Food Recipe: ಹೆಚ್ಚು ಪೋಷಕಾಂಶಯುಕ್ತ ಆಹಾರ ಬೇಕಾ? ಇದನ್ನು ಟ್ರೈ ಮಾಡಿ

Nutrition Food: ನಮ್ಮ ದೇಹಕ್ಕೆ ಸರಿಯಾಗಿ ಪೋಷಕಾಂಶಗಳು ಸೇರುವಂತೆ ಮಾಡುವುದು ನಮ್ಮ ಕೈನಲ್ಲಿರುತ್ತದೆ. ಆದಷ್ಟು ಹೆಚ್ಚು ಆರೋಗ್ಯಯುತ ಆಹಾರ ಸೇವನೆ ಒಳ್ಳೆಯದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Health: ನಮ್ಮ ಆರೋಗ್ಯಕರ ಜೀವನಕ್ಕೆ ಆಹಾರಗಳು ಬಹಳ ಮುಖ್ಯವಾಗುತ್ತದೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಧುನಿಕ ಜಗತ್ತಿನಲ್ಲಿ ಫಾಸ್ಟ್ ಫುಡ್​ಗಳು ಹೆಚ್ಚು ಪ್ರಸಿದ್ಧವಾಗಿದೆ, ಆದರೆ ಅದರ ಕೆಟ್ಟ ಪರಿಣಾಮಗಳನ್ನು ಕೂಡ ಎದುರಿಸಬೇಕಾಗಿದೆ. ನಮ್ಮ ದೇಹಕ್ಕೆ ಸರಿಯಾಗಿ ಪೋಷಕಾಂಶಗಳು ಸೇರುವಂತೆ ಮಾಡುವುದು ನಮ್ಮ ಕೈನಲ್ಲಿರುತ್ತದೆ. ಆದಷ್ಟು ಹೆಚ್ಚು ಆರೋಗ್ಯಯುತ ಆಹಾರ ಸೇವನೆ ಒಳ್ಳೆಯದು.

ಹಾಗಾದ್ರೆ ಪೋಷಕಾಂಶಯುಕ್ತ 3 ಆಹಾರಗಳನ್ನು ಇಲ್ಲಿ ನೀಡಲಾಗಿದೆ, ನೀವು ಟ್ರೈ ಮಾಡಿ.

ಬಾಳೆಹಣ್ಣು ಮತ್ತು  ಚಿಯಾ ಪುಡ್ಡಿಂಗ್

ಬೇಕಾಗುವ ಸಾಮಾಗ್ರಿಗಳು

40 ಗ್ರಾಂ ಚಿಯಾ ಬೀಜಗಳು

100 ಗ್ರಾಂ ತೆಂಗಿನ ಹಾಲು

20 ಗ್ರಾಂ ಸಕ್ಕರೆ

1 ಬಾಳೆಹಣ್ಣು

ಅರ್ಧ ಕಪ್ ದಾಳಿಂಬೆ ಹಣ್ಣು

10 ಗ್ರಾಂ ಕುಂಬಳಕಾಯಿ ಬೀಜಗಳು

10 ಗ್ರಾಂ ಬೆಲ್ಜಿಯಂ ಚಾಕೊಲೇಟ್ ಚಿಪ್ಸ್

10 ಗ್ರಾಂ ಗೋಜಿ ಹಣ್ಣುಗಳು

3 ಚಮಚ  ಅರಿಶಿನ

10 ಗ್ರಾಂ ಚೆರ್ರಿ ಹಣ್ಣು

ಪುದೀನ 1 ಎಲೆ

10 ಗ್ರಾಂ ಎಳ್ಳು ಮತ್ತು ಬಾದಾಮಿ (ಸಣ್ಣದಾಗಿ ಕತ್ತರಿಸಿಕೊಂಡಿರಿ)

ಮಾಡುವ ವಿಧಾನ

ಬಟ್ಟಲಿನಲ್ಲಿ, ತೆಂಗಿನ ಹಾಲನ್ನು  ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿ, ಅದಕ್ಕೆ  ಚಿಯಾ ಬೀಜಗಳನ್ನು ಸೇರಿಸಿ ಹಾಗೂ  30 ನಿಮಿಷಗಳ ಕಾಲ ಹಾಗೆಯೇ ಬಿಡಿ. 30 ನಿಮಿಷಗಳ ನಂತರ  ಒಂದು ತಟ್ಟೆಯಲ್ಲಿ, ಚಿಯಾ ಬೀಜ ಹಾಕಿ. ಬಾಳೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಪುಡಿಂಗ್ ಮೇಲೆ ಇರಿಸಿ. ಅದರ ಮೇಲೆ ಸ್ವಲ್ಪ ಅರಿಶಿನ ಹಾಕಿ, ನಂತರ ದಾಳಿಂಬೆ,ಕುಂಬಳಕಾಯಿ ಬೀಜ, ಬೆಲ್ಜಿಯಂ ಚಾಕೊಲೇಟ್ ಚಿಪ್ಸ್, ಗೊಜಿ ಹಣ್ಣು, ಚೆರ್ರಿ, ಎಳ್ಳು ಮತ್ತು ಬಾದಾಮಿ ಹಾಗೂ ಪುದೀನ ಹಾಕಿದರೆ ಪುಡ್ಡಿಂಗ್ ರೆಡಿ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ನಂತರ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ಉತ್ತಮ

ಆವಕಾಡೊ ಸ್ಯಾಂಡವಿಚ್

ಬೇಕಾಗುವ ಸಾಮಾಗ್ರಿಗಳು

1 ಬ್ರೆಡ್

1 ಬೆಣ್ಣೆ ಹಣ್ಣು

2 ಚಮಚ ನಿಂಬೆ ರಸ

5 ಗ್ರಾಂ ಹಸಿರು ಮೆಣಸಿನಕಾಯಿ (ಸಣ್ಣದಾಗಿ ಕತ್ತರಿಸಿದ

)5 ಗ್ರಾಂ ಕೊತ್ತಂಬರಿ (ಸಣ್ಣದಾಗಿ ಕತ್ತರಿಸಿದ)

10 ಗ್ರಾಂ ಈರುಳ್ಳಿ, (ಸಣ್ಣದಾಗಿ ಕತ್ತರಿಸಿದ)

3 ಟೇಬಲ್ ಸ್ಪೂನ್  ಜೀರಿಗೆ ಪುಡಿ

3 ಟೇಬಲ್ ಸ್ಪೂನ್  ಉಪ್ಪು

ಮೆಣಸಿನ ಪುಡಿ ಸ್ವಲ್ಪ

2 ಚಮಚ ವರ್ಜಿನ್ ಆಲಿವ್ ಎಣ್ಣೆ

10 ಗ್ರಾಂ ಗೋಜಿ ಹಣ್ಣುಗಳು

3 ಗ್ರಾಂ ಚಿಯಾ ಬೀಜಗಳು

30 ಗ್ರಾಂ ಸಲಾಡ್ ಎಲೆಗಳು

ಮಾಡುವ ವಿಧಾನ

ಬ್ರೆಡ್​ ಅನ್ನು ಸರಿಯಾಗಿ ರೋಸ್ಟ್ ಮಾಡಿಟ್ಟುಕೊಳ್ಳಿ. ನಂತರ  ಬೆಣ್ಣೆ ಹಣ್ಣಿನ ತಿರುಳನ್ನು  ತೆಗೆದುಕೊಂಡು ನುಣ್ಣಗೆ ಮಾಡಿಕೊಳ್ಳಿ,  ಅದಕ್ಕೆ ನಿಂಬೆ ರಸ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ಈರುಳ್ಳಿ, ಜೀರಿಗೆ ಪುಡಿ,  ಉಪ್ಪು, ಮೆಣಸಿನ ಪುಡಿ ಮತ್ತು ವರ್ಜಿನ್ ಆಲಿವ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ, ನಂತರ ರೋಸ್ಟ್ ಮಾಡಿರುವ ಬ್ರೆಡ್ ಮೇಲೆ, ಸ್ವಲ್ಪ ಆಲಿವ್ ಎಣ್ಣೆಯನ್ನು ಹಚ್ಚಿ ನಂತರ  ಮಿಶ್ರಣವನ್ನು ಮೇಲೆ ಹರಡಿ. ನಂತರ ಗೋಜಿ ಹಣ್ಣುಗಳು, ಚಿಯಾ ಬೀಜಗಳನ್ನು ಹಾಕಿ ಜೊತೆಗೆ  ಸಲಾಡ್ ಎಲೆ ಹಾಗೂ  ಸಬ್ಬಸಿಗೆ ಸೊಪ್ಪನ್ನು ಮೇಲೆ ಅಲಂಕಾರಕ್ಕೆ ಹಾಕಿ.

ಮೊಳಕೆ ಕಾಳು ಹಾಗೂ ಕೆಂಪು ಅಕ್ಕಿ  

ಬೇಕಾಗುವ ಸಾಮಾಗ್ರಿಗಳು

80 ಗ್ರಾಂ ಮೊಳಕೆ ಕಾಳುಗಳು

ಆಲಿವ್ ಎಣ್ಣೆ,

10 ಗ್ರಾಂ ಈರುಳ್ಳಿ,

10 ಗ್ರಾಂ ಸೆಲರಿ,

10 ಗ್ರಾಂ ಮಿಸೊ ಪೇಸ್ಟ್

80 ಗ್ರಾಂ ಕೆಂಪು ಅಕ್ಕಿ,

15 ಗ್ರಾಂ ಚೀನೀಕಾಯಿ

15 ಗ್ರಾಂ ಕೋಸುಗಡ್ಡೆ,

15 ಗ್ರಾಂ ಟೊಮ್ಯಾಟೋ

2 ಬ್ರೆಡ್

ಮಾಡುವ ವಿಧಾನ

ಬಾಣಲೆಯಲ್ಲಿ ಮೊಳಕೆ ಕಾಳನ್ನು ಉಪ್ಪು ಮತ್ತು ನೀರು ಹಾಕಿ ಸರಿಯಾಗಿ ಬೇಯಿಸಿ. ಇನ್ನೊಂದು ಬಾಣಲೆಯಲ್ಲಿ, ಕತ್ತರಿಸಿದ ಈರುಳ್ಳಿ, ಕುಂಬಳಕಾಯಿಯನ್ನು ಅಥವಾ ಚೀನೀಕಾಯಿ, ಕೋಸುಗಡ್ಡೆ, ಟೊಮ್ಯಾಟೊ ಹಾಕಿ ಅವುಗಳನ್ನು ಆಲಿವ್ ಎಣ್ಣೆಯಲ್ಲಿ ಹುರಿಯಿರಿ.ನಂತರ ಮಿಸೊ ಪೇಸ್ಟ್, ಬೇಯಿಸಿದ ಮೊಳಕೆ ಕಾಳುಗಳು ಮತ್ತು ಬೇಯಿಸಿದ ಕೆಂಪು ಅಕ್ಕಿಯನ್ನು ಸೇರಿಸಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.ನಂತರ ಅನ್ನು ಬ್ರೆಡ್ ಜೊತೆ ಸೇವಿಸಿ.
Published by:Sandhya M
First published: