Pickle: ನೀವು ಎಂದಾದ್ರೂ ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ

ಕಾರ್ಬೊನೇಟೆಡ್ ಪಾನೀಯವು ಸೌತೆಕಾಯಿಯ ತಾಜಾತನ ಮತ್ತು ನಿಂಬೆ, ಮೆಣಸಿನಕಾಯಿ, ಉಪ್ಪು ಮತ್ತು ಸಕ್ಕರೆಯಂತಹ ಇತರ ಪದಾರ್ಥಗಳೊಂದಿಗೆ ಸೇರಿ ಹೆಚ್ಚು ಅಗತ್ಯವಿರುವ ಸುವಾಸನೆಯ ಪಂಚ್ ಅನ್ನು ನೀಡುತ್ತದೆ. ಈ ಪಾಕವಿಧಾನವು ಮೊದಲು ಡೌಯಿನ್ ಎಂಬ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ನಲ್ಲಿ ಕಾಣಿಸಿಕೊಂಡಿತು ಮತ್ತು ನಂತರ ಅದು ಅಲ್ಲಿಯೇ ವೈರಲ್ ಆಯಿತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ಈಗಂತೂ ತುಂಬಾ ಜನರು ಈ ಆಹಾರ (food) ಪದಾರ್ಥಗಳೊಂದಿಗೆ ಅನೇಕ ರೀತಿಯ ಹೊಸ ಹೊಸ ಪ್ರಯೋಗಗಳನ್ನು (Experiment) ಮಾಡಲು ಇಷ್ಟ ಪಡುತ್ತಿದ್ದಾರೆ. ಜನರು (People) ಒಂದು ನಿರ್ದಿಷ್ಟವಾದ ಪಾಕ ಪದ್ದತಿಯನ್ನು ಬಿಟ್ಟು, ಬೇರೆ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಅಡುಗೆಗಳನ್ನು (Cooking) ಮಾಡಲು ಬಯಸುವುದರಿಂದಲೇ ಹೊಸ ಹೊಸ ರೀತಿಯ ಪಾಕವಿಧಾನಗಳು (Recipe) ಮತ್ತು ಅಡುಗೆಗಳು ತಯಾರಾಗುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರತಿ ವಾರ ಇಂಟರ್ನೆಟ್ ನಲ್ಲಿ (Internet) ಒಂದಲ್ಲ ಒಂದು ಈ ರೀತಿಯ ಮಿಕ್ಸ್ (Mix) ಪದಾರ್ಥಗಳನ್ನು ಸೇರಿಸಿ ಅಡುಗೆಗಳನ್ನು ಮಾಡುವುದನ್ನು ನಾವು ನೋಡುತ್ತಿದ್ದೇವೆ.

ವಿಚಿತ್ರವಾದ ಅಡುಗೆ ರೆಸಿಪಿಗಳು
ಮ್ಯಾಗಿಯಲ್ಲಿ ಫ್ಯಾಂಟಾವನ್ನು ಸುರಿಯುವುದರಿಂದ ಹಿಡಿದು, ಮಿಠಾಯಿ ಮೊಮೊಸ್ ಅಥವಾ ಲಡ್ಡೂ ಶೇಕ್ ನಂತಹ ಅನೇಕ ಅಸಾಮಾನ್ಯ ಅಡುಗೆಗಳನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ, ಈ ವಿಲಕ್ಷಣ ಆಹಾರ ಪ್ರವೃತ್ತಿಗಳನ್ನು ಜನಸಾಮಾನ್ಯರು ಇಷ್ಟಪಡುವುದಿಲ್ಲ. ಆದರೆ ಕೆಲವೊಮ್ಮೆ, ಕೆಲವು ಉತ್ತಮ ಸಮ್ಮಿಲನ ಭಕ್ಷ್ಯಗಳು ಸಹ ನಮ್ಮ ಹೃದಯವನ್ನು ಗೆಲ್ಲುತ್ತವೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿರುವುದು ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿ
ಹೌದು.. ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿಯನ್ನು ತಯಾರಿಸಲು ಸೌತೆಕಾಯಿ ಮತ್ತು ಇತರ ಹಲವಾರು ಪದಾರ್ಥಗಳೊಂದಿಗೆ ಸ್ಪ್ರೈಟ್ ಅನ್ನು ಸಹ ಬಳಸಲಾಗುತ್ತಿದೆ. ಮೂಲತಃ, ಕಾರ್ಬೊನೇಟೆಡ್ ಪಾನೀಯವು ಸೌತೆಕಾಯಿಯ ತಾಜಾತನ ಮತ್ತು ನಿಂಬೆ, ಮೆಣಸಿನಕಾಯಿ, ಉಪ್ಪು ಮತ್ತು ಸಕ್ಕರೆಯಂತಹ ಇತರ ಪದಾರ್ಥಗಳೊಂದಿಗೆ ಸೇರಿ ಹೆಚ್ಚು ಅಗತ್ಯವಿರುವ ಸುವಾಸನೆಯ ಪಂಚ್ ಅನ್ನು ನೀಡುತ್ತದೆ. ಈ ಪಾಕವಿಧಾನವು ಮೊದಲು ಡೌಯಿನ್ ಎಂಬ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ನಲ್ಲಿ ಕಾಣಿಸಿಕೊಂಡಿತು ಮತ್ತು ನಂತರ ಅದು ಅಲ್ಲಿಯೇ ವೈರಲ್ ಆಯಿತು.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಫಟಾಫಟ್ ಅಂತ ಮಾಡಿ ಪನೀರ್ ಅವಲಕ್ಕಿ

ಸೆಲೆಬ್ರಿಟಿ ಬಾಣಸಿಗನಾದ ಶರಣ್ ಗೋಯಿಲಾ ಇದನ್ನು ತಯಾರಿಸಿಕೊಂಡು ಅದರ ರುಚಿಯನ್ನು ಸ್ವಲ್ಪಮಟ್ಟಿಗೆ ಇಷ್ಟಪಟ್ಟಿದ್ದು ಅವರು ಹಂಚಿಕೊಂಡ ವಿಡಿಯೋದಿಂದ ನಮಗೆ ತಿಳಿಯುತ್ತದೆ. ಅವರು ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಶೀರ್ಷಿಕೆಗಾಗಿ, ಅವರು "ಸೂಪರ್ ವೈರಲ್ ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿ! ಇದು ಇಷ್ಟೊಂದು ಚೆನ್ನಾಗಿರುತ್ತದೆ ಅಂತ ನಂಬಲು ಸಾಧ್ಯವಿಲ್ಲ. ಧನ್ಯವಾದಗಳು ಈ ಹೊಸ ಪಾಕವಿಧಾನದ ವಿಡಿಯೋ ಹಂಚಿಕೊಂಡಿದಕ್ಕೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ, ನೀವು ಒಂದು ಅಭಿಪ್ರಾಯಕ್ಕೆ ಬರುವ ಮುಂಚೆ ಒಮ್ಮೆ ಈ ಪಾಕವಿಧಾನವನ್ನು ಟ್ರೈ ಮಾಡಿರಿ.

ಈ ಖಾದ್ಯವನ್ನು ತಯಾರಿಸಲು ನಿಮಗೆ ಈ ಕೆಳಗಿನ ಪದಾರ್ಥಗಳು ಬೇಕಾಗುತ್ತವೆ:

 1. ಸೌತೆಕಾಯಿ

 2. ನಿಂಬೆ ಹೋಳುಗಳು (3-4 ತುಂಡುಗಳು)

 3. ಸಕ್ಕರೆ (1.5 ಟೇಬಲ್ ಸ್ಪೂನ್)

 4.  ಉಪ್ಪು (1.5 ಟೇಬಲ್ ಸ್ಪೂನ್)

 5. ವಿನೆಗರ್ - 2 ಟೇಬಲ್ ಸ್ಪೂನ್ 

 6. ಸ್ಪ್ರೈಟ್ - 200 ಮಿಲಿ ಲೀಟರ್

ವೈರಲ್ ಸ್ಪ್ರೈಟ್ ಸೌತೆಕಾಯಿ ಉಪ್ಪಿನಕಾಯಿಯನ್ನು ತಯಾರಿಸುವುದು ಹೇಗೆ?

 •  ಇದನ್ನು ತಯಾರಿಸಲು ಮೊದಲು ನೀವು ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಅದನ್ನು ತುಂಬಾ ತೆಳುವಾದ ಮತ್ತು ಉದ್ದವಾದ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿರಿ. ಸೌತೆಕಾಯಿಯ ಸಿಪ್ಪೆ ಸುಲಿಯುವ ಅಗತ್ಯವಿಲ್ಲ. ನೀವು ಕತ್ತರಿಸಿದ ಪಟ್ಟಿಗಳು ತೆಳುವಾಗಿವೆ ಎಂದು ಖಚಿತಪಡಿಸಿಕೊಳ್ಳಿ.


ಇದನ್ನೂ ಓದಿ: Sugarcane Juice Benefits: ಮಧುಮೇಹಿಗಳು ಕಬ್ಬಿನ ಹಾಲು ಕುಡಿಯಬಹುದೇ? ಇಲ್ಲಿದೆ ನೋಡಿ ಮಾಹಿತಿ

 • ಈ ಎಲ್ಲಾ ಪಟ್ಟಿಗಳನ್ನು ಸಂಗ್ರಹಿಸಿ ಮತ್ತು ವಾಸ್ತವವಾಗಿ, ಅವುಗಳನ್ನು ಜೋಡಿಸಿ. ಪಟ್ಟಿಗಳನ್ನು ಒಂದರ ಮೇಲೊಂದರಂತೆ ಇರಿಸಿ, ಅವುಗಳನ್ನು ಮಡಚಿ ಗಾಜಿನ ಪಾತ್ರೆಯಲ್ಲಿ ಹಾಕಿ.

 • ಈಗ, ನಿಂಬೆ ಹೋಳುಗಳು, ಕತ್ತರಿಸಿದ ಕೆಂಪು ಮೆಣಸಿನಕಾಯಿ, ಸಕ್ಕರೆ, ಉಪ್ಪು, ವಿನೆಗರ್ ಮತ್ತು ಇತರ ಮುಖ್ಯ ಪದಾರ್ಥವಾದ ಸ್ಪ್ರೈಟ್ ಅನ್ನು ಅದಕ್ಕೆ ಸೇರಿಸಿ.

 • ಈಗ, ಕಂಟೇನರ್ ಅನ್ನು ಮುಚ್ಚಿ ಮತ್ತು ಸುಮಾರು ಎರಡು ಗಂಟೆಗಳ ಕಾಲ ಹಾಗೆ ಬಿಡಿ. ನಂತರ ತೆಗೆದು ತಿನ್ನಿರಿ.

Published by:Ashwini Prabhu
First published: