Chutney Recipe: ತೆಂಗಿನಕಾಯಿ ಇಲ್ಲದೇ ಕೇವಲ 5 ನಿಮಿಷದಲ್ಲಿ ಈ ಚಟ್ನಿ ಮಾಡಿ

Chutney Without Coconut: ತೆಂಗಿನಕಾಯಿ ಇಲ್ಲದೇ ಕೇವಲ ಒಂದು ರೀತಿಯ ಚಟ್ನಿ ಅಲ್ಲ, ಹಲವಾರು ರೀತಿಯ ಚಟ್ನಿ ಮಾಡಲು ಸಾಧ್ಯವಿದೆ. ಟೊಮ್ಯಾಟೋ - ಈರುಳ್ಳಿ , ಶೇಂಗಾ, ಶೇಂಗಾ ಮತ್ತು ಕಡಲೇಬೇಳೆ ಹೀಗೆ ವಿವಿಧ ರೀತಿಯ ಚಟ್ನಿ ಮಾಡಬಹುದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ತಿಂಡಿಯಾಗಲಿ (Breakfast Tips) ಅದಕ್ಕೆ ಜೊತೆಗೆ ಏನಾದರೂ ಇರಲೇಬೇಕು. ಉದಾಹರಣೆಗೆ ಇಡ್ಲಿ (Idli) ಸಾಂಬಾರ್, ದೋಸೆ ಚಟ್ನಿ (Dosa) . ಈ ಚಟ್ನಿ ಎಂದರೆ ನೀರು ಚಟ್ನಿ (chutney)  ಎಲ್ಲರಿಗೂ ನೆನಪಾಗುತ್ತದೆ.  ಇನ್ನು ಸಾಮಾನ್ಯವಾಗಿ ಚಟ್ನಿ ಮಾಡುವುದು ಎಂದರೆ ತೆಂಗಿನಕಾಯಿ ಬೇಕಾಗುತ್ತದೆ. ತೆಂಗಿನಕಾಯಿ ಹಾಕಿ ಚಟ್ನಿ ಮಾಡಿದರೆ ಬಹಳ ರುಚಿ ಸಿಗುತ್ತದೆ ಹಾಗೂ ಆರೋಗ್ಯ ಪ್ರಯೋಜನಗಳು ಸಹ ಲಭಿಸುತ್ತದೆ. ಆದರೆ ತೆಂಗಿನಕಾಯಿ ಇಲ್ಲ, ಬೆಳಗ್ಗೆ ದೋಸೆಗೆ ಚಟ್ನಿ ಬೇಕೇ ಬೇಕು, ಇಂಥಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಯೋಚನೆ ಬರುವುದು ಸಾಮಾನ್ಯ. ಆದರೆ ಈಗ ಚಿಂತೆ ಬಿಡಿ. ತೆಂಗಿನಕಾಯಿ ಇಲ್ಲದೇ ಚಟ್ನಿ ಮಾಡುವ ವಿಧಾನ ಇಲ್ಲಿದೆ.

ತೆಂಗಿನಕಾಯಿ ಇಲ್ಲದೇ ಕೇವಲ ಒಂದು ರೀತಿಯ ಚಟ್ನಿ ಅಲ್ಲ, ಹಲವಾರು ರೀತಿಯ ಚಟ್ನಿ ಮಾಡಲು ಸಾಧ್ಯವಿದೆ. ಟೊಮ್ಯಾಟೋ - ಈರುಳ್ಳಿ , ಶೇಂಗಾ, ಶೇಂಗಾ ಮತ್ತು ಕಡಲೇಬೇಳೆ ಹೀಗೆ ವಿವಿಧ ರೀತಿಯ ಚಟ್ನಿ ಮಾಡಬಹುದು.

ತೆಂಗಿನಕಾಯಿ ಇಲ್ಲದೇ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು

ಶೇಂಗಾ ಚಟ್ನಿ 

½ ಕಪ್ ಶೇಂಗಾ


½ ಕಪ್ ಪುಟಾಣಿ/ ಹುರಿದ ಬೇಳೆ


4 ಮೆಣಸಿನಕಾಯಿ


ಸಣ್ಣ ಗಾತ್ರದ ಹುಣಸೆಹಣ್ಣು


½ ಟೀಸ್ಪೂನ್ ಉಪ್ಪು


ಕಪ್ ನೀರು




ಇದನ್ನೂ ಓದಿ: ಬೆಳಗ್ಗೆ ಈ ರೀತಿ ತಿಂಡಿ ತಿಂದ್ರೆ ಶುಗರ್ ಹೆಚ್ಚಾಗುತ್ತಂತೆ ನೋಡಿ

ಶೇಂಗಾ ಚಟ್ನಿ ಮಾಡುವ ವಿಧಾನ


ಮೊದಲು ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ  ½ ಕಪ್ ಶೇಂಗಾವನ್ನು ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದರ ಸಿಪ್ಪೆ ತೆಗೆಯಿರಿ. ಹುರಿದುಕೊಂಡಿರುವುದರಿಂದ ಸಿಪ್ಪೆ ತೆಗೆಯುವುದು ಬಹಳ ಸುಲಭ.


ಈಗ ಅದೇ ಬಾಣಲೆಗೆ  ½ ಕಪ್  ಪುಟಾಣಿ ಹಾಕಿ ಮತ್ತೆ ಹುರಿದುಕೊಳ್ಳಿ. ಶೇಂಗಾ ಮತ್ತು ಪುಟಾಣಿ ಹುರಿದುಕೊಂಡ ನಂತರ, ಅದನ್ನು ತಣ್ಣಗಾಗಲು ಬಿಡಿ. ಅದು ಸಂಪೂರ್ಣವಾಗಿ ತಣ್ಣಗಾದರೆ, ಮಿಕ್ಸಿ ಜಾರ್‌ಗೆ ಹಾಕಿ. ಅದಕ್ಕೆ  4 ಮೆಣಸಿನಕಾಯಿ, ಸ್ವಲ್ಪ ಹುಣಸೆಹಣ್ಣು ಮತ್ತು ½ ಟೀಸ್ಪೂನ್ ಉಪ್ಪು,  ½ ಕಪ್ ನೀರು ಸೇರಿಸಿ, ಚೆನ್ನಾಗಿ ಪೇಸ್ಟ್​ ಮಾಡಿಕೊಳ್ಳಿ. ಇದು ಚಟ್ನಿಯ ರಿತಿ ನುಣ್ಣಗೆ ಪೇಸ್ಟ್​ ಆದ ನಂತರ,  ದೊಡ್ಡ ಬಟ್ಟಲಿಗೆ ಹಾಕಿ. ನಿಮಗೆ ಅಗತ್ಯವಿದ್ದರೆ ನೀರು ಹಾಕಿ.



ದನ್ನೂ ಓದಿ: ಸ್ಪೈಸಿ ಪಾವ್ ಬಾಜಿ ಸವಿಯಲು ಬೆಂಗಳೂರಿನ ಈ ಸ್ಥಳಗಳು ಬೆಸ್ಟ್ ಅಂತೆ



ಈಗ ಇದಕ್ಕೆ ಒಗ್ಗರಣೆ ಹಾಕಬೇಕು.  ಒಂದು ಒಗ್ಗರಣೆ ಪಾತ್ರೆಯಲ್ಲಿ 2 ಚಮಚ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಅದಕ್ಕೆ ಕರಿಬೇವು, ಉದ್ದಿನ ಬೇಳೆ ಸೇರಿಸಿ ಒಗ್ಗರಣೆಯನ್ನು ಮಾಡಿ. ಈ ಒಗ್ಗರಣೆಯನ್ನು ತಯಾರಿಸಿಕೊಂಡಿರುವ ಚಟ್ನಿ ಮಿಶ್ರಣಕ್ಕೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು  ದೋಸೆ, ಇಡ್ಲಿ ಹೀಗೆ ಚಪಾತಿ ಜೊತೆ ಸಹ ಸವಿಯಬಹುದು. ನೀವು ಶೇಂಗಾ ಬದಲು ಇಲ್ಲಿ ಕಡಲೇಬೇಳೆಯನ್ನು ಸಹ ಬಳಸಬಹುದು. ಅದರ ರುಚಿ ಸಹ ಬಹಳ ಚೆನ್ನಾಗಿರುತ್ತದೆ.

Published by:Sandhya M
First published: