• Home
  • »
  • News
  • »
  • lifestyle
  • »
  • Home Remedies: ತಿಗಣೆ ಕಾಟಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಪರಿಹಾರ

Home Remedies: ತಿಗಣೆ ಕಾಟಕ್ಕೆ ನಿಮ್ಮ ಮನೆಯಲ್ಲಿಯೇ ಇದೆ ಸುಲಭ ಪರಿಹಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Home Remedies For Beg Bugs: ನಿಮಗೆ ಮನೆಯಲ್ಲಿ ತಿಗಣೆ ಇರುವ ಸಣ್ಣ ಸೂಚನೆ ಸಿಕ್ಕರೂ ಸಹ ಸರಿಯಾಗಿ ಪರಿಶೀಲನೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ. ಅದರ ಸಂತಾನ ಹೆಚ್ಚಾದಾಗ ನಿಮ್ಮ ಬಟ್ಟೆಗಳನ್ನು ಹಾಳು ಮಾಡುವುದಲ್ಲದೇ, ಆರೋಗ್ಯದ ಮೇಲೆ ಸಹ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಮುಂದೆ ಓದಿ ...
  • Share this:

ಬೆಡ್‌ಬಗ್‌ಗಳು (Bed Bugs) ಜೀವಂತ ಪ್ರಾಣಿಗಳು ಮತ್ತು ಮಾನವ ದೇಹಗಳನ್ನು ತಿನ್ನುವ ಕೀಟಗಳು ಎಂದರೆ ತಪ್ಪಾಗಲಾರದು. ಮನೆ ಅಥವಾ ಹೋಟೆಲ್ (Hotel) ಆಗಿರಲಿ, ಎಲ್ಲಿ ಬೇಕಾದರೂ ಅವುಗಳಿರುತ್ತದೆ. ಬೆಡ್‌ಬಗ್‌ಗಳು ಹಾರಲು ಸಾಧ್ಯವಿಲ್ಲ, ಆದರೆ ಅವುಗಳ ಸಣ್ಣ ಗಾತ್ರದ ಕಾರಣ ಅವುಗಳು ಎಲ್ಲಿಯಾದರೂ ಇರುತ್ತದೆ. ಅವುಗಳು ಕೊಡುವ ಕಾಟ ಮಾತ್ರ ನಿಜಕ್ಕೂ ಕಷ್ಟಕರ. ಅವರು ಒಮ್ಮೆ ಮನೆಗೆ ಬಂದರೆ ಸಾಕು ಮನೆಯ ತುಂಬಿ ಹರಡಿ, ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಣ್ಣು ತಿಗಣೆಗಳು ತಮ್ಮ ಜೀವಿತಾವಧಿಯಲ್ಲಿ ನೂರಾರು ಮೊಟ್ಟೆಗಳನ್ನು ಇಡುತ್ತವೆ, ಇದು ದೊಡ್ಡ ಸಮಸ್ಯೆ. ಈ ಪ್ರತಿಯೊಂದು ಮೊಟ್ಟೆಯು ಸಣ್ಣ ಧೂಳಿನ ಕಣದ ಗಾತ್ರವನ್ನು ಹೊಂದಿದೆ ಮತ್ತು ಬರಿಗಣ್ಣಿಗೆ ಕಾಣುವುದಿಲ್ಲ. ಅವುಗಳ ಸಣ್ಣ ಗಾತ್ರದ ಕಾರಣ, ನಿಮ್ಮ ಮನೆಯಲ್ಲಿ ತಿಗಣೆ ಇದೆ ಎಂಬುದು ತಿಳಿಯುವುದೇ ಇಲ್ಲ. ಅವು ಹೆಚ್ಚು ಹರಡಿ, ಹೆಚ್ಚು ಸಮಸ್ಯೆಗಳು ಹುಟ್ಟಿಕೊಂಡಾಗ ಮಾತ್ರ ಅವುಗಳಿರುವುದು ತಿಳಿಯುತ್ತದೆ.


ನಿಮಗೆ ಮನೆಯಲ್ಲಿ ತಿಗಣೆ ಇರುವ ಸಣ್ಣ ಸೂಚನೆ ಸಿಕ್ಕರೂ ಸಹ ಸರಿಯಾಗಿ ಪರಿಶೀಲನೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ. ಅದರ ಸಂತಾನ ಹೆಚ್ಚಾದಾಗ ನಿಮ್ಮ ಬಟ್ಟೆಗಳನ್ನು ಹಾಳು ಮಾಡುವುದಲ್ಲದೇ, ಆರೋಗ್ಯದ ಮೇಲೆ ಸಹ ಕೆಟ್ಟ ಪರಿಣಾಮವನ್ನು ಬೀರುತ್ತದೆ.


 ಮನೆಯಲ್ಲಿ ತಿಗಣೆ ಇದ್ರೆ ಪರಿಹಾರ ಏನು?


ತಿಗಣೆಗಳು ಸಾಮಾನ್ಯವಾಗಿ ರಾತ್ರಿಯಿಡೀ ಸಕ್ರಿಯವಾಗಿರುತ್ತವೆ, ನೀವು ನಿದ್ದೆ ಮಾಡುವಾಗ ರಕ್ತವನ್ನು ಹೀರುತ್ತದೆ. 3 ನಿಮಿಷದಿಂದ 10 ನಿಮಿಷಗಳವರೆಗೆ ನಮ್ಮ ರಕ್ತವನ್ನು ಹೀರುತ್ತದೆ ಎನನ್ನಲಾಗುತ್ತದೆ. ಸಾಮಾನ್ಯವಾಗಿ ಆರಂಭದಲ್ಲಿ ಅದು ಕಚ್ಚಿದಾಗ ನೋವಾಗುವುದಿಲ್ಲ, ಆದರೆ ನಂತರ ತುರಿಕೆ ಮತ್ತು ಕಿರಿಕಿರಿಯುಂಟುಮಾಡುತ್ತದೆ.


ಇದನ್ನೂ ಓದಿ: ನಿದ್ರೆ ಸರಿಯಾಗಿ ಬರ್ತಿಲ್ವ ಹಾಗಾದ್ರೆ ಇವುಗಳನ್ನು ಮಿಸ್ ಮಾಡ್ದೇ ಬಳಸಿ


ತಿಗಣೆಗಳು ಹಾಸಿಗೆಯ ಮೇಲೆ ಅಥವಾ ಅವುಗಳ ಸುತ್ತಲಿನ ಪ್ರದೇಶದ ಮೇಲೆ ಸಾಕಷ್ಟು ಸೂಚನೆಗಳನ್ನು ಬಿಡುತ್ತವೆ. ಕಪ್ಪು ಚುಕ್ಕೆಗಳು ಇದೆಯಾ ಎಂಬುದನ್ನ ಪರಿಶೀಲಿಸಿ, ಅವು ಹೆಚ್ಚಾಗಿ ಮಲ ವಿಸರ್ಜನೆ, ಅಥವಾ ಮೊಟ್ಟೆಯ ಚಿಪ್ಪುಗಳು ತಿಳಿ ಹಳದಿ ಬಣ್ಣದಲ್ಲಿ ಕಾಣುತ್ತದೆ.


ಈ ತಿಗಣೆ ಕಾಟದಿಂದ ಮುಕ್ತಿ ಪಡೆಯಲು ಕೆಲ ಮನೆಮದ್ದುಗಳಿದೆ.


ತಿಗಣೆಯನ್ನು ಹೋಗಲಾಡಿಸುವ ಕೆಲಸ ಆರಂಭ ಮಾಡುವ ಮುನ್ನ ನಿಮ್ಮ ಕೊಠಡಿಗಳನ್ನು ಸಾಧ್ಯವಾದಷ್ಟು ಸ್ವಚ್ಛಗೊಳಿಸಿ. ಮನೆ ಸ್ವಚ್ಛವಾಗಿದ್ದರೆ ತಿಗಣೆಗಳು ಉಳಿಯುವುದಿಲ್ಲ. ನಿಮ್ಮ ಬಟ್ಟೆಗಳ ಮೇಲೆ ಸೋಂಕು ಇದೆಯೇ ಎಂದು ನೋಡಿ, ಇದ್ದರೆ ಬಟ್ಟೆಗಳನ್ನು ತೊಳೆಯಿರಿ.


 ವಿನೆಗರ್


ಅಡುಗೆಮನೆಯಲ್ಲಿ ಇದರ ಬಳಕೆಯನ್ನು ಹೊರತುಪಡಿಸಿ, ತಿಗಣೆ ನಿವಾರಣೆಗೆ ಇದು ಹೆಚ್ಚು ಸಹಕಾರಿ. ವಿನೆಗರ್ ಮೂಲಕ ತಿಗಣೆಗಳನ್ನು ಕೊಲ್ಲಬಹುದಾದರೂ, ಅದು ಅವುಗಳ ಮೊಟ್ಟೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ನಿಮ್ಮ ಮನೆಯಲ್ಲಿ ತಿಗಣೆ ಇರುವ ಮೂಲೆಗಳನ್ನು ಗುರುತು ಮಾಡಿಕೊಳ್ಳಿ, ಆ ಅಂಚುಗಳ ಮೇಲೆ ಬಿಳಿ ವಿನೆಗರ್ ಅನ್ನು ಹಾಕಿ. ಅಥವಾ ಸ್ಪ್ರೇ ಬಾಟಲ್ ಬಳಕೆ ಮಾಡಿ ಸಿಂಪಡಿಸಿ.


 ಅಡಿಗೆ ಸೋಡಾ


ತಿಗಣೆಗಳಿಗೆ ಉತ್ತಮವಾದ ಮನೆಮದ್ದುಗಳಲ್ಲಿ ಒಂದು ಎಂದರೆ ಅಡಿಗೆ ಸೋಡಾ ಅಥವಾ ಸೋಡಿಯಂ ಬೈಕಾರ್ಬನೇಟ್. ತಿಗಣೆ ಇರುವ ಪ್ರದೇಶದಲ್ಲಿ ಅಡಿಗೆ ಸೋಡಾವನ್ನು ಸಿಂಪಡಿಸುವ ಮೂಲಕ ನೀವು ತಿಗಣೆಯಿಂದ ಮುಕ್ತಿ ಪಡೆಯಬಹುದು. ಬೇಕಿಂಗ್ ಸೋಡಾ ತಿಗಣೆಗಳ ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಅವುಗಳನ್ನು ತಕ್ಷಣವೇ ಕೊಲ್ಲುತ್ತದೆ. ಆದರೆ ಇದು ಫಲಿತಾಂಶ ನೀಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.


ಕರ್ಪೂರ


ಇದನ್ನೂ ಓದಿ: ಕ್ರಿಸ್​ಮಸ್​ ಹಬ್ಬಕ್ಕೆ ಈ ಸೂಪರ್ ಕೇಕ್​ಗಳನ್ನು ಟ್ರೈ ಮಾಡಿ


ಕರ್ಪೂರವನ್ನು ದಿನದಲ್ಲಿ ಮೂರು ಬಾರಿ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚುವುದರಿಂದ, ತಿಗಣೆ, ಸೊಳ್ಳೆ ಮತ್ತು ನೊಣಗಳನ್ನು ದೂರ ಮಾಡಬಹುದು. ಒಂದು ಬೌಲ್ ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಕರ್ಪೂರವನ್ನು ಹಾಕಿ ಅದನ್ನು ಅಡುಗೆ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡುವುದರಿಂದ ಕೂಡ ತಿಗಣೆಗಳಿಂದ ಪರಿಹಾರ ಸಿಗುತ್ತದೆ.

Published by:Sandhya M
First published: