Breakfast Recipe: ಚುಮು ಚುಮು ಚಳಿಯಲ್ಲಿ ಬೆಳಗಿನ ತಿಂಡಿಗೆ ಸೋಯಾಬೀನ್​ ಇಡ್ಲಿ ಇದ್ರೆ ಸೂಪರ್ ಅಲ್ವಾ? ಹಾಗಾದ್ರೆ ಇಲ್ಲಿದೆ ರೆಸಿಪಿ

SoyaBean Idli Recipe: ಇಡ್ಲಿಗಳನ್ನು (Idli)  ಬಿಸಿ ಸಾಂಬಾರ್ ಮತ್ತು ಅದರ ಬದಿಯಲ್ಲಿ ಸ್ವಲ್ಪ ಹಚ್ಚಿಕೊಳ್ಳಲು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನುವುದೇ ಒಂದು ಮಜಾ. ಇಡ್ಲಿ ಬಹುತೇಕವಾಗಿ ಎಲ್ಲಾ ರೀತಿಯಲ್ಲೂ ನಮ್ಮ ದೇಹಕ್ಕೆ ಒಳ್ಳೆಯದು. ರುಚಿಕರವಾಗಿರುವುದರ ಜೊತೆಗೆ ಇಡ್ಲಿಯೂ ಆರೋಗ್ಯಕರ ಮತ್ತು ಹೊಟ್ಟೆಯೂ ತಿಂದ ಮೇಲೆ ಹಗುರವಾಗಿರುತ್ತದೆ, ಅಷ್ಟೊಂದು ಭಾರ ಎನಿಸುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿದಿನ ಬೆಳಗ್ಗೆ ಎದ್ದು ಏನಪ್ಪಾ ತಿಂಡಿ (Breakfast) ಮಾಡುವುದು, ಯಾವ ತಿಂಡಿ ಮಾಡಿದರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತದೆ ಮತ್ತು ಮೇಲಾಗಿ ಬೆಳಗ್ಗೆ ಬೆಳಗ್ಗೆ ಎಣ್ಣೆಯಲ್ಲಿ ಕರಿದಂತಹ ತಿಂಡಿಯನ್ನು ಉಪಾಹಾರಕ್ಕೆ ಮನೆಯವರ ಮುಂದೆ ಇಡುವಂತಿಲ್ಲ.ಅದಕ್ಕಾಗಿ ಹೆಚ್ಚಿನ ಗೃಹಿಣಿಯರು ಎಣ್ಣೆ ಪದಾರ್ಥಗಳನ್ನು ಬಿಟ್ಟು ಬೇರೆ ಒಂದು ಆರೋಗ್ಯಕರ (Healthy Food) ಉಪಾಹಾರ ಮಾಡುವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಇರುವುದನ್ನು ನಾವೆಲ್ಲಾ ಸಹಜವಾಗಿ ನಮ್ಮ ಮನೆಯಲ್ಲಿ ನೋಡಿರುತ್ತೇವೆ.ಇಡ್ಲಿ ಎಂದರೆ ಬಹುತೇಕರು ಇಷ್ಟಪಡುವ ಉಪಹಾರವಾಗಿದ್ದು, ಇದನ್ನು ಯಾರು ಬೇಡ ಎನ್ನುವುದು ಅಷ್ಟೊಂದು ಸುಲಭದ ಮಾತಲ್ಲ.

ಇಡ್ಲಿಗಳನ್ನು (Idli)  ಬಿಸಿ ಸಾಂಬಾರ್ ಮತ್ತು ಅದರ ಬದಿಯಲ್ಲಿ ಸ್ವಲ್ಪ ಹಚ್ಚಿಕೊಳ್ಳಲು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನುವುದೇ ಒಂದು ಮಜಾ. ಇಡ್ಲಿ ಬಹುತೇಕವಾಗಿ ಎಲ್ಲಾ ರೀತಿಯಲ್ಲೂ ನಮ್ಮ ದೇಹಕ್ಕೆ ಒಳ್ಳೆಯದು. ರುಚಿಕರವಾಗಿರುವುದರ ಜೊತೆಗೆ ಇಡ್ಲಿಯೂ ಆರೋಗ್ಯಕರ ಮತ್ತು ಹೊಟ್ಟೆಯೂ ತಿಂದ ಮೇಲೆ ಹಗುರವಾಗಿರುತ್ತದೆ, ಅಷ್ಟೊಂದು ಭಾರ ಎನಿಸುವುದಿಲ್ಲ.

ಈ ರುಚಿಕರವಾದ ದಕ್ಷಿಣ ಭಾರತದ ಉಪಾಹಾರ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಎನ್ನುವುದೊಂದು ಬಿಟ್ಟರೆ ಇಡ್ಲಿ ತುಂಬಾ ಒಳ್ಳೆಯ ಉಪಾಹಾರ ಎಂದು ಹೇಳಬಹುದು.ಇಡ್ಲಿ ಮಾಡಲು ಅಕ್ಕಿ ನೆನೆಸುವುದರಿಂದ ಹಿಡಿದು ಇಡ್ಲಿ ತಯಾರಾಗಿ ರೆಡಿಯಾಗುವವರೆಗೆ ನಿಗಾ ವಹಿಸಬೇಕಾಗುತ್ತದೆ.

ನಿಮಗೆ ಬೇರೆ ರೀತಿಯ ಇಡ್ಲಿ ತಿನ್ನಬೇಕು ಎಂದು ಅನ್ನಿಸಿದರೆ, ಯಾವುದು ಮಾಡೋದು ಅಂತ ಯೋಚನೆ ಮಾಡ್ತಿದ್ರೆ ನೀವು ಸೋಯಾಬೀನ್ ಇಡ್ಲಿ ಮಾಡಬಹುದು. ಇದನ್ನ ಮಾಡುವುದು ಕಷ್ಟಕರವಲ್ಲ, ಬಹಳ ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಡುವ ವಿಧಾನ.

ಸೋಯಾಬೀನ್ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಇದನ್ನೂ ಓದಿ: ಪರೋಟ ಅಂದ್ರೆ ಇಷ್ಟನಾ? ಹಾಗಾದ್ರೆ ಮನೆಯಲ್ಲಿಯೇ ಮಾಡಿ ಬಾಯಿ ನೀರೂರಿಸುವ ಗೋಬಿ ಪರೋಟ

1 ಕಪ್ ಸೋಯಾಬೀನ್

1 ಕಪ್ ಬಿಳಿ ಉದ್ದಿನ ಬೇಳೆ

1 ಟೀಸ್ಪೂನ್ ಮೆಂತ್ಯ ಬೀಜಗಳು

1 ಕಪ್ ಇಡ್ಲಿ ರೈಸ್

1 ಟೀಸ್ಪೂನ್ ಚನ್ನಾ ದಾಲ್

ರುಚಿಗೆ ತಕ್ಕಷ್ಟು ಉಪ್ಪು

ಸೋಯಾಬೀನ್ ಇಡ್ಲಿ ಮಾಡುವ ವಿಧಾನ

ಮೊದಲನೆಯದಾಗಿ, ಬೇಳೆ, ಅಕ್ಕಿ ಮತ್ತು ಸೋಯಾಬೀನ್ ಅನ್ನು ಪ್ರತ್ಯೇಕವಾಗಿ ಬಟ್ಟಲುಗಳಲ್ಲಿ ನೆನೆಸಿ ಇಟ್ಟುಕೊಳ್ಳಿ. ಅಲ್ಲದೇ  ಅಕ್ಕಿಯನ್ನು ಕನಿಷ್ಠ 5-6 ಗಂಟೆಗಳ ಕಾಲ ನೆನೆಸಿಡುವುದು ಮುಖ್ಯ.

ನೆನೆಸಿದ ನಂತರ, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ದಪ್ಪ ಮತ್ತು ಸ್ಥಿರವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಸ್ವಲ್ಪ ನೀರು ಸೇರಿಸಿ ಮತ್ತು ಮತ್ತೆ ರುಬ್ಬಿಕೊಳ್ಳಿ. ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿದರೆ ಸಾಕು.

ಇದನ್ನೂ ಓದಿ: ಆರೋಗ್ಯಕ್ಕೆ ಪ್ರಯೋಜನಕರ ಈ ಮೊಳಕೆ ಕಾಳಿನ ದೋಸೆ- ಇಲ್ಲಿದೆ ರೆಸಿಪಿ

ಈಗ ಅದಕ್ಕೆ ಉಪ್ಪನ್ನು ಸೇರಿಸಿ ಚನ್ನಾಗಿ ಬೆರಸಿ ಕನಿಷ್ಠ 6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹುದುಗಿಸಿ ಇಡಿ. ಬೆಳಗ್ಗೆ ಅದನ್ನು ಮತ್ತೊಮ್ಮೆ ಮಿಶ್ರಣ ಮಾಡಿ ಇಡ್ಲಿ ಸ್ಟೀಮರ್‌ನಲ್ಲಿ ಸ್ಟೀಮ್ ಮಾಡಿ ಮತ್ತು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿ ಜೊತೆ ಸವಿಯಿರಿ.
Published by:Sandhya M
First published: