Breakfast Recipe: ಬೆಳಗಿನ ತಿಂಡಿಗೆ ಮಲಬಾರ್ ಪರೋಟ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Malabar Paratha Recipe: ನೀವು ಕೇರಳ ಹೋಟೆಲ್‌ಗೆ ಹೋಗಿದ್ದೀರಿ ಎಂದಾದಲ್ಲಿ ಮಲಬಾರ್ ಪರೋಟ ಟೇಸ್ಟ್​ ಮಾಡಿರ್ತೀರಾ, ಅದರ ರುಚಿ ನಿಮಗೆ ಬಹಲ ಇಷ್ಟವಾಗಿರುತ್ತೆ ಆದ್ರೆ ಪದೇ ಪದೇ ಅಲ್ಲಿಗೆ ಹೋಗೋಕೆ ಸಾಧ್ಯವಿಲ್ಲ ಅಂದ್ರೆ ನೀವೆ ಮನೆಯಲ್ಲಿ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಕೆಲವು ಭಕ್ಷ್ಯಗಳು ಜಾಗತಿಕ ಜನಪ್ರಿಯತೆ ಪಡೆದರೆ, ಇನ್ನಿತರೆ ಭಕ್ಷ್ಯಗಳನ್ನು ಕಡಿಮೆ ಜನರು ಪ್ರಯತ್ನಿಸಿ ಮಾಡಿಕೊಳ್ಳುವುದುಂಟು. ನಾವು ಹೇಗೆ ದೋಸಾ, ಇಡ್ಲಿ ಮತ್ತು ವಡಾ ಮಾಡಿಕೊಂಡು ತಿನ್ನಲು ಇಷ್ಟ ಪಡುತ್ತೇವೆ.  ಹಾಗೆಯೇ ನೀವು ಕೇರಳ (Kerala)ಹೋಟೆಲ್‌ಗೆ ಹೋಗಿದ್ದೀರಿ ಎಂದಾದಲ್ಲಿ ಮಲಬಾರ್ ಪರೋಟ(malabar paratha) ಟೇಸ್ಟ್​ ಮಾಡಿರ್ತೀರಾ, ಅದರ ರುಚಿ ನಿಮಗೆ ಬಹಳ ಇಷ್ಟವಾಗಿರುತ್ತೆ ಆದ್ರೆ ಪದೇ ಪದೇ ಅಲ್ಲಿಗೆ ಹೋಗೋಕೆ ಸಾಧ್ಯವಿಲ್ಲ ಅಂದ್ರೆ ನೀವೆ ಮನೆಯಲ್ಲಿ ಮಾಡಬಹುದು. ಈ ಪರೋಟವು ಪದರಗಳನ್ನು ಹೊಂದಿದ್ದು ಇತರ ಸಾಮಾನ್ಯ ಪರೋಟಗಿಂತ ಆಕರ್ಷಕ ಮತ್ತು ರುಚಿಯಾಗಿರುತ್ತದೆ. ಪರೋಟ ರೆಸಿಪಿ ಅತಿ ಸುಲಭ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ನೀವು ಇದಕ್ಕಾಗಿ ಮಾಡುವ ವಿಧಾನವನ್ನು ಚನ್ನಾಗಿ ಕಲಿತುಕೊಳ್ಳಬೇಕು.

ಮಲಬಾರ್ ಪರೋಟ ಮಾಡಲು ಬೇಕಾಗುವ ಸಾಮಾಗ್ರಿಗಳು

ಮೈದಾ - 1 ಕಪ್

ಎಣ್ಣೆ - 3-4 ಚಮಚ

ಉಪ್ಪು - ರುಚಿಗೆ ತಕ್ಕಷ್ಟು

ನೀರು - 1 ಕಪ್

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡ್ಬೋದು ಈ ಸಬ್ಬಕ್ಕಿ ಉಪ್ಪಿಟ್ಟು -ಇಲ್ಲಿದೆ ರೆಸಿಪಿ

ಮಲಬಾರ್ ಪರೋಟ ಮಾಡುವ ವಿಧಾನ

ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಮೈದಾವನ್ನು ಹಾಕಿ, ಉಪ್ಪು ಮತ್ತು ಒಂದು ಚಮಚ ಎಣ್ಣೆಯನ್ನು ಸೇರಿಸಿ ಅಂತೆಯೇ ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಚನ್ನಾಗಿ ಕಲಸಿ.  ನೀರನ್ನು ಹಾಕುವಾಗ ಎಚ್ಚರದಿಂದಿರಿ  ಅದು ಹಿಟ್ಟನ್ನು ಗಂಟು ಗಂಟಾಗಿಸಬಹುದು. ಹಿಟ್ಟನ್ನು ನೀವು ಕಲಸುವ ರೀತಿ ಪರೋಟದ ಮೆಲೆ ಪರಿಣಾಮ ಬೀರುತ್ತದೆ.

ಈಗ ಹಿಟ್ಟನ್ನು ನಿಮ್ಮ ಅಡುಗೆ ಮನೆಯ  ಕಟ್ಟೆಯ ಮೇಲೆ ಹಾಕಿಕೊಂಡು ಅದರಲ್ಲಿರುವ ತೇವಾಂಶ ಹೋಗುವವರೆಗೂ ಕೈಯಲ್ಲಿ ನಾದುತ್ತಿರಿ. ಹಿಟ್ಟು ರಬ್ಬರ್‌ನಂತೆ ಮೃದುವಾಗುತ್ತದೆ ಮತ್ತು ಇದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.

ನಂತರ ಹಿಟ್ಟನ್ನು ಸಮಾನ ಭಾಗವನ್ನಾಗಿ ಮಾಡಿ. ಒಂದು ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಚಪ್ಪಟೆಯನ್ನಾಗಿಸಿ ಮತ್ತು ಚಪಾತಿ ರೋಲರ್ ಸಹಾಯದಿಂದ ಅದನ್ನು ಪರೋಟ ಆಕಾರದಲ್ಲಿ ಮಾಡಿ.

ನಿಮ್ಮ ಕೈಯಿಂದಲೇ ಇದನ್ನು ತಟ್ಟಬಹುದು, ಇಲ್ಲದಿದ್ದಲ್ಲಿ ಲಟ್ಟಣಿಗೆಯ ಸಹಾಯದಿಂದ ಇದನ್ನು ಚಪಾತಿ ಆಕಾರಕ್ಕೆ ತಂದುಕೊಂಡು ಪದರ ಪದರವಾಗಿ ಪರೋಟ ಆಕಾರದಲ್ಲಿ ತಯಾರಿಸಬಹುದು.

ಇದನ್ನೂ ಓದಿ: ಬಾಳೆಹಣ್ಣಿನ ಇಡ್ಲಿ ಟ್ರೈ ಮಾಡಿದ್ದೀರಾ? ಬೆಳಗಿನ ತಿಂಡಿಗೆ ತಿಂದ್ರೆ ಆರೋಗ್ಯಕ್ಕೂ ಒಳ್ಳೆಯದಂತೆ!

ನಂತರ ಕಾವಲಿಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ತವಾ ಬಿಸಿಯಾದ ಮೇಲೆ ಪರೋಟ ಹಾಕಿ ಎರಡೂ ಬದಿಯ ಚಿನ್ನದ ಬಣ್ಣಕ್ಕೆ ಬರುವವರೆಗೆ ಇದನ್ನು ಬೇಯಿಸಿ. ಹಾಗೆಯೇ ಪರೋಟಾವನ್ನು ಕಿಚನ್ ಟವೆಲ್ ಸಹಾಯದಿಂದ ಒತ್ತಿ ಪದರ ಬರುವಂತೆ ಮಾಡಿದರೆ ರುಚಿ ರುಚಿಯಾದ ಪರೋಟ ರೆಡಿ.
Published by:Sandhya M
First published: