Breakfast Recipe: ಉಳಿದ ಇಡ್ಲಿಯಲ್ಲೂ ಸಖತ್ ತಿಂಡಿ ಮಾಡ್ಬಹುದು, ಇಡ್ಲಿ ಮಂಚೂರಿ ಟ್ರೈ ಮಾಡಿ ನೋಡಿ

Idli Manchurian: ನೀವು ಇಡ್ಲಿಗಳನ್ನು ಫ್ರೈ ಮಾಡಿ ಕತ್ತರಿಸಬಹುದು ಅಥವಾ ಕತ್ತರಿಸಿಕೊಂಡು ಫ್ರೈ ಮಾಡಬಹುದು. ನೀವು ಇಡ್ಲಿಗಳನ್ನು ಡೀಪ್ ಫ್ರೈ ಅಥವಾ ಶಾಲೋ ಫ್ರೈ ಮಾಡಬಹುದು.  ಮೊದಲು ಇಡ್ಲಿಗಳನ್ನು ತೆಗೆದುಕೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಇಡ್ಲಿ(Idli) ಮಾಡುತ್ತೇವೆ. ಆದರೆ ಕೆಲವೊಮ್ಮೆ ಮಾಡಿದ ಇಡ್ಲಿ ಉಳಿದು ಬಿಡುತ್ತದೆ. ಇಂಥಹ ಸಮಯದಲ್ಲಿ ಅಯ್ಯೋ ಮತ್ತೆ ಇಡ್ಲಿ ಯಾರು ತಿನ್ನೋದು ಅಂತ ಯೋಚನೆ ಮಾಡ್ತಿದ್ರೆ ಇಲ್ಲಿದೆ ನಿಮಗೆ ಪರಿಹಾರ. ಹೌದು, ಉಳಿದ ಇಡ್ಲಿಯಿಂದ ನೀವು ಇಡ್ಲಿ ಮಂಚೂರಿ(Idli Manchurian) ತಯಾರಿಸಬಹುದು. ಹೇಗೆ ಅಂತೀರಾ ಇಲ್ಲಿದೆ ರೆಸಿಪಿ. ಇಡ್ಲಿ ಮಂಚೂರಿಯನ್ ಮಾಡಲು ನೀವು ಮಧ್ಯಮ ಅಥವಾ ದೊಡ್ಡ ಗಾತ್ರದ ಇಡ್ಲಿಗಳು ಅಥವಾ ಮಿನಿ ಇಡ್ಲಿಗಳನ್ನು ಬಳಸಬಹುದು.ಇಡ್ಲಿ ಮಂಚೂರಿಯನ್ ಮಾಡುವುದು 20 ರಿಂದ 25 ನಿಮಿಷಗಳು ಸಾಕು.

ಇಡ್ಲಿ ಮಂಚೂರಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಉಳಿದ ಇಡ್ಲಿ,

ಈರುಳ್ಳಿ- ಅರ್ಧ ಕಪ್ (ಚೌಕಾಕಾರದಲ್ಲಿ ಹೆಚ್ಚಿ)

ಕ್ಯಾಪ್ಸಿಕಂ- ಅರ್ಧ ಕಪ್ (ಚೌಕಾಕಾರದಲ್ಲಿ ಹೆಚ್ಚಿ)

ಬೆಳ್ಳುಳ್ಳಿ- 6 ರಿಂದ 7

ಲವಂಗ- 1

ಶುಂಠಿ- 1 ಇಂಚು

ಹಸಿಮೆಣಸಿನ ಕಾಯಿ- 2

ಇದನ್ನೂ ಓದಿ: ಬೆಳಗಿನ ತಿಂಡಿಗೆ ಮಾಡಿ ನೋಡಿ ಮಲೆನಾಡು ಸ್ಟೈಲ್ ಅಕ್ಕಿ ಕಡುಬು -ಇಲ್ಲಿದೆ ರೆಸಿಪಿ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಇಡ್ಲಿ ಮಂಚೂರಿ ಮಾಡುವ ವಿಧಾನ

ನೀವು ಇಡ್ಲಿಗಳನ್ನು ಫ್ರೈ ಮಾಡಿ ಕತ್ತರಿಸಬಹುದು ಅಥವಾ ಕತ್ತರಿಸಿಕೊಂಡು ಫ್ರೈ ಮಾಡಬಹುದು. ನೀವು ಇಡ್ಲಿಗಳನ್ನು ಡೀಪ್ ಫ್ರೈ ಅಥವಾ ಶಾಲೋ ಫ್ರೈ ಮಾಡಬಹುದು.  ಮೊದಲು ಇಡ್ಲಿಗಳನ್ನು ತೆಗೆದುಕೊಳ್ಳಿ. ಇಡ್ಲಿಗಳು ಕಡಿಮೆ ಎಣ್ಣೆಯನ್ನು ಹೀರಿಕೊಳ್ಳುವುದರಿಂದ ಫ್ರಿಜ್‌ನಲ್ಲಿಟ್ಟು ನಂತರ ಫ್ರೈ ಮಾಡಿದರೆ ಉತ್ತಮ.

ಒಂದು ಪ್ಯಾನ್​ ತೆಗೆದುಕೊಂಡು 2 ಟೇಬಲ್ಸ್ಪೂನ್ ಎಣ್ಣೆಯನ್ನು ಹಾಕಿ ಕಾಯಿಸಿ. ಉರಿಯನ್ನು ಕಡಿಮೆಯಲ್ಲಿ ಇರಿಸಿ ಮತ್ತು ಇಡ್ಲಿಗಳನ್ನು ಹಾಕಿ, ಫ್ರೈ ಮಾಡಿ. ಒಂದು ಕಡೆ ಗರಿಗರಿಯಾದ ಮತ್ತು ಹೊಂಬಣ್ಣಕ್ಕೆ ಬಂದಾಗ, ಇಡ್ಲಿಗಳನ್ನು ತಿರುಗಿಸಿ ಮತ್ತೆ ಎರಡನೇ ಬದಿಯಲ್ಲಿ ಫ್ರೈ ಮಾಡಿ. ಇಡ್ಲಿಗಳು ಗರಿಗರಿಯಾದ ಮತ್ತು ಗೋಲ್ಡನ್ ಆಗುವವರೆಗೆ ಇಡ್ಲಿಗಳ ಎರಡನೇ ಭಾಗವನ್ನು ಸಹ ಚನ್ನಾಗಿ ಫ್ರೈ ಮಾಡಿ.

ಅಡಿಗೆ ಪೇಪರ್ ಟವೆಲ್ ಮೇಲೆ ಹುರಿದ ಇಡ್ಲಿಗಳನ್ನು ತೆಗೆದು ಇಟ್ಟುಕೊಳ್ಳಿ. ಅವುಗಳನ್ನು ಸ್ವಲ್ಪ ತಣ್ಣಗಾಗಲು ಬಿಡಿ.ಇಡ್ಲಿಗಳು ಸ್ವಲ್ಪ ತಣ್ಣಗಾದಾಗ, ಅವುಗಳನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ.

ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ 1 ಚಮಚ ಎಣ್ಣೆಯನ್ನು ಬಿಸಿ ಮಾಡಿ. 1.5 ಟೀಚಮಚ ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ, 1 ಟೀಚಮಚ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು 1 ಹಸಿರು ಮೆಣಸಿನಕಾಯಿ ಸೇರಿಸಿ ಚನ್ನಾಗಿ ಫ್ರೈ ಮಾಡಿ. ಬೆಳ್ಳುಳ್ಳಿ ತಿಳಿ ಗೋಲ್ಡನ್ ಆಗುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ.

ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಈರುಳ್ಳಿ ಮತ್ತು ಕ್ಯಾಪ್ಸಿಕಂ ಎರಡರ ಅಂಚುಗಳು ಸ್ವಲ್ಪ ಗೋಲ್ಡನ್ ಆಗಿ, ಅವುಗಳ ಮೇಲೆ ಕೆಲವು ಗುಳ್ಳೆಗಳು ಕಾಣಿಸುವವರೆಗೆ ಹುರಿಯಿರಿ. ನಂತರ 1 ಚಮಚ ಸೋಯಾ ಸಾಸ್ ಸೇರಿಸಿ ಮಿಶ್ರಣ ಮಾಡಿ. ತಕ್ಷಣವೇ ½ ಟೇಬಲ್ಸ್ಪೂನ್ ರೆಡ್ ಚಿಲ್ಲಿ ಸಾಸ್ ಅಥವಾ ಶ್ರೀರಾಚಾ ಸಾಸ್ ಸೇರಿಸಿ ಎಲ್ಲವೂ ಚನ್ನಾಗಿ ಸೇರುವಂತೆ ಮಿಶ್ರಣ ಮಾಡಿ.

ನಂತರ ಅದಕ್ಕೆ ½ ಚಮಚ ಸಿಹಿ ಕೆಂಪು ಚಿಲ್ಲಿ ಸಾಸ್ ಅಥವಾ ಟೊಮೆಟೊ ಕೆಚಪ್ ಸೇರಿಸಿ ಮಿಶ್ರಣ ಮಾಡಿ. ಹಾಗೆಯೇ ¼ ಟೀಚಮಚ ಕರಿಮೆಣಸಿನ ಪುಡಿ ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ.

ಎಲ್ಲವೂ ಸರಿಯಾಗಿ ಮಿಶ್ರಣವಾದ ನಂತರ ಅದಕ್ಕೆ ಅಗತ್ಯವಿರುವಷ್ಟು ಉಪ್ಪು ಸೇರಿಸಿ ಮತ್ತು ಮತ್ತೆ ಮಿಶ್ರಣ ಮಾಡಿ. ಸಾಸ್‌ಗಳಲ್ಲಿ ಈಗಾಗಲೇ ಉಪ್ಪು ಇರುವುದರಿಂದ ಕಡಿಮೆ ಉಪ್ಪನ್ನು ಸೇರಿಸಿ. ನೀವು ಬಯಸಿದರೆ, ನೀವು ಸ್ವಲ್ಪ ಸಕ್ಕರೆಯನ್ನು ಸೇರಿಸಬಹುದು. ಸಿಹಿ ಕೆಂಪು ಮೆಣಸಿನಕಾಯಿ ಸಾಸ್ ಈಗಾಗಲೇ ಸಿಹಿಯಾಗಿರುವುದರಿಂದ ನೋಡಿ ಸೇರಿಸಿ.

ಇದನ್ನೂ ಓದಿ: ಮಸಾಲ ದೋಸೆ, ಸೆಟ್​ ದೋಸೆ ರುಚಿ ಗೊತ್ತು,ಬಾಳೆಹಣ್ಣಿನ ದೋಸೆ ಟೇಸ್ಟ್​ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ಈ ಮಸಾಲೆ ತಯಾರಾದ ಮೇಲೆ ಬಾಣಲೆಗೆ ಹುರಿದ ಇಡ್ಲಿಗಳನ್ನು ಸೇರಿಸಿ. ಎಲ್ಲಾ ಮಸಾಲೆಗಳು ಇಡ್ಲಿ ಜೊತೆ ಚನ್ನಾಗಿ ಮಿಶ್ರಣವಾಗುವಂತೆ ಕಲಸಿ. ಎಲ್ಲಾ ಪದಾಋ್ಥಗಳು ಸರಿಯಾಗಿ ಮಿಶ್ರಣವಾಗಿದೆ ಎಂದು ಖಚಿತವಾದ ಮೇಲೆ ಗ್ಯಾಸ್​ ಆಫ್​ ಮಾಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪನ್ನ ಸಣ್ಣ ಸಣ್ಣ ಚೂರು ಚೂರುಗಳಾಗಿ ಕತ್ತರಿಸಿ ಅಲಂಕಾರಕ್ಕೆ ಹಾಕಿದರೆ ಇಡ್ಲಿ ಮಂಚೂರಿ ರೆಡಿ.
Published by:Sandhya M
First published: