Holiday Plan: ಕೆಲಸದ ಒತ್ತಡದಿಂದ ಬ್ರೇಕ್ ಬೇಕಾ? ಹಾಗಾದ್ರೆ Girl Gang ಜೊತೆ ಈ ಸ್ಥಳಗಳಿಗೆ ಟ್ರಿಪ್ ಹೋಗಿ

Destinations For Girl Gang: ಕೇವಲ ಇದಿಷ್ಟೇ ಅಲ್ಲ ಇನ್ನೂ ಹಲವಾರು ಪ್ರದೇಶಗಳಿಗೆ ನೀವು  ಭೇಟಿ ನೀಡಬಹುದು. ಅತಿ ಕಡಿಮೆ ಬಜೆಟ್​ನಲ್ಲಿ ನಿಮ್ಮ ಪ್ರವಾಸವನ್ನು ಅತ್ತುತ್ತಮಗೊಳಿಸುವ ಪ್ರದೇಶಗಳು ಇವು ಎನ್ನಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ನಾವು ಎಲ್ಲರೊಂದಿಗೂ ಟ್ರಿಪ್ (trip)ಹೋಗಲು ಸಾಧ್ಯವಿಲ್ಲ. ನಾವು ಕೆಲವರೊಂದಿಗೆ ಹೊದರು ಸಹ ಅವು ಸಹಿ ನೆನಪಾಗಿರುವುದಿಲ್ಲ. ಕೆಟ್ಟ ಅನುಭವಗಳಾಗಿರುತ್ತದೆ.  ಹಾಗಾಗಿ ಬೇರೆಯವರ ಜೊತೆ ಟ್ರಿಪ್ ಹೋಗಲು ಮತ್ತೊಮ್ಮೆ ಧೈರ್ಯ ಬರುವುದಿಲ್ಲ. ಆದರೆ ನಿಮ್ಮ ಬ್ರೇಕ್ ಸಮಯದಲ್ಲಿ ನೀವು ನಿಮ್ಮ ಗೆಳತಿರ ಗ್ಯಾಂಗ್(Girl Gang) ಜೊತೆ ಏಕೆ ಟ್ರಿಪ್ ಹೋಗ್ಬಾರ್ದು. ಹೌದು, ಸಾಮಾನ್ಯವಾಗಿ ಎಲ್ಲ ಸ್ಥಳಗಳಿಗೆ ಹುಡುಗಿಯರು ಮಾತ್ರ ಹೋಗಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಕೆಲವೊಂದು ಸ್ಥಳಗಳಿಗೆ ನೀವು ಈ ಸಮಯದಲ್ಲಿ ಗೆಳತಿಯರ ಜೊತೆ ಹೋದರೆ ಆರಾಮವಾಗಿ ಎಂಜಾಯ್ ಮಾಡಿಕೊಂಡು ಬರಬಹುದು.  

ನಮ್ಮ ಪೀಳಿಗೆಯಲ್ಲಿ ಒಳ್ಳೆಯ ಸಿನಿಮಾದ ಕಥಾವಸ್ತುವನ್ನು ಹೆಣ್ಣು ಮಕ್ಕಳ ಗ್ಯಾಂಗ್‌ನ ಸಾಹಸಗಳಿಂದ ವ್ಯಾಖ್ಯಾನಿಸಲಾಗುತ್ತದೆ. ಹಾಗೆಯೇ ನೀವು ನಿಮ್ಮ ಫ್ರೆಂಡ್ಸ್ ಜೊತೆ ಎಲ್ಲೆಲ್ಲಿ ಹೋಗಬಹುದು ಇಲ್ಲಿದೆ.

ಗೋವಾ

ಗೋವಾ ಫ್ರೆಂಡ್ಸ್​ ಜೊತೆ ಟ್ರಿಪ್ ಅಂದರೆ ಮೊದಲು ನೆನಪಾಗುವುದು ಗೋವಾ.  ಇಲ್ಲಿನ ಕಡಲ ತೀರಗಲು ನಿಜಕ್ಕೂ ಪ್ರವಾಸಿಗರ ಮೈಮನ ತಣಿಸುವುದರಲ್ಲಿ ಯಾವುದೆ ಸುಳ್ಳಿಲ್ಲ. ಇಲ್ಲಿನ ಸ್ಥಳಗಳಲ್ಲಿ ನೀವು ಒಳ್ಳೆಯ ಅನುಭವವನ್ನು ಪಡೆಯಬಹುದು. ಕ್ರೇಜಿ ಬೀಚ್ ಷಾಕ್‌ಗಳು ಮತ್ತು ಮನಸೆಳೆಯುವ ಕ್ಲಬ್‌ಗಳು ನೀವು ಸ್ನೇಹಿತೆಯ ಜೊತೆ ಹೋದರೆ ಜೀವಮಾನದ ನೆನಪುಗಳನ್ನು ಇಲ್ಲಿ ಕಟ್ಟಿಕೊಳ್ಳಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ಉಗುರು ಒರಟಾಗಿದೆಯಾ? ಹಾಗಾದ್ರೆ ಹೀಗೆ ಮಾಡಿ

ಟರ್ಕಿ

ಟರ್ಕಿ ಸುಂದರವಾದ ಸ್ಥಳವಾಗಿದೆ. ಈ ದೇಶವು ಪ್ರತಿಯೊಂದು ಅಂಶದಲ್ಲೂ ಶ್ರೀಮಂತವಾಗಿದೆ. ಸಂಸ್ಕೃತಿ, ಇತಿಹಾಸ ಮತ್ತು ಮನರಂಜನೆ ಹೀಗೆ. ನಿಮ್ಮ ಸ್ನೆಹಿತೆಯರೊಂದಿಗೆ ಇಲ್ಲಿ ಮರಲಿನ ಬೀಚ್​ನಲ್ಲಿ ಸನ್​ಸೆಟ್​ ವಾಕ್ ಮಾಡಬಹುದು. ಹಾಗೆಯೇ ಹಲವಾರು ಸಾಹಸ ಆಟಗಳನ್ನು ಸಹ ಇಲ್ಲಿ ಆಡಬಹುದು.

ಹಾಗೆಯೇ ಅಲ್ಲಿನ ವಿಭಿನ್ನ ಸಂಸ್ಕೃತಿಯನ್ನು ನೋಡಿ ಆನಂದಿಸಬಹುದು. ಮರಳನ್ನು ಹೊಂದಿರುವ ಅನೇಕ ಪ್ರಾಚೀನ ಗುಹೆಗಳ ಪ್ರವಾಸವನ್ನು ಮಾಡಬಹುದು, ಈ ಟರ್ಕಿ ನಿಮಗೆ ನಿಗೂಢವಾದ ಅನುಭವಗಳನ್ನು ನೀಡುತ್ತದೆ ಅದು ನಿಮ್ಮ ಸ್ನೇಹಿತರ ಜೊತೆ ಆಳವಾದ ಸಂಬಂಧವನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತದೆ.

ಪಾಂಡಿಚೇರಿ

ಒಮ್ಮೆ ಫ್ರೆಂಚ್ ವಸಾಹತು ಆಗಿದ್ದ ಪುದುಚೇರಿ ಅಥವಾ ಪಾಂಡಿಚೇರಿ ನಮ್ಮ ದೇಶದಲ್ಲಿ ವಿದೇಶಿ ನೆಲದ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ನೀವು ಅಂತರಾಷ್ಟ್ರೀಯ ಅನುಭವವನ್ನು ಕಡಿಮೆ ಬಜೆಟ್​ನಲ್ಲಿ ಅನುಬವಿಸಲು  ಬಯಸಿದರೆ ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.

ಪುದುಚೇರಿಯ ವಾಸ್ತುಶಿಲ್ಪ ಮತ್ತು ಜೀವನಶೈಲಿಯು ನೀವು ಫ್ರೆಂಚ್ ರಿವೇರಿಯಾದಲ್ಲಿರುವಂತೆ ಸ್ವಲ್ಪಮಟ್ಟಿಗೆ ನಿಮಗೆ ಅನಿಸುತ್ತದೆ. ಇದು ನಿಮ್ಮ ಸ್ನೇಹಿತರೊಂದಿಗೆ ಹೋಗಲು ಕಲಾತ್ಮಕವಾಗಿ ಆಕರ್ಷಕವಾದ ಸ್ಥಳವಾಗಿದೆ.

 ಥೈಲ್ಯಾಂಡ್ 

ಅದರ ಕ್ರೇಜಿ ಆಲ್-ನೈಟ್ ಬೀಚ್ ಪಾರ್ಟಿಗಳಿಂದ ಹಿಡಿದು ಅದರ ಇನ್ನೂ ಕ್ರೇಜಿಯರ್ ಬೋಟ್ ಪಾರ್ಟಿಗಳವರೆಗೆ, ಥೈಲ್ಯಾಂಡ್ ತನ್ನ ಕಾಡು ಮತ್ತು ರಾತ್ರಿಜೀವನಕ್ಕೆ ಪ್ರಸಿದ್ಧವಾಗಿದೆ. ಹುಡುಗಿಯರ ಪ್ರವಾಸಕ್ಕೆ ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ ಏಕೆಂದರೆ ನಿಮ್ಮ ಸ್ನೇಹಿತರಿಲ್ಲದೆ ಯಾವುದೇ ಪಾರ್ಟಿ ಅಪೂರ್ಣವಾಗಿರುತ್ತದೆ.

ಇದನ್ನೂ ಓದಿ: ಕಣ್ಣು ಆಕರ್ಶಕವಾಗಿ ಕಾಣಲು ಇಲ್ಲಿದೆ ಸುಲಭ ಮೇಕಪ್ ಟಿಪ್ಸ್

ಇಲ್ಲಿನ ಬೀಚ್​ನ ಸೌಂದರ್ಯ, ಥಾಯ್ ಮಸಾಜ್​ಗಳು ನಿಮಮ್ ಪ್ರವಾಸವನ್ನು ಪುರ್ಣಗೊಳಿಸುತ್ತವೆ. ಥೈಲ್ಯಾಂಡ್ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ.  ಕೇವಲ ಇದಿಷ್ಟೇ ಅಲ್ಲ ಇನ್ನೂ ಹಲವಾರು ಪ್ರದೇಶಗಳಿಗೆ ನೀವು  ಭೇಟಿ ನೀಡಬಹುದು. ಅತಿ ಕಡಿಮೆ ಬಜೆಟ್​ನಲ್ಲಿ ನಿಮ್ಮ ಪ್ರವಾಸವನ್ನು ಅತ್ತುತ್ತಮಗೊಳಿಸುವ ಪ್ರದೇಶಗಳು ಇವು ಎನ್ನಬಹುದು.
Published by:Sandhya M
First published: