Breakfast Recipe: ಬೆಳಗಿನ ತಿಂಡಿಗೆ ಕೇರಳ ಸ್ಟೈಲ್ ಪುಟ್ಟು ಟ್ರೈ ಮಾಡಿ

Kerala Style Puttu Recipe: ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.ಇನ್ನು ಕೇರಳದ ಫೇಮಸ್ ತಿಂಡಿ ಪುಟ್ಟು , ವಿಭಿನ್ನ ರೀತಿಯ ಪದಾರ್ಥವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ತಿಂಡಿ ಎನ್ನುವ ವಿಚಾರ ಮಹಿಳೆಯರಿಗೆ ತಲೆನೋವಾಗುತ್ತದೆ. ಮಾಡಿದ್ದನ್ನೇ ಮಾಡುವುದು ಅಥವಾ ತಿನ್ನುವುದು ಬೋರ್ ಆಗುತ್ತದೆ. ಅಲ್ಲದೇ ಮನೆಯಲ್ಲಿ ಮಕ್ಕಳಿದ್ದರಂತೂ ಏನಾದರು ಹೊಸದನ್ನು ಮಾಡಬೇಕು . ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods) ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.ಇನ್ನು ಕೇರಳದ (Kerala)  ಫೇಮಸ್ ತಿಂಡಿ ಪುಟ್ಟು (Puttu)  , ವಿಭಿನ್ನ ರೀತಿಯ ಪದಾರ್ಥವಾಗಿದ್ದು , ಸಾಂಬಾರ್ ಜೊತೆ ತಿಂದರೆ ಆಹಾ ಸ್ವರ್ಗವೇ ಸಿಕ್ಕಂತ ರುಚಿ. ಇದು ಕರ್ನಾಟಕ ಕರಾವಳಿ ಭಾಗದಲ್ಲಿ ಸಹ ಪ್ರಚಲಿತದಲ್ಲಿದೆ. ಕೆಲವರು ಇದನ್ನ ಮಾಡುವುದು ಕಷ್ಟಕರ ಎಂದುಕೊಳ್ಳುತ್ತಾರೆ, ಆದರೆ ಇದು ಸುಲಭ. ಪುಟ್ಟು ಮಾಡುವುದು ಹೇಗೆ ಎಂಬುದು ಇಲ್ಲಿದೆ. 

ಪುಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು:
1/2 ಕೆ.ಜಿ ಅಕ್ಕಿ
1/2 ಭಾಗ ತೆಂಗಿನ ಕಾಯಿ ( ತುರಿದುಕೊಂಡಿರಿ)
ರುಚಿಗೆ ತಕ್ಕ ಉಪ್ಪು
ನೀರು
ಸಕ್ಕರೆ

ಇದನ್ನೂ ಓದಿ: ಸಣ್ಣಗಾಗ್ಬೇಕು ಅಂದ್ರೆ ಈ ಸೂಪ್​ಗಳನ್ನು ಕುಡಿಬೇಕಂತೆ

ಪುಟ್ಟು ಮಾಡುವ ವಿಧಾನ

ಮೊದಲು ಅಕ್ಕಿಯನ್ನು 4 ಗಂಟೆ ನೀರಿನಲ್ಲಿ ನೆನಸಿ ಇಡಿ. 4 ಗಂಟೆಗಳ ನಂತರ ಅದನ್ನು ಚೆನ್ನಾಗಿ ತೊಳೆದು ನೀರನ್ನು ಚೆಲ್ಲಿ ಅಕ್ಕಿಯಲ್ಲಿರುವ ನೀರು ಸೋಸಬೇಕು. 2 ರಿಂದ 3 ಬಾರಿ ಅಕ್ಕಿಯನ್ನು ತೊಳೆಯುವುದು ಉತ್ತಮ.  ಈಗ ಅಕ್ಕಿಯನ್ನು ಸೋಸಿಕೊಂಡ ಮೇಲೆ ಅಕ್ಕಿಯನ್ನು ಪುಡಿ ಮಾಡಬೇಕು, ಆದರೆ ಪುಡಿ ಮಾಡುವಾಗ ಹೆಚ್ಚು ನುಣ್ಣಗೆ ಮಾಡಬಾರದು. ಇದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು.

ಪುಡಿ ಮಾಡಿಕೊಂಡ ನಂತರ ಅಕ್ಕಿ ಹಿಟ್ಟನ್ನು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅಕ್ಕಿ ಪುಡಿಯನ್ನು ಬಿಸಿ ಮಾಡುವಾಗ ಅಕ್ಕಿ ಹಿಟ್ಟನ್ನು ಸೌಟ್ ನಿಂದ ಕಲಸುತ್ತಾ ಇರಬೇಕು. ನಂತರ ಅಕ್ಕಿ ಹಿಟ್ಟನ್ನು ಆರಲು ಬಿಡಿ. ಇನ್ನು ನೀವು ಇನ್ನೊಂದು ಕೆಲಸ ಮಾಡಬಹುದು. ಉಪ್ಪನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಆ ನೀರನ್ನು ಹಿಟ್ಟಿನ ಮೇಲೆ ಚಿಮುಕಿಸಿ ಕಲಸಿ. ಆದರೆ ಈ ಬಾರಿ ಸೌಟ್​ ಬಳಕೆ ಮಾಡಬೇಡಿ, ಕೈನಿಂದ ಮಾಡಿ.

ಹಿಟ್ಟನ್ನು ಮಿಶ್ರಣ ಮಾಡುವಾಗ ಹಿಟ್ಟು ತುಂಬಾ ಮೆತ್ತಗೆ ಆಗಬಾರದು ಅಥವಾ ತುಂಬಾ ಪುಡಿ ಪುಡಿಯಾಗಿರಬಾರದು. ಹಿಟ್ಟನ್ನ ಕಲಸುತ್ತಾ ಸ್ವಲ್ಪ ತುರಿದ ತೆಂಗಿನ ಕಾಯಿ ಹಾಕಿ. ಈಗ ಪುಟ್ಟು ಮಾಡಲು ಒಂದು ಪಾತ್ರೆ ಬರುತ್ತದೆ ಅದರ ತಳದಲ್ಲಿ ನೀರು ಹಾಕಿ ಕುದಿಯಲು ಇಡಬೇಕು. ಆ ಪಾತ್ರೆಯಲ್ಲಿ ಮೇಲ್ಭಾಗದಲ್ಲಿ ಉದ್ದಕ್ಕಿರುವ ಒಂದು ಕೊಳವೆ  ಇರುತ್ತದೆ.

ಈಗ ಆ ಕೊಳವೆಗೆ ತಯಾರಾಗಿರುವ ಮಿಶ್ರಣವನ್ನು ಮತ್ತು ಸ್ವಲ್ಪ ತೆಂಗಿನ ತುರಿಯನ್ನು ಹಾಕಿ, ಮತ್ತೆ 1/4 ಭಾಗ ಅಕ್ಕಿ ಹಿಟ್ಟು ಸ್ವಲ್ಪ ತೆಂಗಿನ ತುರಿ ಹೀಗೆ ಹಾಕಿ ಆ ಕೊಳವೆ ಆಕಾರದ ಪಾತ್ರೆ ತುಂಬಿಸಿ. ಅದರ ಮೇಲ್ಭಾಗದಲ್ಲಿ ತುರಿದ ತೆಂಗಿನ ಕಾಯಿ ಮತ್ತು ಸಕ್ಕರೆ ಹಾಕಿ ಅದರ ಮುಚ್ಚಳ ಹಾಕಿ ಬೇಯಿಸಿ.

ಇದನ್ನೂ ಓದಿ: ಅಣಬೆ ಸೇವನೆಯಿಂದ ಖಿನ್ನತೆ ಉಂಟಾಗುವ ಸಾಧ್ಯತೆ ಕಡಿಮೆಯೇ..? ತಜ್ಞರು ಹೇಳೋದೇನು ನೋಡಿ

ನಂತರ ಹತ್ತು ನಿಮಿಷದಲ್ಲಿ ಅಥವಾ ಅದು ಬೆಂದಾಗ ಆವಿ ಹೊರಗೆ ಬರಲು ಆರಂಭಿಸುತ್ತದೆ. ಅದನ್ನು ನಿಧಾನವಾಗಿ ತೆಗೆದರೆ ಪುಟ್ಟು ರೆಡಿ.  ಕೇರಳದಲ್ಲಿ ಇದನ್ನ ಹೆಚ್ಚಾಗಿ ಕಡಲೆ ಕಾಳಿನ ಸಾರಿನ ಜೊತೆ ತಿನ್ನುತ್ತಾರೆ, ಅವರೆಡರ ಕಾಂಬಿನೇಷನ್ ಹೆಚ್ಚು ರುಚಿಕರ ಎನ್ನಲಾಗುತ್ತದೆ.
Published by:Sandhya M
First published: