Banana Peels: ಬಾಳೆಹಣ್ಣಿನ ಸಿಪ್ಪೆಯಿಂದಲೂ ಚರ್ಮಕ್ಕಿದೆ ಹಲವಾರು ಪ್ರಯೋಜನಗಳು

Banana Peels For Face: ವಿಡಿಯೋದಲ್ಲಿ ನಟಿಯು ಒಂದು ಬಾಳೆಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಸಿಪ್ಪೆಯೂ ಸಿಲಿಕಾ ಅಂಶವನ್ನು ಹೊಂದಿರುತ್ತದೆ, ಇದು ಕಾಲಾಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ನಾವೆಲ್ಲಾ ನಮ್ಮ ಆರೋಗ್ಯಕ್ಕೆ(Health) ಬಾಳೆಹಣ್ಣು(Banana) ತಿನ್ನುವುದು ಒಳ್ಳೆಯದು ಎಂದು ತಿಳಿದು ತಿನ್ನುತ್ತಿರುತ್ತೇವೆ. ಹಾಗೆ ಬಾಳೆಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು(Banana Peel) ಹಾಗೆಯೇ ಬಿಸಾಡುತ್ತೇವೆ. ಆದರೆ ನಾವು ಹಾಗೆ ಬಿಸಾಡುವ ಬಾಳೆಹಣ್ಣಿನ ಸಿಪ್ಪೆಗೂ ಸಹ ನಮ್ಮ ಮುಖದ ಚರ್ಮದ(Skin) ಆರೋಗ್ಯ ಕಾಪಾಡುವ ಶಕ್ತಿ ಇದೆ ಎಂದರೆ ನೀವು ನಂಬಲಿಕ್ಕಿಲ್ಲ. ಹೌದು.. ಇತ್ತೀಚೆಗೆ ಅನೇಕ ಮಹಿಳೆಯರು ಮತ್ತು ಯುವತಿಯರು ತಮ್ಮ ಮುಖದ ಮೇಲೆ ಆಗುವ ಪಿಗ್ಮೆಂಟೇಶನ್ (Pigmentation)ಮತ್ತು ಮೊಡವೆಗಳಿಂದ(Pimples) ಬೇಸತ್ತು, ಇದಕ್ಕೆ ಮನೆಯಲ್ಲಿಯೇ ಇದಕ್ಕೆಲ್ಲಾ ಸೂಕ್ತವಾದ ಪರಿಹಾರ ಹುಡುಕುತ್ತಿದ್ದಾರೆ.

ಅನೇಕ ಜನಪ್ರಿಯ ನಟಿಯರು ಚರ್ಮಕ್ಕೆ ಸುಲಭ ಮತ್ತು ರಾಸಾಯನಿಕ ಮುಕ್ತ ಮನೆ ಮದ್ದುಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಬಾಲಿವುಡ್ ನಟಿ ಭಾಗ್ಯಶ್ರೀ ಮುಖದ ಚರ್ಮದ ಸಮಸ್ಯೆಗಳಾಗಿರುವ ಪಿಗ್ಮೆಂಟೇಶನ್ ಮತ್ತು ಮೊಡವೆಗಳಿಗೆ ಚಿಕಿತ್ಸೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳುವಂತಹ ಒಂದು ಸರಳವಾದ ಟಿಪ್ಸ್ ಹಂಚಿಕೊಂಡಿದ್ದಾರೆ.

ನಟಿ ಭಾಗ್ಯಶ್ರೀ ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಹೇಗೆ ಈ ಮೊಡವೆಗಳಿಂದ ಮುಕ್ತಿ ಪಡೆಯಬಹುದು ಎಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಈ ವಿಡಿಯೋವನ್ನು ಸುಮಾರು 3 ಸಾವಿರ ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಮುಲ್ತಾನಿ ಮಿಟ್ಟಿ ಇದ್ರೆ ಸಾಕು ತ್ವಚೆಯ ಸಮಸ್ಯೆ ಮಾಯವಾಗುತ್ತೆ

ವಿಡಿಯೋದಲ್ಲಿ ನಟಿಯು ಒಂದು ಬಾಳೆಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಸಿಪ್ಪೆಯೂ ಸಿಲಿಕಾ ಅಂಶವನ್ನು ಹೊಂದಿರುತ್ತದೆ, ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಫಿನೋಲಿಕ್‌ಗಳನ್ನೂ ಹಾಗೂ ಆ್ಯಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ನಿಮ್ಮ ಮುಖದ ಚರ್ಮಕ್ಕೆ ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಹಚ್ಚಿಕೊಳ್ಳಬೇಕು?

“ನೀವು ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಲ್ಲಿರುವ ಬಿಳಿ ಬಣ್ಣದ ಭಾಗವನ್ನು ನಿಮ್ಮ ಮುಖದ ಮೇಲೆ ಆಗಿರುವ ಮೊಡವೆ ಮತ್ತು ಕಲೆಗಳ ಮೇಲೆ ನಿಧಾನವಾಗಿ ಒರೆಸಿಕೊಳ್ಳಿ. ಹಾಗೆಯೇ 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ನೀರಿನಿಂದ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ” ಎಂದು ನಟಿ ಭಾಗ್ಯಶ್ರೀ ತಮ್ಮ ವಿಡಿಯೋದ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಹೆಲ್ತ್ ಲೈನ್ ಪ್ರಕಾರ, ನಾರು ಮತ್ತು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾದ ಬಾಳೆಹಣ್ಣಿನ ಸಿಪ್ಪೆ ಚರ್ಮವನ್ನು ಕಾಂತಿಯುತವಾಗಿಸಲು ಮತ್ತು ಚರ್ಮದ ಸುಕ್ಕುಗಳನ್ನು, ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಾಯಿಶ್ಚರೈಸರ್‌ ಆಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಹಲವಾರು ಅಧ್ಯಯನಗಳು ಬಾಳೆಹಣ್ಣಿನ ಸಿಪ್ಪೆಯಲ್ಲಿ ಉರಿಯೂತ ನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿವೆ ಎಂದು ಕಂಡುಕೊಂಡಿವೆ.

ಸೋರಿಯಾಸಿಸ್‌ನಿಂದ ಬಳಲುತ್ತಿದ್ದ ಸಂದರ್ಭದಲ್ಲಿಯೂ ಸಹ ಈ ಬಾಳೆಹಣ್ಣಿನ ಸಿಪ್ಪೆಯನ್ನು ಬಾಧಿತ ಭಾಗದ ಮೇಲೆ ಹಚ್ಚಿಕೊಳ್ಳುವ ಮೂಲಕ ತುರಿಕೆಯನ್ನು ನಿವಾರಿಸಿಕೊಳ್ಳಬಹುದು. ಒಟ್ಟಿನಲ್ಲಿ ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು, ಅದರ ಸಿಪ್ಪೆಯೂ ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬಹುದು.

ಇದನ್ನೂ ಓದಿ: ಮುಖದ ಅಂದಕ್ಕೆ ಮನೆಯಲ್ಲಿಯೇ ಟ್ರೈ ಮಾಡಿ ಕಾಫಿ ಫೇಶಿಯಲ್

ಕೇವಲ ಬಾಳೆಹಣ್ಣಿನ ಸಿಪ್ಪೆಯನ್ನ ವಿವಿಧ ರೀತಿಯಲ್ಲಿ ಮುಖಕ್ಕೆ ಬಳಕೆ ಮಾಡುವುದು ಹಲವಾರು ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಅದು ನಿಮ್ಮ ಮುಖದ ಅಂದವನ್ನು ಸಹ ಹೆಚ್ಚು ಮಾಡುತ್ತದೆ,
Published by:Sandhya M
First published: