Beauty Tips: ಮೊಡವೆಗಳಿಂದ ಮುಕ್ತಿ ಪಡೆಯಲು ನಿಮ್ಮ ಅಜ್ಜಿಯ ಮಾತು ಕೇಳಿ

Beauty Hacks of all Indian Grandmothers:ತ್ವಚೆಯ ಆರೈಕೆಯನ್ನು ಮೊದಲು ಮೂಲಭೂತ ಕೆಲಸಗಳಿಂದ ಆರಂಭಿಸಬೇಕು. ಆರೋಗ್ಯಕರ ಮತ್ತು ಸ್ಪಷ್ಟವಾದ ಚರ್ಮವನ್ನು ಪಡೆಯಲು ನಿಮ್ಮ ಚರ್ಮದ ಮೇಲ್ಮೈಯಲ್ಲಿ ಸಂಗ್ರಹವಾಗಿರುವ ಎಲ್ಲ ಕೊಳೆಯನ್ನು ನೀವು ತೊಳೆಯಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ವರ್ಷದಂತೆ, ಈ ಹೊಸ ವರ್ಷವೂ (New year) ಹಲವಾರು ಭರವಸೆ ಮತ್ತು ಸಂಕಲ್ಪದ ಜೊತೆ ಬಂದಿದೆ. ನಾವು ತೂಕ ಇಳಿಸುವುದರಿಂದ (Weight loss) ಹಿಡಿದು ಚರ್ಮದ ಆರೈಕೆಯವರೆಗೆ (Skin care) ಹಲವಾರು ಸಂಕಲ್ಪಗಳನ್ನು ನಾವು ಮಾಡುತ್ತೇವೆ. ಚರ್ಮದ ಆರೈಕೆ ಮಾಡುವುದು ಈ ವರ್ಷ ನಿಜಕ್ಕೂ ಬಹಳ ಮುಖ್ಯ. ನಾವು ನಮ್ಮ ತ್ವಚೆಯ ಅಂದವನ್ನು ಕಾಪಾಡಲು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತೆವೆ. ಆದರೆ ಹಲವಾರು ವರ್ಷಗಳಿಂದ ಅಜ್ಜಿಯ ಸಲಹೆಗಳು ಮಾತ್ರ ಹೆಚ್ಚು ಪ್ರಯೋಜನಕಾರಿ ಎಂಬುದನ್ನ ನಾವು ಮರೆಯಬಾರದು. ಹೌದು, ಅಜ್ಜಿಯ  ಸರಳ ಮತ್ತು ಸುಲಭವಾದ ಸಲಹೆಗಳನ್ನು ಪ್ರತಿಯೊಬ್ಬರು ಸುಲಭವಾಗಿ ಅನುಸರಿಸಬಹುದು. 

ನಿಮ್ಮ ಮುಖವನ್ನು ಎರಡು ಬಾರಿ ತೊಳೆಯಿರಿ

ತ್ವಚೆಯ ಆರೈಕೆಯನ್ನು ಮೊದಲು ಮೂಲಭೂತ ಕೆಲಸಗಳಿಂದ ಆರಂಭಿಸಬೇಕು. ಆರೋಗ್ಯಕರ ಮತ್ತು ಸ್ಪಷ್ಟವಾದ ಚರ್ಮವನ್ನು ಪಡೆಯಲು ನಿಮ್ಮ ಚರ್ಮದ ಮೇಲ್ಮೈಯಲ್ಲಿ ಸಂಗ್ರಹವಾಗಿರುವ ಎಲ್ಲ ಕೊಳೆಯನ್ನು ನೀವು ತೊಳೆಯಬೇಕು. ಸ್ವಚ್ಛವಾಗಿರದ ಚರ್ಮವು ನಿಮ್ಮ ರಂಧ್ರಗಳು ಮುಚ್ಚಲು ಕಾರಣವಾಗುತ್ತದೆ ಮತ್ತು ಅದನ್ನು ಮಂದವಾಗಿ ಕಾಣುವಂತೆ ಮಾಡುತ್ತದೆ.

ಹಾಗೆಯೇ ಇದು ಮೊಡವೆ ಮತ್ತು ಅಲರ್ಜಿಯಂತಹ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತದೆ. ಇದು ಹಾಗೆಯೇ ಇಲ್ಲದೇ ಇರಬಹುದು. ನೀವು ಮಾಡುವ ಕೆಲಸದ ಪ್ರಕಾರ ಮತ್ತು ನೀವು ಎದುರಿಸುತ್ತಿರುವ ಹವಾಮಾನದ ಅನುಗುಣವಾಗಿ ನೀವು ನಿಮ್ಮ ಮುಖವನ್ನು ಎಷ್ಟು ಬಾರಿ ತೊಳೆಯಬೇಕು ಎಂಬುದನ್ನ ನಿರ್ಧರಿಸಿ. ಏನೆ ಆದರು ದಿನ್ಕಕೆ 2 ಬಾರಿ ಮಿಸ್ ಮಾಡದೇ ಮುಖವನ್ನು ತೊಳೆಯಿರಿ.

ಇದನ್ನೂ ಓದಿ: ಚಳಿಗಾಲದಲ್ಲಿ ಒಣ ಚರ್ಮಕ್ಕೆ ಇದೇ ಪರಿಹಾರವಂತೆ

ನೈಸರ್ಗಿಕ ವಸ್ತುಗಳನ್ನು ಬಳಸಿ

ಅಜ್ಜಿಯರು ತಮ್ಮ ಕಾಲದಲ್ಲಿ ಇಂದು ನಾವು ಹೊಂದಿರುವ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತಿರಲಿಲ್ಲ, ಆ ಕಾಲದಲ್ಲಿ ಇವೆಲ್ಲಾ ಇರಲಿಲ್ಲ. ಹಾಗಾಗಿ ಆ ಸಮಯದಲ್ಲಿ ಅವರ ತ್ವಚೆ ಅಷ್ಟು ಚನ್ನಾಗಿದ್ದವು. ನಾವು ಸಹ ಈಗ ಆ ರಾಸಾಯನಿಕ ವಸ್ತುಗಳ ಬದಲಾಗಿ ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳನ್ನು ಬಳಸಿ. ಮನೆಯಲ್ಲಿಯೇ ಸಿಗುವ ಅರಿಶಿನ, ಬೇವಿನ ಸೊಪ್ಪು, ಕಡಲೇ ಹಿಟ್ಟು ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂಗಡಿಗಳಲ್ಲಿ ಸಿಗುವ ಉತ್ಪನ್ನಗಳಲ್ಲಿ ರಾಸಾಯನಿಕ ವಸ್ತುಗಳು ಹೆಚ್ಚಿರುತ್ತದೆ. ಅದು ಮುಂದಿನ ದಿನಗಳಲ್ಲಿ ಹಾನಿ ಉಂಟು ಮಾಡುತ್ತದೆ.

ಕಡಲೇ ಹಿಟ್ಟು ಮತ್ತು ಮೊಸರಿನ ಫೇಸ್​ ಪ್ಯಾಕ್ 

2 ಟೇಬಲ್ ಸ್ಪೂನ್​ ಮೊಸರು ಮತ್ತು 1 ಟೇಬಲ್​ ಸ್ಪೂನ್​ ಜೇನುತುಪ್ಪದ ಜೊತೆಗೆ ಸ್ವಲ್ಪ ಕಡಲೇ ಹಿಟ್ಟು ಸೇರಿಸಿ ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ನಿಮ್ಮ ಮುಖದ ಮೇಲೆ ಸಮವಾಗಿ ಹಚ್ಚಿ. ಅದು ಒಣಗಿದ ನಂತರ, ನಿಮ್ಮ ಮುಖದಿಂದ ಅದನ್ನು ತೆಗೆಯುವ ಮುನ್ನ ಸ್ಕ್ರಬ್  ಮಾಡಿ, ಸ್ಕ್ರಬ್​ ಮಾಡಲು ಸ್ವಲ್ಪ ರೋಸ್ ವಾಟರ್ ಬಳಸಿ. ಇದು ತುಂಬಾ ಸುಲಭವಾಗಿದ್ದು, ಸ್ನಾನಕ್ಕೆ ನಿಮಿಷಗಳ ಮೊದಲು ನೀವು ಅದನ್ನು ಸುಲಭವಾಗಿ ತಯಾರಿಸಬಹುದು.

ಆರೋಗ್ಯಕರ ಆಹಾರ ತಿನ್ನಿ

ನೀವು ತಿನ್ನುವ ಆಹಾರ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಸೇವಿಸುವ ಕೆಫೀನ್ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ನೀವು ಏನು ತಿನ್ನುತ್ತೀರೋ ಅದು ನಿಮ್ಮ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ, ಆರೋಗ್ಯಕರ ಆಹಾರವನ್ನು ತಿನ್ನುವುದು ಮತ್ತು ಹಣ್ಣುಗಳನ್ನು ಹೆಚ್ಚು ಸೇವನೆ ಮಾಡುವುದು ಮುಖ್ಯ.

ಇದನ್ನೂ ಓದಿ:ಚಳಿಗಾಲದಲ್ಲಿ ಕೆಮ್ಮು ಕಾಟಕೊಡ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಇದು ನಿಮ್ಮ ಚರ್ಮಕ್ಕೆ ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯಿರಿಒಂದು ವಿಷಯವೆಂದರೆ ಹವಾಮಾನವನ್ನು ಲೆಕ್ಕಿಸದೆ ಪ್ರತಿದಿನ 3 ಲೀಟರ್ ನೀರು ಕುಡಿಯುವುದು. ಕುಡಿಯುವ ನೀರು ನಿಮ್ಮ ಚರ್ಮದ ಮೇಲ್ಮೈಯಿಂದ ಎಲ್ಲಾ ಮೊಡವೆಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ನೀರು ನಿಮ್ಮ ಚರ್ಮಕ್ಕೆ ಕ್ರಾಂತಿಕಾರಕ ಬದಲಾವಣೆಯನ್ನು ತರುತ್ತದೆ.
Published by:Sandhya M
First published: