Breakfast Recipe: ರುಚಿ ರುಚಿಯಾದ ಮಸಾಲಾ ಪಡ್ಡು ಸುಲಭವಾಗಿ ಮನೆಯಲ್ಲಿಯೇ ಮಾಡಿ- ಇಲ್ಲಿದೆ ಮಾಡುವ ವಿಧಾನ

Paddu Recipe: ಹೀಗೆ ಹೆಚ್ಚು ಜನಪ್ರಿಯತೆ ಪಡೆದಿರುವ ತಿಂಡಿ ಪದಾರ್ಥಗಳಲ್ಲಿ ಪಡ್ಡು ಸಹ ಒಂದು.  ಇದನ್ನು ಮಾಡಲು ಸಾಮಾನ್ಯಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು ಆದರೆ ಇದರ ರುಚಿ ಎಲ್ಲವನ್ನು ಮೀರಿಸುತ್ತದೆ. ಬಿಸಿ ಬಿಸಿ ಪಡ್ಡು ಜೊತೆಗೆ ತೆಂಗಿನ ಕಾಯಿ ಚಟ್ನಿ ಅದ್ಭುತ ಎನ್ನಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆಯುತ್ತವೆ. ಹೀಗೆ ಹೆಚ್ಚು ಜನಪ್ರಿಯತೆ ಪಡೆದಿರುವ ತಿಂಡಿ ಪದಾರ್ಥಗಳಲ್ಲಿ ಪಡ್ಡು(Paddu) ಸಹ ಒಂದು.  ಇದನ್ನು ಮಾಡಲು ಸಾಮಾನ್ಯಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು ಆದರೆ ಇದರ ರುಚಿ ಎಲ್ಲವನ್ನು ಮೀರಿಸುತ್ತದೆ. ಬಿಸಿ ಬಿಸಿ ಪಡ್ಡು ಜೊತೆಗೆ ತೆಂಗಿನ ಕಾಯಿ ಚಟ್ನಿ ಅದ್ಭುತ ಎನ್ನಬಹುದು. ಹಾಗಾದ್ರೆ ರುಚಿಕರವಾದ ಪಡ್ಡು ಮಾಡುವುದು ಹೇಗೆ ಇಲ್ಲಿದೆ. 

ಪಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು

ತಿಂಡಿಯ ಅಕ್ಕಿ- 3 ಲೋಟ

ಉದ್ದಿನ ಬೇಳೆ- ಅರ್ಧ ಲೋಟ

ಅವಲಕ್ಕಿ- ಕಾಲು ಲೋಟ

ಮೆಂತ್ಯೆ- ಮುಕ್ಕಾಲು ಚಮಚ

ಈರುಳ್ಳಿ- 2

ಕರಿಬೇವು- ಅರ್ಧ ಕಟ್ಟು

ಹಸಿ ಶುಂಠಿ- 1 ಇಂಚು

ಕಾಯಿ ತುಂಡುಗಳು- 1 ಬೌಲ್

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡ್ಬೋದು ಈ ಸಬ್ಬಕ್ಕಿ ಉಪ್ಪಿಟ್ಟು -ಇಲ್ಲಿದೆ ರೆಸಿಪಿ

ಹಸಿರು ಮೆಣಸಿನ ಕಾಯಿ(ಬೇಕಿದ್ದಲ್ಲಿ)-2-3

ಉಪ್ಪು- ರುಚಿಗೆ ತಕ್ಕಷ್ಟು

ಪಡ್ಡು ಮಾಡುವ ವಿಧಾನ:

ಮೊದಲಿಗೆ ಅಕ್ಕಿ, ಉದ್ದಿನ ಬೇಳೆ, ಅವಲಕ್ಕಿ ಮತ್ತು ಮೆಂತ್ಯೆ ಕಾಳುಗಳನ್ನು ಚೆನ್ನಾಗಿ ತೊಳೆದು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.  ನಂತರ ಮಿಕ್ಸರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿರುವಷ್ಟು  ಮಾತ್ರ ನೀರನ್ನು ಹಾಕಿ. ದೋಸೆ ಹಿಟ್ಟಿನ ಹದ ಬರುವುದು ಮುಖ್ಯ. ಕೊನೆಯಲ್ಲಿ ಉಪ್ಪು ಹಾಕಿ. (ಬೇಸಿಗೆಯಲ್ಲಿ ಮರುದಿನ ಬೆಳಿಗ್ಗೆ ಉಪ್ಪು ಹಾಕಿದರೆ ಸಾಕು). ಹಿಟ್ಟನ್ನು ಚನ್ನಾಗಿ ಕಲಸಿ ಹಾಗೆಯ ರಾತ್ರಿಯಿಡಿ ಬಿಡಿ.

ಮರುದಿನ ಬೆಳಿಗ್ಗೆ, ಈರುಳ್ಳಿ, ಕರಿಬೇವು, ಹಸಿಶುಂಠಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. (ಬೇಕೆಂದಲ್ಲಿ ಹಸಿಮೆಣಸಿನ ಕಾಯನ್ನೂ ಸಹ ಬಳಸಬಹುದು). ತೆಂಗಿನ ಕಾಯಿಯನ್ನು ತುರಿಯದೆ, ಚಾಕುವಿನಿಂದ ಸಣ್ಣ ಸಣ್ಣ ಪೀಸ್ ಗಳನ್ನಾಗಿ ಮಾಡಿ ಇಟ್ಟುಕೊಳ್ಳಿ.

ಈಗ ತಯಾರಿಸಿಕೊಂಡಿರುವ ಎಲ್ಲಾ ಪದಾರ್ಥಗಳನ್ನೂ ರುಬ್ಬಿದ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ರುಚಿ ನೋಡಿ ಉಪ್ಪು ಹಾಕಿ.

ಇದನ್ನೂ ಓದಿ: ಬೆಳಗಿನ ತಿಂಡಿಗೆ ಮಲಬಾರ್ ಪರೋಟ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಈಗ ಪಡ್ಡು ಹಿಟ್ಟು ಸಿದ್ಧವಾಗಿರುತ್ತದೆ.  ನಂತರ ಸ್ಟವ್ ಮೇಲೆ ಪಡ್ಡು ಮಾಡುವ ಕಾವಲಿಯನ್ನಿಡಿ. ಅದು ಕಾದಾಗ ಒಂದೆರಡು ಹನಿ ಎಣ್ಣೆ ಹಾಕಿ ಅದರ ಮೇಲೆ ಪ್ರತಿಯೊಂದಕ್ಕೂ ಹಿಟ್ಟನ್ನು ಹಾಕಿ ಮುಚ್ಚಿಡಿ. ಮತ್ತೆ ಒಂದೆರಡು ನಿಮಿಷದ ನಂತರ ಪ್ರತಿಯೊಂದಕ್ಕೂ 1-2 ಹನಿ ಎಣ್ಣೆ ಬಿಟ್ಟು ತಿರುಗಿಸಿ ಹಾಕಿ ಮುಚ್ಚಳ ಮುಚ್ಚಿಡಿ. ಈಗ ಸಣ್ಣ ಉರಿಯಲ್ಲಿ ಬೇಯಿಸಿ. 2 ನಿಮಿಷದ ನಂತರ ಆಚೆ ತೆಗೆದರೆ ಸೂಪರ್ ಪಡ್ಡು ಸಿದ್ದ. ಆದರೆ ಪಡ್ಡು ತೆಗೆಯುವಾಗ ಎಚ್ಚರದಿಂದಿರಿ.
Published by:Sandhya M
First published: