Foods For PCOD: ಈ ಐದು ಆಹಾರಗಳನ್ನು ತಿಂದ್ರೆ PCOS, PCOD ಸಮಸ್ಯೆಗೆ ಪರಿಹಾರ ಸಿಗುತ್ತೆ

PCOD And PCOS: ಇದು ಆ್ಯಂಡ್ರೋಜೆನ್‍ಗಳ ಅಧಿಕ ಉತ್ಪಾದನೆಯಿಂದ ಉಂಟಾಗುತ್ತದೆ. ಅನೇಕರು ಅತಿಯಾಗಿ ದಪ್ಪಗಾಗುತ್ತಾರೆ ಮತ್ತು ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜೀವನಶೈಲಿ ಬದಲಾವಣೆ ಮತ್ತು ಆಹಾರದಲ್ಲಿನ ಮಾರ್ಪಾಡುಗಳು ಈ ಹಾರ್ಮೋನುಗಳ ಅಸ್ವಸ್ಥತೆ ನಿಭಾಯಿಸುವಲ್ಲಿ ಮತ್ತು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಮತ್ತು ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (PCOD) ಹಾರ್ಮೋನ್ ಅಸಮತೋಲನದಿಂದ ಬರುವ ಆರೋಗ್ಯ(Health) ತೊಂದರೆಯಾಗಿದೆ. ಇತ್ತೀಚಿನ ದೇಶ-ವ್ಯಾಪಿ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 20-29 ವರ್ಷ ವಯಸ್ಸಿನ ಸುಮಾರು 16% ಮಹಿಳೆಯರು PCOS/PCODಯಿಂದ ಬಳಲುತ್ತಿದ್ದಾರೆ. ಇದು ಸಾಮಾನ್ಯವಾಗಿ ಅನಿಯಮಿತ ಮುಟ್ಟಿನ ಅವಧಿಯಿಂದ ಪ್ರಾರಂಭವಾಗುತ್ತದೆ.

ಇದು ಆ್ಯಂಡ್ರೋಜೆನ್‍ಗಳ ಅಧಿಕ ಉತ್ಪಾದನೆಯಿಂದ ಉಂಟಾಗುತ್ತದೆ. ಅನೇಕರು ಅತಿಯಾಗಿ ದಪ್ಪಗಾಗುತ್ತಾರೆ ಮತ್ತು ಆರೋಗ್ಯದಲ್ಲಿ ಏರುಪೇರಾಗುತ್ತದೆ. ಜೀವನಶೈಲಿ ಬದಲಾವಣೆ ಮತ್ತು ಆಹಾರದಲ್ಲಿನ ಮಾರ್ಪಾಡುಗಳು ಈ ಹಾರ್ಮೋನುಗಳ ಅಸ್ವಸ್ಥತೆ ನಿಭಾಯಿಸುವಲ್ಲಿ ಮತ್ತು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರೋಗಲಕ್ಷಣಗಳನ್ನು ನಿಯಂತ್ರಿಸದಿದ್ದರೆ, ಹೃದ್ರೋಗ, ಎಂಡೋಮೆಟ್ರಿಯಲ್ ಕ್ಯಾನ್ಸರ್, ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗುತ್ತದೆ. ಇದು ಮಹಿಳೆಯ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ತೊಡಕುಗಳನ್ನು ಉಂಟುಮಾಡಬಹುದು.

PCOS ಅಥವಾ PCODಯಿಂದ ಬಳಲುತ್ತಿರುವ ಅನೇಕ ಮಹಿಳೆಯರು ತಮ್ಮ ರೋಗಲಕ್ಷಣಗಳನ್ನು ನಿರ್ವಹಿಸಲು ಮತ್ತು ಅವರ ಆಹಾರ ಹಾಗೂ ಜೀವನಶೈಲಿಯ ಆಯ್ಕೆಗಳನ್ನು ಮಾರ್ಪಡಿಸುವ ಮೂಲಕ ಸಂಬಂಧಿತ ವೈದ್ಯಕೀಯ ಸಮಸ್ಯೆಗಳ ಅಪಾಯ ಕಡಿಮೆ ಮಾಡಲು ಸಾಧ್ಯವಾಗಿದೆ. ಈ ಸರಳ ಜೀವನಶೈಲಿ ಟ್ರಿಕ್‍ಗಳು ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆತಂಕ ಕಡಿಮೆ ಮಾಡುತ್ತದೆ, ಅದು ಒಬ್ಬರ ಗರ್ಭಧಾರಣೆಯ ಸಾಮರ್ಥ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.

PCOS/PCOD ಮಹಿಳೆಯರು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 5 ಪ್ರಮುಖ ಆಹಾರಗಳು ಇಲ್ಲಿವೆ:

ಇದನ್ನೂ ಓದಿ:ಸ್ನಾಯು ನೋವಿಗೆ ಎಳ್ಳಿನ ಎಣ್ಣೆ ರಾಮಬಾಣ- ಇದರಲ್ಲಿ ಎಷ್ಟು ಪ್ರಯೋಜನಗಳಿವೆ  ನೋಡಿ

1. ಹಸಿರು ಎಲೆಯುಳ್ಳ ತರಕಾರಿ
ಮಹಿಳೆಯರು ತಮ್ಮ ಆಹಾರದಲ್ಲಿ ದಿನದಲ್ಲಿ ಕನಿಷ್ಠ 1-2 ಬಾರಿಯ ಆರೋಗ್ಯಕರ ಪೌಷ್ಟಿಕ ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಬೇಕು. ಇವುಗಳಲ್ಲಿ ಪೌಷ್ಟಿಕಾಂಶ ಮಾತ್ರವಲ್ಲ, ವಿಟಮಿನ್ ಬಿ ಕೂಡ ಸಮೃದ್ಧವಾಗಿವೆ. ಇದು ಅಂಡೋತ್ಪತ್ತಿ, ಇನ್ಸುಲಿನ್ ನಿಯಂತ್ರಣ ಮತ್ತು ದೇಹದಲ್ಲಿ ರಕ್ತದ ಹರಿವನ್ನು ಕ್ರಮಬದ್ಧಗೊಳಿಸುವ ಮೂಲಕ ಫಲವತ್ತತೆ ಬೆಂಬಲಿಸುವ ಪ್ರಮುಖ ಪೋಷಕಾಂಶವಾಗಿದೆ. ಆದ್ದರಿಂದ, ವಿಟಮಿನ್ ಬಿಯ ಹೆಚ್ಚಿನ ಸೇವನೆಯು PCOSಗೆ ಸಂಬಂಧಿಸಿದ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಕೂದಲು ತೆಳುವಾಗುವುದು ಮತ್ತು ಹಿರ್ಸುಟಿಸಮ್ (ಅಧಿಕ ಕೂದಲು ಬೆಳವಣಿಗೆ), PCOS ಮತ್ತು PCODಗೆ ಸಂಬಂಧಿಸಿದ ಎರಡು ಇತರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಒಮೆಗಾ 3:
ಇದು ಹಾರ್ಮೋನುಗಳ ಅಸಮತೋಲನ ಸರಿಪಡಿಸಲು ಸಹಾಯ ಮಾಡುವ ಪ್ರಮುಖ ಪೋಷಕಾಂಶವಾಗಿದೆ. ಸಾಲ್ಮನ್ ಮತ್ತು ಸಾರ್ಡೀನ್‌ನಂತಹ ಕೆಲವು ಮೀನುಗಳು ಒಮೆಗಾ -3ನಲ್ಲಿ ಸಮೃದ್ಧವಾಗಿವೆ. ಒಮೆಗಾ -3 ಒತ್ತಡದ ಮಟ್ಟ ನಿಯಂತ್ರಿಸಲು ಮತ್ತು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಅನಿಯಂತ್ರಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಈ ಮೀನುಗಳು ಲಭ್ಯವಿಲ್ಲದಿದ್ದರೆ, ಮೀನಿನ ಎಣ್ಣೆ ಪೂರಕವಾಗಿ ಬಳಸಬಹುದು. ಸಸ್ಯಾಹಾರಿಗಳು ಅಗಸೆ ಬೀಜಗಳು ಅಥವಾ ವಾಲ್‌ನಟ್ಸ್‌ ಅನ್ನು ಮೊಸರು ಅಥವಾ ಸ್ಮೂಥಿಗಳೊಂದಿಗೆ ಸೇವಿಸಬಹುದು.

3. ದ್ವಿದಳ ಧಾನ್ಯಗಳು:
ಪೋಷಕಾಂಶ-ದಟ್ಟವಾದ ಕಡಲೆ, ಬೀನ್ಸ್, ಮಸೂರ, ಬಟಾಣಿ ಮತ್ತು ಸೋಯಾಬೀನ್‍ಗಳು ಫೈಬರ್ ಮತ್ತು ಪ್ರೋಟೀನ್‍ನಿಂದ ತುಂಬಿರುತ್ತವೆ. ಕೊಲೆಸ್ಟ್ರಾಲ್ ಇರುವುದಿಲ್ಲ. ದ್ವಿದಳ ಧಾನ್ಯಗಳು ಮಧುಮೇಹ ನಿರ್ವಹಣೆಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಅವುಗಳ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮತ್ತು ಸೇವನೆಯ ನಂತರ ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಅವುಗಳಲ್ಲಿ ಪ್ರೋಟೀನ್‌ ಸಮೃದ್ಧವಾಗಿವೆ ಮತ್ತು ಅವುಗಳನ್ನು ಸೈಡ್ ಡಿಶ್ ಆಗಿ ಅಥವಾ ಸಲಾಡ್ ಆಗಿ ತೆಗೆದುಕೊಳ್ಳಬಹುದು.

4. ಬೆರ್ರಿ ಹಣ್ಣುಗಳು:

PCOS ಹೊಂದಿರುವ ರೋಗಿಗಳಿಗೆ ಬೆರ್ರಿಗಳು ಅತ್ಯಂತ ಪ್ರಯೋಜನಕಾರಿಯಾಗಿದೆ. ಏಕೆಂದರೆ ಅವುಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ, ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆರ್ರಿ ಹಣ್ಣುಗಳು ಪಾಲಿಫಿನಾಲ್‍ಗಳನ್ನು ಹೊಂದಿರುತ್ತವೆ, ಇದು ತೂಕ, ಮಧುಮೇಹ ಮತ್ತು ಅಜೀರ್ಣದ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ ಎಂದು ತೋರಿಸಲಾಗಿದೆ. ಹೆಚ್ಚುವರಿ ಪ್ರಯೋಜನಗಳಿಗಾಗಿ ಸ್ಟ್ರಾಬೆರಿ, ಬ್ಲೂಬೆರ್ರಿಗಳ ಮಿಶ್ರಣವನ್ನು ಮೊಸರಿನೊಂದಿಗೆ ಸೇವಿಸಬಹುದು.

ಇದನ್ನೂ ಓದಿ:ಹೆಚ್ಚು ಕಪ್ಪು ಉದ್ದಿನ ಬೇಳೆ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ

5. ಓಟ್ಸ್:
ಇವುಗಳು ಕರಗಬಲ್ಲ ಮತ್ತು ಕರಗದ ಫೈಬರ್‌ಗಳನ್ನು ಹೊಂದಿರುತ್ತವೆ, ಇದು ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಓಟ್ಸ್ ನಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುವ ವಿಟಮಿನ್ ಬಿ ಕೂಡ ಇದೆ. ಓಟ್ಸ್‌ನಲ್ಲಿರುವ ಸತುವು ಕೂದಲಿನ ಬೆಳವಣಿಗೆಗೆ ಪ್ರಯೋಜನ ನೀಡುತ್ತದೆ.
First published: