Digestion Tips : ನೀವು ತಿಂದ ಆಹಾರ ಜೀರ್ಣವಾಗುತ್ತಿಲ್ಲವೇ? ಈ 5 ಪದಾರ್ಥಗಳನ್ನ ಸೇವಿಸಿ!

Health Tips: ಹಸಿವಾದ(Hungry)ಗ ತಿಂದರೆ ಅದು ಜೀರ್ಣವಾಗದೇ(Indigestion) ಕೆಲವರು ಹಿಂಸೆ ಪಡುತ್ತಾರೆ. ದಿನಕ್ಕೆ ಒಮ್ಮೆ ಆಹಾರ(Food)ಸೇವಿಸಿ, ದಿನಪೂರ್ತಿ ಜೀರ್ಣವಾಗದೇ ಒದ್ದಾಡುತ್ತಿರುತ್ತಾರೆ. ಸರಿಯಾದ ಸಮಯಕ್ಕೆ ಊಟ ಸೇವಿಸದೆ ಇರುವುದು, ಒಂದೇ ಬಾರಿ ಅತಿಯಾಗಿ ತಿನ್ನುವುದು, ಸರಿಯಾದ ಜೀವನಶೈಲಿ(Life Style)ಇಲ್ಲದೇ ಇದ್ದರೆ ಅರ್ಜೀಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಈ ಫಾಸ್ಟ್​ಪುಡ್(Fast Food)ಜಮಾನದಲ್ಲಿ ಒಂದೆಲ್ಲ ಒಂದು ಆರೋಗ್ಯ ಸಮಸ್ಯೆ(Health Problem)ಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಒಂದು ಸಮಸ್ಯೆ ಬಗೆಹರಿಸಲು ಹೋಗಿ ಮತ್ತೊಂದು ಸಮಸ್ಯೆ ನಮ್ಮನ್ನ ಆವರಿಸಿರುತ್ತೆ. ತಿಂದರೂ ಕಷ್ಟ, ತಿನ್ನದೇ ಇದ್ದರೂ ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿದೆ. ಹಸಿವಾದ(Hungry)ಗ ತಿಂದರೆ ಅದು ಜೀರ್ಣವಾಗದೇ(Indigestion) ಕೆಲವರು ಹಿಂಸೆ ಪಡುತ್ತಾರೆ. ದಿನಕ್ಕೆ ಒಮ್ಮೆ ಆಹಾರ(Food)ಸೇವಿಸಿ, ದಿನಪೂರ್ತಿ ಜೀರ್ಣವಾಗದೇ ಒದ್ದಾಡುತ್ತಿರುತ್ತಾರೆ. ಸರಿಯಾದ ಸಮಯಕ್ಕೆ ಊಟ ಸೇವಿಸದೆ ಇರುವುದು, ಒಂದೇ ಬಾರಿ ಅತಿಯಾಗಿ ತಿನ್ನುವುದು, ಸರಿಯಾದ ಜೀವನಶೈಲಿ(Life Style)ಇಲ್ಲದೇ ಇದ್ದರೆ ಅರ್ಜೀಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರ ಜತೆ ಗ್ಯಾಸ್ಟ್ರಿಕ್​, ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲ ಸಮಸ್ಯಗಳಿಗೂ ಪರಿಹಾರ ಇದೆಯಾ? ಆಸ್ಪತ್ರೆಗೆ ಹೋಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಚಿಕಿತ್ಸೆ ಪಡಿಬೇಕಾ? ಹೇಗೆ ಅಜೀರ್ಣ ತೊಂದರೆಯನ್ನ ಬಗೆ ಹರಿಸಿಬೇಕು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಮನೆಯಲ್ಲಿರುವ 5 ಪದಾರ್ಥಗಳನ್ನ ಬಳಸಿ
    ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನ ಬಲಪಡಿಸಲು, ಮನೆಯಲ್ಲಿಯೇ ಇರುವ ಈ 5 ಪದಾರ್ಥಗಳನ್ನು ಪ್ರತಿದಿನ ಬಳಸಬೇಕು. ಯಾವ ಆಸ್ಪತ್ರೆಯು ಬೇಡ, ಯಾವ ಚಿಕಿತ್ಸೆಯೂ ಬೇಡ. ಈ ಪದಾರ್ಥಗಳನ್ನ ಬಳಸಿದರೆ, ಕ್ರಮೇಣ ನಿಮ್ಮ ಸಮಸ್ಯೆಗಳು ಬಹೆಹರಿಯುತ್ತೆ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಗಟ್ಟಿಗೊಳಿಸಲು, ಪ್ರತಿದಿನ ಆಹಾರದಲ್ಲಿ ಗಿಡಮೂಲಿಕೆಗಳನ್ನು ಸೇರಿಸಿ ಸೇವಿಸಬೇಕು. ಯಾವ ಪದಾರ್ಥಗಳು ಅಜೀರ್ಣ ಸಮಸ್ಯೆ ಹೋಗುವಂತೆ ಮಾಡುತ್ತೆ? ಅವುಗಳನ್ನ ಬಳಸುವುದು ಹೇಗೆ? ಯಾವ ಸಮಯಕ್ಕೆ ಸೇವಿಸಬೇಕು? ಇಲ್ಲಿದೆ ಸಂಪೂರ್ಣ ವಿವರ

    ಇವುಗಳನ್ನು ಸೇವಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸಿ

    ಇದನ್ನೂ ಓದಿ: ಅಸಿಡಿಟಿ ಸಮಸ್ಯೆ ಇದ್ರೆ ಈ ಮೂರು ಪದಾರ್ಥಗಳನ್ನು ತಿನ್ನಿ ಮ್ಯಾಜಿಕ್ ನೋಡಿ

    1. ಶುಂಠಿ
    ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿಗೆ. ಅದರಲ್ಲಿ ಪ್ರಮುಖವಾಗಿ ಜೀರ್ಣಕಾರಿ ಆರೋಗ್ಯಕ್ಕೆ ಶುಂಠಿ ಅದ್ಭುತವಾಗಿ ಕೆಲಸ ಮಾಡುತ್ತೆ. ಹೊಟ್ಟೆ ನೋವನ್ನು ನಿವಾರಸಿಲು ಶುಂಠಿ ಸಹಾಯಮಾಡುತ್ತೆ. ಶುಂಠಿಯಲ್ಲಿರುವ ಅಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಮತ್ತು ಶೀತ, ಕೆಮ್ಮನಿಂದ ನಿಮ್ಮನ್ನು ರಕ್ಷಿಸುತ್ತೆ

    2.ಜೀರಿಗೆ
    ಉರಿಯೂತ ನಿವಾರಕ ಗುಣಗಳು ಜೀರಿಗೆಯಲ್ಲಿವೆ. ಇದು ಹೊಟ್ಟೆಯ ಅಸ್ವಸ್ಥೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಸೇವಿಸುತ್ತಾ ಬಂದರೆ ಗ್ಯಾಸ್ಟ್ರಿಕ್​ ಸಮಸ್ಯೆ ದೂರಾಗುತ್ತೆ. ಜೀರಿಗೆ ನೀರು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನ ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ.

    3. ಮೆಂತ್ಯ
    ಮೆಂತ್ಯ ಬೀಜಗಳು ದೇಹದಿಂದ ಹಾನಿಕಾರಕ ಜೀವಾಣುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಮತ್ತು ಕರುಳನ್ನು ಶಾಂತಗೊಳಿಸುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಸೇವಿಸಿದರೆ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.

    4. ಅರಿಶಿನ
    ಅರಿಶಿನವು ಶಿಲೀಂಧ್ರ, ಆಂಟಿವೈರಲ್, ಆಂಟಿಆಕ್ಸಿಡೆಂಟ್, ಆಂಟಿಕಾರ್ಸಿನೋಜೆನಿಕ್, ವಿರೋಧಿ ಮ್ಯುಟಾಜೆನಿಕ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ತಡೆಯಲು ಸಹಕಾರಿ.

    5. ಏಲಕ್ಕಿ
    ಏಲಕ್ಕಿ ಅತ್ಯಂತ ಬಲವಾದ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ಇದು ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹ ಪ್ರಯೋಜನಕಾರಿಯಾಗಿದೆ. ಇವೆಲ್ಲವನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇವಿಸುತ್ತಾ ಬಂದರೆ ನಿಮ್ಮ ಜೀರ್ಣಕ್ರಿಯೆಯನ್ನ ಬಲಪಡಿಸಿಬಹುದಾಗಿದೆ. ಅಲ್ಲದೇ ಗ್ಯಾಸ್ಟ್ರಿಕ್​ ಸಮಸ್ಯೆಗೂ ಸಿಗಲಿದೆ ಮುಕ್ತಿ

    ಇದನ್ನೂ ಓದಿ: ಒಂದು ನೆಲ್ಲಿಕಾಯಿಯಲ್ಲಿದೆ ಹಲವಾರು ಪ್ರಯೋಜನಗಳು, ಪುರುಷರ ಆರೋಗ್ಯಕ್ಕೂ ಉತ್ತಮ ಈ ನೆಲ್ಲಿ

    ಇದಿಷ್ಟೇ ಅಲ್ಲದೇ ಹಲವಾರು ಪದಾರ್ಥಗಳು ಸಹ ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಇವುಗಳನ್ನು ಸೇವನೆ ಮಾಡುವುದರ ಜೊತೆಗೆ ಆಹಾರ ಕ್ರಮವನ್ನು ಸರಿ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

    ವರದಿ- ವಾಸುದೇವ್​.ಎಂ
    Published by:Sandhya M
    First published: