Benefits Of Moringa Oil: ನುಗ್ಗೆಸೊಪ್ಪಿನ ಎಣ್ಣೆ ಬಳಸಿದ್ರೆ ನೀವು ಬ್ಯೂಟಿ ಪಾರ್ಲರ್​ಗೆ ಹೋಗೋ ಅಗತ್ಯವೇ ಇರೋದಿಲ್ಲ, ಅಷ್ಟೆಲ್ಲಾ ಪ್ರಯೋಜನಗಳಿವೆ!

How Moringa Oil Helps To Hair : ನುಗ್ಗೆಸೊಪ್ಪಿನ ಎಣ್ಣೆಯಲ್ಲಿ ವಿಟಮಿನ್ ಇ ಅಧಿಕವಾಗಿದೆ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್​ಗಳು ಇದ್ದು, ಇದು  ಚರ್ಮದ ಮೇಲೆ ಕೊಬ್ಬಿನ ಆಮ್ಲಗಳ ಕೆಟ್ಟ ಪರಿಣಾಮಗಳನ್ನು ನಿವಾರಿಸುತ್ತದೆ. ಇದು ಚರ್ಮದಲ್ಲಿ ಕಾಲ್ಯಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನುಗ್ಗೆ ಸೊಪ್ಪಿನ ಎಣ್ಣೆಯನ್ನು(Moringa Oil) ಮೊರಿಂಗಾ ಒಲಿಫೆರಾ ಎಂಬ ಬೀಜಗಳಿಂದ ಮಾಡಲಾಗುತ್ತದೆ. ನುಗ್ಗೆ ಮರದ ಬೀಜಗಳು, ಬೇರುಗಳು, ತೊಗಟೆ, ಹೂವುಗಳು(Flowers) ಮತ್ತು ಎಲೆಗಳು ಸೇರಿದಂತೆ ಎಲ್ಲಾ ಭಾಗಗಳನ್ನು ಪೌಷ್ಟಿಕ, ಔಷಧೀಯ(Medicine) ಉದ್ದೇಶಗಳಿಗಾಗಿ ಬಳಕೆ ಮಾಡಬಹುದು. ಈ ಕಾರಣಕ್ಕಾಗಿ, ಇದನ್ನು ಕೆಲವೊಮ್ಮೆ ಪವಾಡಗಳ ಮರ ಎಂದು ಕರೆಯಲಾಗುತ್ತದೆ.  ನುಗ್ಗೆ ಸೊಪ್ಪು ಹೆಚ್ಚಿನ ಎಣ್ಣೆಯ ಅಂಶವನ್ನು ಹೊಂದಿರುತ್ತವೆ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು, ಪ್ರೋಟೀನ್, ಸ್ಟೆರಾಲ್‌ಗಳು ಮತ್ತು ಟೊಕೊಫೆರಾಲ್‌ಗಳನ್ನು ಒಳಗೊಂಡಂತೆ ಅನೇಕ ಪೌಷ್ಟಿಕಾಂಶದ ಸಂಯುಕ್ತಗಳನ್ನು ಹೊಂದಿರುತ್ತವೆ.

ನುಗ್ಗೆ ಸೊಪ್ಪಿನ ಎಣ್ಣೆಯನ್ನು ವಿವಿಧ ಕೈಗಾರಿಕಾ ಪ್ರಕ್ರಿಯೆಗಳ ಮೂಲಕ ಉತ್ಪಾದಿಸಲಾಗುತ್ತದೆ. ಇದನ್ನು ಸಾರಭೂತ ತೈಲವಾಗಿ ಮತ್ತು ಅಡುಗೆ ಎಣ್ಣೆಯಾಗಿ ಕೂಡ ಬಳಕೆ ಮಾಡಲಾಗುತ್ತದೆ. ಇದು ಕೂದಲು ಮತ್ತು ಚರ್ಮದ ಉತ್ಪನ್ನಗಳಲ್ಲಿ ಕೂಡ ಒಂದು ಪ್ರಮುಖ ಅಂಶವಾಗಿದೆ.

ನುಗ್ಗೆ ಸೊಪ್ಪು ಅಥವಾ ಬೀಜದ ಎಣ್ಣೆಯ ಪ್ರಯೋಜನಗಳು 

ನುಗ್ಗೆ ಸೊಪ್ಪಿನ ಎಣ್ಣೆಯನ್ನು ಔಷಧೀಯನ್ನಾಗಿ ಹಾಗೂ ಪ್ರಾಚೀನ ಕಾಲದಿಂದಲೂ ಸೌಂದರ್ಯವರ್ಧಕ ಪದಾರ್ಥವಾಗಿ ಬಳಸಲಾಗುತ್ತಿದೆ.  ಅಡುಗೆ ಎಣ್ಣೆಯಾಗಿ ಇದನ್ನು ಬಳಕೆ ಮಾಡುವುದು ಸಹ ಉತ್ತಮ. ಇದರಲ್ಲಿ ಪ್ರೋಟೀನ್ ಮತ್ತು ಒಲೀಕ್ ಆಸಿಡ್, ಆರೋಗ್ಯಕರ ಕೊಬ್ಬು ಇದೆ.

ಈ ಎಣ್ಣೆಯು ಅಗತ್ಯವಾದ ಕೊಬ್ಬಿನ ಆಮ್ಲಗಳಿಂದ ಕೂಡಿರುವುದರಿಂದ. ಇದರಲ್ಲಿನ ಒಲಿಕ್ ಆಮ್ಲವು ಬಲವಾದ ಚರ್ಮದ  ಹಾನಿಯನ್ನು ತಪ್ಪಿಸಲು ಅತ್ಯಗತ್ಯವಾದ ಅಂಶವನ್ನು ನಿರ್ಮಿಸುತ್ತದೆ ಮತ್ತು ಚರ್ಮದ  ಕಲ್ಮಶಗಳನ್ನು ಹೊರಹಾಕುತ್ತದೆ.ಇದರ ಜೊತೆಗೆ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮ ನೆತ್ತಿಯನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮೊಡವೆ, ಸೋರಿಯಾಸಿಸ್, ತಲೆಹೊಟ್ಟು ಮುಂತಾದ ಬ್ಯಾಕ್ಟೀರಿಯ ಮತ್ತು ಶಿಲಿಂದ್ರಗಳ ಸಮಸ್ಯೆಗಳಿಂದ ಮುಕ್ತಿ ಪಡೆಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದಿನಕ್ಕೆ 5 ನಿಮಿಷ ಚಪ್ಪಾಳೆ ತಟ್ಟಿ ಆರೋಗ್ಯ ಕಾಪಾಡಿಕೊಳ್ಳಿ

ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್​ ಆಗಿ ಈ ಎಣ್ಣೆ ಕಾರ್ಯನಿರ್ವಹಿಸುತ್ತದೆ. ಎಣ್ಣೆಯ ಒಲೀಕ್ ಆಸಿಡ್ ಅನ್ನು ಸ್ಥಳೀಯವಾಗಿ ಕ್ಲೆನ್ಸಿಂಗ್ ಏಜೆಂಟ್ ಆಗಿ ಮತ್ತು ಚರ್ಮ ಮತ್ತು ಕೂದಲಿಗೆ ಮಾಯಿಶ್ಚರೈಸರ್ ಆಗಿ ಬಳಸಿದಾಗ ಇದು ಹೆಚ್ಚು ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ.

ನುಗ್ಗೆಸೊಪ್ಪಿನ ಎಣ್ಣೆಯಲ್ಲಿ ವಿಟಮಿನ್ ಇ ಅಧಿಕವಾಗಿದೆ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್​ಗಳು ಇದ್ದು, ಇದು  ಚರ್ಮದ ಮೇಲೆ ಕೊಬ್ಬಿನ ಆಮ್ಲಗಳ ಕೆಟ್ಟ ಪರಿಣಾಮಗಳನ್ನು ನಿವಾರಿಸುತ್ತದೆ. ಇದು ಚರ್ಮದಲ್ಲಿ ಕಾಲ್ಯಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚರ್ಮದ ಮೇಲೆ ಕಲೆಗಳನ್ನು ಹೋಗಲಾಡಿಸಲು ನಿಯಮಿತವಾಗಿ ಇದರ ಎಣ್ಣೆಯನ್ನು ಹಚ್ಚುವುದು ಉತ್ತಮ ಪ್ರಯೋಜನ ನೀಡುತ್ತದೆ. ವಿಟಮಿನ್ ಇ ನಿಮ್ಮ ಕೂದಲನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.

ಕೊಲೆಸ್ಟ್ರಾಲ್ ನಿರ್ವಹಣೆ ಮಾಡುವಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ.  ನುಗ್ಗೆ ಸೊಪ್ಪಿನ ಎಣ್ಣೆಯು ಸ್ಟೆರಾಲ್‌ಗಳನ್ನು ಹೊಂದಿರುತ್ತದೆ, ಇದನ್ನು ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 ನುಗ್ಗೆ ಸೊಪ್ಪಿನ ಎಣ್ಣೆಯೊಂದಿಗೆ ನೀವು ಚರ್ಮ ಅಥವಾ ಕೂದಲ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದು ಇಲ್ಲಿದೆ..

ಕೂದಲಿಗೆ

ಬೇಕಾಗುವ ಪದಾರ್ಥಗಳು

2 ಕಪ್‌ ಬಾದಾಮಿ ಎಣ್ಣೆ ಅಥವಾ ನೀವು ಬಳಸುವ ಯಾವುದಾದರೂ ಎಣ್ಣೆ  ಹಾಗೂ ನುಗ್ಗೆ ಸುಪ್ಪಿನ ಎಣ್ಣೆಯ 5 ರಿಂದ 10 ಹನಿಗಳು ಜೊತೆಗೆ ಲ್ಯಾವೆಂಡರ್ ಅಥವಾ ಚಹಾ ಮರದ ಎಣ್ಣೆ 5 ರಿಂದ 10 ಹನಿಗಳು.

ಬಳಕೆಯ ವಿಧಾನ

ಗಾಜಿನ ಬಟ್ಟಲಿನಲ್ಲಿ ಅಥವಾ ಬಾಟಲಿಯಲ್ಲಿ ಎಣ್ಣೆಗಳನ್ನು ಮಿಶ್ರಣ ಮಾಡಿ.ಕೂದಲಿಗೆ ಹಚ್ಚಿ, ಬೇರುಗಳಿಗೆ  ಸರಿಯಾಗಿ ಮಸಾಜ್ ಮಾಡಿ ಕೂದಲನ್ನು ರಾತ್ರಿಯಿಡಿ ಬಿಡಿ. ಬೆಳಗ್ಗೆ ಶಾಂಪೂ ಬಲಸಿ ತಲೆಸ್ನಾನ ಮಾಡಿ.

ಚರ್ಮಕ್ಕಾಗಿ

ಇದನ್ನೂ ಓದಿ: ತೂಕ ಇಳಿಸಬೇಕಾ? ಹಾಗಾದ್ರೆ ಬೆಳಗ್ಗೆ ಖಾಲಿ ಹೊಟ್ಟೆಲಿ ಈ ಎರಡು ಪದಾರ್ಥ ತಿನ್ನಿ ಸಾಕು

ಕೂದಲಿನ ಚಿಕಿತ್ಸೆಯಂತೆಯೇ ಅದೇ ಪದಾರ್ಥಗಳನ್ನು ಬಳಸಿ. ಮುಖ ಅಥವಾ ದೇಹದ ಮೇಲೆ ನಿಮ್ಮ ನಿಧಾನವಾಗಿ ಮಸಾಜ್ ಮಾಡಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಪ್ರಯೋಜನ ದೊರೆಯುತ್ತದೆ.
Published by:Sandhya M
First published: