Breakfast Recipe: ಕೇವಲ 10 ನಿಮಿಷದಲ್ಲಿ ಮಾಡಿ ಈ ಮೈದಾ ದೋಸೆ- ಇಲ್ಲಿದೆ ರೆಸಿಪಿ

Godhi Dosa Recipe: . ದೋಸೆಯಲ್ಲಿ ನಾವು ಯಾವುದೇ ರೀತಿಯ ಹೊಸ ಪ್ರಯತ್ನವನ್ನು ಮಾಡಬಹುದು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮೈದಾ ದೋಸೆ.  ಬೇರೆ ದೋಸೆಗಳನ್ನು ಮಾಡಲು ಹಿಂದಿನ ದಿನ ಅಕ್ಕಿಯನ್ನು ನೆನಸಿ ಮಾಡಬೇಕಾಗುತ್ತದೆ. ಆದರೆ ಈ ದೋಸೆ ಮಾಡಲು ಕೇವಲ 10 ನಿಮಿಷ ಸಾಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಈ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಈ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರ. ನಾವು ಬೆಳಗಿನ ತಿಂಡಿ ವಿಭಿನ್ನ ವಾಗಿ ಹೇಗೆ ಮಾಡುವುದು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಉದಾಹರಣೆಗೆ ದೋಸೆ. ಎಷ್ಟೆಲ್ಲಾ ವಿಧದ ದೋಸೆ ಮಾಡಬಹುದು ಎಂಬುದು ಏಣಿಸಲು ಸಾಧ್ಯವಿಲ್ಲ. ಹೌದು, ನೀವು ಹೆಚ್ಚು ಮಸಾಲೆ ದೋಸೆ, ಸೆಟ್​ ದೋಸೆ(Set Dosa), ಈರುಳ್ಳಿ ದೋಸೆ(onion Dosa) ಮಾಡುತ್ತೇವೆ. ಆದರೆ ಇನ್ನೂ ಹೆಚ್ಚಿನ ದೋಸೆ ಇದೆ. ದೋಸೆಯಲ್ಲಿ ನಾವು ಯಾವುದೇ ರೀತಿಯ ಹೊಸ ಪ್ರಯತ್ನವನ್ನು ಮಾಡಬಹುದು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮೈದಾ ದೋಸೆ.  ಬೇರೆ ದೋಸೆಗಳನ್ನು ಮಾಡಲು ಹಿಂದಿನ ದಿನ ಅಕ್ಕಿಯನ್ನು ನೆನಸಿ ಮಾಡಬೇಕಾಗುತ್ತದೆ. ಆದರೆ ಈ ದೋಸೆ ಮಾಡಲು ಕೇವಲ 10 ನಿಮಿಷ ಸಾಕು. ಫಟ್​ ಅಂತ ತಯಾರಾಗುವ ಈ ಸರಳ ದೋಸೆ ಮಾಡುವ ವಿಧಾನ ಇಲ್ಲಿದೆ.

ಮೈದಾ ದೋಸೆ  ಮಾಡಲು ಬೇಕಾಗುವ ಸಾಮಾಗ್ರಿಗಳು

1 ಕಪ್‌  ಮೈದಾ ಹಿಟ್ಟು

2 - ಕತ್ತರಿಸಿದ ಹಸಿಮೆಣಸಿನಕಾಯಿ

ಇದನ್ನೂ ಓದಿ: ಬೆಳಗಿನ ತಿಂಡಿಗೆ ಟ್ರೈ ಮಾಡಿ ಸೂಪರ್ ಟೇಸ್ಟಿ ಬ್ರೆಡ್ ದೋಸೆ

1 ಮುಷ್ಟಿಯಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು

1 ಚಮಚ ಜೀರಿಗೆೆ

ಅಗತ್ಯಕ್ಕೆ ತಕ್ಕಷ್ಟು ಉಪ್ಪು

ಮೈದಾ ದೋಸೆ ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಕಲಸುತ್ತಾ ಬನ್ನಿ. ಅದು ಬೇಗ ಗಂಟು ಗಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಕಲಸುವುದು ಸೂಕ್ತ.

ಗಂಟು ಗಂಟಾದರೆ ದೋಸೆ ಮಾಡಲು ಸಾಧ್ಯವಿಲ್ಲ. ಈಗ ಹೆಚ್ಚಿಕೊಂಡ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.  ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಣ ಮಾಡಬೇಕು. ಈಗ ಹಿಟ್ಟು ಸಿದ್ಧವಾಗಿದೆ.

ಒಂದು ಪ್ಯಾನ್​ ತೆಗೆದುಕೊಂಡು ಗ್ಯಾಸ್​ ಮೇಲೆ ಇಟ್ಟು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಕಾಯಿಸಬಹುದು. ದೋಸೆ ತವಾ ಬಿಸಿಯಾದ ಬಳಿಕ ದೊಸೆ ಹಿಟ್ಟನ್ನು ಹಾಕಿ, ಅಗತ್ಯಕ್ಕೆ ಅನುಸಾರವಾಗಿ ಎಣ್ಣೆಯನ್ನು ಹಾಕಿ ಬೇಯಿಸಿ.

ಇದನ್ನೂ ಓದಿ: ಅಕ್ಕಿ ರೊಟ್ಟಿಗಿಂತ ಸ್ವಾದಿಷ್ಠ ಈ ಬೀಟ್​ರೂಟ್​ ಕಡಲೆ ಹಿಟ್ಟಿನ ರೊಟ್ಟಿ -ಇಲ್ಲಿದೆ ನೋಡಿ ರೆಸಿಪಿ

ದೋಸೆಯು ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು. ಬಿಸಿ ಬಿಸಿಯಾದ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಬಹುದು.
Published by:Sandhya M
First published: