Sunday Special Recipe: ನಾಟಿ ಸ್ಟೈಲ್​ನಲ್ಲಿ ಸ್ವಾದಿಷ್ಟ ಚಿಕನ್ 65 ರೆಸಿಪಿ - ನೀವೂ ಟ್ರೈ ಮಾಡಿ

Chicken 65 Recipe: ನಮ್ಮ ಮನೆಯಲ್ಲಿ ಯಾಕೆ ಈ ಟೇಸ್ಟ್​ ಬರಲ್ಲ ಅಂದುಕೊಂಡಿರುತ್ತೀರಾ ಅಲ್ವಾ? ಅದಕ್ಕೆ ಉದಾಹರಣೆ ಅಂದ್ರೆ ಚಿಕನ್ 65. ಸಾಮಾನ್ಯವಾಗಿ ಎಲ್ವಲರಿಗೂ ಇಷ್ಟ. ಅದನ್ನು ಹೋಟೆಲ್​ ಅಲ್ಲಿ ತಿಂದಾಗ ಮನೆಲೂ ಟ್ರೈ ಮಾಡ್ಬೇಕು ಅಂತ ಅನಿಸೋದು ಸಹಜ. ಹಾಗಾದ್ರೆ ಹೋಟೆಲ್ ರೀತಿಯಲ್ಲಿ ಚಿಕನ್ 65 ಮಾಡೋದು ಹೇಗೆ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಂಡೇ ಬಂತು (Sunday Special)ಅಂದ್ರೆ ಸಾಕು ನಾನ್ವೆಜ್​ (Non Veg)ಬೇಕೆಬೇಕು. ಬಿಸಿ ಬಿಸಿಯಾಗಿ ಸ್ಪೈಸಿ ಸ್ಪೈಸಿಯಾಗಿ ನಾನ್ವೆಜ್ಇದ್ರೆ ಊಟದ ರುಚಿನೇ ಬೇರೆ. ಪ್ರತಿ ಭಾನುವಾರ(Sunday) ನಾನ್ವೆಜ್ಪ್ರಿಯರಿಗೆ(Nonveg Lovers) ಹೊಸದೊಂದು ರೆಸಿಪಿ(New Recipe) ಟ್ರೈ ಮಾಡಬೇಕು ಅಂದುಕೊಳ್ಳತ್ತಾರೆ. ಸಂಡೇ ನಾನ್ವೆಜ್ತಿನ್ನದೇ ಕೆಲವರಿಗೆ ನಿದ್ದೆನೆ ಬರಲ್ಲ. ಬೆಳಗ್ಗೆನೇ ಎದ್ದು , ಚಿಕನ್(Chicken)​ ಅಂಗಡಿಗೆ ಹೋಗಿ ಮಾಂಸ(Meat) ತಂದು, ಆನ್ಲೈನ್ನಲ್ಲಿ ಇವತ್ತು ಯಾವ ರೆಸಿಪಿ ಮಾಡೋದು ಅಂತ ಹುಡುಕುತ್ತಾರೆ. ಈಗೆಲ್ಲಾ ಆನ್ಲೈನ್(Online)​ನಲ್ಲೇ ಚಿಕನ್ಬುಕ್ಮಾಡಿದ್ರೆ, ಮನೆ ಬಾಗಿಲಿಗೆ ಫ್ರೆಶ್ಮಾಂಸ ಬರುತ್ತೆ. ಹೋಟೆಲ್​​ನಲ್ಲಿ ನಾನ್ವೆಜ್ತಿಂದು, ನಮ್ಮ ಮನೆಯಲ್ಲಿ ಯಾಕೆ ಟೇಸ್ಟ್ಬರಲ್ಲ ಅಂದುಕೊಂಡಿರುತ್ತೀರಾ ಅಲ್ವಾ? ಅದಕ್ಕೆ ಉದಾಹರಣೆ ಅಂದ್ರೆ ಚಿಕನ್ 65. ಸಾಮಾನ್ಯವಾಗಿ ಎಲ್ವಲರಿಗೂ ಇಷ್ಟ. ಅದನ್ನು ಹೋಟೆಲ್​ ಅಲ್ಲಿ ತಿಂದಾಗ ಮನೆಲೂ ಟ್ರೈ ಮಾಡ್ಬೇಕು ಅಂತ ಅನಿಸೋದು ಸಹಜ. ಹಾಗಾದ್ರೆ ಹೋಟೆಲ್ ರೀತಿಯಲ್ಲಿ ಚಿಕನ್ 65(Chicken 65) ಮಾಡೋದು ಹೇಗೆ ಇಲ್ಲಿದೆ ನೋಡಿ. ನೀವು ಮನೆಯಲ್ಲಿ ಚಿಕನ್ 65 ಟ್ರೈ ಮಾಡಿ ರುಚಿ ನೋಡಿ. ಅತ್ಯಂತ ಸುಲಭವಾಗಿ ಹಾಗೂ ರುಚಿಕರವಾಗಿರುತ್ತದೆ.

ಚಿಕನ್ 65 ಮಾಡುವ ವಿಧಾನ ಬೇಕಾಗುವ ಸಾಮಾಗ್ರಿಗಳು:
ಚಿಕನ್- ಅರ್ಧ ಕೆಜಿ
ಕೊತ್ತಂಬರಿ ಪುಡಿ – 3 ಚಮಚ
ಮೊಸರು – 3 ಚಮಚ
ಹಸಿ ಮೆಣಸಿನ ಕಾಯಿ – 4
ಅಡುಗೆ ಎಣ್ಣೆ – 2 ಚಮಚ
ಕೆಂಪು ಮೆಣಸಿನ ಪುಡಿ – 1 ಚಮಚ
ಅರಿಶಿಣ ಪುಡಿ – 1/2 ಚಮಚ
ಕರಿಬೇವಿನ ಎಲೆಗಳು – 6
ಟೊಮೆಟೋ – 2(ಚಿಕ್ಕದಾಗಿ ಕತ್ತರಿಸಿಕೊಳ್ಳಿ)

ಇದನ್ನೂ ಓದಿ: ಮೊಟ್ಟೆ ಪಲ್ಯವನ್ನು ಹೀಗೂ ಮಾಡ್ಬಹುದು, ಸ್ಪೆಷಲ್ ರೆಸಿಪಿ ಟ್ರೈ ಮಾಡಿ

ಉಪ್ಪು – ರುಚಿಗೆ ತಕ್ಕಷ್ಟು
ಮೊಟ್ಟೆ – 1
ಈರುಳ್ಳಿ- 2 (ಚಿಕ್ಕದಾಗಿ ಕತ್ತರಿಸಿಕೊಳ್ಳಿ)
ಕಾರ್ನ್ ಫ್ಲೋರ್ – ಸ್ವಲ್ಪ

ಚಿಕನ್ 65 ಮಾಡುವ ವಿಧಾನ:
ಮೊದಲು ಸರಿಯಾಗಿ ಚಿಕನ್ ತೊಳೆದುಕೊಳ್ಳಿ. ಅದನ್ನು ತೊಳೆಯುವುದು ಬಹಲ ಕಷ್ಟದ ಕೆಲಸ ಎನ್ನಬಹುದು. ಚಿಕನ್ ತೊಳೆದುಕೊಂಡ ಮೇಲೆ ಅದರಲ್ಲಿ ನೀರು ಉಳಿಯದಂತೆ ಮಾಡಿ. ನಂತರ ಅರ್ಧ ಕೆಜಿ ಚಿಕನ್​ಗೆ ಕಾರ್ನ್ ಫ್ಲೋರ್ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಹೊತ್ತು ಮ್ಯಾರಿನೇಟ್ ಆಗಲು ಬಿಡಿ. ಸ್ವಲ್ಪ ಸಮಯದ ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಒಂದು ಮೊಟ್ಟೆಯನ್ನು ಸಹ ಚನ್ನಾಗಿ ಫ್ರೈ ಮಾಡಿಕೊಳ್ಳಿ.

ಬಳಿಕ ಒಂದು ಪ್ಯಾನ್‍ ತೆಗೆದುಕೊಂಡು ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಹಸಿ ಮೆಣಸಿನ ಕಾಯಿ, ಟೊಮೆಟೋ, ಚಿಕ್ಕದಾಗಿ ಕಟ್ ಮಾಡಿಕೊಂಡ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚನ್ನಾಗಿ ಹುರಿಯಿರಿ. ನಂತರ ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವಿನ ಎಲೆ ಹಾಕಿ ಫ್ರೈ ಮಾಡಿಕೊಳ್ಳಿ.

ಇದನ್ನೂ ಓದಿ: ಸಖತ್ ಸಂಡೇಗೆ ಮಟನ್ ಕೀಮಾ ರೆಸಿಪಿ ..

ಎಲ್ಲಾ ಪದಾರ್ಥಗಳನ್ನು ಫ್ರೈ ಮಾಡಿಕೊಂಡ ನಂತರ ಅದಕ್ಕೆ ಈಗಾಗಲೇ ಫ್ರೈ ಮಾಡಿದ್ದ ಚಿಕನ್ ಹಾಕಿ. ನಂತರ ಅದಕ್ಕೆ ಮೊಸರು ಹಾಕಿ 3 ನಿಮಿಷ ಮತ್ತೆ ಫ್ರೈ ಮಾಡಿ. ಫ್ರೈ ಮಾಡುವಾಗ ಎಚ್ಚರ, ಹೆಚ್ಚು ಫ್ರೈ ಸಹ ಆಗಬಾರದು. ಈಗ ಫ್ರೈ ಮಾಡಿಕೊಂಡ ಬಳಿಕ ಮೊಟ್ಟೆ ಹಾಕಿ ಮತ್ತೆ 5 ನಿಮಿಷಗಳ ಕಾಲ ಫ್ರೈ ಮಾಡಿದರೆ ಖಡಕ್ ಚಿಕನ್ 65 ಸವಿಯಲು ರೆಡಿ.
Published by:Sandhya M
First published: