ನಿಮ್ಮ ಮಗು ಅವಧಿಪೂರ್ವವಾಗಿ(Premature baby) ಜನಿಸಿದ್ದರೆ, ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಕಳೆದ ನಂತರ ಮಗುವನ್ನು ಮನೆಗೆ ಕರೆದುಕೊಂಡು ಹೋಗಲು ನೀವು ಉತ್ಸುಕರಾಗಬಹುದು, ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕದ (NICU) ಸುರಕ್ಷತೆಯಿಂದ ದೂರವಿರಲು ನೀವು ಉತ್ಸುಕರಾಗಬಹುದು. ಆದರೆ ಕಾಲ ಬದಲಾಗಿದೆ ಕೊರೊನಾ ಹೆಚ್ಚಿನ ಪರಿಣಾಮ ಬೀರುತ್ತಿದೆ. ಈ ಸಮಯದಲ್ಲಿ ಹೆಚ್ಚುವರಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಪ್ರಸವಪೂರ್ವ ಶಿಶುಗಳ ಆರೈಕೆಯು ಸಾಮಾನ್ಯ ಅವಧಿಯ ಶಿಶುಗಳ ಆರೈಕೆಗಿಂತ ಭಿನ್ನವಾಗಿರದ ಕಾರಣ ಚಿಂತಿಸಬೇಕಾಗಿಲ್ಲ. ಮಗು ಮನೆಗೆ ಹೋಗುವಷ್ಟು ಆರೋಗ್ಯವಾಗಿದೆ ಎಂದು ಖಚಿತವಾಗಿದ್ದರೆ ಮಾತ್ರ ವೈದ್ಯರು ಅಕಾಲಿಕವಾಗಿ ಜನಿಸಿದ ಮಗುವನ್ನು ಡಿಸ್ಚಾರ್ಜ್ ಮಾಡುತ್ತಾರೆ. ಹಾಗಾಗಿ ಮನೆಯಲ್ಲಿ ಸಹ ಅವಧಿಪೂರ್ವ ಮಗುವನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ನಾವಿಲ್ಲಿ ತಿಳಿಸಲಿದ್ದೇವೆ.
ಡಿಸ್ಚಾರ್ಜ್ ಮಾಡುವ ಮೊದಲು ವೈದ್ಯರು ಪರಿಶೀಲಿಸುವ ಮುಖ್ಯ ಅಂಶಗಳು
ರೇಡಿಯಂಟ್ ವಾರ್ಮರ್ ಅಥವಾ ಇನ್ಕ್ಯುಬೇಟರ್ ಇಲ್ಲದೆ ತೆರೆದ ಕೊಠಡಿಯಲ್ಲಿ ಮಗು ತನ್ನ ತಾಪಮಾನವನ್ನು ನಿರ್ವಹಿಸಬಹುದೇ?
ಮಗುವಿಗೆ ಸ್ತನ್ಯಪಾನ ಮೂಲಕ ಪೂರಕ ಟ್ಯೂಬ್ ಫೀಡ್ ಇಲ್ಲದೆ ಎಲ್ಲಾ ಆಹಾರವನ್ನು ನೀಡಬಹುದೇ?
ಮಗುವಿನ ತೂಕವನ್ನು ಸ್ಥಿರವಾಗಿ ಹೆಚ್ಚಿಸಬಹುದೇ?
ಹೆಚ್ಚಿನ ಅವಧಿಗೂ ಮೊದಲು ಜನಿಸಿದ ಶಿಶುಗಳು ತಮ್ಮ ಮೂಲ ದಿನಾಂಕದ ಮೊದಲು 3-5 ವಾರಗಳ ಮೊದಲು ಜನಿಸುವುದರಿಂದ ಅಕಾಲಿಕ ಮಗುವನ್ನು ನೋಡಿಕೊಳ್ಳುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ.
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸೂಪರ್ ಜ್ಯೂಸ್ಗಳು
ಸರಿಯಾದ ತಾಪಮಾನ
ನಿಮ್ಮ ಮಗು ಆರಾಮದಾಯಕ ಮತ್ತು ಸುರಕ್ಷಿತ ತಾಪಮಾನದಲ್ಲಿದೆ ಎಂದು ನೀವು ಪರೀಕ್ಷೆ ಮಾಡಬೇಕು. ಇದನ್ನು ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಹೆಚ್ಚು ಹೊದಿಕೆಗಳನ್ನು ಅಂದರೆ ಮಗುವನ್ನು ಬಟ್ಟೆಯಲ್ಲಿ ಮುಚ್ಚುವುದು ಅಥವಾ ಅಗತ್ಯವಿದ್ದಾಗ ಅವುಗಳನ್ನು ತೆಗೆದುಹಾಕುವುದು.
ಹಾಸಿಗೆಯನ್ನು ಹೊದಿಕೆಗಳೊಂದಿಗೆ ಓವರ್ಲೋಡ್ ಮಾಡಬೇಡಿ. ಏಕೆಂದರೆ ಅದು ಮಗುವಿಗೆ ತುಂಬಾ ಹೆಚ್ಚಿನ ತಾಪಮಾನವನ್ನು ಹೆಚ್ಚಿಸುತ್ತದೆ. ಡಿಜಿಟಲ್ ಥರ್ಮಾಮೀಟರ್ ಅನ್ನು ಖರೀದಿಸಿ ಮತ್ತು ಮಗುವಿನ ತಾಪಮಾನವನ್ನು 36.5-37.4 C (97.7-99.4 F) ನಡುವೆ ಇರುವಂತೆ ನೋಡಿಕೊಳ್ಳಿ. ಮಲಗಲು ಸೂಕ್ತವಾದ ಕೋಣೆಯ ಉಷ್ಣತೆಯು 20-24 ಸಿ ಎಂಬುದನ್ನ ನೆನಪಿನಲ್ಲಿಡಿ.
ಸರಿಯಾಗಿ ನಿದ್ರೆ ಮಾಡುವಂತೆ ನೋಡಿಕೊಳ್ಳಿ
ಶಾಂತವಾದ ಕೋಣೆಯಲ್ಲಿ ತಂಪಾದ ತಾಪಮಾನ ಮತ್ತು ಮಂದ ಬೆಳಕಿನಂತಹ ಸರಿಯಾದ ವಾತಾವರಣವನ್ನು ನೀಡುವ ಮೂಲಕ ನಿಮ್ಮ ಮಗು ಉತ್ತಮವಾಗಿ ನಿದ್ರೆ ಮಾಡುವಂತೆ ನೋಡಿಕೊಳ್ಳಿ. ಪ್ರಸವಪೂರ್ವ ಶಿಶುಗಳು ಸಹ ಟರ್ಮ್ ಬೇಬಿಗಳಿಗಿಂತ ರಾತ್ರಿಯಲ್ಲಿ ಹೆಚ್ಚಾಗಿ ಹಸಿವನ್ನ ಅನುಭವಿಸುತ್ತಾರೆ. ಆಗ ಮಗುವಿಗೆ ಹೆಚ್ಚಾಗಿ ಆಹಾರವನ್ನು ನೀಡಬೇಕಾಗುತ್ತದೆ.
ಸುರಕ್ಷಿತವಾಗಿ ಸ್ನಾನ ಮಾಡಿಸಿ
ನೀರು ಹೆಚ್ಚು ಬಿಸಿಯಾಗಿರಬಾರದು, ಬದಲಿಗೆ ಬೆಚ್ಚಗಿರಬೇಕು. ಸ್ನಾನದ ನೀರಿನ ತಾಪಮಾನ 100 F (38 C) ಇರಬೇಕು• ಮಗುವಿನ ಕೂದಲನ್ನು ಸರಳ ನೀರಿನಿಂದ ಮಾತ್ರ ತೊಳೆಯಿರಿ.ಶಾಂಪೂ ಹಾಕಬೇಡಿ. ಸ್ನಾನದ ನೀರಿಗೆ ಯಾವುದೇ ವಸ್ತುಗಳನ್ನು ಸೇರಿಸಬೇಡಿ. ಮೊದಲ ತಿಂಗಳಲ್ಲಿ ನಿಮ್ಮ ಮಗುವಿನ ಚರ್ಮಕ್ಕೆ ಕೇವಲ ನೀರು ಉತ್ತಮ. ಮಗು 2.5 ಕೆಜಿ ತಲುಪುವವರೆಗೆ ಸ್ಪಾಂಜ್ ಬಳಸಿ ಸ್ನಾನವನ್ನು ನೀಡಿ. ನಿಮ್ಮ ಮಗುವಿಗೆ ಕನಿಷ್ಠ ಒಂದು ತಿಂಗಳ ವಯಸ್ಸಾಗುವವರೆಗೆ ಯಾವುದೇ ಲೋಷನ್ ಅಥವಾ ತೈಲಗಳನ್ನು ಬಳಸಬೇಡಿ.
ನಿಮಗೆ ಸಾಧ್ಯವಾದಷ್ಟು ಕಾಲ ಸ್ತನ್ಯಪಾನ ಮಾಡಿಸಿ:
ಇದನ್ನೂ ಓದಿ: ಎರೆಡನೇ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಹಾಗಾದ್ರೆ ಈ ಅಂಶಗಳು ನಿಮಗೆ ತಿಳಿದಿರಲಿ
ಹಾಲುಣಿಸುವ ಶಿಶುಗಳು ಫಾರ್ಮುಲಾ-ಫೀಡ್ ಶಿಶುಗಳಿಗಿಂತ ಹೆಚ್ಚು ಸುಲಭವಾಗಿ ನಿದ್ರೆಯಿಂದ ಎಚ್ಚರಗೊಳ್ಳುತ್ತವೆ, ಇದು ಎದೆಹಾಲುಣಿಸುವ ಶಿಶುಗಳಿಗೆ SIDS ನಿಂದ ಅಪಾಯ ಉಂಟಾಗುವ ಸಾಧ್ಯತೆ ಕಡಿಮೆ ಮಾಡುತ್ತದೆ. ನೀವು ಹಾಲುಣಿಸುವ ವೇಳೆ ಧೂಮಪಾನ ಮಾಡಬೇಡಿ ಅಥವಾ ಮದ್ಯಪಾನ ಮಾಡಬೇಡಿ ಇದು SIDS ಅಪಾಯವನ್ನು ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ