Toothpick: ಟೂತ್​ಪಿಕ್​ ಬಳಕೆ ಮಾಡೋದು ಹಲ್ಲುಗಳಿಗೆ ಎಷ್ಟು ಹಾನಿಕಾರಕ ನೋಡಿ

Side Effects Of Toothpick: ನೀವು ಫಿಲ್ಲಿಂಗ್ ಮಾಡಿಸಿದ ಕಡೆ ಸಹ ಹೆಚ್ಚಿನ ಅಂತರವಿದ್ದರೆ ಟೂತ್‌ಪಿಕ್  ಹಾಕುವುದರಿಂದ ಟೂತ್‌ಪಿಕ್ ಅಂತರವನ್ನು ವಿಸ್ತರಿಸಬಹುದು ಅಥವಾ ಮತ್ತೆ ಸಮಸ್ಯೆ ಬರಲು ಕಾರಣವಾಗುತ್ತದೆ. ಈ ಫಿಲ್ಲಿಂಗ್​ಗಳು ನೈಸರ್ಗಿಕ ಹಲ್ಲಿನಂತೆ ಬಲವಾಗಿರುವುದಿಲ್ಲ, ಅಂದರೆ ಅದು ಸುಲಭವಾಗಿ ಮುರಿಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಹಲ್ಲುಗಳಲ್ಲಿ (Teeth) ಆಹಾರದ ಕಣಗಳು ಸಿಕ್ಕಿಹಾಕಿಕೊಂಡಾಗ ನಾವು ಟೂತ್​ಪಿಕ್ (Toothpick)​ ಬಳಕೆ ಮಾಡುತ್ತೇವೆ.  ಟೂತ್‌ಪಿಕ್‌ಗಳು ಸೂಕ್ತ ಮತ್ತು ಅನುಕೂಲಕರವಾಗಿದ್ದರೂ, ನಿಮ್ಮ ಹಲ್ಲುಗಳಲ್ಲಿ ಸಲುಕಿರುವ ಆಹಾರವನ್ನು ತೆಗೆಯಲು ಪ್ರಯತ್ನಿಸುವಾಗ ಅವು ಅತ್ಯಂತ ಸುರಕ್ಷಿತ ಆಯ್ಕೆಯಲ್ಲ ಎಂದು ವೈದ್ಯರು ಹೇಳುತ್ತಾರೆ. ಟೂತ್‌ಪಿಕ್‌ಗಳನ್ನು ಬಳಸುವುದರಿಂದ ಹಲವಾರು ಅಪಾಯಗಳು ಉಂಟಾಗುತ್ತದೆ.

ಇದರ ಬಳಕೆಯಿಂದ ಯಾವೆಲ್ಲ ಸಮಸ್ಯೆ ಉಂಟಾಗುತ್ತದೆ ಎಂಬುದು ಇಲ್ಲಿದೆ.

ಟೂತ್‌ಪಿಕ್‌ಗಳನ್ನು ಬಳಸುವುದು ಹಲವಾರು ಅಪಾಯಕ್ಕೆ ಕಾರಣವಾಗುತ್ತದೆ. ಟೂತ್‌ಪಿಕ್ ಮುರಿಯಬಹುದು, ನಿಮ್ಮ ಒಸಡುಗಳಿಗೆ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳಲು ಕಾರಣವಾಗಿ ಹಲ್ಲನ್ನು ಹಾನಿಗೊಳಿಸಬಹುದು. ಟೂತ್‌ಪಿಕ್ಸ್ ಮುರಿದು ನಿಮ್ಮ ಒಸಡುಗಳಲ್ಲಿ ಸಿಲುಕಿಕೊಳ್ಳಬಹುದು. ಟೂತ್‌ಪಿಕ್ ಕಳಪೆಯಾಗಿದ್ದಾರೆ ಅಥವಾ ನೀವು ಅದನ್ನು ತುಂಬಾ ಶ್ರಮ ಹಾಕಿ ಬಳಸುತ್ತಿದ್ದರೆ ಅದು ಮುರಿಯಬಹುದು. ಮುರಿದ ಅಥವಾ ಬೆಣೆಯಾಕಾರದ ಟೂತ್‌ಪಿಕ್‌ಗಳು ನಿಮ್ಮ ಒಸಡುಗಳ ಉರಿಯೂತಕ್ಕೆ ಕಾರಣವಾಗಬಹುದು, ವಿಶೇಷವಾಗಿ ಅದನ್ನು ಸಾಧ್ಯವಾದಷ್ಟು ಬೇಗ ತೆಗೆದುಹಾಕಲು ಸಾಧ್ಯವಾಗದಿದ್ದರೆ, ಹೆಚ್ಚಿನ ನೋವಿಗೆ ಕಾರಣವಾಗುತ್ತದೆ.

ಮುರಿದ ತುಂಡನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗದಿದ್ದರೆ, ಮತ್ತಷ್ಟು ಸಮಸ್ಯೆಗಳನ್ನು ಉಂಟು ಮಾಡುವ ಮೂಲಕ ಮತ್ತು ಹೆಚ್ಚು ಉರಿಯೂತ ಅಥವಾ ಬೇರೆ ರೀತಿಯ ಸೋಂಕನ್ನು ಉಂಟುಮಾಡುವ ಮೂಲಕ ನೀವು ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು, ಇದು ಅಪಾಯಕಾರಿ ಎಂದು DDS ನ ಸಹಾಯಕ ನಿರ್ದೇಶಕ ಚೆರಿಲಿನ್ ಪೆಜುಲ್ಲೊ ಹೇಳುತ್ತಾರೆ.

ಇದನ್ನೂ ಓದಿ: ಮನೆಯಲ್ಲಿಯೇ ಸ್ಪಾ ಮಾಡಿಕೊಳ್ಳಲು ಈ ಐಡಿಯಾ ಯೂಸ್​ ಮಾಡಿ

ಕನ್ನಡಿಯಲ್ಲಿ ನೋಡಿಕೊಂಡು ಅಥವಾ ಸ್ನೇಹಿತರನ್ನು ಸಹಾಯ ಕೇಳುವ ಮೂಲಕ ನೀವು ಮುರಿದ ಟೂತ್‌ಪಿಕ್ ಅನ್ನು ಎಚ್ಚರಿಕೆಯಿಂದ ತೆಗೆದುಹಾಕಬಹುದು. ಆದರೆ ಮುರಿದ ತುಣುಕುಗಳು ವಿಶೇಷವಾಗಿ ಅಂಟಿಕೊಂಡಿದ್ದರೆ, ಅವುಗಳನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿ ತೆಗೆದುಹಾಕಲು ನೀವು ದಂತವೈದ್ಯರು ಭೇಟಿ ಮಾಡಬೇಕಾಗಬಹುದು.

ಟೂತ್ಪಿಕ್ಸ್ ಸೋಂಕಿಗೆ ಕಾರಣವಾಗಬಹುದು. ಟೂತ್‌ಪಿಕ್‌ನ ಮೊನಚಾದ ತುದಿಯು ನಿಮ್ಮ ಒಸಡುಗಳನ್ನು ಹಾಳು ಮಾಡುತ್ತದೆ. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾಕ್ಕೆ ಗುರಿಯಾಗುವ ಗಾಯಕ್ಕೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾವು ಟೂತ್‌ಪಿಕ್‌ನ ಮೇಲ್ಮೈ ಸೇರಿದಂತೆ ಎಲ್ಲಿಂದಲಾದರೂ ಬರಬಹುದು ಎಂದು ಪೆಝುಲ್ಲೊ ಹೇಳುತ್ತಾರೆ.

ಅದನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸುವುದು ಮುಖ್ಯವಾಗುತ್ತದೆ.  ಟೂತ್ಪಿಕ್ಸ್ ಹಲ್ಲನ್ನ ಹಾಳು ಮಾಡುವುದರಿಂದ ಅದರ ಕೆಲಸ ಸರಾಗವಾಗಿ ಮಾಡಲು ಸಾಧ್ಯವಾಗುವುದಿಲ್ಲ.ಟೂತ್‌ಪಿಕ್ಸ್‌ಗಳು ಫಿಲ್ಲಿಂಗ್‌ಗಳು ಮತ್ತು ವೆನಿರ್‌ಗಳನ್ನು ಮಾಡಿಸಿದ್ದರೆ ಅದರ ಮೇಲೆ ಸಹ ಹಾನಿ ಮಾಡುತ್ತದೆ. ಹಲ್ಲಿನ ನಡುವೆ ಅಂತರವಿದ್ದರೆ ಇದು ಟೂತ್‌ಪಿಕ್‌ಗಳ ಬಳಕೆಯಿಂದ ಹೆಚ್ಚು ಅಂತ ಉಂಟಾಗಬಹುದು ಅಥವಾ ಇದು ಸಡಿಲಗೊಳ್ಳಬಹುದು.

ನೀವು ಫಿಲ್ಲಿಂಗ್ ಮಾಡಿಸಿದ ಕಡೆ ಸಹ ಹೆಚ್ಚಿನ ಅಂತರವಿದ್ದರೆ ಟೂತ್‌ಪಿಕ್  ಹಾಕುವುದರಿಂದ ಟೂತ್‌ಪಿಕ್ ಅಂತರವನ್ನು ವಿಸ್ತರಿಸಬಹುದು ಅಥವಾ ಮತ್ತೆ ಸಮಸ್ಯೆ ಬರಲು ಕಾರಣವಾಗುತ್ತದೆ. ಈ ಫಿಲ್ಲಿಂಗ್​ಗಳು ನೈಸರ್ಗಿಕ ಹಲ್ಲಿನಂತೆ ಬಲವಾಗಿರುವುದಿಲ್ಲ, ಅಂದರೆ ಅದು ಸುಲಭವಾಗಿ ಮುರಿಯಬಹುದು.

 ಟೂತ್‌ಪಿಕ್ ಬಳಸುವಾಗ ನಾವು ಅನೇಕ ಬಾರಿ ಅದನ್ನು ಅಗಿಯಲು ಪ್ರಯತ್ನ ಮಾಡುತ್ತೀವಿ. ಅದನ್ನೇ ಕಚ್ಚಿಕೊಂಡು ಬಹಳಷ್ಟು ಸಮಯ ಕಾಲ ಕಳೆಯುತ್ತೇವೆ. . ಇದು ಹಲ್ಲುಗಳ ದಂತಕವಚ ಪದರವನ್ನು ಹಾನಿಗೊಳಿಸುತ್ತದೆ. ಈ ಪದರವು ಸವೆಯಲು ಪ್ರಾರಂಭಿಸಿದ ನಂತರ ದುರ್ಬಲಗೊಂಡು ಹಾಳಾಗುತ್ತವೆ.

ನಿಮ್ಮ ಹಲ್ಲುಗಳಿಗೆ ಟೂತ್ಪಿಕ್ಸ್ ಬದಲಿಗೆ ಏನು ಬಳಸಬಹುದು ಎಂಬುದು ಇಲ್ಲಿದೆ.

ನಿಮ್ಮ ಹಲ್ಲುಗಳಿಂದ ಆಹಾರವನ್ನು ಹೊರತೆಗೆಯಲು ಕೆಲವು ದಂತವೈದ್ಯರು ಬೇರೆ ವಿಧಾನಗಳನ್ನು ಹೇಳುತ್ತಾರೆ. ಅದು ಟೂತ್‌ಪಿಕ್ ಅನ್ನು ಬಳಸುವುದಕ್ಕಿಂತ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ

ಇದನ್ನೂ ಓದಿ: ಹಿಮ್ಮಡಿ ಬಿರುಕು ಬಿಟ್ಟಿದ್ರೆ ಈ ವಸ್ತುಗಳನ್ನು ಬಳಸಿ ಸಾಕು

ಡೆಂಟಲ್ ಫ್ಲೋಸ್ (ವಿಶೇಷವಾಗಿ ಮೇಣದ ಫ್ಲಾಟ್ ಫ್ಲೋಸ್)

ಪ್ಲಾಸ್ಟಿಕ್ ಹ್ಯಾಂಡಲ್ ಫ್ಲೋಸ್ ಸ್ಟಿಕ್ಸ್

ಆಹಾರ ಮತ್ತು ಇತರ ಕಣಗಳನ್ನು ಹೊರಹಾಕಲು ಹೆಚ್ಚಿನ ಒತ್ತಡದ ನೀರಿನ ಹರಿವನ್ನು ಬಳಸುವ ವಾಟರ್​ಪಿಕ್​ ಬಳಕೆ ಸೂಕ್ತ ಎನ್ನಲಾಗುತ್ತದೆ.
Published by:Sandhya M
First published: