Benefits Of Buffalo Milk : ಎಮ್ಮೆ ಹಾಲನ್ನು ಕುಡಿಯೋದು ಎಷ್ಟು ಒಳ್ಳೆದು ಗೊತ್ತಾ?

Health Tips: ಎಮ್ಮೆಯ ಹಾಲಿನಲ್ಲಿ ಸಹ ಉತ್ತಮ ಪ್ರಮಾಣದ ಪೋಷಕಾಂಶಗಳಿವೆ. ಎರಡೂ ರೀತಿಯ ಹಾಲು ವಿವಿಧ ಕಾರಣಗಳಿಗಾಗಿ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಎಮ್ಮೆ ಹಾಲಿನ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಲಿನಲ್ಲಿ (Milk)ಹಲವಾರು  ಆರೋಗ್ಯ ಪ್ರಯೋಜನಗಳು  ಇದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ, ಹಸುವಿನ ಹಾಲು(Cow Milk) ಮತ್ತು ಎಮ್ಮೆ ಹಾಲು ಎರಡೂ ಜನಪ್ರಿಯವಾಗಿವೆ.  ಆದರೆ ಹಲವಾರು ಜನರ ಪ್ರಕಾರ ಎಮ್ಮೆ(Buffalo Milk )ಹಾಲಿನ ಸೇವನೆ ಬುದ್ದಿಯನ್ನು ಹಾಳು ಮಾಡುತ್ತದೆ. ಆದರೆ ಅದು ಸುಳ್ಳು ಎಮ್ಮೆಯ ಹಾಲಿನಲ್ಲಿ ಸಹ ಉತ್ತಮ ಪ್ರಮಾಣದ ಪೋಷಕಾಂಶಗಳಿವೆ. ಎರಡೂ ರೀತಿಯ ಹಾಲು ವಿವಿಧ ಕಾರಣಗಳಿಗಾಗಿ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಎಮ್ಮೆ ಹಾಲಿನ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ.

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ: ಎಮ್ಮೆ ಹಾಲಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ  ಅಂಶಗಳಿವೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯದ  ಸಮಸ್ಯೆ ಇರುವವರಿಗೆ  ತುಂಬಾ ಒಳ್ಳೆಯದು ಎಂದು  ಅಧ್ಯಯನಗಳಲ್ಲಿ ಸಾಬೀತಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ.

ಹೆಚ್ಚಿನ ಪೋಷಕಾಂಶಗಳಿವೆ: ಎಮ್ಮೆಯ ಹಾಲಿನಲ್ಲಿ ಮೂಳೆಗಳ ಸರಿಯಾದ ಮತ್ತು ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಸಿಯಂ, ಫಾಸ್ಪರಸ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಅತ್ಯಂತ ಪ್ರಯೋಜನಕಾರಿ ಪೋಷಕಾಂಶಗಳಿವೆ. ಎಮ್ಮೆಯ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಆಸ್ಟಿಯೊಪೊರೋಸಿಸ್ ನಂತಹ ಮೂಳೆ ರೋಗಗಳು ಬರದಂತೆ ತಡೆಯುತ್ತದೆ. ಕ್ಯಾಲ್ಸಿಯಂ ಮೂಳೆಗಳ ನಿರ್ಮಾಣ ಘಟಕಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಅದಕ್ಕಾಗಿಯೇ ಎಮ್ಮೆ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಸಂಧಿವಾತ ಮತ್ತು ಇತರ ಮೂಳೆ ಮತ್ತು ಕೀಲುಗಳ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಾಬೀತಾಗಿದೆ.

ಇದನ್ನೂ ಓದಿ: ಕೆಂಪು ತುಟಿ ಬೇಕಾ? ಹೀಗೆ ಮಾಡಿ ಕೇವಲ ಒಂದು ತಿಂಗಳಲ್ಲಿ ತುಟಿಯ ಬಣ್ಣ ಬದಲಾಗುತ್ತದೆ..

ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ: ಎಮ್ಮೆ ಹಾಲಿನಲ್ಲಿರುವ ಪೊಟ್ಯಾಶಿಯಂ ಅಂಶವು ಅಧಿಕವಾಗಿದ್ದು ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ ಮತ್ತು ನಿಮ್ಮ ಅಧಿಕ ರಕ್ತದೊತ್ತಡದ ಸಮಸ್ಯೆಯ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹೆಚ್ಚು ಪ್ರೋಟೀನ್​ಗಳು : ಎಮ್ಮೆ ಹಾಲಿನಲ್ಲಿ ಎಲ್ಲಾ 9 ಅಮೈನೋ ಆಮ್ಲಗಳಿದೆ. ಅಲ್ಲದೇ  ಸುಮಾರು 8.5 ಗ್ರಾಂ ಪ್ರೋಟೀನ್  ಇರುತ್ತದೆ. ಇದು ಸ್ನಾಯುಗಳನ್ನು ನಿರ್ಮಿಸಲು ಮತ್ತು ಸ್ನಾಯುಗಳ ನೋವನ್ನು ತಡೆಯಲು ಉತ್ತಮ ಎಂದು ಹೇಳಲಾಗುತ್ತದೆ. ಅಲ್ಲದೇ   ನಿಮಗೆ ಹೆಚ್ಚು ಹಸಿವು ಆಗದಂತೆ ಸಹಾಯ ಮಾಡುತ್ತದೆ. ಇದರಿಂದ ಹೆಚ್ಚು ಜಂಕ್ ಸೇವನೆ ಕಡಿಮೆ ಮಾಡುತ್ತದೆ.

ಆ್ಯಂಟಿ ಆಕ್ಸಿಡೆಂಟ್​ ಅಂಶಗಳಿವೆ: ಇತರ ಡೈರಿ ಉತ್ಪನ್ನಗಳಂತೆ, ಎಮ್ಮೆ ಹಾಲು ಅದರ ವಿಟಮಿನ್ ಗಳು, ಖನಿಜಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದಾಗಿ  ಆ್ಯಂಟಿ ಆಕ್ಸಿಡೆಂಟ್​ ಗುಣಲಕ್ಷಣಗಳನ್ನು ಹೊಂದಿದೆ. ಆ್ಯಂಟಿ ಆಕ್ಸಿಡೆಂಟ್ ಗಳು ಮುಕ್ತ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ಅಲ್ಲದೇ ಹಲವಾರು ರೋಗಗಳಿಗೆ ಪರಿಹಾರ ನೀಡುತ್ತದೆ.

ಅಧಿಕ ಕೊಬ್ಬು ಇರುತ್ತದೆ: ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿನಂತಹ ಇತರ ಬಗೆಯ ಹಾಲುಗಿಂತ ಹೆಚ್ಚಿನ ಕೊಬ್ಬು ಇರುತ್ತದೆ. ಅದಕ್ಕಾಗಿಯೇ ತೂಕ ಹೆಚ್ಚಿಸಲು ಪ್ರಯತ್ನಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ತೂಕವನ್ನು  ಹೆಚ್ಚಿಸಲು ಬಯಸುವವರು ತಾವು ಸೇವಿಸುತ್ತಿರುವ ಹಾಲಿನ ಪ್ರಮಾಣಕ್ಕೆ ಗಮನ ಕೊಡಬೇಕು.

ಇದನ್ನೂ ಓದಿ: ಈ ಎಲ್ಲಾ ಸಮಸ್ಯೆಗಳಿಗೆ ವಿಟಮಿನ್ ಇ ಎಣ್ಣೆಯಲ್ಲಿದೆ ಪರಿಹಾರ..

ಚರ್ಮದ  ಅಂದ ಹೆಚ್ಚು ಮಾಡುತ್ತದೆ:  ಅನೇಕ  ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್‌ಗಳಿಂದ ತುಂಬಿರುವ ಎಮ್ಮೆ ಹಾಲು ಚರ್ಮಕ್ಕೆ ಒಳ್ಳೆಯ ಪ್ರಯೋಜನ ನೀಡುತ್ತದೆ.  ಇದು ಚರ್ಮಕ್ಕೆ ಪೋಷಣೆ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.ಮೃದುವಾದ ಮತ್ತು ಹೊಳೆಯುವ ಚರ್ಮಕ್ಕಾಗಿ ಹಾಲಿನ ಫೇಸ್ ಪ್ಯಾಕ್ ತಯಾರಿಸಲು ಎಮ್ಮೆ ಹಾಲನ್ನು ಸಹ ಬಳಸಬಹುದು.ಇದು ಚರ್ಮದ ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ssu
Published by:Sandhya M
First published: