂಲವಾಗಿದೆ. ನಿಂಬೆ, ಟೊಮೆಟೊ, ಅಥವಾ ಚಳಿಗಾಲದ ಸ್ಕ್ವ್ಯಾಷ್‌ನಂತಹ ವಿಟಮಿನ್ ಸಿ ಮೂಲದೊಂದಿಗೆ ಎಲೆಗಳ ಸೊಪ್ಪನ್ನು ಜೋಡಿಸಲು ಪ್ರಯತ್ನಿಸಿ - ಈ ರೀತಿಯ ಕಬ್ಬಿಣವನ್ನು ದೇಹವು ಹೀರಿಕೊಳ್ಳುವುದನ್ನು ಹೆಚ್ಚಿಸುತ್ತದೆ.
Published by:Sandhya M
First published: