Potato Juice: ಆಲೂಗೆಡ್ಡೆ ಜ್ಯೂಸ್ ಸೇವನೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

Health Benefits Of Potato Juice: ಸರಳವಾಗಿ ಹೇಳುವುದಾದರೆ, ಇದು ಹಸಿ ಆಲೂಗಡ್ಡೆಯಿಂದ ಬರುವ ರಸವೇ ಜ್ಯೂಸ್​. ಆಲೂಗಡ್ಡೆ ಜ್ಯೂಸ್​ ವಿಟಮಿನ್ ಬಿ ಮತ್ತು ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ತಾಮ್ರ ಸೇರಿದಂತೆ ಪೋಷಕಾಂಶಗಳನ್ನು ಹೊಂದಿದೆ. ಆಲೂಗಡ್ಡೆ ಜ್ಯೂಸ್​ ಇಷ್ಟೆಲ್ಲ ಪೌಷ್ಟಿಕಾಂಶವನ್ನು ಹೊಂದಿರುವುದರಿಂದ, ಇದು ದೇಹಕ್ಕೆ ವ್ಯಾಪಕವಾದ ಪ್ರಯೋಜನಗಳನ್ನು ನೀಡುತ್ತದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಆಲೂಗಡ್ಡೆಯನ್ನು(Potato) ನೋಡಿದಾಗ, ಕೊಬ್ಬು, ದುಂಡಗಿನ ತರಕಾರಿ ಈ ರೀತಿಯ ಆಲೋಚನೆಗಳು ಬಿಟ್ಟು ಅದರ ರಸ ಅಥವಾ ಜ್ಯೂಸ್(Potato Juice)  ಹೆಚ್ಚಿನ ರೀತಿಯಲ್ಲಿ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದು(Health Benefits) ಎಂದು ಯೋಚಿಸಿದ್ದೀರಾ?  ಹೌದು,  ಆಲೂಗೆಡ್ಡೆ ಜ್ಯೂಸ್  ಬಹಳಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.  

ಆಲೂಗಡ್ಡೆ ಜ್ಯೂಸ್ ಎಂದರೇನು?

ಸರಳವಾಗಿ ಹೇಳುವುದಾದರೆ, ಇದು ಹಸಿ ಆಲೂಗಡ್ಡೆಯಿಂದ ಬರುವ ರಸವೇ ಜ್ಯೂಸ್​. ಆಲೂಗಡ್ಡೆ ಜ್ಯೂಸ್​ ವಿಟಮಿನ್ ಬಿ ಮತ್ತು ಸಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ರಂಜಕ ಮತ್ತು ತಾಮ್ರ ಸೇರಿದಂತೆ ಪೋಷಕಾಂಶಗಳನ್ನು ಹೊಂದಿದೆ. ಆಲೂಗಡ್ಡೆ ಜ್ಯೂಸ್​ ಇಷ್ಟೆಲ್ಲ ಪೌಷ್ಟಿಕಾಂಶವನ್ನು ಹೊಂದಿರುವುದರಿಂದ, ಇದು ದೇಹಕ್ಕೆ ವ್ಯಾಪಕವಾದ ಪ್ರಯೋಜನಗಳನ್ನು ನೀಡುತ್ತದೆ.

ಇದರ ಆರೋಗ್ಯ ಪ್ರಯೋಜನಗಳೇನು?

ಆಲೂಗಡ್ಡೆ ಜ್ಯೂಸ್ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇವುಗಳಲ್ಲಿ ಕೆಲವು ಸಂಶೋಧನೆಯಿಂದ ಕೂಡ ಸಾಬೀತಾಗಿದೆ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

ಆಲೂಗಡ್ಡೆ ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ.  ಈ ಅಂಶವು ಶೀತ ಮತ್ತು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ರೋಗಗಳು ದೂರವಾಗುತ್ತವೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ ಎಂದು ಸಾಬೀತಾಗಿದೆ.

ಇದನ್ನೂ ಓದಿ: ಕೂದಲಿನ ಬೆಳವಣಿಗೆಯಿಂದ ಹಿಡಿದು ತೂಕ ಇಳಿಸುವುದರವರೆಗೆ- ಎಷ್ಟೆಲ್ಲ ಇದೆ ಗೊತ್ತಾ ಈ ಬ್ಲೂ ಟೀ ಪ್ರಯೋಜನಗಳು ?

ಸಂಧಿವಾತವನ್ನು ನಿವಾರಿಸುತ್ತದೆ

ಆಲೂಗಡ್ಡೆ ಜ್ಯೂಸ್​  ಉರಿಯೂತದ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿದೆ. ಇದು ಊತ, ಉರಿಯೂತಕ್ಕೆ ಸಂಬಂಧಿಸಿದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.ಆಲೂಗಡ್ಡೆ ಜ್ಯೂಸ್​ ಕುಡಿಯುವುದರಿಂದ ಸಂಧಿವಾತ ಮತ್ತು ಸಂಧಿವಾತಕ್ಕೆ ಸಂಬಂಧಿಸಿದ ಇತರ ಕೀಲುಗಳು ಮತ್ತು ಬೆನ್ನು ನೋವುಗಳು ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೇ ಆಲೂಗಡ್ಡೆಯನ್ನು ನೇರವಾಗಿ ಕೀಲುಗಳಿಗೆ ಹಾಕಿ ಉಜ್ಜುವುದು ನೋವನ್ನು ನಿವಾರಿಸುತ್ತದೆ. ಇದನ್ನು ಹಲವಾರು ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ.

ಹುಣ್ಣುಗಳನ್ನು ಗುಣಪಡಿಸುತ್ತದೆ.

ಆಲೂಗಡ್ಡೆ ಜ್ಯೂಸ್ ಜಠರಗರುಳಿನ  ಸಮಸ್ಯೆಗಳ ಮೇಲೆ ಪರಿಣಾಮ ಬೀರಿ, ಪರಿಹಾರ ನೀಡುತ್ತದೆ.ಇದು ಅಲ್ಸರ್ ಚಿಕಿತ್ಸೆಗೂ ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಯ ಹುಣ್ಣುಗಳ ಬೆಳವಣಿಗೆಯನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಪ್ರೋಬಯಾಟಿಕ್ ಪಾನೀಯವಾಗಿಯೂ ಕೆಲಸ ಮಾಡುತ್ತದೆ.

ಪಿತ್ತಜನಕಾಂಗವನ್ನು ನಿರ್ವಿಷಗೊಳಿಸುತ್ತದೆ

ಪಿತ್ತಜನಕಾಂಗ ಮತ್ತು ಪಿತ್ತಕೋಶವನ್ನು ಸ್ವಚ್ಛಗೊಳಿಸಲು ಆಲೂಗಡ್ಡೆ ಜ್ಯೂಸ್​ ಅತ್ಯಂತ ಸುಲಭದ ವಿಧಾನಗಳಲ್ಲಿ ಒಂದಾಗಿದೆ. ಹೆಪಟೈಟಿಸ್ ಚಿಕಿತ್ಸೆಗಾಗಿ ಜಪಾನಿಯರು ಈ ಜ್ಯೂಸ್  ಬಳಕೆ ಮಾಡುತ್ತಾರೆ. ನೀವು ಎದ್ದ ತಕ್ಷಣ ಅಥವಾ ಬೆಳಗಿನ  ತಿಂಡಿಗೆ 30 ನಿಮಿಷಗಳ ಮೊದಲು ಪ್ರತಿದಿನ ಒಂದು ಲೋಟ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಅದರ ನಿರ್ವಿಶೀಕರಣ ಮಾಡಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಆಲೂಗಡ್ಡೆ ಫೈಬರ್ ಮತ್ತು ವಿಟಮಿನ್ ಎ, ಬಿ-ಕಾಂಪ್ಲೆಕ್ಸ್ ಮತ್ತು ಸಿ ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ ಈ ಪೋಷಕಾಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಲೋಟ ಆಲೂಗಡ್ಡೆ ಜ್ಯೂಸ್​ ಅನ್ನು ಅದರ ತಿರುಳನ್ನು ಸೋಸದೆ ಕುಡಿಯುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಕೊಲೆಸ್ಟ್ರಾಲ್ ಮಟ್ಟಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದು ಸಾಬೀತಾಗಿದೆ.

ಮೈಗ್ರೇನ್ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ 

ಕಚ್ಚಾ ಆಲೂಗಡ್ಡೆ ಮತ್ತು ಅವುಗಳ ರಸವನ್ನು ಯುರೋಪಿಯನ್ ಔಷಧದಲ್ಲಿ  ಬಹಳಷ್ಟು ವರ್ಷಗಳಿಂದ ಬಳಸಲಾಗುತ್ತಿದೆ. ನೋವು, ಒತ್ತಡ ಮತ್ತು ಮೈಗ್ರೇನ್ ಅನ್ನು ನಿವಾರಿಸಲು ನೀವು ಆಲೂಗಡ್ಡೆ ಅಥವಾ ಆಲೂಗಡ್ಡೆಯ ಜ್ಯೂಸ್​ ಅನ್ನು ಹಣೆಯ ಮೇಲೆ ಉಜ್ಜಬಹುದು.

ಮಲಬದ್ಧತೆಯನ್ನು ನಿವಾರಿಸುತ್ತದೆ

ಇದನ್ನೂ ಓದಿ: ನವರಾತ್ರಿಯಲ್ಲಿ ಉಪವಾಸ ಮಾಡುವವರು ಈ ರೀತಿ ಮಾಡಿದ್ರೆ ದೇಹ ತೂಕ ಇಳಿಸಿಕೊಳ್ಳಬಹುದು..!

ಆಲೂಗಡ್ಡೆ ಗಮನಾರ್ಹ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಇದು ಮಲಬದ್ಧತೆಗೆ ಚಿಕಿತ್ಸೆ ನೀಡಲು ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಅತ್ಯಂತ  ಸಹಾಯಕವಾಗಿದೆ.  ತಿರುಳಿನೊಂದಿಗೆ ಒಂದು ಲೋಟ ಆಲೂಗಡ್ಡೆ  ಜ್ಯೂಸ್​ ಸೇವಿಸುವುದರಿಂದ ಜಿಐ ಟ್ರಾಕ್ಟ್ ಅನ್ನು ಸ್ವಚ್ಛಗೊಳಿಸಲು ಮತ್ತು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ.
Published by:Sandhya M
First published: