Breakfast Recipe: ಮಸಾಲ ದೋಸೆ, ಸೆಟ್​ ದೋಸೆ ರುಚಿ ಗೊತ್ತು,ಬಾಳೆಹಣ್ಣಿನ ದೋಸೆ ಟೇಸ್ಟ್​ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

Banana Dosa: ಈ ದೋಸೆಯನ್ನು ಮಾಡಲು ಹೆಚ್ಚು ಸಮಯದ ಅಗತ್ಯ ಕೂಡ ಇಲ್ಲ. ಅಲ್ಲದೇ ನಿಮಗೆ ಇದು ಸಿಹಿ ಅನಿಸಿದರೆ ಅದನ್ನು ನೀವು ಹೆಚ್ಚು ಖಾರದ ಚಟ್ನಿ ಜೊತೆ ಸೇವನೆ ಮಾಡಬೇಕು. ಅಲ್ಲದೇ ಮನೆಯಲ್ಲಿ ಸಿಗುವ ಸುಲಭ ಪದಾರ್ಥಗಳಿಂದ ಇದನ್ನು ಮಾಡುವುದರಿಂದ ಇದು ನಿಮ್ಮ ಸಮಯವನ್ನು ಮತ್ತು ಹಣವನ್ನು ಇರೆಡನ್ನು ಉಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆಯುತ್ತವೆ.ಕೆಲವೊಂದು ತಿಂಡಿಗಳ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಮೊನ್ನೆಯಷ್ಟೇ ಬಾಳೆಹಣ್ಣಿನ ಇಡ್ಲಿ(Banana Idli) ಮಾಡುವುದನ್ನ ನೋಡಿದ್ರೆ,ಹಾಗೆಯೇ ಬಾಳೆಹಣ್ಣಿನ ದೋಸೆಯ(Banana Dosa) ಬಗ್ಗೆ ಗೊತ್ತಾ?  ಹೌದು, ಬಾಳೆಹಣ್ಣನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡ್ಬೋದು. ಹೇಗೆ ಅಂತೀರಾ ಇಲ್ಲಿದೆ ನೋಡಿ.

ಬಾಳೆಹಣ್ಣು ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಬಾಳೆಹಣ್ಣು – 5 ರಿಂದ 6

ಗೋಧಿ ಹಿಟ್ಟು- 1 ಕಪ್

ಉಪ್ಪು- ರುಚಿಗೆ ತಕ್ಕಷ್ಟು

ಬೆಲ್ಲ – ರುಚಿಗೆ ತಕ್ಕಷ್ಟು

ಇದನ್ನೂ ಓದಿ: ಮನೆಯಲ್ಲಿಯೇ ಫ್ಲಫಿ ಆಮ್ಲೆಟ್ಸ್ ಮಾಡಲು ಇಲ್ಲಿದೆ ಬೆಸ್ಟ್​ ಟಿಪ್ಸ್

ನೀರು –ಅಗತ್ಯಕ್ಕೆ ತಕ್ಕಷ್ಟು

ಬಾಳೆಹಣ್ಣಿನ ದೋಸೆ ಮಾಡುವ  ವಿಧಾನ

ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಿಮಗೆ ಇದು ಕೈನಿಂದ ಸಾಧ್ಯವಾಗದಿದ್ದರೆ ಮಿಕ್ಸರ್​ ಬಳಸಬಹುದು. ಅಲ್ಲದೇ ಯಾವ ಬಾಳೆಹಣ್ಣು ಬಳಸಬೇಕು ಎಂಬ ಅನುಮಾನ ಇದ್ರೆ ನಿಮಗೆ ಯಾವುದೂ ಸೂಕ್ಯವೂ ಅದನ್ನೇ ಬಳಕೆ ಮಾಡಬಹುದು.

ಇನ್ನು ಬಾಳೆ ಹಣ್ಣನ್ನು ಪೇಸ್ಟ್ ಮಾಡಿಕೊಂಡ ನಂತರ ಅದಕ್ಕೆ ಸ್ವಲ್ಪ ಗೋಧಿ ಹಿಟ್ಟನ್ನು ಹಾಕಿಕೊಂಡು ಸ್ವಲ್ಪ ಸ್ವಲ್ಪವೇ ನೀರನ್ನು ಹಾಕುತ್ತಾ ಕಲಸಿ. ನೀರನ್ನು ಹಾಕುವಾಗ ಎಚ್ಚರ,, ಹಿಟ್ಟು ಉಂಡೆ ಉಂಡೆಯಾಗಬಾರದು. ಅದು ಗಟ್ಟಿ ಗಟ್ಟಿ ಉಂಡೆಯಾದರೆ ದೋಸೆ ಮಾಡಲು ಬರುವುದಿಲ್ಲ.

ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಗೋಧಿ ಹಿಟ್ಟನ್ನು ಹಾಕಿ ಚನ್ನಾಗಿ ಕಲಸಿ. ಅದು ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಸಾಮಾನ್ಯವಾಗಿ ಗೋಧಿ ದೋಸೆ ಮಾಡಿ ತಿಳಿದಿರುವವರಿಗೆ ಇದರ ಹಿಟ್ಟು ತಯಾರಿಸುವುದು ಕಷ್ಟ ಎನಿಸುವುದಿಲ್ಲ. ಒಮ್ಮೆ ಹಿಟ್ಟನ್ನು ಕಲಸಿದ ಮೇಲೆ ಅದಕ್ಕೆ ಒಂದು ಚಿಟಿಕೆ ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚನ್ನಾಗಿ ಕಲಸಿ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಬೆಲ್ಲ ಹಾಕಿಕೊಳ್ಳಿ. ನೀವು ಸಿಹಿ ಪ್ರಿಯರಾಗಿದ್ದಾರೆ ಹೆಚ್ಚು ಬೆಲ್ಲ ಬಳಕೆ ಮಾಡಬಹುದು.

ಗೋಧಿ ದೋಸೆಯ ಹಿಟ್ಟು ಸಿದ್ದವಾಗಿದೆ. ಈಗ ಒಂದು ಕಾವಲಿ ತೆಗೆದುಕೊಂಡು ಕಾಯಲು ಇಡಿ. ಅದಕ್ಕೆ ಮೇಲೆ ತುಪ್ಪ ಅಥವಾ ಎಣ್ಣೆ ಹಚ್ಚಬೇಕು. ತುಪ್ಪ ಹಾಕಿದರೆ ಅದ್ಭುತ ರುಚಿ ನೀಡುತ್ತದೆ. ಈಗ ಕಾವಲಿ ಮೇಲೆ ದೋಸೆ ಹಾಕುವ ರೀತಿಯಲ್ಲಿ ಹಾಕಿ. ಅಗತ್ಯವಿದ್ದರೆ ಅದು ಸ್ವಲ್ಪ ಕಾದ ಮೇಲೆ ಮತ್ತೆ ತುಪ್ಪ ಸವರಿ. ಅದು ಬೆಂದ ನಂತರ ಖಾರದ ಚಟ್ನಿ ಜೊತೆ ಸೇವಿಸಿದರೆ ಅದರ ರುಚಿ ಅದ್ಭುತ.

ಇದನ್ನೂ ಓದಿ: ಇಡ್ಲಿ ಜೊತೆಗೆ ತಿಂಡಿಗೆ ದರ್ಶಿನಿ ಸ್ಟೈಲ್ ಚಟ್ನಿ ಮಾಡಿ - ಮಾಡೋದು ಹೇಗೆ ? ಇಲ್ಲಿದೆ ರೆಸಿಪಿ

ಈ ದೋಸೆಯನ್ನು ಮಾಡಲು ಹೆಚ್ಚು ಸಮಯದ ಅಗತ್ಯ ಕೂಡ ಇಲ್ಲ. ಅಲ್ಲದೇ ನಿಮಗೆ ಇದು ಸಿಹಿ ಅನಿಸಿದರೆ ಅದನ್ನು ನೀವು ಹೆಚ್ಚು ಖಾರದ ಚಟ್ನಿ ಜೊತೆ ಸೇವನೆ ಮಾಡಬೇಕು. ಅಲ್ಲದೇ ಮನೆಯಲ್ಲಿ ಸಿಗುವ ಸುಲಭ ಪದಾರ್ಥಗಳಿಂದ ಇದನ್ನು ಮಾಡುವುದರಿಂದ ಇದು ನಿಮ್ಮ ಸಮಯವನ್ನು ಮತ್ತು ಹಣವನ್ನು ಇರೆಡನ್ನು ಉಳಿಸುತ್ತದೆ.
Published by:Sandhya M
First published: