Navaratri Special: ಚಂದ್ರಾಘಂಟಾ ದೇವಿಯ ಆರಾಧನೆ ಮಾಡುವುದು ಹೇಗೆ? ನವರಾತ್ರಿ ಮೂರನೇ ದಿನದ ಪೂಜಾ ವಿಧಿ-ವಿಧಾನ ಹೀಗಿದೆ....

Chandraghanta Devi: ಚಂದ್ರಘಂಟಾ ಎನ್ನುವ ಅರ್ಥ ಘಂಟೆಯಾಕಾರದ ಚಂದ್ರನನ್ನು ತಲೆಯಲ್ಲಿ ಧರಿಸಿದವಳು. ಚಂದ್ರಘಂಟಾ ದೇವಿಯ  ಮೂರನೇ ಕಣ್ಣು ಸದಾ ತೆರೆದೇ ಇರುತ್ತದೆ. ಯಾವುದೇ ಸಮಯದಲ್ಲಿಯೂ ದುಷ್ಟ ಶಕ್ತಿಗಳ ಸಂಹಾರಕ್ಕೆ ಸಿದ್ದಳಾಗಿರುತ್ತಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವರಾತ್ರಿಯ (Navaratri)ಸಮಯದಲ್ಲಿ ದುರ್ಗಾದೇವಿಯ(Durga Devi) ಒಂಬತ್ತು ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಗಳನ್ನು ಪೂಜಿಸುತ್ತಾರೆ. ಇಂದು, ಅಕ್ಟೋಬರ್ 9, ಹಬ್ಬದ ಮೂರನೇ ದಿನ ಅಂದರೆ ಮಾಹ ಚಂದ್ರಘಂಟಾ (Chandraghanta Devi)ದೇವಿಯನ್ನು ಪೂಜಿಸುತ್ತಾರೆ. ತಾಯಿ ಜಗತ್ತಿನಲ್ಲಿ ನ್ಯಾಯ ಮತ್ತು ಧರ್ಮವನ್ನು ಸೂಚಿಸುತ್ತಾಳೆ. ಈಕೆ ಪಾರ್ವತ ದೇವತೆಯ ವಿವಾಹಿತ ರೂಪ.

ಚಂದ್ರಘಂಟಾ ಎನ್ನುವ ಅರ್ಥ ಘಂಟೆಯಾಕಾರದ ಚಂದ್ರನನ್ನು ತಲೆಯಲ್ಲಿ ಧರಿಸಿದವಳು. ಚಂದ್ರಘಂಟಾ ದೇವಿಯ  ಮೂರನೇ ಕಣ್ಣು ಸದಾ ತೆರೆದೇ ಇರುತ್ತದೆ. ಯಾವುದೇ ಸಮಯದಲ್ಲಿಯೂ ದುಷ್ಟ ಶಕ್ತಿಗಳ ಸಂಹಾರಕ್ಕೆ ಸಿದ್ದಳಾಗಿರುತ್ತಾಳೆ. ತಾಯಿ ತನ್ನ ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹದ ಮೇಲೆ ಕುಳಿತಿರುತ್ತಾಳೆ. ಈ ತಾಯಿಯ  ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು ಎನ್ನುವ ನಂಬಿಕೆ ಇದೆ.

ಇನ್ನು ಉತ್ತರ ಭಾರತದಲ್ಲಿ ಇನ್ನೊಂದು ರೀತಿಯಲ್ಲಿ ಈಕೆಯನ್ನು ಆರಾಧಿಸುತ್ಥಾರೆ ಮತ್ತು ಚಂದ್ರಾಘಂಟಾ ಎಂಬ ಪದಕ್ಕೆ ವಿಭಿನ್ನ ಅರ್ಥವನ್ನು ನೀಡುತ್ತಾರೆ. ಅವರ ಪ್ರಕಾರ  ಚಂದ್ರ ಎಂಬ ಪದದ ಅರ್ಥ ಚಂದ್ರ ಮತ್ತು ಘಂಟಾ ಎಂದರೆ ಜ್ಞಾನ ಸಾಗರವನ್ನು ಹೊಂದಿರುವ ದೇವತೆ ಮತ್ತು ಶಕ್ತಿ, ಶೌರ್ಯ ಮತ್ತು ಧೈರ್ಯವನ್ನು ಹರಡುತ್ತಾಳೆ ಎಂದು ಹೇಳಲಾಗುತ್ತದೆ. ನಮ್ಮಲ್ಲಿರುವ ರಾಕ್ಷಸರ ವಿರುದ್ದ ಹೋರಾಡುವ ಶಕ್ತಿಯನ್ನು ತಾಯಿ ನಮಗೆ ನೀಡುತ್ತಾಳೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಹಬ್ಬದ ಒಂಬತ್ತು ದಿನ ದೇವಿಗೆ ಯಾವ ಬಣ್ಣದ ಸೀರೆಗಳಿಂದ ಅಲಂಕಾರ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ..

ಚಂದ್ರಘಂಟಾ ದೇವಿಯ ಕಥೆ

ರಾಕ್ಷಸರ ಭಯವು ಹೆಚ್ಚಾದಾಗ, ದುರ್ಗಾ ದೇವಿಯು ಚಂದ್ರಘಂಟಾ ರೂಪವನ್ನು ಪಡೆದುಕೊಂಡಳು ಎನ್ನಲಾಗುತ್ತದೆ.  ಮಹಿಷಾಸುರನೆಂಬ ರಾಕ್ಷಸನು ಇಂದ್ರ ದೇವನ ಸಿಂಹಾಸನವನ್ನು ಪಡೆಯಲು ಬಯಸಿದಾಗ ದೇವತೆಗಳಿಗೆ ಕೋಪಬರುತ್ತದೆ. ಕೋಪದ ಕಾರಣ ಮೂವರ ಬಾಯಿಂದ ಹೊರಹೊಮ್ಮಿದ ಶಕ್ತಿಯು ಚಂದ್ರಾಘಂಟಾ ದೇವಿ,

ಇನ್ನೊಂದು ಕಥೆಯ ಪ್ರಕಾರ, ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ಪೂಜಿಸಲಾಗುತ್ತದೆ. ಪಾರ್ವತಿ ದೇವಿಯು ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುತ್ತಾಳೆ.  ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆ ಹೋಗುತ್ತಾಳೆ. ನಂತರ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ  ಮನವಿ ಮಾಡುತ್ತಾಳೆ. ಹೀಗೆ ಶಿವನು ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ ಎಂದು ಪುರಾಣದಲ್ಲಿ ಹೇಳಲಾಗುತ್ತದೆ.

ನವರಾತ್ರಿ 2021  ಮುಹೂರ್ತ ಸಮಯ

ಅಕ್ಟೋಬರ್ 8 ರಂದು ಬೆಳಿಗ್ಗೆ 10:48 ಕ್ಕೆ ಶುಭ ತಿಥಿ ಆರಂಭವಾಗಲಿದೆ

ಅಕ್ಟೋಬರ್ 9 ರಂದು ಬೆಳಿಗ್ಗೆ 07:48 ಕ್ಕೆ ಕೊನೆಗೊಳ್ಳುತ್ತದೆ.

ದೇವಿ ಮಂತ್ರ 

'ಓಂ ದೇವಿ ಚಂದ್ರಘಂಟಾಯೈ ನಮಃ''

ಪ್ರಾರ್ಥನಾ ಮಂತ್ರ:
''ಪಿಂಡಜ ಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶೃತಾ||

 ಪೂಜಾ ವಿಧಿ ವಿಧಾನ

ಇದನ್ನೂ ಓದಿ: ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಪೂಜಾ ವಿಧಿ ವಿಧಾನ

ಮುಂಜಾನೆ ಸ್ನಾನ ಮಾಡಿದ ನಂತರ, ಚಂದ್ರಘಂಟ ದೇವಿಯ ಮೂರ್ತಿಯನ್ನು ಮಂದಿರದಲ್ಲಿ ಇರಿಸಲಾಗುತ್ತದೆ. ಮೂರ್ತಿ ಇಡುವ ಅಭ್ಯಾಸ ಇಲ್ಲದಿದ್ದಲ್ಲಿ ಕಲಶವನ್ನು ಸ್ಥಾಪನೆ ಮಾಡಲಾಗುತ್ತದೆ. ನಂತರ ಮಣ್ಣಿನಿಂದ ಮಾಡಿದ ಪ್ಯಾನ್ ಅನ್ನು ವಿಗ್ರಹದ ಪಕ್ಕದಲ್ಲಿ ಇರಿಸಲಾಗುತ್ತದೆ. ನಂತರ, ಬಾಣಲೆಯ ಮೇಲೆ ಅಕ್ಕಿಯ ಜೊತೆಗೆ ನೀರನ್ನು ಹಾಕಬೇಕು. ದೇವಿಯ ವಿಗ್ರಹದ ಪಕ್ಕದಲ್ಲಿ ಅಕ್ಷತೆ, ನಾಣ್ಯಗಳು,ಗರಿಕೆ, ಗಂಗಾ ಜಲ, ಸುಪಾರಿ ಮತ್ತು ನಾಣ್ಯಗಳನ್ನು ತುಂಬಿದ ಕಲಶವನ್ನು ಇಡಬೇಕು. ಇನ್ನು ತಾಯಿಗೆ ಈ ದಿನ ಪಾಯಸ ಅಥವಾ ಖೀರ್​ ಮಾಡಿ ನೈವೇದ್ಯ ಮಾಡಬೇಕು.
Published by:Sandhya M
First published: