• Home
 • »
 • News
 • »
 • lifestyle
 • »
 • Beetroot Juice: ಬಿಪಿ ಸಮಸ್ಯೆಗೆ ಬೀಟ್​ರೂಟ್​ ಜ್ಯೂಸ್ ಬೆಸ್ಟ್- ಇದರಲ್ಲಿ ಏನೆಲ್ಲಾ ಪ್ರಯೋಜನಗಳಿದೆ ನೋಡಿ

Beetroot Juice: ಬಿಪಿ ಸಮಸ್ಯೆಗೆ ಬೀಟ್​ರೂಟ್​ ಜ್ಯೂಸ್ ಬೆಸ್ಟ್- ಇದರಲ್ಲಿ ಏನೆಲ್ಲಾ ಪ್ರಯೋಜನಗಳಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Beet Root Juice Benefits: ಇತ್ತೀಚಿನ ಅಧ್ಯಯನವು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ  ಸಂಶೋಧನೆ ನಡೆಸಿದೆ. ಬೀಟ್ರೂಟ್ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
 • Share this:

  ಆರೋಗ್ಯಕರ ಜೀವನಶೈಲಿಗಾಗಿ ಮತ್ತು ದೇಹಕ್ಕೆ ಉತ್ತಮ ಪೋಷಣೆಯನ್ನು ಒದಗಿಸುವ ಸಲುವಾಗಿ ನಿಮ್ಮ ಆಹಾರದಲ್ಲಿ ತರಕಾರಿ ಜ್ಯೂಸ್​  ಸೇರಿಸಲು ವೈದ್ಯರು ಯಾವಾಗಲೂ ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ತರಕಾರಿ ಜ್ಯೂಸ್​ಗಳು ರುಚಿಕರವಾಗಿರುವುದಲ್ಲದೆ ಉತ್ತಮ ಪೋಷಕಾಂಶವನ್ನು ನೀಡುತ್ತದೆ. ಆ ನಿಟ್ಟಿನಲ್ಲಿ ಇತ್ತೀಚಿನ ಅಧ್ಯಯನವು ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ  ಸಂಶೋಧನೆ ನಡೆಸಿದೆ. ಬೀಟ್ರೂಟ್ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ನಿಮ್ಮ ರಕ್ತನಾಳಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ವಯಸ್ಸಾದ ನಂತರವೂ ಇವುಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ.


   ಬೀಟ್​ರೂಟ್​ ಜ್ಯೂಸ್​ ಕುಡಿಯುವುದರಿಂದ ಸಿಗುವ ಪ್ರಯೋಜನಗಳು


  ಎಕ್ಸೆಟರ್ ವಿಶ್ವವಿದ್ಯಾನಿಲಯವು ನಡೆಸಿದ ಹೊಸ ಅಧ್ಯಯನದಲ್ಲಿ ಭಾಗವಹಿಸಿದ್ದ ಜನರಿಗೆ ದಿನಕ್ಕೆ ಎರಡು ಬಾರಿ ಬೀಟ್​ರೂಟ್​ ಜ್ಯೂಸ್​ ನೀಡಲಾಗಿತ್ತು. ಅವರಲ್ಲಿ ಸಂಕೋಚನದ ರಕ್ತದೊತ್ತಡವು ಸರಾಸರಿ ಐದು ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  ಬೀಟ್​ರೂಟ್​ ಜ್ಯೂಸ್ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


  ಈ ಜ್ಯೂಸ್ ಸೇವಿಸುವ ಜನರು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ.  ಜ್ಯೂಸ್‌ನಲ್ಲಿರುವ ಸಂಯುಕ್ತಗಳು ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತವೆ ಮತ್ತು ರಕ್ತನಾಳಗಳನ್ನು ವಿಸ್ತರಿಸಲು ಮತ್ತು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತವೆ.  


  ಇದನ್ನೂ ಓದಿ: ಕೂದಲಿನ ಸರ್ವ ಸಮಸ್ಯೆಗೆ ಕರಿಬೇವಿನ ಎಲೆಯಲ್ಲಿದೆ ಪರಿಹಾರ


  ತೂಕವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.


  ಬೀಟ್​ರೂಟ್​ ಜ್ಯುಸ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ವಾಸ್ತವವಾಗಿ ಯಾವುದೇ ಕೊಬ್ಬನ್ನು ಹೊಂದಿರುವುದಿಲ್ಲ. ನಿಮ್ಮ ಬೆಳಗಿನ ತಿಂಡಿಯ ಸಮಯಕ್ಕೆ ಉತ್ತಮ ಆಯ್ಕೆಯಾಗಿದೆ.


  ಕ್ಯಾನ್ಸರ್ ತಡೆಗಟ್ಟಬಹುದು


  ನೀರಿನಲ್ಲಿ ಕರಗುವ  ಆ್ಯಂಟಿ ಆಕ್ಸಿಡೆಂಟ್​ಗಳು ಬೀಟಾಲೈನ್‌ಗಳಿಂದ ಬಣ್ಣವನ್ನು ಪಡೆಯುತ್ತವೆ. 2016 ರ ಅಧ್ಯಯನದ ಪ್ರಕಾರ, ಬೀಟಾಲೈನ್‌ಗಳು ಕೆಲವು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಬೆಟಾಲೈನ್‌ಗಳನ್ನು ಸ್ವತಂತ್ರ ರಾಡಿಕಲ್ ಸ್ಕ್ಯಾವೆಂಜರ್‌ಗಳಾಗಿದ್ದು, ಗೆಡ್ಡೆಗಳ ನಾಶಕ್ಕೆ ಸಹಕಾರಿಯಾಗಿದೆ.


  ಪೊಟ್ಯಾಸಿಯಮ್ನ ಉತ್ತಮ ಮೂಲ


  ಬೀಟ್​ರೂಟ್​ಗಳು ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ, ಖನಿಜ ಮತ್ತು ಎಲೆಕ್ಟ್ರೋಲೈಟ್ ನರಗಳು ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಜ್ಯೂಸ್ ಅನ್ನು ಮಿತವಾಗಿ ಕುಡಿಯುವುದು ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ಅತ್ಯುತ್ತಮವಾಗಿಡಲು ಸಹಾಯ ಮಾಡುತ್ತದೆ.


  ಪೊಟ್ಯಾಸಿಯಮ್ ಮಟ್ಟವು ತುಂಬಾ ಕಡಿಮೆಯಾದರೆ, ಆಯಾಸ, ದೌರ್ಬಲ್ಯ ಮತ್ತು ಸ್ನಾಯು ಸೆಳೆತ  ಉಂಟಾಗಬಹುದು. ಅತ್ಯಂತ ಕಡಿಮೆ ಪೊಟ್ಯಾಸಿಯಮ್ ಜೀವಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಇದೆ.


  ಇತರ ಖನಿಜಗಳ ಉತ್ತಮ ಮೂಲ


  ಅಗತ್ಯವಾದ ಖನಿಜಗಳಿಲ್ಲದೆ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕೆಲವು ಖನಿಜಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬೀಟ್​ರೂಟ್​ ಜ್ಯೂಸ್​ನಲ್ಲಿರುವ ಖನಿಜ ಅಂಶಗಳು ಕಬ್ಬಿಣ


  ಮೆಗ್ನೀಸಿಯಮ್


  ಮ್ಯಾಂಗನೀಸ್


  ಸೋಡಿಯಂ


  ಸತು


  ತಾಮ್ರ


  ಸೆಲೆನಿಯಮ್


  ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ


  ನೀವು ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ, ಬೀಟ್​ರೂಟ್​ ಜ್ಯೂಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. 2011 ರ ಅಧ್ಯಯನದ ಪ್ರಕಾರ ಬೀಟ್ರೂಟ್ ಸಾರವು ಒಟ್ಟು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುತ್ತದೆ ಮತ್ತು HDL ಅಥವಾ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.


  ಇದು ಯಕೃತ್ತಿನ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಬೀಟ್‌ರೂಟ್‌ನ ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಸಾಮರ್ಥ್ಯವು ಫ್ಲೇವನಾಯ್ಡ್‌ಗಳಂತಹ ಫೈಟೊನ್ಯೂಟ್ರಿಯೆಂಟ್‌ಗಳ ಕಾರಣದಿಂದಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.


  ಮುನ್ನೆಚ್ಚರಿಕೆಗಳು


  ಇದನ್ನೂ ಓದಿ: ಖರ್ಜೂರ ಜಾಸ್ತಿ ತಿಂದ್ರೆ ಈ ಸಮಸ್ಯೆಗಳು ಬರಬಹುದು ಎಚ್ಚರ


  ಬೀಟ್​ರುಟ್ ನಿಯಮಿತ ಸೇವನೆಯ ಕಾರಣ  ನಿಮ್ಮ ಮೂತ್ರ ಮತ್ತು ಮಲವು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಬಹುದು. ಬೀಟೂರಿಯಾ ಎಂದು ಕರೆಯಲ್ಪಡುವ ಈ ಸ್ಥಿತಿಯು ಯಾವುದೇ ತೊಂದರೆಯನ್ನು ಮಾಡುವುದಿಲ್ಲ.ನೀವು ಕಡಿಮೆ ರಕ್ತದೊತ್ತಡವನ್ನು ಹೊಂದಿದ್ದರೆ, ನಿಯಮಿತವಾಗಿ ಬೀಟ್​ ರುಟ್​ ಜ್ಯೂಸ್​ ಕುಡಿಯುವುದರಿಂದ ನಿಮ್ಮ ಒತ್ತಡವು ತುಂಬಾ ಕಡಿಮೆಯಾಗುವ ಅಪಾಯವಿರುತ್ತದೆ.

  Published by:Sandhya M
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು