Life Hacks: ಮನೆಯಲ್ಲಿ ಸಸ್ಯಗಳ ಆರೈಕೆಗೆ ಇಲ್ಲಿದೆ ಸರಳ ಸೂತ್ರಗಳು

Plant Care: ಸಾಮಾನ್ಯವಾಗಿ ಗಿಡಗಳಿಗೆ ಹೆಚ್ಚು ನೀರನ್ನು ಹಾಕಿದರೆ ಅವು ಸಮೃದ್ಧವಾಗಿ ಬೆಳೆಯುತ್ತದೆ ಎಂದು ತಿಳಿದಿದ್ದೇವೆ. ಆದರೆ ಅದು ನಮ್ಮ ತಪ್ಪು ಕಲ್ಪನೆ. ಗಿಡಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಕುವುದು ಒಳ್ಳೆಯದಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯಲ್ಲಿ ನಾವು ಬೆಳೆಯುವ ಗಿಡಗಳು ಮನೆಯ ಸೌಂದರ್ಯವನ್ನು ಮತ್ತು ತಾಜಾತನವನ್ನು ಹೆಚ್ಚಿಸುತ್ತದೆ. ಗಿಡಗಳು ನಮ್ಮ ನಿಜವಾದ ಸಂಗಾತಿ, ನಾವು ಹೆಚ್ಚಿನ ಸಮಯ ಮನೆಯಲ್ಲಿ ಕಳೆಯುವುದರಿಂದ ನಾವು ಅವುಗಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಹಾಗಾದ್ರೆ ಮನೆಯಲ್ಲಿ ಹೇಗೆ ಗಿಡಗಳ ಪೋಷಣೆ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಬೇರಿನ ಆಳಕ್ಕೆ ನೀರು ಹಾಕಿ
ಸಾಮಾನ್ಯವಾಗಿ ಗಿಡಗಳಿಗೆ ಹೆಚ್ಚು ನೀರನ್ನು ಹಾಕಿದರೆ ಅವು ಸಮೃದ್ಧವಾಗಿ ಬೆಳೆಯುತ್ತದೆ ಎಂದು ತಿಳಿದಿದ್ದೇವೆ. ಆದರೆ ಅದು ನಮ್ಮ ತಪ್ಪು ಕಲ್ಪನೆ. ಗಿಡಗಳಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಕುವುದು ಅವು ಕೊಳೆಯಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಪದೇ ಪದೇ ನೀರು ಹಾಕುವುದನ್ನ ಮಾಡಬಾರದು. ಕೆಲವು ಗಿಡಗಳಿಗೆ ಪ್ರತಿ ದಿನ ನೀರನ್ನು ಹಾಕುವ ಅಗತ್ಯವಿರುವುದಿಲ್ಲ. ಕೇವಲ 2 ದಿನಗಳಿಗೊಮ್ಮೆ ನೀರು ಹಾಕಿದರೆ ಸಾಕು. ಇನ್ನು ನೀರು ಹಾಕುವಾಗ ಇಷ್ಟ ಬಂದ ರೀತಿ ಹಾಕಬೇಡಿ. ಗಿಡಗಳ ಎಲೆಗಳಿಗಿಂತ ಹೆಚ್ಚಾಗಿ ಬೇರಿನ ಆಳಕ್ಕೆ ನೀರನ್ನು ಹಾಕಿ. ಬೇರಿಗೆ ನೀರು ಬೀಳುವುದು ಗಿಡಗಳು ಸಮೃದ್ಧವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮುಖದ ಅಂದ ಹೆಚ್ಚಿಸಲು ಟೊಮೊಟೋ ಹೇಗೆ ಸಹಾಯ ಮಾಡುತ್ತದೆ ಗೊತ್ತಾ?

ಗಿಡಗಳ ತುದಿಯನ್ನು ಕತ್ತರಿಸುತ್ತಿರಿ.
ಹೌದು, ನೀವು ನಿಯಮಿತವಾಗಿ ನಿಮ್ಮ ಸಸ್ಯಗಳನ್ನು ಟ್ರಿಮ್ ಮಾಡಬೇಕು. ಹೇಗೆ ನಾವು ನಮ್ಮ ಕೂದಲು ಆರೋಗ್ಯವಾಗಿರಲು ಕೆಲ ತಿಂಗಳುಗಳಿಗೊಮ್ಮೆ ಟ್ರಿಮ್ ಮಾಡಿಸುತ್ತವೆಯೋ, ಹಾಗೆಯೇ ಗಿಡಗಳ ತುದಿಯನ್ನು ಕತ್ತರಿಸುವುದು ಅನಿವಾರ್ಯ. ಗಿಡದಲ್ಲಿನ ಹಳೆಯ ಪದರಗಳು ಮತ್ತು ಕೊಳೆಗಳನ್ನು ತೆಗೆದು ಹಾಕಿದಾಗ, ಅದು ಗಿಡಗಳ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಗಿಡಗಳನ್ನು ಸವರುವುದರಿಂದ ಅದು ಸಸ್ಯಗಳಲ್ಲಿ ಹೊಸ ಚಿಗುರು ಮೂಡಿಸಿ, ಒಳ್ಳೆಯ ಬೆಳವಣಿಯಾಗಲು ಸಹಾಯ ಮಾಡುತ್ತದೆ.

ಸಸ್ಯದ ಮೂಲವನ್ನು ಅರ್ಥ ಮಾಡಿಕೊಳ್ಳಬೇಕು.
ನಿಮ್ಮ ಸಸ್ಯದ ಮೂಲವನ್ನು ನೀವು ಸಂಶೋಧಿಸಬೇಕು ಆಗ ನಿಮ್ಮ ಸಸ್ಯಗಳನ್ನು ನೋಡಿಕೊಳ್ಳುವುದು ನಿಮಗೆ ಸುಲಭವಾಗುತ್ತದೆ. ಮಣ್ಣು, ತೇವಾಂಶ, ತಾಪಮಾನ, ನೀರು ಮತ್ತು ಪೋಷಕಾಂಶಗಳ ಅವಶ್ಯಕತೆ ಗಿಡಕ್ಕೆ ಹೆಚ್ಚಿರುತ್ತದೆ. ಯಾವ ಗಿಡಕ್ಕೆ ಏನು ಬೇಕು ಎಂಬುದನ್ನು ತಿಳಿದುಕೊಂಡರೆ, ಗಿಡಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ಗಿಡಗಳ ಬೆಳವಣಿಗೆಗೆ ಬೇಕಾಗುವ ವಾತಾವರಣವನ್ನು ಸೃಷ್ಟಿ ಮಾಡಬೇಕು. ಸರಿಯಾದ ಬೆಳಕು, ನೀರು ಪ್ರತಿಯೊಂದರ ಬಗ್ಗೆ ಗಮನ ನೀಡಬೇಕು.

ರಸಗೊಬ್ಬರ ಬೇಕಾ? ಬೇಡವಾ ನಿರ್ಧರಿಸಿ
ಸಾಮಾನ್ಯವಾಗಿ ಗಿಡಗಳ ಬೆಳವಣಿಗೆಗೆ ರಸಗೊಬ್ಬರವನ್ನು ಹಾಕಲಾಗುತ್ತದೆ. ಆದರೆ ಎಲ್ಲ ಗಿಡಗಳಿಗೆ ರಸಗೊಬ್ಬರದ ಅವಶ್ಯಕತೆ ಇಲ್ಲ. ಹೊರಗಿನ ಸಸ್ಯಗಳಿಗೆ ಹೋಲಿಸಿದರೆ ಮನೆ ಗಿಡಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಗೊಬ್ಬರ ಅಗತ್ಯವಿಲ್ಲ. ವಿಶೇಷವಾಗಿ ನೀವು ಇತ್ತೀಚೆಗೆ ಮಣ್ಣನ್ನು ಬದಲಾಯಿಸಿದ್ದರೆ, ಗೊಬ್ಬರವನ್ನು ಹಾಕದಿರುವುದು ಒಳ್ಳೆಯ ಕೆಲಸ. ಸರಿಯಾದ ರೀತಿಯ ಗೊಬ್ಬರವನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ನಿಮಗೆ ಗಿಡದ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದಿದ್ದಲ್ಲಿ ಖರೀದಿ ಮಾಡಬೇಡಿ. ಏಕೆಂದರೆ ಕೆಲ ರಸಗೊಬ್ಬರಗಳು ಒಳ್ಳೆಯದನ್ನು ಮಾಡುವ ಬದಲು ಸಸ್ಯಕ್ಕೆ ಹಾನಿಯುಂಟು ಮಾಡಬಹುದು. ಅನಿವಾರ್ಯವಾಗಿ ಬೇಕಾದಲ್ಲಿ ನೈಸರ್ಗಿಕವಾಗಿ ತಯಾರಾದ ಗೊಬ್ಬರ ಬಳಸಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: