ಪೆಪ್ಪರ್ ಚಿಕನ್ ಫ್ರೈ(Pepper Chicken Fry) ಬಿಸಿ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥವಾಗಿದ್ದು ಇದನ್ನು ಅನ್ನ, ಚಪಾತಿ, ನಾನ್ ಮತ್ತು ಇನ್ನೂ ವಿವಿಧ ಪದಾರ್ಥಗಳ ಜೊತೆ ಸೇವನೆ ಮಾಡಬಹುದು. ಇದು ಮಳೆಯ ಸಮಯದಲ್ಲಿ ಹೆಚ್ಚು ಸೂಕ್ತ ಎನ್ನಲಾಗುತ್ತದೆ. ಅಡುಗೆಮನೆಯಲ್ಲಿ ಲಭ್ಯವಿರುವ ಕಡಿಮೆ ಪದಾರ್ಥಗಳಿಂದ ಪೆಪ್ಪರ್ ಚಿಕನ್ ತಯಾರಿಸಬಹುದು ಮತ್ತು ಅಡುಗೆ ಮಾಡುವ ಪ್ರಕ್ರಿಯೆ ಕೂಡ ಬಹಳ ಸರಳವಾಗಿದೆ. ಅಲ್ಲದೆ, ಯಾವುದೇ ದುಬಾರಿ ವಸ್ತುಗಳ ಅಗತ್ಯವಿಲ್ಲ, ಈ ರುಚಿಕರವಾದ ಆಹಾರ ತಯಾರಿಸಲು ಸ್ವಲ್ಪ ಮೆಣಸು ಸಾಕು.ಹಾಗಾದ್ರೆ ಚಿಕನ್ ಪೆಪ್ಪರ್ ಫ್ರೈ ಮಾಡುವುದು ಹೇಗೆ ಇಲ್ಲಿದೆ.
ಬೇಕಾಗುವ ಪದಾರ್ಥಗಳು
1. ಬೋನ್ಲೆಸ್ ಚಿಕನ್ – 500 ಗ್ರಾಂ
2. ಈರುಳ್ಳಿ – 1 ಮೀಡಿಯಂ ಸೈಜ್
3. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
4. ಪೆಪ್ಪರ್ ಪೌಡರ್ – 1.5 ಚಮಚ
5. ಹಸಿ ಮೆಣಸಿನಕಾಯಿ – 2 ರಿಂದ 3
6. ಕರಿಬೇವು – 10-15 ಎಲೆಗಳು
7. ಉಪ್ಪು – ರುಚಿಗೆ ತಕ್ಕಷ್ಟು
8. ನಿಂಬೆಹಣ್ಣು – ಅರ್ಧ ಹೋಳು
9. ಅರಿಶಿಣ – ಚಿಟಿಕೆ
10. ಬೆಳ್ಳುಳ್ಳಿ ಎಸಳು – 5 ರಿಂದ 6
11. ಎಣ್ಣೆ – 3-4 ಚಮಚ
12. ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿಕೊಳ್ಳಿ
ಇದನ್ನೂ ಓದಿ: ಸಖತ್ ಸಂಡೇಗೆ ಚಿಕನ್ ಪುಳಿಮುಂಚಿ, ರೆಸಿಪಿ ಇಲ್ಲಿದೆ..ಟ್ರೈ ಮಾಡಿ!
ಮೊದಲಿಗೆ ಚಿಕನ್ ಸರಿಯಾಗಿ ತೊಳೆದುಕೊಳ್ಳಿ. ಅದರಲ್ಲಿ ಯಾವುದೇ ನೀರು ಉಳಿಯದಂತೆ ಅದನ್ನು ಸೋಸುವುದು ಬಹಳ ಮುಖ್ಯ. ನಂತರ ಅದನ್ನು ಒಂದು ಬೌಲ್ಗೆ ಹಾಕಿ. ಅದಕ್ಕೆ ಚಿಟಿಕೆ ಅರಿಶಿಣ, ಸ್ವಲ್ಪ ಕರಿಮೆಣಸಿನ ಪುಡಿ, ಉಪ್ಪು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ಹಾಕಿರುವ ಮಸಾಲೆಗಳು ಚಿಕನ್ಗೆ ಸರಿಯಾಗಿ ಹೊಂದಿಕೊಳ್ಳಬೇಕು. ಹಾಗಾಗಿ ಸುಮಾರು ಮುಕ್ಕಾಲು ಗಂಟೆ ಅದನ್ನು ಮ್ಯಾರಿನೇಟ್ ಆಗಲು ಬಿಡಿ.
ಮುಕ್ಕಾಲು ಗಂಟೆಯ ನಂತರ ಒಂದು ಪ್ಯಾನ್ ತೆಗೆದುಕೊಳ್ಳಿ, ಅದನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ. ಅದಕ್ಕೆ ಎಣ್ಣೆಯನ್ನು ಹಾಕಿ, ಎಣ್ಣೆ ಕಾದ ನಂತರ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ, ಅದಕ್ಕೆ ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಎಸಳು ಹಾಕಿ ಅವುಗಳು ಬಾಡಿದ ನಂತರ ಕರಿಬೇವು ಹಾಕಿ ಚನ್ನಾಗಿ ಫ್ರೈ ಮಾಡಿ.
ಎಲ್ಲ ವಸ್ತುಗಳು ಸರಿಯಾಗಿ ಫ್ರೈ ಆದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಳಿದ ಕರಿಮೆಣಸಿನ ಪುಡಿ ಹಾಕಿ ಫ್ರೈ ಮಾಡಿ. ಇದರ ಮಿಶ್ರಣ ಸರಿಯಾಗಿ ಮಾಡಬೇಕು, ಇಲ್ಲದಿದ್ದಲ್ಲಿ ರುಚಿ ಹಾಳಾಗುತ್ತದೆ.
ಎಲ್ಲ ಪದಾರ್ಥಗಳನ್ನು ಫ್ರೈ ಮಾಡಿದ ನಂತರ ಮ್ಯಾರಿನೇಟ್ ಮಾಡಲು ಇಟ್ಟಿದ್ದ ಚಿಕನ್ ಅನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ಅದಕ್ಕೆ ಬೇಯಲು ಅಗತ್ಯವಿರುವಷ್ಟು ನೀರು ಸೇರಿಸಿ ಪಾತ್ರೆಯನ್ನು ಮುಚ್ಚಿ ಬೇಯಿಸಿ. ಹೆಚ್ಚು ನೀರನ್ನು ಬಳಕೆ ಮಾಡಬಾರದು , ಅದು ಫ್ರೈ ಬದಲು ಗೊಜ್ಜಾಗುತ್ತದೆ. ಇದನ್ನು ಬೇಯಿಸಲು ನಿರ್ದಿಷ್ಟ ಸಮಯವಿಲ್ಲ. ಸರಿಯಾಗಿ ಬೇಯುವುದು ಬಹಳ ಮುಖ್ಯ.
ಸರಿಯಾಗಿ ಬೆಂದ ಮೇಲೆ ಕೆಳಗಿಳಿಸುವಾಗ ನಿಂಬೆ ಹಣ್ಣಿನ ರಸ ಹಾಕಿ, ಅದರ ಮೇಲೆ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಹಾಕಿ. ಇದನ್ನು ಚಪಾತಿ ಜೊತೆ ಸೇವಿಸಿ.
ಇದನ್ನೂ ಓದಿ: ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ಈ Dash Diet ಟ್ರೈ ಮಾಡಿ..
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ