ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ.ಇನ್ನು ಎಲ್ಲರ ಮನೆಯಲ್ಲಿ ಉಪ್ಪಿಟ್ಟು ಮಾಡಿಯೇ ಮಾಡುತ್ತೇವೆ. ಉಪ್ಪಿಟ್ಟು ಎಂದರೆ ಸಾಮಾನ್ಯವಾಗಿ ಎಲ್ಲರೂ ಮೂಗು ಮುರಿಯುತ್ತಾರೆ. ಆದರೆ ಇವತ್ತು ನಾವು ಹೇಳುತ್ತಿರುವ ಉಪ್ಪಿಟ್ಟು(Upma) ನಿಮ್ಮ ತೂಕ ಇಳಿಸಲು(weight Loss) ಸಹಾಯ ಮಾಡುತ್ತದೆ. ತೂಕ ಹೆ್ಚ್ಚಿರುವುದು ಸಧ್ಯದ ದೊಡ್ಡ ಸಮಸ್ಯೆಯಾಗಿದೆ. ತೂಕ ಇಳಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ವ್ಯಾಯಾಮ, ಡಯೆಟ್ ಹೀಗೆ. ತೂಕ ಇಳಿಸುವ ಭರದಲ್ಲಿ ಬೆಳಗಿನ ತಿಂಡಿ ಸೇವನೆ ಮಾಡುವುದಿಲ್ಲ. ಆದರೆ ಈ ಉಪ್ಪಿಟ್ಟು ನಿಮ್ಮ ತೂಕ ಕಡಿಮೆ ಮಾಡುತ್ತದೆ. ಯಾವುದು ಅಂತೀರಾ ನವಣೆ ಉಪ್ಪಿಟ್ಟು (Navane Or Millet Upma). ಹೌದು, ನವಣೆ ಸಿರಿಧಾನ್ಯಗಳಲ್ಲಿ ಒಂದು, ಇದು ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದ್ರೆ ನವಣೆ ಉಪ್ಪಿಟ್ಟು ಮಾಡುವುದು ಹೇಗೆ ಇಲ್ಲಿದೆ.
ನವಣೆ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಗ್ರಿ
ನವಣೆ 1 ಕಪ್
ತುಪ್ಪ 2 ಚಮಚ
ಜೀರಿಗೆ 1 ಚಮಚ 2
ಲವಂಗ 1
ಏಲಕ್ಕಿ 1
ಗೋಡಂಬಿ 4-5
ಒಣದ್ರಾಕ್ಷಿ 8-10
ಹಸಿ ಮೆಣಸಿನಕಾಯಿ 1
ಇದನ್ನೂ ಓದಿ: ಪೂರಿಯಷ್ಟೇ ರುಚಿಕರ ಈ ಪತ್ತರಿ - ಮಾಡೋದು ಎಷ್ಟು ಸುಲಭ ನೋಡಿ
ನೀರು 2 ಕಪ್
ಬಟಾಣಿ 1/4 ಕಪ್
ನಿಂಬೆರಸ 2 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ನವಣೆ ಉಪ್ಪಿಟ್ಟು ಮಾಡುವ ವಿಧಾನ
ಮೊದಲು ನೀವು ನವಣೆಯನ್ನು 2-3 ಗಂಟೆಗಳ ನೀರಿನಲ್ಲಿ ನೆನೆ ಹಾಕಿ. ನಂತರ ಒಂದು ಪಾತ್ರೆನ್ನು ತೆಗೆದುಕೊಂಡು ತುಪ್ಪವನ್ನು ಹಾಕಿ ಕಾಯಿಸಿ, ತುಪ್ಪ ಕಾದ ನಂತರ ಜೀರಿಗೆ , ಲವಂಗ, ಏಲಕ್ಕಿ ಹಾಕಿ ಚನ್ನಾಗಿ ಹುರಿಯಿರಿ. ಈಗ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿ 10 ಸೆಕೆಂಡ್ ಫ್ರೈ ಮಾಡಿ. ಫ್ರೈ ಮಾಡುವಾಗ ಎಚ್ಚರ ನಿಮಗೆ ಅದು ಸೀದು ಹೋಗಬಹುದು.
ಅಲ್ಲದೇ ಫ್ರೈ ಮಾಡುವಾಗ ಪರಿಮಳ ಬರುವ ತನಕ ಮಾಡಿ. ಎಲ್ಲವನ್ನೂ ಸರಿಯಾಗಿ ಫ್ರೈ ಮಾಡಿದ ನಂತರ ಈಗ ಹಸಿ ಮೆಣಸಿನ ಕಾಯಿ ಸೇರಿಸಿ 2-3 ಸೆಕೆಂಡ್ ಫ್ರೈ ಮಾಡಿ, ಸರಿಯಾಗಿ ಫ್ರೈ ಮಾಡಿದ ನಂತರ ನೀರು ಹಾಕಿ ಕುದಿಸಿ.
ನೀರು ಸ್ವಲ್ಪ ಕುದಿಯುತ್ತಿರುವಾಗ ಬಟಾಣಿ (ಹಸಿ ಬಟಾಣಿ) ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಹೆಚ್ಚು ಕುದಿಯಲಾರಂಭಿಸಿದಾಗ ನೆನೆಸಿದ ನವಣೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಬೆಂದ ಮೇಲೆ ಉರಿಯಿಂದ ಇಳಿಸಿ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ನವಣೆ ಉಪ್ಪಿಟ್ಟು ರೆಡಿ.
ಇದನ್ನೂ ಓದಿ: ಚಳಿಗಾಲಕ್ಕೆ ಬಿಸಿ ಬಿಸಿ ಕಿಚಡಿ ಮಾಡಿ -ಮಕ್ಕಳಿಗೂ ಇಷ್ಟ ಈ ಸೂಪರ್ ತಿಂಡಿ
ಕೆಲವರಿಗೆ ನಿಂಬೆರಸ ಇಷ್ಟವಾಗುವುದಿಲ್ಲ, ಆದರೆ ನಿಂಬೆ ರಸ ಹೆಚ್ಚು ರುಚಿ ನೀಡುತ್ತದೆ. ಇದನ್ನೂ ನಿಯಮಿತವಾಗಿ ಸೇವನೆ ಮಾಡುವುದು ತೂಕ ಇಳಿಸಲು ಸಹಕಾರಿ. ನಿಮಗೆ ದಿನಾ ಇದನ್ನೂ ತಿನ್ನಲು ಸಾಧ್ಯವಿಲ್ಲ ಎಂದರೆ ವಾರಕ್ಕೆ 3 ದಿನ ಸೇವನೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ