ಪತ್ರೊಡೆ (Pathrode) ಇದರ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತದೆ. ಇದನ್ನು ಮಲೆನಾಡು (Malenadu) ಮತ್ತು ಕರಾವಳಿ (Coastal) ಭಾಗದಲ್ಲಿ ಹೆಚ್ಚು ಮಾಡಲಾಗುತ್ತದೆ. ಹೆಚ್ಚಾಗಿ ಇದನ್ನು ಮಳೆಗಾಲದಲ್ಲಿ ಮಾಡಲಾಗುತ್ತದೆ. ಈ ಪತ್ರೊಡೆ ಇಲ್ಲದೆ ಮಳೆಗಾಲ ಮುಗಿಯುವುದಿಲ್ಲ. ಬೆಂಗಳೂರಿಗರಿಗೂ (Bengaluru) ಇತ್ತೀಚಿನ ದಿನಗಳಲ್ಲಿ ಪತ್ರೊಡೆ ರುಚಿ ಹತ್ತಿದೆ. ಹಲವಾರು ಹೋಟೆಲ್ಗಳು ಪತ್ರೊಡೆಯನ್ನು ಮಾಡುತ್ತವೆ. ಕೆಲವರಿಗೆ ಮನೆಯಲ್ಲಿ ಇದನ್ನು ಮಾಡುವುದು ಹೇಗೆ ಎಂಬುದು ಗೊತ್ತಿಲ್ಲ, ಹಾಗಾಗಿ ಇವತ್ತು ನಾವು ಸುಲಭವಾಗಿ ಪತ್ರೊಡೆ ಮಾಡುವ ವಿಧಾನವನ್ನು ಹೇಳಿಕೊಡುತ್ತೇವೆ.
ಕ್ಯಾಲ್ಸಿಯಂ ಅಧಿಕವಿದೆ, ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು. ಹಾಗೆಯೇ ಫೀನಾನ್ಗಳು, ಟ್ಯಾನಿನ್ಸ್, ಪ್ಲೇವೋನಾಯ್ಡ್ಸ್, ಗ್ಲೈಸೋಸೈಡ್ಸ್, ಸ್ಟೀರೋಲ್ಸ್ ಅಂಶವಿರುವುದರಿಂದ ಸಂಧಿವಾತ ನಿವಾರಿಸುತ್ತದೆ.
ಪತ್ರೊಡೆ ಮಾಡಲು ಬೇಕಾಗುವ ಸಾಮಾಗ್ರಿಗಳು
ಕೆಸುವಿನ ಎಲೆಗಳು
ಅರ್ಧ ಕೆಜಿ ಅಕ್ಕಿ
ಒಂದು ಕಪ್ ತುರಿದ ತೆಂಗಿನ ಕಾಯಿ
ಕೊತ್ತಂಬರಿ ಬೀಜ 10 ರಿಂದ 12 ಕೆಂಪು ಮೆಣಸು
ಬೆಲ್ಲ
ಹುಣಸೇ ಹಣ್ಣು
ಇದನ್ನೂ ಓದಿ: ಸೇಮ್ ಇಡ್ಲಿ ತಿನ್ನುವ ಬದಲು ಮಂಗಳೂರು ಸ್ಟೈಲ್ ಕೊಟ್ಟೆ ಕಡುಬು ಟ್ರೈ ಮಾಡಿ
ರುಚಿಗೆ ತಕ್ಕಷ್ಟು ಉಪ್ಪು
ಪತ್ರೊಡೆ ಮಾಡುವ ವಿಧಾನ
ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೆನೆಸಿ ಇಡಿ. . ಅಕ್ಕಿ, ಉಪ್ಪು ಮತ್ತು ಕೆಸುವಿನೆಲೆಯನ್ನು ಬಿಟ್ಟು ಎಲ್ಲ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ. ನಂತರ ನೆನೆದ ಅಕ್ಕಿ ಮತ್ತು ಉಪ್ಪು ಸೇರಿಸಿಕೊಂಡು ಸಣ್ಣಗೆ ರುಬ್ಬಿ ಇಟ್ಟುಕೊಳ್ಳಿ. ರುಬ್ಬಿಕೊಳ್ಳುವಾಗ ಹೆಚ್ಚು ನೀರು ಸೇರಿಸಿಕೊಳ್ಳಬಾರದು.
ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪ ಹದದಲ್ಲಿ ಹಿಟ್ಟನ್ನು ರುಬ್ಬಿಕೊಳ್ಳಿ. ಕೆಸುವಿನ ಎಲೆಯನ್ನು ಚೆನ್ನಾಗಿ ತೊಳೆದುಕೊಳ್ಳಿ, ನಂತರ ಒದ್ದೆ ಬಟ್ಟೆಯಲ್ಲಿ ಒರೆಸಿಕೊಳ್ಳಿ. ನಂತರ ಎಲೆಯ ಹಿಂಭಾಗದಲ್ಲಿರುವ ದಪ್ಪನೆಯ ನಾರುಗಳನ್ನು ಕಿತ್ತು ಹಾಕಿ.
ಪತ್ರೊಡೆ ಚೆನ್ನಾಗಿ ಆಗಬೇಕು ಅಂದ್ರೆ ಎಲೆಗಳು ತೂತಾಗಿರಬಾರದು. ಈಗ ಕೆಸುವಿನೆಲೆಗಳನ್ನು ಟೇಬಲ್ ಮೇಲೆ ಚೆಂದಾಗಿ ಹರಡಿಕೊಂಡು ಎಲೆಯ ಹಿಂಬದಿ ಮೇಲೆ ಹಿಟ್ಟನ್ನು ತೆಳ್ಳಗೆ ಹಚ್ಚಿ.
ಇದನ್ನೂ ಓದಿ: ಬಾದಾಮಿಯನ್ನು ಹೇಗೇಗೋ ಅಲ್ಲ, ಹೀಗೆ ತಿಂದರೆ ಲಾಭ ಹೆಚ್ಚಂತೆ
ಅದರ ಮೇಲೆ ಇನ್ನೊಂದು ಎಲೆ ಇಟ್ಟು ಮತ್ತೆ ಅದರ ಮೇಲೆ ಹಿಟ್ಟು ಹಚ್ಚಿ. ಎರಡೂ ಎಲೆಯ ಬದಿಗಳನ್ನು ಮಡಚಿಕೊಂಡು ಎಲೆಯನ್ನು ಸುರುಳಿ ಸುತ್ತಿದ ಹಾಗೆ ಸುತ್ತಿ. ಹೀಗೆ ಇಪ್ಪತ್ತು ಎಲೆಯಲ್ಲಿ 6 ರಿಂದ 7 ಪತ್ರೊಡೆಗಳು ರೆಡಿಯಾದ ನಂತರ ಅದನ್ನು ಹಬೆಯಲ್ಲಿ 30 ನಿಮಿಷ ಬೇಯಿಸಿದರೆ ಸೂಪರ್ ಟೇಸ್ಟಿ ಪತ್ರೊಡೆ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ