Health Tips: ಕರುಳಿನ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ಸೇವಿಸಿ

Gut Health: ನಿಮ್ಮ ಕರುಳಿನಲ್ಲಿ ನೂರಾರು ವಿಭಿನ್ನ ಬ್ಯಾಕ್ಟೀರಿಯಾಗಳಿವೆ. ನಿಮ್ಮ ಆರೋಗ್ಯದಲ್ಲಿ ಪ್ರತಿಯೊಂದು ಬ್ಯಾಕ್ಟೀರಿಯಾ ವಿಶಿಷ್ಟವಾದ ಪಾತ್ರವನ್ನು ವಹಿಸುತ್ತದೆ ಮತ್ತು ಅವುಗಳು ಅಭಿವೃದ್ಧಿ ಹೊಂದಲು ಒಂದು ವಿಶಿಷ್ಟವಾದ ಪೋಷಕಾಂಶಗಳ ಅಗತ್ಯವಿರುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ದೇಹವು ಸರಿಸುಮಾರು 40 ಟ್ರಿಲಿಯನ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಅವುಗಳಲ್ಲಿ ಹೆಚ್ಚಿನವು ನಿಮ್ಮ ಕರುಳಿನಲ್ಲಿ ಕಂಡುಬರುತ್ತವೆ. ಅವುಗಳನ್ನು ನಿಮ್ಮ ಕರುಳಿನ ಮೈಕ್ರೋಬಯೋಟಾ ಎಂದು ಕರೆಯಲಾಗುತ್ತದೆ, ಅಲ್ಲದೆ ಅವುಗಳು ನಿಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮತ್ತೊಂದೆಡೆ, ನಿಮ್ಮ ಕರುಳಿನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಿಮ್ಮೊಳಗೆ ಇರುವ ಬ್ಯಾಕ್ಟೀರಿಯಾಗಳು ನೀವು ತಿನ್ನುವ ಆಹಾರದ ಮೇಲೆ ನಿರ್ಧಾರವಾಗುತ್ತದೆ. ನಿಮ್ಮ ಕರುಳಿನಲ್ಲಿ ನೂರಾರು ವಿಭಿನ್ನ ಬ್ಯಾಕ್ಟೀರಿಯಾಗಳಿವೆ. ನಿಮ್ಮ ಆರೋಗ್ಯದಲ್ಲಿ ಪ್ರತಿಯೊಂದು ಬ್ಯಾಕ್ಟೀರಿಯಾ ವಿಶಿಷ್ಟವಾದ ಪಾತ್ರವನ್ನು ವಹಿಸುತ್ತದೆ ಮತ್ತು ಅವುಗಳು ಅಭಿವೃದ್ಧಿ ಹೊಂದಲು ಒಂದು ವಿಶಿಷ್ಟವಾದ ಪೋಷಕಾಂಶಗಳ ಅಗತ್ಯವಿರುತ್ತದೆ. ಸಾಮಾನ್ಯವಾಗಿ, ವೈವಿಧ್ಯಮಯ ಮೈಕ್ರೋಬಯೋಟಾ ಒಬ್ಬರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಭಾವಿಸಲಾಗಿದೆ.

ಹಣ್ಣು ಮತ್ತು ತರಕಾರಿಗಳು
ಆರೋಗ್ಯಕರ ಬ್ಯಾಕ್ಟೀರಿಯಾದ ಪೋಷಕಾಂಶಗಳ ಅತ್ಯುತ್ತಮ ಮೂಲ ಎಂದರೆ ಹಣ್ಣುಗಳು ಮತ್ತು ತರಕಾರಿಗಳು. ಅವುಗಳಲ್ಲಿ ಹೆಚ್ಚಿನ ಫೈಬರ್ ಇದೆ, ಅದನ್ನು ನಿಮ್ಮ ಹೊಟ್ಟೆಯಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳು ಹೀರಿಕೊಂಡು ಅವುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.  ಬೀನ್ಸ್ ಮತ್ತು ದ್ವಿದಳ ಧಾನ್ಯಗಳಲ್ಲಿಯೂ ಸಾಕಷ್ಟು ಫೈಬರ್ ಇರುತ್ತದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸಮೃದ್ಧವಾಗಿರುವ ಆಹಾರವು ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.

ಇದನ್ನೂ ಓದಿ: ನಿಮ್ಮ ತ್ವಚೆಯ ಅಂದಕ್ಕೆ ಈ ನೈಟ್ ಮಾಸ್ಕ್​ಗಳನ್ನು ಬಳಕೆ ಮಾಡಿ.

ಹಸಿರು ಬಟಾಣಿ, ಬ್ರೊಕೊಲಿ, ಕಡಲೆ, ಮಸೂರ, ಬೀನ್ಸ್ ಮತ್ತು ಧಾನ್ಯಗಳನ್ನು ಹೆಚ್ಚಾಗಿ ಸೇವನೆ ಮಾಡಿ.

ಬ್ಯಾಕ್ಟೀರಿಯಾ ಅಥವಾ ಯೀಸ್ಟ್‌ಗಳು ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ಗಳನ್ನು ಸಾವಯವ ಆಮ್ಲಗಳು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಲ್ಯಾಕ್ಟೋಬಾಸಿಲ್ಲಿ, ನಿಮ್ಮ ಆರೋಗ್ಯಕ್ಕೆ ಸಹಾಯ ಮಾಡುವ ಒಂದು ವಿಧದ ಬ್ಯಾಕ್ಟೀರಿಯಾ, ಇವುಗಳು ಅನೇಕ ಆಹಾರಗಳಲ್ಲಿ ಹೇರಳವಾಗಿದೆ. ಲ್ಯಾಕ್ಟೋಬಾಸಿಲ್ಲಿ ಹೆಚ್ಚು ಮೊಸರು ಸೇವಿಸುವವರ ಕರುಳಿನಲ್ಲಿ ಇರುತ್ತದೆ. ಇವರಲ್ಲಿ ಕಡಿಮೆ ಮಟ್ಟದ ಎಂಟರೊಬ್ಯಾಕ್ಟೀರಿಯಾಸಿ, ಉರಿಯೂತ ಮತ್ತು ವಿವಿಧ ಆರೋಗ್ಯಕ್ಕೆ ಹಾನಿಕಾರಕವಾದ ಬ್ಯಾಕ್ಟೀರಿಯಗಳನ್ನು ಹೊಂದಿರುತ್ತದೆ.

ಕರುಳಿನ ಸಿಂಡ್ರೋಮ್ ಹೊಂದಿರುವ ವ್ಯಕ್ತಿಗಳಲ್ಲಿ, ವಿವಿಧ ಮೊಸರಿನ ಉತ್ಪನ್ನಗಳು ಅನಾರೋಗ್ಯವನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಸರು ಮೈಕ್ರೋಬಯೋಟಾದ ಚಟುವಟಿಕೆ ಮತ್ತು ಸಂಯೋಜನೆಯನ್ನು ಸುಧಾರಿಸುತ್ತದೆ. ಯೋಗರ್ಟ್ನಲ್ಲಿ ಬಹಳಷ್ಟು ಸಕ್ಕರೆ ಇರುತ್ತದೆ, ಅದಕ್ಕಾಗಿಯೇ ಇದನ್ನು ಸರಳ ಮತ್ತು ನೈಸರ್ಗಿಕ ಮೊಸರು ಸೇವಿಸುವುದು ಉತ್ತಮವಾದ ಆಯ್ಕೆ.

ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟಿರಿಯಾಗಳ ಬೆಳವಣಿಗೆಗೆ ಸಹಾಯ ಮಾಡುವ ಆಹಾರಗಳನ್ನು ಪ್ರಿಬಯಾಟಿಕ್ ಎಂದು ಕರೆಯಲಾಗುತ್ತದೆ. ಪ್ರಿಬಯಾಟಿಕ್‌ಗಳು ಅನೇಕ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಲ್ಲಿ ಕಂಡುಬರುತ್ತವೆ. ಹಲವಾರು ರೋಗಗಳ ವಿರುದ್ದ ಹೋರಾಡಲು ಸಹಾಯ ಮಾಡುವ ಬೈಫಿಡೋಬ್ಯಾಕ್ಟೀರಿಯಾ ಸೇರಿದಂತೆ ವಿವಿಧ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಪ್ರಿಬಯಾಟಿಕ್‌ ಸಹಾಯ ಮಾಡುತ್ತದೆ ಎಂಬುದು ಹಲವಾರು ಅಧ್ಯಯನಗಳಲ್ಲಿ ಸಾಬೀತಾಗಿದೆ. ತೂಕ ಹೆಚ್ಚಿರುವ ಜನರಲ್ಲಿ ಪ್ರಿಬಯಾಟಿಕ್‌ಗಳ ಬಳಕೆಯು ಅವರ ಇನ್ಸುಲಿನ್, ಟ್ರೈಗ್ಲಿಸರೈಡ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೇಬುಗಳು, ಪಲ್ಲೆಹೂವು, ಶತಾವರಿ, ಬಾಳೆಹಣ್ಣುಗಳು, ಬಾರ್ಲಿ, ಹಣ್ಣುಗಳು
ದ್ವಿದಳ ಧಾನ್ಯಗಳು, ಈರುಳ್ಳಿ,ಸೋಯಾಬೀನ್, ಗೋಧಿಗಳ ಸೇವನೆ ಮಾಡಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: