• Home
  • »
  • News
  • »
  • lifestyle
  • »
  • Breakfast Recipe: ಮೆಕ್ಕೆ ಜೋಳದ ಇಡ್ಲಿ ಎಷ್ಟು ಆರೋಗ್ಯಕರ ಗೊತ್ತಾ? ನೀವೂ ಟ್ರೈ ಮಾಡಿ

Breakfast Recipe: ಮೆಕ್ಕೆ ಜೋಳದ ಇಡ್ಲಿ ಎಷ್ಟು ಆರೋಗ್ಯಕರ ಗೊತ್ತಾ? ನೀವೂ ಟ್ರೈ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Maize Idli: ಮೆಕ್ಕೆ ಜೋಳದಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು ಇದ್ದು ದೇಹದಲ್ಲಿನ ಫ್ರೀ ರಾಡಿಕಲ್ ಗಳ ವಿರುದ್ಧ ಕೆಲಸ ಮಾಡುವುದರಿಂದ ಚರ್ಮ ಬಹಳ ಬೇಗನೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಮೆಕ್ಕೆ ಜೋಳದ ಎಣ್ಣೆ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

ಇಡ್ಲಿ (Idli) ಇದು ದಕ್ಷಿಣ ಭಾರತದ (South India) ಸಾಂಪ್ರಾದಾಯಿಕ ತಿಂಡಿ ಎನ್ನಬಹುದು. ವಾರದಲ್ಲಿ ಒಮ್ಮೆಯಾದರೂ ಮನೆಗಳಲ್ಲಿ ನಾವು ಇಡ್ಲಿ ಮಾಡುತ್ತೇವೆ. ದಕ್ಷಿಣ ಭಾರತಿಯರ ತಿಂಡಿ ವಿಭಿನ್ನವಾಗಿರುತ್ತದೆ. ಒಂದು ತರಕಾರಿಯಲ್ಲಿ ಹಲವಾರು ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಹಾಗೆಯೇ ಒಂದು ತಿಂಡಿಯನ್ನು ನಾನಾ ರೀತಿಯಲ್ಲಿ ತಯಾರಿಸಬಹುದು. ಅದಕ್ಕೆ ಉದಾಹರಣೆ ಈ ಇಡ್ಲಿ. ಇಡ್ಲಿಯಲ್ಲಿ ಹಲವಾರು ವಿಧ. ರವೆ ಇಡ್ಲಿ, ಬಾಳೆ ಹಣ್ಣಿನ ಇಡ್ಲಿ, ಅಕ್ಕಿ ಇಡ್ಲಿ ಹೀಗೆ. ಆದರೆ ಮೆಕ್ಕೆ ಜೋಳದ ಇಡ್ಲಿ ಹೆಚ್ಚು ವಿಶೇಷ. ಮೆಕ್ಕೆ ಜೋಳದಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು.


ಮೆಕ್ಕೆ ಜೋಳದಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು ಇದ್ದು ದೇಹದಲ್ಲಿನ ಫ್ರೀ ರಾಡಿಕಲ್ ಗಳ ವಿರುದ್ಧ ಕೆಲಸ ಮಾಡುವುದರಿಂದ ಚರ್ಮ ಬಹಳ ಬೇಗನೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಮೆಕ್ಕೆ ಜೋಳದ ಎಣ್ಣೆ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ.  ವಿಟಮಿನ್  ಇ  ಅಂಶ ಮೆಕ್ಕೆ ಜೋಳದಲ್ಲಿ ಹೆಚ್ಚಿರುವುದರಿಂದ ಮುಖದ ಮೇಲಿನ ಮೊಡವೆಗಳು ಮತ್ತು ಕಲೆಗಳು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮೆಕ್ಕೆ ಜೋಳದ ಇಡ್ಲಿ ಕೂಡ ಹೆಚ್ಚು ರುಚಿಕರ ಮತ್ತು ಆರೋಗ್ಯಕರ. ಹಾಗಾದ್ರೆ ಮೆಕ್ಕೆ ಜೋಳದ ಇಡ್ಲಿ ಮಾಡುವ ವಿಧಾನ ಇಲ್ಲಿದೆ.


ಮೆಕ್ಕೆ ಜೋಳದ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು


ಮೆಕ್ಕೆ ಜೋಳ -ಒಂದೂವರೆ ಕಪ್


ಉದ್ದಿನ ಬೇಳೆ - ಮುಕ್ಕಾಲು ಕಪ್


ಇದನ್ನೂ ಓದಿ: ಆರೋಗ್ಯಕರ ಕ್ಯಾರೆಟ್​ ದೋಸೆ ಮಾಡುವ ರೆಸಿಪಿ ಇಲ್ಲಿದೆ


ಹುರಿದ ಕಡ್ಲೆಬೇಳೆ- ಒಂದು ದೊಡ್ಡ ಚಮಚ


ಹಸಿ ಮೆಣಸು - ಐದು


ತುರಿದ ತೆಂಗಿನಕಾಯಿ- ಎರಡು ದೊಡ್ಡ ಚಮಚ


ಸಾಸಿವೆ- ಒಂದು ಚಿಕ್ಕ ಚಮಚ


ಇಂಗು -ಅರ್ಧ ಚಿಕ್ಕ ಚಮಚ


ಕೊತ್ತಂಬರಿ ಸೊಪ್ಪು- ಚಿಕ್ಕದಾಗಿ ಹೆಚ್ಚಿದ್ದು


ಎಣ್ಣೆ- ಎರಡು ಚಿಕ್ಕ ಚಮಚ


ಉಪ್ಪು -ರುಚಿಗೆ ತಕ್ಕಷ್ಟು


ಮೆಕ್ಕೆ ಜೋಳದ ಇಡ್ಲಿ ಮಾಡುವ ವಿಧಾನ


ಮೆಕ್ಕೆಜೋಳ ಮತ್ತು ಉದ್ದಿನ ಬೇಳೆಗಳನ್ನು ಸುಮಾರು ಎರಡರಿಂದ 3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ನೀರನ್ನು ಚನ್ನಾಗಿ ಸೋಸಿ ಹುರಿದ ಕಡಲೆ ಬೇಳೆ ಮತ್ತು ಹಸಿಮೆಣಸಿನೊಂದಿಗೆ ಚನ್ನಾಗಿ ರುಬ್ಬಿಕೊಳ್ಳಿ .


ಇಡ್ಲಿಯ ಹಿಟ್ಟಿನ ಹದಕ್ಕೆ ಬರುವವರೆಗೂ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.   ಈಗ ತೆಂಗಿನ ತುರಿ, ಉಪ್ಪು ಹಾಕಿ ಚನ್ನಾಗಿ ಕಲಸಿ. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ, ಇಂಗು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.


ಇದನ್ನೂ ಓದಿ: ಬೆಂಗಳೂರಲ್ಲಿ ಒಳ್ಳೆ ಬಿರಿಯಾನಿ ತಿನ್ಬೇಕು ಅಂದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!


ಈ ಒಗ್ಗರಣೆಗೆ ರುಬ್ಬಿದ ಹಿಟ್ಟನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಎಲ್ಲಾ ಮಿಶ್ರಣಗಳು ಚನ್ನಾಗಿ ಮಿಶ್ರವಾಗುವ ರೀತಿ ಕಲಸಿ. ಈ ಹಿಟ್ಟನ್ನು ಇಡ್ಲಿಪಾತ್ರೆಯಲ್ಲಿ ಹಾಕಿ ಬೇಯಿಸಿದರೆ ಮೆಕ್ಕೆ ಜೋಳದ ಇಡ್ಲಿ ರೆಡಿ.

Published by:Sandhya M
First published: