Dental Health: ಹಲ್ಲುಗಳ ಸಮಸ್ಯೆಗಳನ್ನು ದೂರ ಇಡಲು ಇಲ್ಲಿವೆ ಮೂರು ಮಾರ್ಗಗಳು

ಆರೋಗ್ಯಕರ ಹಲ್ಲುಗಳಿಗಾಗಿ ಕೆಲವು ನಿಯಮಗಳನ್ನು ಪಾಲಿಸಿದರೆ ಸಾಕು. ನಿತ್ಯದ ಜೀವನದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಈ ಕೆಳಗೆ ತಿಳಿಸಿದ ನಿಯಮಗಳನ್ನು ಪಾಲಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಲ್ಲುಗಳು ಮಾನವನ ಬದುಕಿನ ಅವಿಭಾಜ್ಯ ಅಂಗ. ಹಲ್ಲಿನ ಆರೋಗ್ಯವು (Dental Health) ಅಂತಿಮವಾಗಿ ನಿಮ್ಮ ಒಟ್ಟಾರೆ ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ. ಇದು ಆರೋಗ್ಯದ ಅತ್ಯಂತ ಪ್ರಮುಖ ಅಂಶವಾಗಿದ್ದರೂ, ಹೆಚ್ಚಿನ ಜನರು ಹಲ್ಲುಗಳ ನೈರ್ಮಲ್ಯದ ಕಡೆ ಹೆಚ್ಚಾಗಿ ಗಮನ ಹರಿಸುವುದಿಲ್ಲ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಇದನ್ನು ಅನುಸರಿಸುವುದು ತುಂಬಾ ಕಡಿಮೆ ಜನರು ಅನುಸರಿಸುತ್ತಾರೆ. ಹಲ್ಲಿನಲ್ಲಿ ನೋವು ಕಾಣಿಸಿಕೊಂಡಾಗ ಅಥವಾ ಪರಿಸ್ಥಿತಿಯು ನಿಮ್ಮ ನಿಯಂತ್ರಣ ಮೀರಿದಾಗ ದಂತವೈದ್ಯರ ಬಳಿಗೆ ಹೋಗುವ ಬದಲು, ನಿಯಮಿತವಾಗಿ ಅವರನ್ನು ಭೇಟಿ ಮಾಡುವ ಮೂಲಕ ಸ್ವಚ್ಛತೆ ನಿರ್ವಹಣೆಯ ಬಗ್ಗೆ ತಿಳಿದುಕೊಂಡರೆ ನಿಮ್ಮ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಹಲ್ಲುಗಳ ನಡುವಿನ ಗುಂಡಿ ಅಥವಾ ತೂತು (ಕುಳಿ) ಮಕ್ಕಳು ಮತ್ತು ವಯಸ್ಕರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಸಿಹಿ ತಿಂಡಿಗಳನ್ನು ಸೇವಿಸುತ್ತೇವೆ. ಇಂತಹ ವೇಳೆ ಕಾಲಕಾಲಕ್ಕೆ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ. ವಾಸ್ತವವಾಗಿ, ಪ್ರಾಸ್ತೊಡಾಂಟಿಸ್ಟ್, ಇಂಪ್ಲಾಂಟಾಲಜಿಸ್ಟ್ ಮತ್ತು ಸ್ಮೈಲ್ ಡಿಸೈನ್ ಸ್ಪೆಷಲಿಸ್ಟ್ ಡಾ. ದೀಕ್ಷಾ ಬಾತ್ರಾ ನಿಮ್ಮ ಹಲ್ಲುಗಳನ್ನು ಕುಳಿಗಳಿಂದ ರಕ್ಷಿಸಲು ಮೂರು ಸರಳ ವಿಧಾನಗಳನ್ನು ವಿವರಿಸುತ್ತಾರೆ.

ಸಾಂದರ್ಭಿಕ ಚಿತ್ರ


1. ಉತ್ತಮ ಓರಲ್ ಹೈಜಿನ್: "ಓರಲ್ ಹೈಜಿನ್ ವ್ಯಕ್ತಿನಿಷ್ಠವಾಗಿದೆ ಮತ್ತು ನಾವು ಬೆಳಗ್ಗೆ ಕೆಲವು ಸೆಕೆಂಡುಗಳ ಹಳೆಯ, ಬಳಸಿದ ಬ್ರಶ್ ಮತ್ತು ಟೂತ್‍ಪೇಸ್ಟ್‌ನೊಂದಿಗೆ ನಮ್ಮ ಹಲ್ಲುಗಳನ್ನು ರಕ್ಷಿಸಿದರೆ ಸಾಕು ಎಂದು ಭಾವಿಸುತ್ತೇವೆ. ಅವರ ಪ್ರಕಾರ, ನಮ್ಮ ಬಾಯಿಯ ನಿರ್ವಹಣೆಯು ಕಡಿಮೆ ಎಂದು ಭಾವಿಸಿದರೂ ತುಂಬಾ ಚೆನ್ನಾಗಿ ಎಲ್ಲರಿಗೂ ಕಾಣಿಸುವುದೆಂದರೆ ಹಲ್ಲುಗಳು. ಹಾಗಾಗಿ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದಷ್ಟು ನಮಗೆ ಅನುಕೂಲವಾಗುತ್ತದೆ. ಹಾಗಾಗಿ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಉತ್ತಮ ಪರಿಕರಗಳನ್ನು ಬಳಸುವುದು ಬಹಳ ಮುಖ್ಯವಾಗುತ್ತದೆ.

1. ಬ್ಯಾಟರಿ ಚಾಲಿತ ಬ್ರಶ್ ಬಳಸಿ
2. ನಿಮ್ಮ ದಂತವೈದ್ಯರು ಶಿಫಾರಸು ಮಾಡಿದ ಟೂತ್ ಪೇಸ್ಟ್, ನಿಮ್ಮ ಹಲ್ಲು ಹಾಗೂ ಒಸಡುಗಳನ್ನು ರಕ್ಷಿಸುತ್ತದೆ.
3. ನೀರಿನ ಫ್ಲೋಸರ್ ಹಲ್ಲುಗಳ ನಡುವೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
4. ನಿಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾ ಸಾಂದ್ರತೆಯನ್ನು ಕಡಿಮೆ ಮಾಡುವ ಟಂಗ್ ಕ್ಲೀನರ್ ಬಳಸಿ

ಇದನ್ನೂ ಓದಿ: Oral Health: ಹಲ್ಲುಜ್ಜುವಾಗ ಈ ತಪ್ಪುಗಳನ್ನು ಮಾಡಬೇಡಿ..!

2. ದಂತ ಆರೈಕೆ ಉತ್ಪನ್ನಗಳಲ್ಲಿ ಫ್ಲೋರೈಡ್ ಅಂಶವಿರಲಿ: ಫ್ಲೋರೈಡ್ ನಿರ್ದಿಷ್ಟ ಅಪಾಯಗಳನ್ನು ತಡೆಗಟ್ಟುವ ಮೂಲಕ ಪ್ರಯೋಜನಗಳನ್ನು ಹೊಂದಿದೆ ಮತ್ತು ಸರಿಯಾದ ಸಾಂದ್ರತೆಯಲ್ಲಿ ನಿಮ್ಮ ದಂತ ನೈರ್ಮಲ್ಯ ಕಾಪಾಡುವ ಉತ್ಪನ್ನಗಳ ಪ್ರಮುಖ ಅಂಶವಾಗಿದೆ. ನಿಮ್ಮ ಮೌತ್‍ವಾಶ್ ಮತ್ತು ಟೂತ್‍ಪೇಸ್ಟ್‌ನಲ್ಲಿರುವ ಫ್ಲೋರೈಡ್ ಪರೀಕ್ಷಿಸಲು ಮರೆಯದಿರಿ. ಅದು ಬ್ಯಾಕ್ಟೀರಿಯಾ ತೊಡೆದುಹಾಕುವ ಮೂಲಕ ಮತ್ತು ಹಲ್ಲುಗಳಲ್ಲಿನ ಕ್ಯಾಲ್ಸಿಯಂ ಅನ್ನು ಆಮ್ಲೀಯ ಸ್ಥಗಿತದಿಂದ ಸಂರಕ್ಷಿಸುವ ಮೂಲಕ ಹಲ್ಲಿನ ಕುಳಿಗಳಾಗದಂತೆ ರಕ್ಷಣೆ ನೀಡುತ್ತದೆ ಎಂದು ಡಾ. ಬಾತ್ರಾ ಹೇಳುತ್ತಾರೆ.

3. ಡಿಮಿನರಲೈಸೇಶನ್ ಚಿಕಿತ್ಸೆ: "ವಜ್ರಗಳ ನಂತರ ಹಲ್ಲಿನ ದಂತಕವಚವು ವಿಶ್ವದ ಕಠಿಣ ಪದಾರ್ಥಗಳಲ್ಲಿ ಒಂದಾಗಿದೆ. ಕುಹರದ ರಚನೆಯು ಡಿಮಿನರಲೈಸೇಶನ್ ಎಂಬ ಪ್ರಕ್ರಿಯೆಯಿಂದ ಉಂಟಾಗುತ್ತದೆ, ಇದು ಆಹಾರ ಉಳಿದುಕೊಳ್ಳುವ ಸಮಯ, ಅದು ಆಹಾರವು ಉತ್ಪಾದಿಸುವ ಬ್ಯಾಕ್ಟೀರಿಯಾದ ಸಾಂದ್ರತೆ ಮತ್ತು ಹಲ್ಲಿನ ದಂತಕವಚ ಸೋರಿಕೆಯಾಗಲು ಪ್ರಾರಂಭಿಸುವ ಆಮ್ಲೀಯ ಉಪ ಉತ್ಪನ್ನಗಳಿಂದ ಪ್ರಭಾವಿತವಾಗಿರುತ್ತದೆ. ಈ ಪ್ರಕ್ರಿಯೆ ಬಗ್ಗೆ ಮುಂಚಿತವಾಗಿಯೇ ತಿಳಿದಿದ್ದರೆ ಯಾವುದೇ ತೊಂದರೆಗಳಿಲ್ಲದೇ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಬಹುದು" ಎಂದು ವೈದ್ಯರು ಎಚ್ಚರಿಸಿದ್ದಾರೆ.
Published by:Anitha E
First published: