PAN Card Lost: ಕಳೆದುಹೋದ ಪ್ಯಾನ್​ಕಾರ್ಡ್​ನ್ನು ಆನ್​ಲೈನ್​ನಲ್ಲೇ ಡೌನ್ಲೋಡ್ ಮಾಡಿ ಪಡೆಯಬಹುದು !

PAN card Lost: ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿ ಅದರ ನಂಬರ್ ಕೂಡಾ ನಿಮಗೆ ನೆನಪಿಲ್ಲದೇ ಹೋದರೂ ಚಿಂತೆಯಿಲ್ಲ. ಇದರಲ್ಲಿ ನಿಮ್ಮ ಪ್ಯಾನ್​ ಕಾರ್ಡ್​ನ ಎಲೆಕ್ಟ್ರಾನಿಕ್ ರೂಪವನ್ನು ಪಡೆಯಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    PAN Card Lost: ಈಗಂತೂ ಒಂದು ಸಣ್ಣ ಕೆಲಸಕ್ಕೂ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಇಲ್ಲದಿದ್ದರೆ ಆಗುವುದೇ ಇಲ್ಲ ಎನ್ನುವಂಥಾ ಪರಿಸ್ಥಿತಿ ಇದೆ. ಬಸ್, ರೈಲು, ವಿಮಾನದ ಟಿಕೆಟ್ ಇರ್ಲಿ ಅಥವಾ ಬ್ಯಾಂಕಿಂಗ್ ಕೆಲಸಗಳಿರಲಿ ಈ ದಾಖಲಾತಿಗಳೆಲ್ಲಾ ಕಡ್ಡಾಯವೇ. ಸಾಲದ್ದಕ್ಕೆ ಈಗಂತೂ ಕೊರೊನಾ ಲಸಿಕೆ ಪಡೆಯೋಕೂ ಈ ಗುರುತಿನ ಚೀಟಿಗಳನ್ನು ಕೇಳುತ್ತಾರೆ. ಹಾಗಾಗಿ ಇವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಒಂದು ವೇಳೆ ಯಾವುದಾದರೂ ಒಂದು ಐಡಿ ಕಳೆದು ಹೋದರೂ ಅದನ್ನು ಮರಳಿ ಪಡೆಯೋಕೆ ಹರಸಾಹಸ ಪಡಬೇಕಾಗುತ್ತದೆ. ಆದರೆ ಕೆಲವು ಪ್ರಮುಖ ದಾಖಲೆಗಳನ್ನು ಪಡೆಯಲು ಸುಲಭ ಮಾರ್ಗಗಳು ಇವೆ, ಅವುಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ, ಅಷ್ಟೇ.

    ಆದಾಯ ತೆರಿಗೆ ಪಾವತಿಸುವಾಗ ನಿಮ್ಮ ದಾಖಲೆಗಳೆಲ್ಲಾ ಸರಿಯಾಗಿರುವುದು ಬಹಳ ಮುಖ್ಯ. ಯಾವುದೋ ಅಜಾಗರೂಕತೆಯಿಂದಲೋ ಅಥವಾ ಕಣ್ತಪ್ಪಿನಿಂದಲೋ ನಮ್ಮ ಬಹಳ ಮುಖ್ಯ ದಾಖಲೆಗಳು ಕಳೆದುಹೋಗಿರಬಹುದು. ಅಥವಾ ನಾವೇ ಎಲ್ಲೋ ಇಟ್ಟು ಮರೆತುಬಿಟ್ಟಿರಬಹುದು. ಹೀಗಾದಾಗಲೇ ಇವು ಬಹಳ ಅರ್ಜೆಂಟಾಗಿ ಬೇರೆಲ್ಲೋ ಬೇಕಾಗಿರುತ್ತದೆ, ಆಗಲೇ ಪೀಕಲಾಟ ಶುರುವಾಗುವುದು. ಇವುಗಳನ್ನು ಹೊಸದಾಗಿ ಪಡೆಯುವುದು ನಿಜಕ್ಕೂ ಕಷ್ಟದ ಸಂಗತಿ. ಆದರ ಬದಲು ಡಿಜಿಟಲ್ ಫಾರ್ಮ್ಯಾಟ್ ನಲ್ಲಿ ಸಿಕ್ಕರೆ ಖಂಡಿತಾ ಒಳ್ಳೆಯದೇ ಎನಿಸುತ್ತದೆ. ಬಹುಶಃ ಜನರ ಈ ಕಷ್ಟ ಆದಾಯ ತೆರಿಗೆ ಇಲಾಖೆಗೆ ಗೊತ್ತಾಗಿದೆ ಎನಿಸುತ್ತೆ. ಹಾಗಾಗಿ ಹೆಚ್ಚು ಸಮಸ್ಯೆ ಇಲ್ಲದೆ ಆರಾಮಾಗಿ ಪ್ಯಾನ್​ ಕಾರ್ಡ್​ನ್ನು ಪಡೆಯಲು ಆನ್​ಲೈನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.

    ಇದನ್ನೂ ಓದಿ: Explained: ವ್ಯಾಕ್ಸಿನ್ ತೆಗೆದುಕೊಂಡ ಮೇಲೆ ಜ್ವರ ಬಂದಿಲ್ಲ, ಹಾಗಿದ್ರೆ ಲಸಿಕೆ ಕೆಲಸ ಮಾಡ್ತಿಲ್ವಾ?

    Incometax.gov.in ಎನ್ನುವ ಆದಾಯ ತೆರಿಗೆ ಇಲಾಖೆಯ ಹೊಸಾ ಪೋರ್ಟಲ್ ಮೂಲಕ ಈ ಸೌಕರ್ಯ ಪಡೆಯಬಹುದು. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿ ಅದರ ನಂಬರ್ ಕೂಡಾ ನಿಮಗೆ ನೆನಪಿಲ್ಲದೇ ಹೋದರೂ ಚಿಂತೆಯಿಲ್ಲ. ಇದರಲ್ಲಿ ನಿಮ್ಮ ಪ್ಯಾನ್​ ಕಾರ್ಡ್​ನ ಎಲೆಕ್ಟ್ರಾನಿಕ್ ರೂಪವನ್ನು ಪಡೆಯಬಹುದು. ನಿಮಗೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಗೊತ್ತಿದ್ದರೆ ಸಾಕು. ಮತ್ತು ನಿಮ್ಮ ಆಧಾರ್ ಮತ್ತು ಪ್ಯಾನ್​ ಕಾರ್ಡ್​ಗಳು ಒಂದಕ್ಕೊಂದು ಲಿಂಕ್ ಆಗಿರಬೇಕು. ಆಗ ಹೆಚ್ಚು ತಲೆಬಿಸಿ ಇಲ್ಲದಂತೆ ನಿಮ್ಮ ಪ್ಯಾನ್ ಕಾರ್ಡಿನ ತದ್ರೂಪು ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಒಂದಕ್ಕೊಂದು ಲಿಂಕ್ ಆಗದಿದ್ರೆ ಆಗ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.

    ಈಗ ಪ್ಯಾನ್ ಕಾರ್ಡ್ ಡಿಜಿಟಲ್ ರೂಪವನ್ನು ಪಡೆಯುವ ವಿಧಾನ ತಿಳಿದುಕೊಳ್ಳಿ. ಮೊದಲು incometax.gov.in ವೆಬ್​ಸೈಟ್​ಗೆ ಲಾಗಿನ್​ ಆಗಿ. ಅಲ್ಲಿ ಎಡಭಾಗದ ಕೆಳಗೆ ಇರುವ Our Services ಆಪ್ಶನ್ ಮೇಲೆ ಕ್ಲಿಕ್​ ಮಾಡಿ. ನಂತರ Instant E PAN ಎಂಬಲ್ಲಿ ಕ್ಲಿಕ್​ ಮಾಡಿ ನಂತರ ಅಲ್ಲಿ ಕಾಣುವ New E PAN ಆಯ್ಕೆ ಮಾಡಿ. ಇದಾದ ಮೇಲೆ ಆಧಾರ್​ ಕಾರ್ಡ್ ನಂಬರ್ ನಮೂದಿಸಿ. ಒಂದು ವೇಳೆ ನಿಮಗೆ ನಿಮ್ಮ ಪಾನ್​ ಕಾರ್ಡ್ ನಂಬರ್ ನೆನಪಿದ್ದರೆ ಅದನ್ನೇ ಹಾಕಿ. ಈಗ ಅಲ್ಲಿ ತೋರಿಸಲಾಗುವ ಷರತ್ತುಗಳನ್ನು ಓದಿ, Accept ಎಂಬಲ್ಲಿ ಕ್ಲಿಕ್​ ಮಾಡಿ. ಆಗ ನಿಮ್ಮ ರಿಜಿಸ್ಟರ್ಡ್​ ಮೊಬೈಲ್ ನಂಬರ್​ಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನಮೂದಿಸಿ. ಅಲ್ಲಿ ಕಾಣಿಸುವ ವಿವರಗಳನ್ನು ಓದಿ, ನಿಮ್ಮ ಮೇಲ್ ಐಡಿ ನಮೂದಿಸಿ, ನಂತರ Confirm ಎಂಬಲ್ಲಿ ಕ್ಲಿಕ್​ ಮಾಡಿ. ಇಷ್ಟು ಮಾಡಿದರೆ ಆಯ್ತು. ನಿಮ್ಮ ಇಮೇಲ್​ಗೆ ಇ-ಪ್ಯಾನ್ ಕಾರ್ಡ್ ಬಂದಿರುತ್ತದೆ. ನಿಮ್ಮ ಮೇಲ್​ ಐಡಿ ಲಾಗಿನ್​ ಆಗಿ ಇ-ಪ್ಯಾನ್​ ಕಾರ್ಡ್ ಡೌನ್​ ಲೋಡ್ ಮಾಡಿಕೊಳ್ಳಿ. ಬೇಕಿದ್ದರೆ ಅದರ ಪ್ರಿಂಟ್ ತೆಗೆದಿಟ್ಟುಕೊಳ್ಳಿ.
    Published by:Soumya KN
    First published: