Benefits Of Clapping: ದಿನಕ್ಕೆ 5 ನಿಮಿಷ ಚಪ್ಪಾಳೆ ತಟ್ಟಿ ಆರೋಗ್ಯ ಕಾಪಾಡಿಕೊಳ್ಳಿ

Importance Of Clapping: ಚಪ್ಪಾಳೆ ತಟ್ಟುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು(Health) ಸುಧಾರಣೆ ಮಾಡುತ್ತದೆ. ಈ ಕ್ರಿಯೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಪ್ಪಾಳೆ(Clapping) ತಟ್ಟುವುದು ಜೀವನದ ಆಚರಣೆಗಳು ಮತ್ತು ಹೆಚ್ಚಿನ ಎಲ್ಲ ಒಳ್ಳೆಯ ವಿಷಯಗಳೊಂದಿಗೆ ಸಂಬಂಧ ಹೊಂದಿದೆ. ಇದು ನಮ್ಮ ಜೀವನದಲ್ಲಿ ಸಂತೋಷಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ನಮ್ಮ ದೇಹವು 340 ಒತ್ತಡದ ಬಿಂದುಗಳನ್ನು ಹೊಂದಿದ್ದು, ಅವುಗಳಲ್ಲಿ 28 ನಮ್ಮ ಕೈಯಲ್ಲಿವೆ ಎಂದು ದೆಹಲಿಯ ಕೈರಾಲಿ ಆಯುರ್ವೇದ(Ayurveda) ಗುಂಪಿನ ಡಾ. ರಾಹುಲ್ ಡೋಗ್ರಾ ಹೇಳುತ್ತಾರೆ. ಈ ಬಿಂದುಗಳು ದೇಹದ ವಿವಿಧ ಅಂಗಗಳಿಗೆ ನೇರ ಸಂಪರ್ಕವನ್ನು ಹೊಂದಿವೆ, ಅಂದರೆ  ದೇಹದ ಅಂಗಗಳಲ್ಲಿನ ನೋವನ್ನು ನಿವಾರಿಸಲು ನಾವು ಈ ಒತ್ತಡದ ಬಿಂದುಗಳ ಮೇಲೆ ಮಸಾಜ್ ಮಾಡಬಹುದು ಎನ್ನುತ್ತಾರೆ. 

ಚಪ್ಪಾಳೆ ತಟ್ಟುವುದರ ಪ್ರಯೋಜನಗಳು

ಚಪ್ಪಾಳೆ ತಟ್ಟುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು(Health) ಸುಧಾರಣೆ ಮಾಡುತ್ತದೆ. ಈ ಕ್ರಿಯೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಬೆರಳಿನಲ್ಲಿ ಇರುವ ಶಕ್ತಿಯ ಚಕ್ರಗಳು ಕ್ರಿಯಾಶೀಲಗೊಳ್ಳುತ್ತವೆ ಅದರಿಂದ ದೇಹದಲ್ಲಿ ರಕ್ತ ಪರಿಚಲನೆಯು ವೃದ್ಧಿಯಾಗುತ್ತದೆ ಎಂಬುದು ಸಾಬೀತಾಗಿದೆ.

ಈ 5 ಮುಖ್ಯ ಆಕ್ಯುಪ್ರೆಶರ್ ಪಾಯಿಂಟ್​ಗಳು ಚಪ್ಪಾಳೆ ತಟ್ಟುವಾಗ ಪ್ರಚೋದಿಸಲ್ಪಡುತ್ತವೆ:

1. ಹ್ಯಾಂಡ್ ವ್ಯಾಲಿ ಪಾಯಿಂಟ್

2. ಹೆಬ್ಬೆರಳ ಬಿಂದು

3. ಮಣಿಕಟ್ಟಿನ ಬಿಂದು

4. ಆಂತರಿಕ ಗೇಟ್ ಪಾಯಿಂಟ್

5. ಹೆಬ್ಬೆರಳ ಉಗುರು ಬಿಂದು

ಈ ಅಂಶಗಳು ಈ ಕೆಳಗಿನ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿವೆ

ಇದನ್ನೂ ಓದಿ: ತೂಕ ಇಳಿಸಬೇಕಾ? ಹಾಗಾದ್ರೆ ಬೆಳಗ್ಗೆ ಖಾಲಿ ಹೊಟ್ಟೆಲಿ ಈ ಎರಡು ಪದಾರ್ಥ ತಿನ್ನಿ ಸಾಕು

1. ಆಸ್ತಮಾದಂತಹ ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಚಪ್ಪಾಳೆ ಪ್ರಮುಖ ಪಾತ್ರ ವಹಿಸುತ್ತದೆ.

2. ಬೆನ್ನು, ಕುತ್ತಿಗೆ ಮತ್ತು ಕೀಲು ನೋವಿನಿಂದ ಪರಿಹಾರ ನೀಡುತ್ತದೆ.

3. ನೀವು ಚಪ್ಪಾಳೆ ತಟ್ಟುವ ಮೂಲಕ ಗೌಟ್ ನಿಂದಲೂ ಪರಿಹಾರ ಪಡೆಯಬಹುದು.

4. ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ  ಚಪ್ಪಾಳೆ ತಟ್ಟುವುದು ಉಪಯುಕ್ತ.

5. ಚಪ್ಪಾಳೆ ತಟ್ಟುವುದು ಜೀರ್ಣಕಾರಿ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

6. ಚಪ್ಪಾಳೆ ತಟ್ಟುವುದು ಮಕ್ಕಳ ಕೌಶಲ್ಯ ವರ್ಧನೆಗೆ ಸಹಾಯ ಮಾಡುತ್ತದೆ ಮತ್ತು ಅವರ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ನಿಯಮಿತವಾಗಿ ಚಪ್ಪಾಳೆ ತಟ್ಟುವ ಮಕ್ಕಳು ತಮ್ಮ ಗೆಳೆಯರಿಗಿಂತ ಕಡಿಮೆ ಕಾಗುಣಿತ ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ.

7. ಚಪ್ಪಾಳೆ ತಟ್ಟುವುದು ಮಕ್ಕಳ ಮೆದುಳನ್ನು ಚುರುಕುಗೊಳಿಸುತ್ತದೆ. ನಿಮ್ಮ ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಹಾಯ ಮಾಡುತ್ತದೆ.

8. ಚಪ್ಪಾಳೆ ತಟ್ಟುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಇದರಿಂದ ರೋಗಗಳು ದೂರವಾಗುತ್ತವೆ.

9. ಅರ್ಧ ಗಂಟೆ ಪ್ರತಿದಿನ ಚಪ್ಪಾಳೆ  ತಟ್ಟುವುದು ಮಧುಮೇಹ, ಸಂಧಿವಾತ, ಅಧಿಕ ರಕ್ತದೊತ್ತಡ, ಖಿನ್ನತೆ, ದೀರ್ಘಕಾಲದ ತಲೆನೋವು, ನೆಗಡಿ, ನಿದ್ರಾಹೀನತೆ, ಕಣ್ಣಿನ ಸಮಸ್ಯೆಗಳು ಮತ್ತು ಕೂದಲು ಉದುರುವಿಕೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ ಎಂಬುದು ಸಾಬೀತಾಗಿದೆ.

10. ಹವಾನಿಯಂತ್ರಿತ ಮನೆಗಳಲ್ಲಿ ವಾಸಿಸುವವರು ಚಪ್ಪಾಳೆ ತಟ್ಟುವ ಅಭ್ಯಾಸವನ್ನು ಮಾಡಬೇಕು ಏಕೆಂದರೆ ಇದು ದೇಹದಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.  ಈ

ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಹೀಗೆ ಚಪ್ಪಾಳೆ ತಟ್ಟಿ

ಇದನ್ನೂ ಓದಿ: ಮೂತ್ರಪಿಂಡದ ಕಲ್ಲುಗಳಿಗೆ ಮನೆಯಲ್ಲಿನ ಈ ವಸ್ತುಗಳಲ್ಲಿದೆ ಪರಿಹಾರ

ಮೊದಲಿಗೆ ನೇರವಾಗಿ ಕುಳಿತುಕೊಳ್ಳಬೇಕು. ಇಲ್ಲವೇ ವಜ್ರಾಸನ ಅಥವಾ ಪದ್ಮಾಸನದಲ್ಲಿ ಸಹ ಕುಳಿತುಕೊಳ್ಳಬಹುದು. ಕೈಗಳನ್ನು ಮೇಲಕ್ಕೆ ಎತ್ತಿ, ತೋಳುಗಳು 90 ಡಿಗ್ರಿ ಕೋನದಂತೆ ಇಟ್ಟುಕೊಳ್ಳಬೇಕು. ಕೈಗಳನ್ನು ಅಗಲವಾಗಿ ತೆರೆದು ನಿಮ್ಮ ದೇಹವನ್ನು ಬಿಗಿಯಾಗಿ ಮತ್ತು ನೇರವಾಗಿರಿಸಿಕೊಂಡು ಚಪ್ಪಾಳೆ ತಟ್ಟಬೇಕು. ಈ ರೀತಿಯಾಗಿ ಚಪ್ಪಾಳೆ ತಟ್ಟುವುದು ನಿಜಕ್ಕೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
Published by:Sandhya M
First published: