Sunday Special Recipe: ಸೂಪರ್ ಸಂಡೇಗೆ ಬೀಗರ ಊಟದ ಸ್ಪೆಷಲ್ ಬೋಟಿ ಗೊಜ್ಜು..

Mutton Boti Curry: ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಯಾವಾಗಲೂ ಚಿಕನ್ ಬಿರಿಯಾನಿ, ಕಬಾಬ್, ಚಾಪ್ಸ್, ಮಟನ್ ಇದೇ ಅಡುಗೆ ಮಾಡುತ್ತೀರ. ಅದರ ಬದಲು ಬೋಟಿ ಗೊಜ್ಜು ಟ್ರೈ ಮಾಡಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಟನ್(Mutton) ಊಟ ಸರಳವಾದರೂ ರುಚಿಕರವಾಗಿರುತ್ತದೆ. ಅದರಲ್ಲೂ ನಾನ್​ವೆಜ್ ಪ್ರಿಯರಿಗೆ ಮಟನ್ ಎಂದರೆ ಅದೇನೊ ಇಷ್ಟ. ಸಂಡೇ ಬಂತು ಅಂದ್ರೆ ಸಾಕು ಏನಾದರೂ ವೆರೈಟಿ ಟ್ರೈ ಮಾಡುವುದು ಸಾಮಾನ್ಯ. ಇನ್ನು ಮಂಡ್ಯ ಶೈಲಿಯ ಬೋಟಿ ಗೊಜ್ಜು (Boti Curry)ಅಂದ್ರೆ ಹಲವಾರು ಜನರಿಗೆ ಇಷ್ಟ. ಬೀಗರ ಊಟದಲ್ಲಿ ಇದನ್ನು ಹೆಚ್ಚು ಮಾಡಲಾಗುತ್ತದೆ.  ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಂತಹ ಪೋಷಕಾಂಶಗಳಲ್ಲಿ ಅಧಿಕವಾಗಿರುತ್ತದೆ. ಮಟನ್ ಗಿಟಿ ಮತ್ತು ಕರುಳನ್ನು ಬಳಸಿ ಮಟನ್ ಬೋಟಿ ಫ್ರೈ ತಯಾರಿಸಲಾಗುತ್ತದೆ.  ಹಾಗಾದ್ರೆ ಮನೆಯಲ್ಲಿ ಮಂಡ್ಯ ಸ್ಟೈಲ್ ಬೋಡಿ ಫ್ರೈ ಮಾಡುವುದು ಹೇಗೆ ಇಲ್ಲಿದೆ.

ಬೇಕಾಗುವ ಪದಾರ್ಥಗಳು
ಬೋಟಿ – 1 ಸೆಟ್
ಕಡಲೆಕಾಳು – 100 ಗ್ರಾಂ
. ಕಾಯಿ ತುರಿ – 1/2 ಬಟ್ಟಲು
ಈರುಳ್ಳಿ – 2
ಟೊಮೆಟೊ – 1 ಮೀಡಿಯಂ
ಶುಂಠಿ – ಅರ್ಧ ಇಂಚು
ಬೆಳ್ಳುಳ್ಳಿ – 7-8 ಎಸಳು
ದನಿಯಾ ಪುಡಿ – 1 ಚಮಚ
ಚಕ್ಕೆ, ಲವಂಗ – 3-4
ಕೆಂಪು ಒಣಮೆಣಸಿನಕಾಯಿ – 5-6
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹುರಿಗಡಲೆ – 3 ಚಮಚ
ಎಣ್ಣೆ – 3-4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಸ್ಪೆಷಲ್ ಸಂಡೇಗೆ ಬಾಯಲ್ಲಿ ನೀರೂರಿಸುವ ಕೂರ್ಗ್​ ಸ್ಟೈಲ್ ಪಂದಿ ಕರಿ..

ಮಾಡುವ ವಿಧಾನ

ಕಡಲೆಕಾಳನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಸಾಧ್ಯವಾದರೇ ಹೆ್ಚ್ಉ ಸಮಯ ನೆನಸಿಡಬಹುದು. ನಂತರ ತಂದಿರುವ ಬೋಟಿಯನ್ನು ಚೆನ್ನಾಗಿ ಬಿಸಿನೀರು, ಸುಣ್ಣವನ್ನು ಸೇರಿಸಿ ಸ್ವಚ್ಛ ಮಾಡಿಕೊಳ್ಳಿ. ನೀವು ಎಷ್ಟು ಸೂಕ್ಷ್ಮವಾಗಿ ಸ್ವಚ್ಛ ಮಾಡುತ್ತೀರೋ ಅಷ್ಟು ಉತ್ತಮ.

ಸ್ವಚ್ಛ ಮಾಡಿದ ನಂತರ ಬೋಟಿಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮತ್ತೆ ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆದು ನೀರಿಲ್ಲದಂತೆ ಹಿಂಡಿ. ಅದರಲ್ಲಿ ಸ್ವಲ್ಪ ನೀರು ಉಳಿದರೂ ಸಹ ಅದು ಆಹಾರದ ರುಚಿಯನ್ನು ಹಾಳು ಮಾಡುತ್ತದೆ.

ಈಗ ಒಂದು ಪ್ಯಾನ್‍ ತೆಗೆದುಕೊಂಡು, ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ ಲವಂಗ, ಕೆಂಪು ಒಣಮೆಣಸಿನಕಾಯಿ ಎಲ್ಲಾವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ಅವುಗಳು ಫ್ರೈ  ಆಗಿ ಸ್ವಲ್ಪ ತಣ್ಣಗಾದ  ನಂತರ ಮಿಕ್ಸಿ ಜಾರ್‌ಗೆ ಕಾಯಿತುರಿ, ಟೊಮೆಟೋ, ಹುರಿಗಡಲೆ, ಫ್ರೈ ಮಾಡಿದ್ದ ಮಿಶ್ರಣ, ದನಿಯಾ ಪುಡಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟು ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ  ಒಂದು ಅಗಲವಾದ ಪಾತ್ರೆಯನ್ನು  ತೆಗೆದುಕೊಂಡು  ಅದಕ್ಕೆ ನೀರನ್ನು ಹಾಕಿ ಕುದಿಸಿ.  ನೀರು ಕುದಿ ಬಂದ ಮೇಲೆ ನೆನೆಸಿದ್ದ ಕಡಲೆಕಾಳನ್ನು ತೊಳೆದು ಹಾಕಿ. ಮಿಶ್ರಣ ಮಾಡಿ.

ಆ ಮಿಶ್ರಣವನ್ನು 5 ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ಅದಕ್ಕೆ ತೊಳೆದು ಸಣ್ಣಗೆ ಹೆಚ್ಚಿದ್ದ ಬೋಟಿಯನ್ನು ಸೇರಿಸಿ, ಮಿಶ್ರಣ ಮಾಡಿ, ಚನ್ನಾಗಿ ಕುದಿಯಲು ಬಿಡಿ.
5-10 ನಿಮಿಷಗಳ ಕಾಲ ಕಾಳು ಮತ್ತು ಬೋಟಿಯನ್ನು ಬೇಯಿಸಿ. ಅದು  ಬೆಂದ ಮೇಲೆ ಅದಕ್ಕೆ ರುಬ್ಬಿದ ಖಾರದ ಮಿಶ್ರಣ ಹಾಗೂ  ಉಪ್ಪು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ  ಸಣ್ಣಗೆ ಹೆಚ್ಚಿದ ಕಾಯಿ ಚೂರುಗಳನ್ನು ಸೇರಿಸಿ ಕಲಸಿ, ಅದನ್ನು
15-20 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿದರೆ ಸೂಪರ್ ಟೇಸ್ಟಿ ಬೋಟಿ ಗೊಜ್ಜು ರೆಡಿ. ಗ್ಯಾಸ್ ಆಫ್ ಮಾಡುವಾಗ ಅದು ಸರಿಯಾಗಿ ಬೆಂದಿರುವುದನ್ನ ಖಚಿತಪಡಿಸಿಕೊಂಡು ಆಪ್ ಮಾಡಿ.

ಇದನ್ನೂ ಓದಿ: ಸಖತ್ ಸಂಡೇಗೆ ಮಟನ್ ಕೀಮಾ ರೆಸಿಪಿ ..

ಗೊಜ್ಜು ಆರಿದ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಮ್ಮೆ ಮಿಶ್ರಣ ಮಾಡಿ. ಅದಕ್ಕೆ ನಿಂಬೆ ರಸಗಳನ್ನು ಸಹ ಹಾಕಬಹುದು.
Published by:Sandhya M
First published: