Tea Facts: ನಿಮ್ಮ ಫೇವರೇಟ್ ಟೀ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿಗಳು

Facts About Tea: ವಿಶ್ವದ ರಾಷ್ಟ್ರಗಳು ನಮ್ಮ ದೇಶದ ಚಹಾಕ್ಕೆ ಆಸಕ್ತಿ ತೋರಿಸುತ್ತಿವೆ. ಮತ್ತು ಭಾರತದ ಪ್ರತಿಯೊಬ್ಬರೂ, ಶ್ರೀಮಂತರಿಂದ ಹಿಡಿದು ಬಡವರವರೆಗೆ, ಚಹಾ ಕುಡಿಯಲು ಇಷ್ಟಪಡುತ್ತಾರೆ. ಒಂದಾನೊಂದು ಕಾಲದಲ್ಲಿ ಟೀ ಹಾಗು ಕಾಫಿ ಮಾತ್ರ ಇರುತ್ತಿತ್ತು. ಆದರೆ ಈಗ ಅನೇಕ ವಿಧದ ಚಹಾಗಳಿವೆ. ಲೆಕ್ಕವಿಲ್ಲದಷ್ಟು ರುಚಿಗಳಿವೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ನೀರಿನ ನಂತರ(water) ಪ್ರಪಂಚದಾದ್ಯಂತ ಹೆಚ್ಚಿನ ಜನರು ಚಹಾ(Tea) ಕುಡಿಯುತ್ತಾರೆ. ಚಹಾ ಪ್ರಿಯರು ವಿಶೇಷವಾಗಿ ನಮ್ಮ ದೇಶದಲ್ಲಿ ಕೋಟಿ ಜನರಿದ್ದಾರೆ. ಮೇಲಾಗಿ, ನಮ್ಮ ದೇಶದಿಂದ ಹಲವು ದೇಶಗಳಿಗೆ ಚಹಾ ರಫ್ತಾಗುತ್ತಿದೆ. ಅಸ್ಸಾಂ (Assam)ಮತ್ತು ಡಾರ್ಜಿಲಿಂಗ್ ಚಹಾಗಳು ವಿಶ್ವಾದ್ಯಂತ ಮನ್ನಣೆಯನ್ನು ಹೊಂದಿವೆ. ಐರೋಪ್ಯ ರಾಷ್ಟ್ರಗಳಲ್ಲಿರುವ ಟೀ ಕಂಪನಿಗಳು ತಮ್ಮ ಪ್ರತಿನಿಧಿಗಳನ್ನು ಭಾರತಕ್ಕೆ ಕಳುಹಿಸಿ ಟೀ ಎಸ್ಟೇಟ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಎಷ್ಟರ ಮಟ್ಟಿಗೆಂದರೆ ವಿಶ್ವದ ರಾಷ್ಟ್ರಗಳು ನಮ್ಮ ದೇಶದ ಚಹಾಕ್ಕೆ ಆಸಕ್ತಿ ತೋರಿಸುತ್ತಿವೆ. ಮತ್ತು ಭಾರತದ ಪ್ರತಿಯೊಬ್ಬರೂ, ಶ್ರೀಮಂತರಿಂದ ಹಿಡಿದು ಬಡವರವರೆಗೆ, ಚಹಾ ಕುಡಿಯಲು ಇಷ್ಟಪಡುತ್ತಾರೆ. ಒಂದಾನೊಂದು ಕಾಲದಲ್ಲಿ ಟೀ ಹಾಗು ಕಾಫಿ ಮಾತ್ರ ಇರುತ್ತಿತ್ತು. ಆದರೆ ಈಗ ಅನೇಕ ವಿಧದ ಚಹಾಗಳಿವೆ. ಲೆಕ್ಕವಿಲ್ಲದಷ್ಟು ರುಚಿಗಳಿವೆ.  

ಚಹಾದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿದೆ.

ಚಹಾ : - ಚಹಾವನ್ನು ಮೊದಲು 2737 BC ಯಲ್ಲಿ ಚೀನಾದ ಚಕ್ರವರ್ತಿ ಶೆನ್ ನಾಂಗ್ ಕಂಡು ಹಿಡಿದನು.  ಚಹಾ ನಿಮಗೆ ಒಳ್ಳೆಯದು. ಇತರ ವಿಷಯಗಳ ಜೊತೆಗೆ, ಇದು ಪಾಲಿಫಿನಾಲ್‌ಗಳನ್ನು  ಒಳಗೊಂಡಿದೆ.  ಜೀವಕೋಶಗಳನ್ನು ಸರಿಪಡಿಸುವ  ಆ್ಯಂಟಿ ಆಕ್ಸಿಡೆಂಟ್​ಗಳನ್ನು ಹೊಂದಿದ್ದು, ನಮ್ಮ ದೇಹವು ಹೃದಯರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್, ಆಸ್ಟಿಯೊಪೊರೋಸಿಸ್, ಡಯಾಬಿಟಿಸ್ ಮೆಲ್ಲಿಟಸ್ ಮತ್ತು ಇತರ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಅಲ್ಲದೇ ಹಸಿರು ಚಹಾ ಮಾತ್ರವಲ್ಲ, ಕಪ್ಪು, ಬಿಳಿ ಮತ್ತು ಕೆಂಪು ಚಹಾವು ಆರೋಗ್ಯವನ್ನು ನೀಡುವ ಫ್ಲೇವನಾಯ್ಡ್‌ಗಳು ಮತ್ತು ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ. ಕೇವಲ ಒಂದು ಪೌಂಡ್ ಚಹಾವನ್ನು ತಯಾರಿಸಲು ಸುಮಾರು 2,000 ಸಣ್ಣ ಎಲೆಗಳು ಬೇಕಾಗುತ್ತದೆ. ಏಷ್ಯಾದ ಕೆಲವು ಭಾಗಗಳಲ್ಲಿ ಚಹಾ ಸಸ್ಯಗಳ ಕಾಡು ಬೆಳೆಯುತ್ತವೆ, ಆದರೆ ಇದನ್ನು ಬೆಳೆಸಬಹುದು.

ಇದನ್ನೂ ಓದಿ:ಚನ್ನಾಗಿ ನಿದ್ರೆ ಬರಬೇಕು ಅಂದ್ರೆ ಈ ವ್ಯಾಯಾಮಗಳನ್ನು ಮಾಡಿ

ಅತ್ಯಂತ ಉತ್ತಮವಾದ ಚಹಾವು ಎತ್ತರದ ಪ್ರದೇಶಗಳಿಂದ ಬರುತ್ತದೆ ಮತ್ತು ಕೈಯಿಂದ ಆರಿಸಲಾಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ ನಾಲ್ಕು ಮುಖ್ಯ ವಿಧದ ಚಹಾಗಳಿವೆ. ಕಪ್ಪು, ಹಸಿರು, ಬಿಳಿ, ಊಲಾಂಗ್ ಟೀ. ಈ ಎಲ್ಲಾ ಚಹಾಗಳನ್ನು ಒಂದೇ ಸಸ್ಯದಿಂದ ತಯಾರಿಸಲಾಗುತ್ತದೆ. ಆ ಸಸ್ಯ ಕ್ಯಾಮೆಲಿಯಾ ಸೈನೆನ್ಸಿಸ್. ಇನ್ನು ಎಲೆಗಳನ್ನು ಯಾವ ನಿರ್ಧಿಷ್ಟ ಸಮಯದಲ್ಲಿ ಕತ್ತರಿಸಲಾಗುತ್ತದೆ, ಹೇಗೆ ಕತ್ತರಿಸಲಾಗುತ್ತದೆ, ಹೇಗೆ ಒಣಗಿಸಲಾಗುತ್ತದೆ, ಹೇಗೆ ಸಂಸ್ಕರಿಸಲಾಗುತ್ತದೆ ಎಂಬುದರ ಆಧಾರದ ಮೇಲೆ ವಿವಿಧ ರೀತಿಯ ಚಹಾಗಳು ಲಭಿಸುತ್ತದೆ.

ಏಪ್ರಿಲ್ - ಮೇ ಮಧ್ಯದ ಸಮಯದಲ್ಲಿ ಬೆಳೆದ ಚಹಾದ ಎಲೆಗಳೊಂದಿಗೆ ಮಾಡಿದ ಹಸಿರು ಚಹಾ. ವಿಶ್ವದ ಅತ್ಯುತ್ತಮ ಹಸಿರು ಚಹಾ ಎನ್ನಲಾಗುತ್ತದೆ. ಭಾರತದಲ್ಲಿ, ಚಹಾವನ್ನು ಹಾಲು, ಜೇನುತುಪ್ಪ, ವೆನಿಲ್ಲಾ, ಶುಂಠಿ, ಲವಂಗ ಮತ್ತು ಏಲಕ್ಕಿಯನ್ನು ವಿವಿಧ ಪದಾರ್ಥಗಳು ಮತ್ತು ಮಸಾಲೆಗಳೊಂದಿಗೆ ತಯಾರಿಸಲಾಗುತ್ತದೆ.  ಟೀ ಬ್ಯಾಗ್‌ಗಳ ಬಳಕೆ 1908 ರಲ್ಲಿ ಅಮೆರಿಕಾದಲ್ಲಿ ಪ್ರಾರಂಭವಾಯಿತು. ಥಾಮಸ್ ಸುಲ್ಲಿವಾನ್ ಎನ್ನುವವರು ತಮ್ಮ ಕಂಪನಿಯ ಟೀ ಪುಡಿಯನ್ನು ಸಣ್ಣ ಚೀಲಗಳಲ್ಲಿ ಜನರಿಗೆ ರುಚಿ ನೋಡಲು ನೀಡಿದರು. ಜನರು ಅವುಗಳನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರು. ಆದ್ದರಿಂದ ಚಹಾ ಚೀಲಗಳು ಅಭ್ಯಾಸ ಆರಂಭವಾಯಿತು.

ಚಹಾ ಚೀಲಗಳು ಆರು ತಿಂಗಳವರೆಗೆ ಇರುತ್ತದೆ. ಅದರ ನಂತರ ರುಚಿ ಕ್ರಮೇಣ ಕಡಿಮೆಯಾಗುತ್ತದೆ. ಹಸಿರು ಚಹಾವು 18 ನೇ ಶತಮಾನದಿಂದ ಅಮೆರಿಕಾದಲ್ಲಿ ಪ್ರಸಿದ್ಧವಾಗಿತ್ತು. ಯುದ್ಧದ ನಂತರ, ಚಹಾವನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಯಿತು. ಅಂದಿನಿಂದ ಅಮೆರಿಕದಲ್ಲಿ ಕಪ್ಪು ಚಹಾ ಜನಪ್ರಿಯವಾಗಿದೆ.

ಇದನ್ನೂ ಓದಿ:ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ- ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚರ

ಐಸ್ ಟೀ ಅನ್ನು 1904 ರಲ್ಲಿ ವರ್ಜೀನಿಯಾದಲ್ಲಿ ಕಂಡುಹಿಡಿಯಲಾಯಿತು. ಒಂದು ದಿನ  ಅಲ್ಲಿನ ವ್ಯಕ್ತಿಯೊಬ್ಬರು ಐಸ್ ಕ್ಯೂಬ್‌ಗಳ ಮೇಲೆ ಚಹಾವನ್ನು ಸುರಿದ ನಂತರ ಅದು ಹೆಚ್ಚು ರುಚಿಯನ್ನು ನೀಡಿದ ಕಾರಣ. ಅಂದಿನಿಂದ ಐಸ್ ಟೀ ಪ್ರಸಿದ್ಧವಾಗಿದೆ. ಚಹಾ ಎಲೆಗಳ ಅಧ್ಯಯನವನ್ನು ಟಾಸಿಯೋಗ್ರಫಿ ಎಂದು ಕರೆಯಲಾಗುತ್ತದೆ.
Published by:Sandhya M
First published: