• Home
  • »
  • News
  • »
  • lifestyle
  • »
  • Breakfast Recipe: ಬೆಳಗಿನ ತಿಂಡಿಗೆ ಮಹಾರಾಷ್ಟ್ರ ಸ್ಪೆಷಲ್​ ಮಿಸಲ್ ಪಾವ್ ಮಾಡಿ ಸವಿಯಿರಿ

Breakfast Recipe: ಬೆಳಗಿನ ತಿಂಡಿಗೆ ಮಹಾರಾಷ್ಟ್ರ ಸ್ಪೆಷಲ್​ ಮಿಸಲ್ ಪಾವ್ ಮಾಡಿ ಸವಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Misal Pav Recipe: ಮಹಾರಾಷ್ಟ್ರದಲ್ಲಿ ಮಿಸಾಲ್ ಪಾವ್ ಮಾಡುವ ಹಲವು ವಿಧಗಳಿದೆ. ಸಾಮಾನ್ಯವಾಗಿ, ಹೆಸರು ಕಾಳನ್ನು ಮಿಸಾಲ್ ಮಾಡಲು ಬಳಸಲಾಗುತ್ತದೆ. ನೀವು ನಿಮಗೆ ಬೇಕಾದ ಕಾಳನ್ನು ಸಹ ಬಳಸಬಹುದು.  

  • Share this:

ಮಿಸಾಲ್ ಪಾವ್ (Misal Pav) ಜನಪ್ರಿಯ ಮಹಾರಾಷ್ಟ್ರದ (Maharashtra) ಬೀದಿ ಆಹಾರವಾಗಿದ್ದು, ಈರುಳ್ಳಿ (Onion) , ಟೊಮ್ಯಾಟೊ, ಫರ್ಸಾನ್ (ಹುರಿದ ಖಾರದ ಮಿಶ್ರಣ), ನಿಂಬೆ ರಸ, ಕೊತ್ತಂಬರಿ ಸೊಪ್ಪುಗಳೊಂದಿಗೆ ಉಸಲ್ ( ಹೆಸರು ಕಾಳಿನ ಮೊಳಕೆ ಕರಿ) ಮತ್ತು ಮೃದುವಾದ ಪಾವ್ ಜೊತೆಗೆ ಬಡಿಸಲಾಗುತ್ತದೆ. ಈ ಮಿಸಲ್ ಪಾಕವಿಧಾನವು ಟೇಸ್ಟಿ ಮತ್ತು ಸುಲಭವಾಗಿದ್ದು, ಇದನ್ನು ಬೆಳಗಿನ ತಿಂಡಿಯಾಗಿ ಹೆಚ್ಚಾಗಿ ತಿನ್ನಲಾಗುತ್ತದೆ.  ಇಲ್ಲಿ "ಮಿಸಲ್" (Misal)  ಎಂಬ ಪದವು ಮೊಳಕೆ ಕಾಳಿನ ಕರಿ ಮತ್ತು ಪಾವ್ ಮಿಕ್ಸ್ ಆಗಿದ್ದು, ವಾಸ್ತವವಾಗಿ, ಮರಾಠಿ ಭಾಷೆಯಲ್ಲಿ, ಮಿಸಲ್ ಪದವು ಮಿಶ್ರಣ ಎಂಬ ಅರ್ಥವನ್ನು ನೀಡುತ್ತದೆ. ಈ ಮೊಳಕೆ ಕಾಳಿಗೆ ಉಸಲ್ ಎಂದೂ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಮಿಸಾಲ್ ಪಾವ್ ಮಾಡುವ ಹಲವು ವಿಧಗಳಿದೆ. ಸಾಮಾನ್ಯವಾಗಿ, ಹೆಸರು ಕಾಳನ್ನು ಮಿಸಾಲ್ ಮಾಡಲು ಬಳಸಲಾಗುತ್ತದೆ. ನೀವು ನಿಮಗೆ ಬೇಕಾದ ಕಾಳನ್ನು ಸಹ ಬಳಸಬಹುದು.  


ಹಾಗಾದ್ರೆ ಮಿಸಲ್ ಪಾವ್ ಮಾಡುವ ವಿಧಾನ ಹೇಗೆ ಎಂಬುದು ಇಲ್ಲಿದೆ.


ಮಿಸಲ್ ಪಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು


2 ಕಪ್ ಮೊಳಕೆ ಕಾಳು


¼ ಟೀಸ್ಪೂನ್ ಅರಿಶಿನ


½ ಟೀಸ್ಪೂನ್ ಉಪ್ಪು


1 ಕಪ್ ನೀರು


2 ಟೀಸ್ಪೂನ್ ಎಣ್ಣೆ


2 ಇಂಚಿನ ಶುಂಠಿ


1 ಈರುಳ್ಳಿ,


2 ಎಸಳು ಬೆಳ್ಳುಳ್ಳಿ


¼ ಕಪ್ ಒಣ ತೆಂಗಿನಕಾಯಿ


1 ಟೊಮ್ಯಾಟೊ


¼ ಕಪ್ ನೀರು


3 ಟೇಬಲ್ಸ್ಪೂನ್ ಎಣ್ಣೆ


1 ಟೀಸ್ಪೂನ್ ಸಾಸಿವೆ


1 ಟೀಸ್ಪೂನ್  ಜೀರಿಗೆ


ಕೆಲವು ಕರಿಬೇವಿನ ಎಲೆಗಳು


1 ಟೀಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ


¼ ಟೀಸ್ಪೂನ್ ಅರಿಶಿನ


1 ಟೀಸ್ಪೂನ್ ಕೊತ್ತಂಬರಿ ಪುಡಿ


1 ಟೀಸ್ಪೂನ್ ಗರಂ ಮಸಾಲ


ಸಣ್ಣ ತುಂಡು ಬೆಲ್ಲ


½ ಟೀಸ್ಪೂನ್ ಉಪ್ಪು


5 ಕಪ್ ನೀರು


2 ಕಪ್ ಫಾರ್ಸನ್ / ಮಿಶ್ರಣ


ಈರುಳ್ಳಿ


2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು, ನುಣ್ಣಗೆ ಕತ್ತರಿಸಿ


6 ಪಾವ್


1 ನಿಂಬೆ


ಇದನ್ನೂ ಓದಿ: ಕರಾವಳಿ ಸ್ಟೈಲ್ ಪತ್ರೊಡೆ ಮಾಡೋದು ಎಷ್ಟು ಸುಲಭ ನೋಡಿ


ಮಿಸಲ್ ಪಾವ್ ಮಾಡುವ ವಿಧಾನ


ಮೊದಲನೆಯದಾಗಿ, ಪ್ರೆಶರ್ ಕುಕ್ಕರ್‌ನಲ್ಲಿ 2 ಕಪ್ ಮೊಳಕೆಯೊಡೆದ ಕಾಳನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಉಪ್ಪು ಮತ್ತು 1 ಕಪ್ ನೀರು ಸೇರಿಸಿ. ಒಂದು ಶಿಳ್ಳೆ  ಬರುವವರೆಗೆ ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಿ ಮತ್ತು ಪಕ್ಕಕ್ಕೆ ಇಟ್ಟುಕೊಳ್ಳಿ.


ಒಂದು ಬಾಣಲೆ ತೆಗೆದುಕೊಂಡು 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಕಾಯಿಸಿ.  ಎಣ್ಣೆ ಕಾದ ನಂತರ 2 ಇಂಚಿನ ಶುಂಠಿ ಮತ್ತು 2 ಎಸಳು ಬೆಳ್ಳುಳ್ಳಿಯನ್ನು ಹಾಕಿ. ನಂತರ ಈರುಳ್ಳಿ ಹೆಚ್ಚಿಕೊಂಡು ಹಾಕಿ, ಅದು  ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.


ನಂತರ ¼ ಕಪ್ ಒಣ ತೆಂಗಿನಕಾಯಿ ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿ, ನಂತರ ಹೆಚ್ಚಿಕೊಂಡ ಟೊಮೆಟೊ ಮೃದುವಾಗುವವರೆಗೆ ಸಾಟ್ ಮಾಡಿ. ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗೆ ಮಾಡಿ ಮತ್ತು ಬ್ಲೆಂಡರ್ಗೆ ಹಾಕಿ ಪೇಸ್ಟ್​ ಮಾಡಿಕೊಂಡು ಇಟ್ಟುಕೊಳ್ಳಿ.


ಈಗ ಒಂದು ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಜೀರಾ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ¼ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಕೊತ್ತಂಬರಿ ಪುಡಿ ಮತ್ತು 1 ಟೀಸ್ಪೂನ್ ಗರಂ ಮಸಾಲಾ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ.


ಇದನ್ನೂ ಓದಿ: ಸೇಮ್ ಇಡ್ಲಿ ತಿನ್ನುವ ಬದಲು ಮಂಗಳೂರು ಸ್ಟೈಲ್​ ಕೊಟ್ಟೆ ಕಡುಬು ಟ್ರೈ ಮಾಡಿ


ಈಗ ತಯಾರಾದ ಮಸಾಲಾ ಪೇಸ್ಟ್‌ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಸಣ್ಣ ತುಂಡು ಬೆಲ್ಲ ಮತ್ತು ½ ಟೀಸ್ಪೂನ್ ಉಪ್ಪನ್ನು ಸೇರಿಸಿ.ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀರನ್ನು ಹಾಕಿ ಬೇಯಿಸಿ. ಎಲ್ಲ ಪದಾರ್ಥಗಳು ಬೆಂದ ಮೇಲೆ ಪಾವ್​ ಜೊತೆ ಮಿಸಲ್ ರೆಡಿ.

Published by:Sandhya M
First published: