Heart Problem: ನಿಮ್ಮ ಹೃದಯ ಅಪಾಯದಲ್ಲಿದೆ ಎಂದು ಮುಂಚಿತವಾಗಿಯೇ ತಿಳಿದುಕೊಳ್ಳಬೇಕೆ..? ಈ ಲಕ್ಷಣಗಳನ್ನು ಗಮನಿಸಿ

Critical Symptoms Of Heart Failure: ಹೃದಯ ವೈಫಲ್ಯವು ಒಂದೇ ಬಾರಿ ಸಂಭವಿಸದೆ, ಸಮಯದೊಂದಿಗೆ ಹದಗೆಡುತ್ತಾ ಬರುವುದರಿಂದ, ರೋಗಲಕ್ಷಣಗಳು ಮತ್ತು ಅವುಗಳಿಗೆ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಸದಾ ಬಿಡುವಿಲ್ಲದೆ ಕಾರ್ಯ ನಿರ್ವಹಿಸುವ ನಮ್ಮ ದೇಹದಲ್ಲಿರುವ ಅವಿಭಾಜ್ಯ ಅಂಗ ಎಂದರೆ ಅದು ನಮ್ಮ ಹೃದಯ(Heart)ಎಂದು ಹೇಳಬಹುದು. ಈಗಂತೂ ನಮ್ಮ ಬದಲಾಗುತ್ತಿರುವ ಜೀವನಶೈಲಿ(Lifestyle) ಮತ್ತು ಒತ್ತಡದ(Stress) ದಿನಚರಿಯಿಂದ ಹೃದಯ ವೈಫಲ್ಯದ ಸಮಸ್ಯೆ ಪ್ರಪಂಚದಾದ್ಯಂತ ಹೆಚ್ಚುತ್ತಿದೆ ಎಂದರೆ ತಪ್ಪಾಗಲಾರದು.ಆದ್ದರಿಂದ ನಿಮ್ಮ ಹೃದಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ. ದುರ್ಬಲಗೊಂಡ ಹೃದಯವು ಇತರ ಅಂಗಾಂಗಗಳಿಗೆ ಸಮರ್ಪಕವಾಗಿ ರಕ್ತ ಪೂರೈಸುವಲ್ಲಿ ವಿಫಲವಾಗುತ್ತದೆ ಮತ್ತು ಇದರಿಂದ ಹೃದಯ ವೈಫಲ್ಯದ ಸಮಸ್ಯೆ ಎದುರಾಗಬಹುದು.


ಹೃದಯ ವೈಫಲ್ಯವು ಒಂದೇ ಬಾರಿ ಸಂಭವಿಸದೆ, ಸಮಯದೊಂದಿಗೆ ಹದಗೆಡುತ್ತಾ ಬರುವುದರಿಂದ, ರೋಗಲಕ್ಷಣಗಳು ಮತ್ತು ಅವುಗಳಿಗೆ ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ರೋಗ ಲಕ್ಷಣಗಳನ್ನು ಅರ್ಥ ಮಾಡಿಕೊಂಡು ಶೀಘ್ರವಾಗಿ ವೈದ್ಯಕೀಯ ಸಹಾಯ ಪಡೆಯುವುದರಿಂದ ಹೃದಯ ವೈಫಲ್ಯವನ್ನು ತಡೆಗಟ್ಟಬಹುದು.


ಉಸಿರಾಟದ ತೊಂದರೆ:ಇದುಅತ್ಯಂತ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ಯಾವುದೇ ದೈಹಿಕ ಚಟುವಟಿಕೆಯ ಸಮಯದಲ್ಲಿ, ವಿಶ್ರಾಂತಿ ಅಥವಾ ನಿದ್ರೆಯ ಸಮಯದಲ್ಲಿಯೂ ನಾವು ಉಸಿರಾಟದ ತೊಂದರೆ ಅನುಭವಿಸುತ್ತೇವೆ.


ಇದನ್ನೂ ಓದಿ: ನಿಮಗೂ ಹೀಗೆಲ್ಲ ಆಗುತ್ತಿದ್ರೆ ಅದು ಬಂಜೆತನದ ಲಕ್ಷಣವಾಗಿರಬಹುದು ..

ಶ್ವಾಸಕೋಶದಿಂದ ಹೃದಯಕ್ಕೆ ರಕ್ತ ಹಿಂದಿರುಗಿಸಲು ಕಾರಣವಾದ ಶ್ವಾಸಕೋಶದ ರಕ್ತನಾಳಗಳಲ್ಲಿ ರಕ್ತ ಶೇಖರಣೆಯಾಗಲು ಪ್ರಾರಂಭಿಸುತ್ತದೆ. ಹೃದಯ ರಕ್ತದ ಪೂರೈಕೆಯನ್ನು ಮುಂದುವರಿಸಲು ಸಾಧ್ಯವಾಗದಿದ್ದಾಗ ಉಸಿರಾಟದ ತೊಂದರೆ ಆಗುತ್ತದೆ.


ನಿರಂತರ ಕೆಮ್ಮು ಅಥವಾ ಉಬ್ಬಸವೂ ಹೃದಯ ವೈಫಲ್ಯದ ಮತ್ತೊಂದು ಲಕ್ಷಣ


ನಿರಂತರ ಕೆಮ್ಮು ಅಥವಾ ಉಬ್ಬಸದಿಂದ ದೈನಂದಿನ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ತುಂಬಾ ಕಷ್ಟಕರವಾಗಬಹುದು


ಆಯಾಸವಾಗುವುದು: ಯಾವುದೇ ದೈಹಿಕ ಚಟುವಟಿಕೆ ಮಾಡದೆ ಇದ್ದರೂ ವ್ಯಕ್ತಿಯು ಯಾವಾಗಲೂ ದಣಿದಿರುವಂತೆ ಕಾಣುತ್ತಾರೆ.


ದೇಹದ ಅವಶ್ಯಕತೆಗಳನ್ನು ಪೂರೈಸಲು ಹೃದಯವು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಈ ರೋಗ ಲಕ್ಷಣವು ಸಂಭವಿಸುತ್ತದೆ.


ವಾಕರಿಕೆ ಮತ್ತು ಹಸಿವಿನ ಕೊರತೆ


ವಾಕರಿಕೆ ಮತ್ತು ಹಸಿವಿನ ಕೊರತೆಯು ಹೃದಯ ವೈಫಲ್ಯದ ಸಮಸ್ಯೆಯ ಮತ್ತೊಂದು ರೋಗ ಲಕ್ಷಣವಾಗಿದೆ ಮತ್ತು ಹಸಿವಿನ ಕೊರತೆಯಿಂದ ಹೊಟ್ಟೆಯಲ್ಲಿ ಅನಾರೋಗ್ಯ ಉಂಟಾಗುತ್ತದೆ.


ನಮ್ಮ ಜೀರ್ಣಾಂಗ ವ್ಯವಸ್ಥೆಯು ಅಗತ್ಯವಿರುವುದಕ್ಕಿಂತ ಕಡಿಮೆ ರಕ್ತ ಪಡೆದಾಗ ಈ ರೋಗಲಕ್ಷಣವು ಸಂಭವಿಸುತ್ತದೆ, ಇದು ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ.


ಹೆಚ್ಚಿದ ಹೃದಯ ಬಡಿತ


ನಮ್ಮ ಹೃದಯ ಬಡಿತವು ಸಾಮಾನ್ಯ ದರಕ್ಕಿಂತ ವೇಗವಾಗಿ ಮತ್ತು ಹೆಚ್ಚಾಗಿದ್ದರೆ, ಇದು ಸಹ ಕೆಲವೊಮ್ಮೆ ಹೃದಯ ವೈಫಲ್ಯದ ಸಮಸ್ಯೆಗೆ ಕಾರಣವಾಗಬಹುದು.


ಹೃದಯ ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದ ಕಾರಣ, ದೇಹದ ಅವಶ್ಯಕತೆಗಳನ್ನು ಪೂರೈಸಲು ಅದು ವೇಗವಾಗಿ ಹೊಡೆದುಕೊಳ್ಳಲು ಪ್ರಾರಂಭಿಸುತ್ತದೆ.


ಹೃದಯ ವೈಫಲ್ಯವು ಸಮಯದೊಂದಿಗೆ ಉಲ್ಭಣವಾಗುವಂತಹ ರೋಗವಾಗಿರುವುದರಿಂದ ನಾವು ಇದನ್ನು ಗಮನಿಸದೆ ಹಾಗೆಯೇ ಬಿಟ್ಟರೆ ಅದು ಇನ್ನಷ್ಟು ಹದಗೆಡಬಹುದು ಮತ್ತು ಮುಂದುವರಿದು ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು.


ಇದನ್ನೂ ಓದಿ: ಸೂರ್ಯಕಾಂತಿ ಬೀಜವನ್ನು ಸೇವಿಸಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ. .

ಇಂತಹ ಪರಿಸ್ಥಿತಿಯಲ್ಲಿ ಹೃದಯ ಸಂಪೂರ್ಣವಾಗಿ ದುರ್ಬಲವಾಗುತ್ತದೆ ಮತ್ತು ನಂತರದ ಹಂತದಲ್ಲಿ ಚಿಕಿತ್ಸೆಯು ನೀಡುವುದು ಸಹ ತುಂಬಾ ಕಠಿಣವಾಗುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ಈ ರೋಗಲಕ್ಷಣಗಳನ್ನು ನೀವು ಗಮನಿಸಿದರೆ ಆತಂಕ ಪಡದೇ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಇದರ ಹೊರತಾಗಿಯೂ ಆರೋಗ್ಯಕರ ಜೀವನಶೈಲಿ ಮತ್ತು ಸೂಕ್ತವಾದ ಆಹಾರ ಕ್ರಮ ಅನುಸರಿಸುವುದು ತುಂಬಾ ಮುಖ್ಯವಾಗುತ್ತದೆ.


First published: