HOME » NEWS » Lifestyle » HERE IS THE 8 HOME MADE FACIALS FOR HEALTHY AND GLOWING SKIN STG AE

ಯಾವುದೇ ಖರ್ಚಿಲ್ಲದೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ: ಮನೆಯಲ್ಲೇ ಮಾಡಿಕೊಳ್ಳಬಹುದಾದ 8 ಫೇಶಿಯಲ್​ಗಳು

ಮನೆಯಲ್ಲೇ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಮಾಡಿಕೊಳ್ಳಬಹುದಾದ 8 ಫೇಶಿಯಲ್‍ಗಳ ಬಗ್ಗೆ ಇಲ್ಲಿದೆ ಮಾಹಿತಿ.

Trending Desk
Updated:June 10, 2021, 1:36 PM IST
ಯಾವುದೇ ಖರ್ಚಿಲ್ಲದೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ: ಮನೆಯಲ್ಲೇ ಮಾಡಿಕೊಳ್ಳಬಹುದಾದ 8 ಫೇಶಿಯಲ್​ಗಳು
ಸಾಂದರ್ಭಿಕ ಚಿತ್ರ
  • Share this:

ಲಾಕ್‍ಡೌನ್ ಕಾರಣದಿಂದ ಬ್ಯೂಟಿ ಪಾರ್ಲರ್‌ಗಳಿಗೆ ಹೋಗಲಾಗದೇ ಬಹಳಷ್ಟು ಮಂದಿ ಚಿಂತಿಸುತ್ತಿರಬಹುದು. ಹಾಗಂತ ನಮ್ಮ ಚರ್ಮದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಮತ್ತೇನು ಮಾಡೋದು ಅಂತೀರಾ? ಮನೆಯಲ್ಲೇ ಫೇಶಿಯಲ್ ಮಾಡಿಕೊಳ್ಳಿ. ಅಡುಗೆ ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಫೇಶಿಯಲ್ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ ಮತ್ತು ಲಾಭದಾಯಕ. ಅದರಿಂದ ದುಬಾರಿ ಕ್ರೀಮ್ ಮತ್ತು ಪಾರ್ಲರ್ ಖರ್ಚು ಕೂಡ ಉಳಿಯುತ್ತದೆ.


ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ 8 ಫೇಶಿಯಲ್‍ಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.



1. ಬಾಳೆಹಣ್ಣಿನ ಫೇಶಿಯಲ್
ಬಾಳೆಹಣ್ಣಿನ ಮಾಸ್ಕ್ ಅನ್ನು ಮನೆಯಲ್ಲಿ ತಯಾರಿಸಬಹುದಾದಂತಹ ಅತ್ಯುತ್ತಮ ಫೇಶಿಯಲ್ ಮಾಸ್ಕ್. ಅದು ನಿಮ್ಮ ಚರ್ಮವನ್ನು ಮಾಯಿಶ್ಚರೈಸ್​ ಮಾಡುತ್ತದೆ ಮತ್ತು ಮೃದುವಾಗಿಸುತ್ತದೆ. ಬಾಳೆಹಣ್ಣನ್ನು ನುಣ್ಣನೆಯ ಪೇಸ್ಟ್ ಮಾಡಿ, ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 10-20 ನಿಮಿಷದ ಬಳಿಕ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಕಾಲು ಕಪ್ ಮೊಸರು, ಎರಡು ಚಮಚ ಜೇನು ತುಪ್ಪ ಮತ್ತು ಒಂದು ಬಾಳೆಹಣ್ಣನ್ನು ಪೇಸ್ಟ್ ಮಾಡಿ ಫೇಶಿಯಲ್ ಮಾಡಿಕೊಂಡರೆ ಫಲಿತಾಂಶ ಅತ್ಯುತ್ತಮವಾಗಿರುತ್ತದೆ.




ಬಾಳೆಹಣ್ಣು

2. ಹಾಲಿನ ಫೇಶಿಯಲ್
ನಮ್ಮ ಚರ್ಮಕ್ಕೆ ಹಾಲಿಗಿಂತ ಲಾಭದಾಯಕ ಇನ್ನೊಂದಿರಲಾರದು ಅಲ್ವಾ? ಹಾಲು ನಿಮ್ಮ ಮುಖದ ಮೊಡವೆ, ಕಪ್ಪುಕಲೆಗಳನ್ನು ಹೋಗಲಾಡಿಸಿ, ಚರ್ಮವನ್ನು ಮೃದುವಾಗಿಸುವ ಸಾಮರ್ಥ್ಯ ಹೊಂದಿದೆ. ಅರ್ಧ ಕಪ್ ಹಾಲಿನ ಪುಡಿ ಮತ್ತು ಅಗತ್ಯವಿರುವಷ್ಟು ಬಿಸಿ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸರಿಯಾಗಿ ಒಣಗಿದ ಬಳಿಕ ಉಗುರು ಬೆಚ್ಚಿಗಿನ ನೀರಿನಲ್ಲಿ ತೊಳೆದುಕೊಳ್ಳಿ.

ಇದನ್ನೂ ಓದಿ: Lifestyle: ಪ್ರೋಟೀನ್ ಕೊರತೆ ನಿಮ್ಮ ದೇಹದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಗೊತ್ತಾ..!

3. ಮೊಸರಿನ ಫೇಶಿಯಲ್
ನಾವು ಮೃದುತ್ವದ ಬಗ್ಗೆ ಮಾತನಾಡುವಾಗ, ಮೊಸರನ್ನು ಮರೆಯಲು ಹೇಗೆ ಸಾಧ್ಯ? ಒಂದು ಚಮಚ ಮೊಸರಿಗೆ ಕಾಲು ಭಾಗ ಕಿತ್ತಳೆ ಹಣ್ಣಿನ ರಸ, ಕಿತ್ತಳೆ ಹಣ್ಣಿನ ತಿರುಳು ಮತ್ತು 1 ಚಮಚ ಲೋಳೆಸರ ಸೇರಿಸಿ, ಮಿಶ್ರಣ ತಯಾರಿಸಿ. ಅದನ್ನು ನಿಮ್ಮ ಮುಖಕ್ಕೆ ಹಚ್ಚಿ 5 ನಿಮಿಷದ ನಂತರ ತೊಳೆಯಿರಿ.


4. ಸಾಸಿವೆ ಎಣ್ಣೆಯ ಫೇಶಿಯಲ್
ಮುಖದ ಸೌಂದರ್ಯಕ್ಕೆ ಹಿಂದಿನ ಕಾಲದವರು ಬಳಸುತ್ತಿದ್ದ ಪದಾರ್ಥಗಳಲ್ಲಿ ಸಾಸಿವೆ ಎಣ್ಣೆಯೂ ಒಂದು. ನಿಮ್ಮ ಮುಖಕ್ಕೆ ಸಾಸಿವೆ ಎಣ್ಣೆಯನ್ನು ನಿಧಾನವಾಗಿ ಹಚ್ಚಿಕೊಳ್ಳಿ, ಅದು ಮುಖವನ್ನು ಮೃದುವಾಗಿಸುತ್ತದೆ. ಆದರೆ ಫೇಶಿಯಲ್‍ಗೆ ಮೊದಲು, ಸಾಸಿವೆ ಎಣ್ಣೆ ನಿಮ್ಮ ಮುಖಕ್ಕೆ ಹೊಂದುತ್ತದೋ ಇಲ್ಲವೋ ಎಂಬುದನ್ನು ಪ್ಯಾಚ್ ಟೆಸ್ಟ್ ಮೂಲಕ ಖಾತರಿ ಪಡಿಸಿಕೊಳ್ಳಿ.


5. ಮೊಟ್ಟೆ, ಲಿಂಬೆ ಮತ್ತು ಜೇನಿನ ಫೇಶಿಯಲ್
ಮೊಟ್ಟೆ, ಲಿಂಬೆ ಮತ್ತು ಜೇನಿನ ಫೇಶಿಯಲ್ ಅನ್ನು ಮನೆಯಲ್ಲೊಮ್ಮೆ ಮಾಡಿ ನೋಡಿ. ನಿಮ್ಮದು ಒಣ ಚರ್ಮವಾಗಿದ್ದರೆ, ಮೊಟ್ಟೆಯ ಹಳದಿ ಭಾಗವನ್ನು ಮಾತ್ರ ಬಳಸಿ. ನಿಮ್ಮದು ಎಣ್ಣೆ ಚರ್ಮವಾಗಿದ್ದರೆ ಮೊಟ್ಟೆಯ ಬಿಳಿಭಾಗವನ್ನು ಮಾತ್ರ ಬಳಸಿ. ನಿಮ್ಮದು ಸಾಮಾನ್ಯ ಚರ್ಮವಾಗಿದ್ದರೆ ಇಡೀ ಮೊಟ್ಟೆಯನ್ನು ಬಳಸಬಹುದು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮೂವತ್ತು ನಿಮಿಷಗಳ ಬಳಿಕ ತೊಳೆಯಿರಿ.


ಇದನ್ನೂ ಓದಿ: ದಟ್ಟವಾದ ಆರೋಗ್ಯಕರ ಕೇಶರಾಶಿ ನಿಮ್ಮದಾಗಬೇಕಾದರೆ ಈ ಆಹಾರಗಳನ್ನು ಸೇವಿಸಿ..!

6. ಸೌತೆಕಾಯಿ ಮಾಸ್ಕ್ ಫೇಶಿಯಲ್
ಬೇಸಿಗೆಯಲ್ಲಿ ಚರ್ಮದ ಆರೋಗ್ಯಕ್ಕೆ ಸೌತೆಕಾಯಿ ಬಳಕೆ ಒಳ್ಳೆಯದು, ಅದು ನಿಮ್ಮ ಚರ್ಮ ಒಣಗದಂತೆ ಮತ್ತು ಚರ್ಮ ಸುಕ್ಕಾಗದಂತೆ ನೋಡಿಕೊಳ್ಳುತ್ತದೆ. ನಿಮ್ಮ ಮುಖವನ್ನು ಮಾಯಿಶ್ಚರೈಸ್ ಮಾಡಲು ದುಬಾರಿ ಕ್ರೀಂ ಬೇಕಿಲ್ಲ, ಸೌತೆಕಾಯಿ ಇದ್ದರೆ ಸಾಕು. ಸೌತೆಕಾಯಿಯನ್ನು ತುರಿಯಿರಿ, ಮೊಸರಿನ ಜೊತೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ.


7. ಜೇನು ತುಪ್ಪದ ಫೇಶಿಯಲ್
ಜೇನು ತುಪ್ಪ ಚರ್ಮದ ರಂಧ್ರಗಳನ್ನು ತೆರೆದು, ಅದನ್ನು ಸ್ವಚ್ಚ ಮಾಡಿ, ಬ್ಲ್ಯಾಕ್‌ ಹೆಡ್ಸ್‌ನಿಂದ ಮುಕ್ತಿ ದೊರಕಿಸುತ್ತದೆ. ಅದು ಮುಖದ ಜಿಡ್ಡು, ಕೊಳೆ ನಿವಾರಿಸುವ ಆ್ಯಂಟಿ ಆ್ಯಕ್ಸಿಡೆಂಟ್, ಅ್ಯಂಟಿ ಸೆಪ್ಟಿಕ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದ್ದು, ಮೊಡವೆಗಳಿಂದ ನಿಮ್ಮನ್ನು ದೂರವಿಡುತ್ತದೆ.


8. ಓಟ್‍ಮೀಲ್ ಫೇಶಿಯಲ್
ಓಟ್‍ಮೀಲ್ ನಿಮ್ಮ ಮುಖದ ಅನಗತ್ಯ ಜಿಡ್ಡನ್ನು ಹೋಗಲಾಡಿಸಿ, ಮೊಡವೆಗಳು ಬಾರದಂತೆ ತಡೆಯುತ್ತವೆ. ಆ್ಯಂಟಿ ಆ್ಯಕ್ಸಿಡೆಂಟ್ ಮತ್ತು ಆ್ಯಂಟಿ ಇನ್‍ಫ್ಲಮೇಟರಿ ಗುಣಗಳು ಒಣ ಚರ್ಮಕ್ಕೆ ಮೃದುತ್ವ ನೀಡುತ್ತವೆ ಮತ್ತು ನಿರ್ಜೀವ ಜೀವಕೋಶಗಳನ್ನು ತೆಗೆಯುತ್ತದೆ. ಅದರಲ್ಲಿ ಇರುವ ಸ್ಯಾಪೊನಿನ್ ಎಂಬ ಸಂಯುಕ್ತಗಳು ನೈಸರ್ಗಿಕ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ.


Published by: Anitha E
First published: June 10, 2021, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories