Breakfast Recipe: ಮಕ್ಕಳಿಗೆ ಫೇವರೇಟ್ ಈ ಆಲೂಗೆಡ್ಡೆ ದೋಸೆ- ಇಲ್ಲಿದೆ ನೋಡಿ ರೆಸಿಪಿ

Potato Dosa Recipe: ಈಗ ಮಕ್ಕಳಿಗೆ ಶಾಲೆ ಆರಂಭವಾಗಿದೆ ಎಲ್ಲವೂ ಬೆಳಗ್ಗೆ ಗಡಿಬಿಡಿಯಾಗುವುದರಿಂದ ಈ ಸಮಯದಲ್ಲಿ ನಿಮಗೆ ಆಲೂಗೆಡ್ಡೆ ದೋಸೆ ಸಹಾಯ ಮಾಡುತ್ತದೆ. ಹಾಗಾದ್ರೆ ಆಲೂಗೆಡ್ಡೆ ದೋಸೆ ಮಾಡುವುದು ಹೇಗೆ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಿನ ತಿಂಡಿ (Breakfast) ಏನು ಮಾಡುವುದು ಅನ್ನೋದು ಎಲ್ಲಾ ಮಹಿಳೆಯರಿಗೆ ದೊಡ್ಡ ತಲೆನೋವು ಎಂದರೆ ತಪ್ಪಲ್ಲ. ಅದರಲ್ಲೂ ಮಕ್ಕಳಿರುವ (Children) ಮನೆಯಲ್ಲಿ ತಿಂಡಿ ಮಾಡುವುದು ಸುಲಭದ ಮಾತಲ್ಲ. ಅವರಿಗೆ ಯಾವುದೇ ತಿಂಡಿ ಕೊಟ್ಟರೂ ಅದು ಇಷ್ಟವಾಗುವುದಿಲ್ಲ. ಆದರೆ ನಾವು ದಕ್ಷಿಣ ಭಾರತದಲ್ಲಿ (South Indian) ವಿವಿಧ ರೀತಿಯ ತಿಂಡಿಗಳನ್ನು ಮಾಡುತ್ತೇವೆ. ನಾವು ಹೇಗೆ ದೋಸಾ (Dosa), ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆಯೋ ಹಾಗೆಯೇ ಕೆಲವರಿಗೆ ದೋಸೆಯಲ್ಲಿ ವಿಭಿನ್ನವಾದದ್ದನ್ನ ಪ್ರಯತ್ನಿಸುವ ಆಸೆ ಇರುತ್ತದೆ. ದೋಸೆ ಎಂದರೆ ಎಲ್ಲರಿಗೂ ನೆನಪಾಗುವುದು ಖಾಲಿ ದೋಸೆ, ಮಸಾಲೆ ದೋಸೆ, ಸೆಟ್ದೋಸೆ ಹೀಗೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸುಲಭವಾಗಿ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆಲೂಗೆಡ್ಡೆ ದೋಸೆ (Potato Dosa)ಬಗ್ಗೆ ಹಲವಾರು ಕೇಳಿರುವುದಿಲ್ಲ. ಮಸಾಲೆ ದೋಸೆ, ಆಲುಗೆಡ್ಡೆ ಪಲ್ಯದ ಬಗ್ಗೆ ಗೊತ್ತಿರುತ್ತದೆ, ಆದರೆ ಇದು ಸ್ವಲ್ಪ ವಿಭಿನ್ನ.

 ಮುಂಜಾನೆ ಉಪಾಹಾರಕ್ಕಾಗಿ ಅಥವಾ ಟಿಫಿನ್ ಬಾಕ್ಸ್‌ಗೆ ಸಹ ಆಲೂಗೆಡ್ಡೆ ಮತ್ತು ಮೈದಾ ಹಿಟ್ಟಿನಿಂದ ತಯಾರಿಸಿದ ಆರೋಗ್ಯಕರ ದಿಢೀರ್​ ದೋಸೆ ಉತ್ತಮವಾಗಿದೆ. .ಇತರ ಸಾಂಪ್ರದಾಯಿಕ ದಕ್ಷಿಣ ಭಾರತದ ದೋಸೆ ಪಾಕವಿಧಾನಕ್ಕಿಂತ ಇದು ಭಿನ್ನವಾಗಿದೆ, ಮೈದಾ ದೋಸೆ ಮಾಡುವ ವಿಧಾನ ಜನಪ್ರಿಯ ರವಾ ದೋಸೆ ವಿಧಾನಕ್ಕೆ ಹೋಲುತ್ತದೆ, ಅದು ಒಂದೇ ವಿನ್ಯಾಸ ಮತ್ತು ಗರಿಗರಿಯಾದ ಮಟ್ಟವನ್ನು ಹೊಂದಿರುತ್ತದೆ. ರವಾ ದೋಸೆಯಲ್ಲಿ, ಮೈದಾ ಅಥವಾ ಎಲ್ಲಾ ತರಹದ ಹಿಟ್ಟನ್ನು ಸೇರಿಸಲಾಗುತ್ತದೆ.

ಇನ್ನೂ ಈ ದೋಸೆಯನ್ನು ದೋಸೆಯನ್ನು ಕೇವಲ 20 ನಿಮಿಷದಲ್ಲಿ ಮನೆಯಲ್ಲಿ ಇರುವ ಕೆಲವೇ ಪದಾರ್ಥಗಳನ್ನು ಬಳಸಿ ತಯಾರಿಸಬಹುದಾಗಿದೆ. ಈಗ ಮಕ್ಕಳಿಗೆ ಶಾಲೆ ಆರಂಭವಾಗಿದೆ ಎಲ್ಲವೂ ಬೆಳಗ್ಗೆ ಗಡಿಬಿಡಿಯಾಗುವುದರಿಂದ ಈ ಸಮಯದಲ್ಲಿ ನಿಮಗೆ ಆಲೂಗೆಡ್ಡೆ ದೋಸೆ ಸಹಾಯ ಮಾಡುತ್ತದೆ. ಹಾಗಾದ್ರೆ ಆಲೂಗೆಡ್ಡೆ ದೋಸೆ ಮಾಡುವುದು ಹೇಗೆ ಇಲ್ಲಿದೆ.

ಆಲೂಗೆಡ್ಡೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

4 ಆಲೂಗಡ್ಡೆ

1 ಕಪ್ ಮೈದಾಹಿಟ್ಟು

4 ಹಸಿರು ಮೆಣಸಿನಕಾಯಿ

ಕೊತ್ತಂಬರಿ ಸ್ವಲ್ಪ

ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: ಸ್ಪೆಷಲ್ ಹೆಸರು ಬೇಳೆ ಅಕ್ಕಿ ರೊಟ್ಟಿ ರೆಸಿಪಿ ನಿಮಗಾಗಿ

ಆಲೂಗೆಡ್ಡೆ ದೋಸೆ ಮಾಡುವ ವಿಧಾನ

ಮೊದಲು ಆಲೂಗಡ್ಡೆಯನ್ನು ಕುಕ್ಕರಿನಲ್ಲಿ ಬೇಯಿಸಿ, ಆರಿದ ಮೇಲೆ ಸಿಪ್ಪೆಯನ್ನು ಸುಲಿದು ಚೆನ್ನಾಗಿ ಪೇಸ್ಟ್​ ಮಾಡಿಟ್ಟುಕೊಳ್ಳಿ. ಅದಕ್ಕೆ ಉಪ್ಪು ಹಾಕಿ ಮತ್ತೆ ಚನ್ನಾಗಿ ಕಲಸಿ. ಅದಕ್ಕೆ ಮೈದಾಹಿಟ್ಟು ಮತ್ತು ಸ್ವಲ್ಪ ನೀರು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಅದು ದೋಸೆ ಹಿಟ್ಟಿನ ಹದಕ್ಕೆ ಬಂದರೆ ಸಾಕು.

ಈ ಹಿಟ್ಟಿನ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಶ್ರಣ ಮಾಡಿ, ಎಲ್ಲಾ ಮಸಾಲೆಗಳು ಸರಿಯಾಗಿ ಮಿಶ್ರಣ ಮಾಡಬೇಕು.

ಇದನ್ನೂ ಓದಿ: ಮೆಕ್ಕೆ ಜೋಳದ ಇಡ್ಲಿ ಎಷ್ಟು ಆರೋಗ್ಯಕರ ಗೊತ್ತಾ? ನೀವೂ ಟ್ರೈ ಮಾಡಿ

ನಂತರ ದೋಸೆ ಪ್ಯಾನ್​ ಅನ್ನು  ಗ್ಯಾಸ್​ ಮೇಲೆ ಇಟ್ಟು, ಪ್ಯಾನ್​ ಕಾದ ನಂತರ ಎಣ್ಣೆ ಸವರಿ ಆಲೂಗಡ್ಡೆ ಹಿಟ್ಟಿನ ಮಿಶ್ರಣವನ್ನು ದೋಸೆಯಂತೆ ಹಾಕಿ ಮತ್ತೆ ಎಣ್ಣೆ ಹಾಕಿ ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿದರೆ ಆಲೂಗೆಡ್ಡೆ ದೋಸೆ ರೆಡಿ.
Published by:Sandhya M
First published: