• Home
  • »
  • News
  • »
  • lifestyle
  • »
  • Breakfast Recipe: ಮೃದುವಾದ, ಹೂವಿನಂತಹ ಮಲ್ಲಿಗೆ ಇಡ್ಲಿ ಮಾಡುವ ವಿಧಾನ ಇಲ್ಲಿದೆ

Breakfast Recipe: ಮೃದುವಾದ, ಹೂವಿನಂತಹ ಮಲ್ಲಿಗೆ ಇಡ್ಲಿ ಮಾಡುವ ವಿಧಾನ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mallige Idli Recipe: ಸಾಮಾನ್ಯವಾಗಿ ಸಾಮಾನ್ಯ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಹಾಗೆಯೇ ಮಲ್ಲಿಗೆ ಇಡ್ಲಿ ಎಂದರೆ ಹಲವಾರು ಜನರಿಗೆ ಅಚ್ಚು ಮೆಚ್ಚು, ಇದನ್ನು ಮಾಡುವುದು ಅಪರೂಪ. ಹೂವಿನಂತ ಮೃದುವಾದ ಇಡ್ಲಿ ಮಾಡುವ ವಿಧಾನ ಇಲ್ಲಿದೆ.

  • Share this:

South Indian Breakfast: ಇಡ್ಲಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬೆಳಗ್ಗೆಯ ಉಪಾಹಾರಕ್ಕೆ ಆರೋಗ್ಯಕರವೆಂದೇ ಪರಿಗಣಿಸಿರುವ ಇಡ್ಲಿಯನ್ನು (Healthy Idli) ವಿಭಿನ್ನವಾಗಿ ಮಾಡುವುದು ಉಂಟು. ತಟ್ಟೆ ಇಡ್ಲಿ, ರವೆ ಇಡ್ಲಿ, ಪುಡಿ ಇಡ್ಲಿ, ಕಾಂಚಿಪುರಂ ಇಡ್ಲಿ ಹೀಗೆ ಅನೇಕ ತರಹದ ಇಡ್ಲಿಗಳನ್ನು (Varieties of Idli) ಮಾಡುತ್ತಾರೆ. ಇಲ್ಲಿ ಇನ್ನೊಂದು ವಿಭಿನ್ನ ತರಹದ ಇಡ್ಲಿಯನ್ನು ನಿಮಗಾಗಿ ಮಾಡುವ ವಿಧಾನ ಹೇಳಿಕೊಡಲಿದ್ದೇವೆ. ಇಡ್ಲಿಯನ್ನು ಕೇವಲ 20 ನಿಮಿಷಗಳಲ್ಲಿಯೇ (20 minute breakfast) ಮಾಡಿಕೊಳ್ಳಬಹುದು.ದಕ್ಷಿಣ ಭಾರತದ ಪಾಕ ಪದ್ಧತಿಯಲ್ಲಿ ಎರಡನೇ ಅತ್ಯಂತ ಜನಪ್ರಿಯ ಭಕ್ಷ್ಯವೆಂದರೆ ಅದು ಇಡ್ಲಿ. ಹಬೆಯಲ್ಲಿ ಬೇಯಿಸಿದ ಅಕ್ಕಿ ಇಡ್ಲಿ (Steamed Delicacy), ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಇಡ್ಲಿ ದಿನದ ಯಾವುದೇ ಸಮಯದಲ್ಲಿ ಸೇವಿಸಿದರೂ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಇದು ತುಂಬಾ ಹಗುರ ಮತ್ತು ಮೃದುವಾಗಿದ್ದು ಸೇವಿಸಲು ಒಳ್ಳೆಯ ಭಕ್ಷ್ಯ (Tasty Food) ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಇಡ್ಲಿಯನ್ನು ಮೆಚ್ಚುವ ಜನರು ಎಷ್ಟರ ಮಟ್ಟಿಗೆ ಇದ್ದಾರೆ ಎಂದರೆ, ಇಂದು ನಾವು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕನಿಷ್ಠ ಒಂದಾದರೂ ಇಡ್ಲಿ ಮಾರುವ ಹೋಟೆಲ್ ಅನ್ನು ಕಾಣಬಹುದು. ಅನೇಕರು ಮನೆಯಲ್ಲಿಯೂ ಇಡ್ಲಿಗಳನ್ನು ತಯಾರಿಸುತ್ತಾರೆ. ಇಡ್ಲಿ ತಯಾರಕ ಮತ್ತು ತ್ವರಿತ ಇಡ್ಲಿ ಮಿಶ್ರಣದ ಸಹಾಯದಿಂದ, ಮನೆಯಲ್ಲಿ ದಕ್ಷಿಣ ಭಾರತದ ಪ್ರಧಾನ ಭಕ್ಷ್ಯವನ್ನು ಬಹುತೇಕರು ತುಂಬಾ ಸುಲಭವಾಗಿ ಮಾಡುತ್ತಾರೆ. ಆದರೆ ಇಡ್ಲಿ ಪಾಕ ವಿಧಾನವು ದಕ್ಷಿಣ ಭಾರತದ ಪ್ರದೇಶಗಳಲ್ಲಿ ಅನೇಕ ವ್ಯತ್ಯಾಸಗಳನ್ನು ಹೊಂದಿದೆ.


ಸಾಮಾನ್ಯವಾಗಿ ಸಾಮಾನ್ಯ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಹಾಗೆಯೇ ಮಲ್ಲಿಗೆ ಇಡ್ಲಿ ಎಂದರೆ ಹಲವಾರು ಜನರಿಗೆ ಅಚ್ಚು ಮೆಚ್ಚು, ಇದನ್ನು ಮಾಡುವುದು ಅಪರೂಪ. ಹೂವಿನಂತ ಮೃದುವಾದ ಇಡ್ಲಿ ಮಾಡುವ ವಿಧಾನ ಇಲ್ಲಿದೆ.


ಇದನ್ನೂ ಓದಿ:ಬೆಳಗಿನ ತಿಂಡಿಗೆ ರುಚಿ-ರುಚಿಯಾದ ಅವರೆಕಾಯಿ ದೋಸೆ ಟ್ರೈ ಮಾಡಿ, ಇಲ್ಲಿದೆ ರೆಸಿಪಿ


ಮಲ್ಲಿಗೆ ಇಡ್ಲಿ ಮಾಡಲು ಬೇಕಾಗುವ ವಿಧಾನ


ಅಕ್ಕಿ – 2 ಲೋಟ
ಉದ್ದಿನ ಬೇಳೆ – 1 ಲೋಟ
ಅವಲಕ್ಕಿ – 1/2 ಲೋಟ
ಸಬ್ಬಕ್ಕಿ – 1/2 ಲೋಟ.

ಮಲ್ಲಿಗೆ ಇಡ್ಲಿ ಮಾಡುವ ವಿಧಾನ
ಅವಲಕ್ಕಿ ಒಂದನ್ನು ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ತೊಳೆದು ನೆನೆಸಿಡಿ. ಇವೆಲ್ಲವೂ 6-7 ಗಂಟೆಗಳ ಕಾಲ ನೆನೆಯಬೇಕು. ಅವಲಕ್ಕಿ ಮಾತ್ರ 5 ನಿಮಿಷ ನೆನೆಸಿದರೆ ಸಾಕು.


ಅವಲಕ್ಕಿ ಒಂದನ್ನು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ತೊಳೆದು ನೆನೆಸಿಡಿ. ಇವೆಲ್ಲವೂ 6-7 ಗಂಟೆಗಳ ಕಾಲ ನೆನೆಯಬೇಕು. ಅವಲಕ್ಕಿ ಮಾತ್ರ 5 ನಿಮಿಷ ನೆನೆಸಿದರೆ ಸಾಕು.


ಎಲ್ಲಾ ಪದಾರ್ಥಗಳು ನೆಂದಮೇಲೆ ಮೊದಲು ಸಬ್ಬಕ್ಕಿಯನ್ನು ನುಣ್ಣಗೆ ರುಬ್ಬಿ, ನಂತರ ಉದ್ದಿನ ಬೇಳೆ, ಅವಲಕ್ಕಿಯನ್ನು ಸಾಧ್ಯವಾದಷ್ಟು ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿಕೊಳ್ಳಿ.ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.ನಂತರ ಅಕ್ಕಿಯನ್ನು ಮಾತ್ರ ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ.


ಇದಕ್ಕೆ ಸ್ವಲ್ಪ ಸೋಡಾ ಹಾಕಬಹುದು, ಈ ಎಲ್ಲಾ ಹಿಟ್ಟುಗಳನ್ನು ಸರಿಯಾಗಿ ಕಲಸಿ ಮುಚ್ಚಿ ಸುಮಾರು 8 ಗಂಟೆಗಳ ಕಾಲ ಹುಳಿಯಾಗಲು ಬಿಡಿ ಅಥವಾ ರಾತ್ರಿಯಿಡಿ ಹಾಗೆಯೇ ಇಡಿ. ಇದನ್ನ ಬೆಚ್ಚಗಿನ ಜಾಗದಲ್ಲಿ ಇಡುವುದು ಉತ್ತಮ.


ಇದನ್ನೂ ಓದಿ:ಬೆಳಗಿನ ತಿಂಡಿಗೆ ಆರೋಗ್ಯಕರ ಓಟ್ಸ್​ ಉಪ್ಪಿಟ್ಟು ರೆಸಿಪಿ


ನಂತರ ಬೆಳಗ್ಗೆ ಇದಕ್ಕೆ ಉಪ್ಪು ಸೇರಿಸಿ ಕಲಸಿ ಇಡ್ಲಿ ತಟ್ಟೆಗೆ ತುಪ್ಪ ಅಥವಾ ಎಣ್ಣೆ ಸವರಿ 10 ರಿಂದ 12 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಮಲ್ಲಿಗೆ ಇಡ್ಲಿ ರೆಡಿ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು