ನಮ್ಮ ದೇಹದ (Body) ಪ್ರಮುಖ (Important) ಅಂಗಗಳಲ್ಲಿ (Parts) ಕಣ್ಣುಗಳು (Eyes) ಪ್ರಮುಖವಾಗಿವೆ. ಕಣ್ಣುಗಳು ನಾವು ಎಲ್ಲವನ್ನೂ ನೋಡಲು, ತಿಳಿಯಲು ಸಹಾಯ (Help) ಮಾಡುತ್ತದೆ. ದೇಹದ ಪ್ರಮುಖ ಭಾಗಗಳಲ್ಲಿ ಒಂದಾಗಿರುವ ಕಣ್ಣುಗಳು ಇಲ್ಲದೇ ಬದುಕುವುದು ಸಾಕಷ್ಟು ಆಲೋಚನೆಗಳನ್ನು ಹುಟ್ಟು ಹಾಕುತ್ತದೆ. ಕಣ್ಣುಗಳು ತುಂಬಾ ಸೂಕ್ಷ್ಮವಾಗಿವೆ. ಹಾಗಾಗಿ ಕಣ್ಣುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಕಣ್ಣುಗಳಿಗೆ ಸಂಬಂಧಿಸಿದಂತೆ ಸ್ವಲ್ಪ ಸಮಸ್ಯೆಯಿದ್ದರೂ ಸಹ ಅದನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಲು ಹೋಗಬೇಡಿ. ದೀರ್ಘ ಕಾಲದವರೆಗೆ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ನಿರ್ಲಕ್ಷ್ಯ ಮಾಡುವುದು ದೃಷ್ಟಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅಥವಾ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.
ನಿಮ್ಮ ಕಣ್ಣುಗಳ ಬಗ್ಗೆ ಇರಲಿ ಕಾಳಜಿ
ನಿಮಗೆ ಕಣ್ಣಿನ ಕಾಯಿಲೆ ಏನಾದ್ರೂ ಇದ್ರೆ, ನೀವು ಕೆಲಸ ಮಾಡುವಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಉದಾಹರಣೆಗೆ ನಿಮಗೆ ಡ್ರೈವಿಂಗ್, ಓದುವುದು ಮತ್ತು ಟಿವಿ ನೋಡುವುದು ಹೀಗೆ ಅನೇಕ ವಿಷಯಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಮತ್ತು ಅವು ಚೆನ್ನಾಗಿವೆ ಎಂದರೆ ಎಲ್ಲವೂ ತುಂಬಾ ಸೊಗಸಾಗಿರುತ್ತದೆ.
ಆದರೆ ಕೆಲವೊಮ್ಮೆ ನಮಗೆ ಗೊತ್ತಿಲ್ಲದಂತೆ ಕಣ್ಣುಗಳು ಹಾಳಾಗುತ್ತಿರುತ್ತವೆ. ಆದರೆ ಇದು ನಮಗೆ ಗೊತ್ತೇ ಆಗುವುದಿಲ್ಲ. ಇದು ಕಣ್ಣುಗಳಿಗೆ ಹಾನಿಕಾರಕ ಆಗಿರುತ್ತದೆ. ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಇಲ್ಲಿ ತಿಳಿಸಲಾದ ಕೆಲವು ಪರಿಹಾರಗಳನ್ನು ಪ್ರಯತ್ನಿಸಿ. ಈ ಕ್ರಮಗಳು ಕಣ್ಣಿನ ಆರೈಕೆಗೆ ಸಹಕಾರಿ. ಇದು ವೈದ್ಯರ ಉತ್ತಮ ಆಯ್ಕೆ ಮತ್ತು ಚಿಕಿತ್ಸಾ ಆಯ್ಕೆ ಸಲಹೆ ಹೊಂದಿದೆ.
ಇದನ್ನೂ ಓದಿ: ಚರ್ಮದ ಟ್ಯಾಗ್ ಮತ್ತು ನರಹುಲಿ ಸಮಸ್ಯೆ ನಿವಾರಣೆಗೆ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ
ನಿಯಮಿತ ಕಣ್ಣಿನ ಪರೀಕ್ಷೆ ಮಾಡಿಸಿ
ನಿಮ್ಮ ಕಣ್ಣುಗಳು ಸಂಪೂರ್ಣವಾಗಿ ಚೆನ್ನಾಗಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಣ್ಣಿನ ವೈದ್ಯರ ಬಳಿ ಮಾಹಿತಿ ಪಡೆಯಿರಿ. ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಕಣ್ಣಿನ ತಜ್ಞರಿಂದ ನಿಯಮಿತವಾಗಿ ತಪಾಸಣೆ ಮಾಡಿಸಿ.
ಉತ್ತಮ ಕಣ್ಣಿನ ವೈದ್ಯರ ಸಲಹೆ ಪಡೆಯಿರಿ
ಚಿಕಿತ್ಸೆ ಮತ್ತು ಆರೈಕೆಗಾಗಿ ಉತ್ತಮ ಕಣ್ಣಿನ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ದೇಶದಲ್ಲಿ ಅನೇಕ ನುರಿತ ಮತ್ತು ಅನುಭವಿ ನೇತ್ರಶಾಸ್ತ್ರಜ್ಞರಿದ್ದಾರೆ. ಜಗತ್ತಿನಲ್ಲಿಯೇ ಅತ್ಯಾಧುನಿಕ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆ ಭಾರತದಲ್ಲಿ ಲಭ್ಯ ಇದೆ.
ಕಣ್ಣುಗಳಿಗೆ ಆಮ್ಲಾ
ಕಣ್ಣುಗಳಿಗೆ ಆಮ್ಲಾ ಒಳ್ಳೆಯದು. ನಿಮಗೆ ಕಣ್ಣಿನ ಸಮಸ್ಯೆಗಳಿದ್ದರೆ, ನಿಮ್ಮ ಆರೋಗ್ಯಕ್ಕೆ ಆಮ್ಲಾ ಉತ್ತಮ ಅಂಶ. ಪ್ರತಿದಿನ ಬೆಳಿಗ್ಗೆ ಒಂದು ಚಮಚ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ಸಮಸ್ಯೆ ಸುಧಾರಣೆ ಆಗುತ್ತದೆ.
ನೆನೆಸಿದ ಬಾದಾಮಿ, ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣು
ನೆನೆಸಿದ ಬಾದಾಮಿ, ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣುಗಳ ಸೇವನೆ ಮಾಡಿ. ಈ ಮನೆಮದ್ದನ್ನು ಪ್ರಯತ್ನಿಸಬೇಕು. ನಿಮಗೆ 8 ಬಾದಾಮಿಗಳು ಬೇಕು. ಇದನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ರುಬ್ಬಿ ಪೇಸ್ಟ್ ಮಾಡಿ. ಈಗ ಅದನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.
ಇದು ನಿಮ್ಮ ಎಲ್ಲಾ ಕಣ್ಣಿನ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿ ಮತ್ತು ಅಂಜೂರದ ಹಣ್ಣುಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. 15 ಒಣದ್ರಾಕ್ಷಿ ಮತ್ತು 2 ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ದೇಸಿ ತುಪ್ಪದ ಬಳಕೆ
ಆಯುರ್ವೇದದ ಪ್ರಕಾರ, ಮನೆಯಲ್ಲಿ ತಯಾರಿಸಿದ ದೇಸಿ ತುಪ್ಪವನ್ನು ಬಳಸಿ ನಿಮ್ಮ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು. ಈ ತುಪ್ಪವು ನಿಮ್ಮ ದೃಷ್ಟಿ ಸುಧಾರಿಸುವ ಜೀವಸತ್ವ ಮತ್ತು ಖನಿಜಗಳಿಂದ ತುಂಬಿದೆ.
ಇದನ್ನೂ ಓದಿ: ಈ ಕೆಲವು ಸಸ್ಯಗಳಲ್ಲಿವೆ ಸೂಪರ್ ಪವರ್! ತೂಕ ಇಳಿಸಿ ಆರೋಗ್ಯ ರಕ್ಷಿಸುತ್ತೆ
ದೃಷ್ಟಿ ಹೆಚ್ಚಿಸಲು ತುಪ್ಪವನ್ನು ನೆತ್ತಿಯ ಮೇಲೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ದೇಸಿ ತುಪ್ಪವು ಹೃದಯ ಸಮಸ್ಯೆ, ಕೂದಲಿನ ಸಮಸ್ಯೆ ಮತ್ತು ಉರಿಯೂತದ ಚಿಕಿತ್ಸೆಗೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ