Sunday Special Recipe: ಮಳೆಗಾಲದ ಈ ಸಂಡೇಗೆ ಸ್ಪೆಷಲ್ ಸ್ಪೈಸಿ ಚಿಕನ್ ಮಸಾಲ ಟ್ರೈ ಮಾಡಿ

Spicy Chicken Masala:  ಖಾರವಾದ ಅಡುಗೆ ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ.  ಈ ಚಿಕನ್ ಮಸಾಲ ಕರಿಯನ್ನು ಚಪಾತಿ, ಅನ್ನದ ಜೊತೆ ತಿನ್ನದೆ ಸೂಪರ್, ಹಾಗಾದ್ರೆ ,ಮನೆಯಲ್ಲಿ ಚಿಕನ್ ಮಸಾಲ ಸುಲಭವಾಗಿ ಮಾಡೋದು ಹೇಗೆ ಎಲ್ಲಿದೆ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಂಡೇ(Sunday) ಬಂತು ಅಂದ್ರೆ ಸಾಕು ನಾನ್​ವೆಜ್(Nonveg) ಇಲ್ಲ ಅಂದ್ರೆ ಆಗೋದಿಲ್ಲ. ನಾನ್​ವೆಜ್ ಅಂದ್ರೆ ಚಿಕನ್(Chicken), ಮಟನ್ ಸಾಮಾನ್ಯ. ನಾವು ಸಾಮಾನ್ಯವಾಗಿ ಚಿಕನ್ ಕರಿ(Chicken Curry) ಮಾಡ್ತೀವಿ, ಅದನ್ನು ಬೇರೆ ಬೇರೆ ಸ್ಟೈಲ್‍ನಲ್ಲಿ ತಯಾರಿಸುತ್ತೇವೆ. ಅದರಲ್ಲೂ ಸ್ಪೈಸಿ ಚಿಕನ್ ಮಸಾಲ(Spicy Chicken Masala) ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ.  ಖಾರವಾದ ಅಡುಗೆ ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ.  ಈ ಚಿಕನ್ ಮಸಾಲ ಕರಿಯನ್ನು ಚಪಾತಿ, ಅನ್ನದ ಜೊತೆ ತಿನ್ನದೆ ಸೂಪರ್, ಹಾಗಾದ್ರೆ ,ಮನೆಯಲ್ಲಿ ಚಿಕನ್ ಮಸಾಲ ಸುಲಭವಾಗಿ ಮಾಡೋದು ಹೇಗೆ ಎಲ್ಲಿದೆ..

 ಬೇಕಾಗುವ ಸಾಮಗ್ರಿಗಳು:
ಕೋಳಿ ಮಾಂಸ – ಅರ್ಧ ಕೆಜಿ

ಈರುಳ್ಳಿ_ 2
ಶುಂಠಿ ಪೇಸ್ಟ್- 2 ಟೀ ಸ್ಪೂನ್
ಪಲಾವ್ ಎಲೆ-1
ಏಲಕ್ಕಿ- 2
ಜೀರಿಗೆ- 1 ಟೀ ಸ್ಪೂನ್
ಕೊತ್ತಂಬರಿ ಬೀಜ- 3 ಟೀ ಸ್ಪೂನ್
ಅಡುಗೆ ಎಣ್ಣೆ- ಅರ್ಧ ಕಪ್

ಕಾಳು ಮೆಣಸು – 2 ಟೀ ಸ್ಪೂನ್
ಲವಂಗ, ಚಕ್ಕೆ- ಸ್ವಲ್ಪ
ಗಸೆಗಸೆ- ಅರ್ಧ ಸ್ಪೂನ್
ತೆಂಗಿನಕಾಯಿ- ಅರ್ಧ ಕಪ್

ಇದನ್ನೂ ಓದಿ: ಸೂಪರ್ ಸಂಡೇಗೆ ಚಿಕನ್ ಮಿರ್ಚಿ ಟ್ರೈ ಮಾಡಿ

 ಸ್ಪೈಸಿ ಚಿಕನ್ ಮಸಾಲ ಮಾಡುವ ವಿಧಾನ:
ಮೊದಲು ಒಂದು ಬಾಣಲೆಯನ್ನು ತೆಗೆದುಕೊಳ್ಳಿ, ಅದಕ್ಕೆ  ಎಣ್ಣೆ ಹಾಕದೆ ಕಾಳು ಮೆಣಸು, ಲವಂಗ, ದಾಲ್ಚಿನ್ನಿ ಸೇರಿಸಿ ಚನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ಆರಲು ಬಿಡಿ. ಅದು  ಸಂಪೂರ್ಣವಾಗಿ ಆರಿದ ಬಳಿಕ  ಅದನ್ನ ರುಬ್ಬಿಕೊಳ್ಳಬೇಕು. ನೀರನ್ನು ಹಾಕದೇ ಪುಡಿಪುಡಿಯಾಗಿ ರುಬ್ಬಿಕೊಳ್ಳಿ.

ಇದನ್ನೂ ಓದಿ: ಮಳೆಗಾಲದ ಈ ಸಂಡೇಗೆ ಸ್ಪೈಸಿ ಪೆಪ್ಪರ್​ ಚಿಕನ್ ಫ್ರೈ ರೆಸಿಪಿ ..

ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಅದಕ್ಕೆ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಈರುಳ್ಳಿ ಚನ್ನಾಗಿ ಫ್ರೈ ಮಾಡಬೇಕು. ಹಾಗೆಯೇ ಮಾಂಸವನ್ನು ಚೆನ್ನಾಗಿ ತೊಳೆದಿರಬೇಕು. ಅಲ್ಲದೇ ಅದರಲ್ಲಿ ಯಾವುದೇ ಕಾರಣಕ್ಕೂ ನೀರು ಉಳಿಯಬಾರದು.

ನಂತರ ಆ ಚಿಕನ್​ಗೆ  ಈರುಳ್ಳಿ ಮಿಶ್ರಣ ಹಾಕಿ, ಅದಕ್ಕೆ  ಸ್ವಲ್ಪ ಉಪ್ಪನ್ನು ಸೇರಿಸಿ, 15 ನಿಮಿಷಗಳ ಕಾಲ ಬೇಯಿಸಬೇಕು. ಕೇವಲ 15 ನಿಮಿಷ ಅಂತ ಅಲ್ಲ. ಚಿಕನ್ ಬೇಯುವವರೆಗೂ ಅದನ್ನು ಚನ್ನಾಗಿ ಬೇಯಿಸಿ.

ಅದು ಬೇಯುತ್ತಿರುವಾಗ,  ಬೇರೆ ಬಾಣಲೆಯನ್ನು ತೆಗೆದುಕೊಂಡು ಎಣ್ಣೆ, ಈರುಳ್ಳಿ, ತೆಂಗಿನ ತುರಿ, ಜೀರಿಗೆ ಹಾಗೂ  ಉಳಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ಸ್ವಲ್ಪ ಬೇಯುವವರೆಗೆ ಹುರಿಯಬೇಕು. ಅವು ಕಂದು ಬಣ್ಣಕ್ಕೆ ತಿರುಗಿದ ಮೇಲೆ ತೆಗೆದು ಇಟ್ಟುಕೊಳ್ಳಿ. ಅವುಗಳನ್ನು ಹುರಿದ ನಂತರ ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆಯೇ 2 ನಿಮಿಷಗಳ ಕಾಲ ಹಿರಿಯಿರಿ. ನಂತರ ದಾಲ್ಚಿನ್ನಿ ಮತ್ತು ಲವಂಗ ಹಾಕಿ ಅದನ್ನು ನೀರು ಹಾಕದೆ ಪುಡಿ ಮಾಡಿಕೊಳ್ಳಿ.

ನಂತರ  ಬೆಂದ  ಚಿಕನ್  ಪಾತ್ರೆಗೆ ತಯಾರಿಸಿದ ರುಬ್ಬಿದ ಮಸಾಲೆ, ಮತ್ತು ಹುರಿದಿಟ್ಟ ಈರುಳ್ಳಿ, ಅರಿಶಿನ, ಏಲಕ್ಕಿ, ಕೆಂಪುಮೆಣಸು, ಕೊತ್ತಂಬರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಬೇಯಿಸಿದರೆ ಸ್ಪೈಸಿ  ಚಿಕನ್ ಮಸಾಲ ರೆಡಿ.
Published by:Sandhya M
First published: