ವೀಗನ್ ಆಹಾರ(Vegan Food) ಕ್ರಮ ಈ ದಿನಗಳಲ್ಲಿ ಸಿಕ್ಕಾಪಟ್ಟೆ ಫೇಮಸ್. ತೂಕ ಇಳಿಸಿಕೊಳ್ಳುವವರಿಗಂತೂ(Weight Loss) ಅದು ಅಚ್ಚುಮೆಚ್ಚು. ಅಷ್ಟೇ ಅಲ್ಲ ವೀಗನ್ ಚಹಾ ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗುತ್ತದೆ. ಹಾಲಿವುಡ್(hollywood) ಮತ್ತು ಬಾಲಿವುಡ್ನ(Bollywood) ಕೆಲವು ಸೆಲಬ್ರೆಟಿಗಳು ಕೂಡ ವೀಗನ್ ಆಹಾರಕ್ರಮವನ್ನು ತಮ್ಮದಾಗಿಸಿಕೊಂಡಿದ್ದಾರೆ. ವೀಗನ್ ತಿನಿಸುಗಳು ದೇಹ , ಮನಸ್ಸು ಎರಡಕ್ಕೂ ಸಂತೋಷ ಮತ್ತು ಲಾಭವನ್ನು ನೀಡುತ್ತವೆ ಎಂಬುವುದು ವೀಗನ್ ಖಾದ್ಯಪ್ರಿಯರ ಅಂಬೋಣ. ನೀವು ವೀಗನ್ ಆಹಾರ ಕ್ರಮದ ಬಗ್ಗೆ ಕೇಳಿರಬಹುದು ಮತ್ತು ಓದಿರಬಹುದು ಹಾಗೂ ನಿಮ್ಮಲ್ಲಿ ಕೆಲವರು ಅದನ್ನು ಅನುಸರಿಸುತ್ತಿರಲೂಬಹುದು.
ಆದರೆ ನಿಮಗೆ ವೀಗನ್ ಚಹಾದ ಬಗ್ಗೆ ತಿಳಿದಿದೆಯೇ?
ಇತರ ಚಹಾಗಳಿಗೆ ಹೋಲಿಸಿದರೆ, ವೀಗನ್ ಚಹಾ ಅಧಿಕ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೆ ಒಳ್ಳೆಯದು ಮತ್ತು ತೂಕ ಇಳಿಸಲು ಸಹಕಾರಿ ಎಂದು ಕೂಡ ಪರಿಗಣಿಸಲ್ಪಡುತ್ತದೆ.ವೀಗನ್ ಚಹಾದಲ್ಲಿ ಹಸು, ಎಮ್ಮೆ ಅಥವಾ ಯಾವುದೇ ಪ್ರಾಣಿಯ ಹಾಲನ್ನು ಬಳಸುವುದಿಲ್ಲ, ಬದಲಿಗೆ ಸಂಪೂರ್ಣ ಸಸ್ಯಜನ್ಯವಾದ ಸೋಯಾ ಅಥವಾ ಬಾದಾಮಿ ಹಾಲನ್ನು ಬಳಸುತ್ತಾರೆ.
ವೀಗನ್ ಚಹಾವನ್ನು ತಯಾರಿಸುವ ವಿಧಾನ ಹಾಗೂ ಅದು ಆರೋಗ್ಯಕ್ಕೆ ಎಷ್ಟು ಸಹಾಯಕ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಾಲುಂಗುರ ಸುಂದರವಷ್ಟೇ ಅಲ್ಲ, ಹೆಂಗಳೆಯರ ಆರೋಗ್ಯಕ್ಕೂ ಉತ್ತಮ
ವೀಗನ್ ಚಹಾ ಮಾಡಲು ಅಗತ್ಯ ಇರುವ ಸಾಮಾಗ್ರಿಗಳು:
1 ಕಪ್ ವೀಗನ್ ಹಾಲು (ಸೋಯಾ ಅಥವಾ ಬಾದಾಮಿ)
1/4 ಕಪ್ ನೀರು
1 ಚಮಚ ಚಹಾ ಪುಡಿ
ಬ್ರೌನ್ ಶುಗರ್ ಅಥವಾ ಬೆಲ್ಲ
1/2 ಸಣ್ಣ ಚಮಚ ಟೀ ಮಸಾಲಾ
1/2 ಸಣ್ಣ ಚಮಚ ಶುಂಠಿ
3 ಅಥವಾ 4 ಪುದೀನ ಎಲೆಗಳು
ವೀಗನ್ ಚಹಾ ತಯಾರಿಸುವ ವಿಧಾನ:
ಒಲೆ ಉರಿಸಿ, ಮೊದಲು ನೀರನ್ನು ಕುದಿಸಿ. ಆ ಬಳಿಕ ನೀರಿಗೆ ಚಹಾ ಪುಡಿ, ಬ್ರೌನ್ ಶುಗರ್ ಅಥವಾ ಬೆಲ್ಲ ಸೇರಿಸಿ. ಅದೆಲ್ಲಾ ಒಟ್ಟಿಗೆ ಒಂದು ಕುದಿ ಬರಲಿ. ಅದಾದ ನಂತರ ತುರಿದ ಶುಂಠಿ ಮತ್ತು ಚಹಾ ಮಸಾಲಾ ಸೇರಿಸಿ. ಜಜ್ಜಿದ ಪುದೀನ ಎಲೆಗಳನ್ನು ಕೂಡ ಸೇರಿಸಿ. ಚಹಾ ಡಿಕಾಕ್ಷನನ್ನು ಎರಡು ನಿಮಿಷ ಚೆನ್ನಾಗಿ ಕುದಿಯಲು ಬಿಡಿ.
ಬಳಿಕ ಅದಕ್ಕೆ ಸೋಯಾ ಅಥವಾ ಬಾದಾಮಿ ಹಾಲು ಹಾಕಿ, ನಿರಂತರವಾಗಿ ಕದಡುತ್ತಲೇ ಇರಿ. ಆ ಸಮಯದಲ್ಲಿ ಒಲೆಯನ್ನು ಮಂದ ಉರಿಯಲ್ಲಿ ಇಡುವುದನ್ನು ಮರೆಯಬೇಡಿ. ಚಹಾ ಒಂದೆರಡು ನಿಮಿಷ ಕುದಿದ ನಂತರ ಒಲೆ ಆರಿಸಿ. ನಿಮ್ಮ ತೂಕ ಇಳಿಸಲು ಸಹಕಾರಿಯಾಗುವ ವೀಗನ್ ಚಹಾ ಸಿದ್ಧವಾಗುತ್ತದೆ.
ವೀಗನ್ ಚಹಾದ ಆರೋಗ್ಯಕರ ಲಾಭಗಳು:
ವೀಗನ್ ಚಹಾದಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ನಿರ್ವಹಿಸಲು ಸಹಾಯ ಮಾಡುತ್ತವೆ.
ವೀಗನ್ ಚಹಾ, ಸಾಮಾನ್ಯ ಹಾಲಿನ ಚಹಾಗಿಂತ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಹಾಗಾಗಿ ಅದನ್ನು ಕುಡಿಯುವುದರಿಂದ ಮನುಷ್ಯನ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರುತ್ತದೆ.
ಇದನ್ನೂ ಓದಿ: ತೂಕ ಇಳಿಸಲು ಇಲ್ಲಿದೆ ಹೊಸ ವಿಧಾನ- ಐಸ್ ಥೆರಪಿ ಎಷ್ಟು ಪ್ರಯೋಜನಕಾರಿ ನೋಡಿ.
ವೀಗನ್ ಚಹಾ ತೂಕ ಇಳಿಸುವುದಕ್ಕೆ ಮಾತ್ರವಲ್ಲ, ಹೃದಯದ ಆರೋಗ್ಯವನ್ನು ನಿರ್ವಹಿಸಲು ಕೂಡ ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇರುವ ರೋಗಿಗಳಿಗೆ ವೀಗನ್ ಚಹಾ ಒಂದು ಅತ್ಯುತ್ತಮ ಆಯ್ಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ