Breakfast Recipe: ಅಕ್ಕಿ ರೊಟ್ಟಿ ಮಾಡಿದ್ಮೇಲೆ ಎಣ್ಣೆಗಾಯಿ ಇಲ್ಲ ಅಂದ್ರೆ ಹೇಗೆ? ಇಲ್ಲಿದೆ ರೆಸಿಪಿ

Badanekayi Ennegayi: ಅಕ್ಕಿ ರೊಟ್ಟಿ ಎಂದ ತಕ್ಷಣ ನೆನಪಾಗುವುದು ಎಣಗಾಯಿ. ಈ ಬದನೆಕಾಯಿ ಎಣಗಾಯಿ ಅಥವಾ ಎಣ್ಣೆಗಾಯಿ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ಅದನ್ನು ಮಾಡುವುದು ಕಷ್ಟ ಅಂತ ಸುಮ್ಮನಿರುತ್ತಾರೆ. ಆದರೆ ಬದನೆಕಾಯಿ ಎಣಗಾಯಿಯನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಭಾರತದ (South Indian) ಭಕ್ಷ್ಯಗಳು (Foods) ವಿಭಿನ್ನ ಪಾಕ ಪದ್ಧತಿಯನ್ನು(Food) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರಹಾಗೆಯೇ ಇಲ್ಲಿ ಸಾಮಾನ್ಯವಾಗಿ ಅಕ್ಕಿ ರೊಟ್ಟಿ ಮಾಡಲಾಗುತ್ತದೆ. ಅಕ್ಕಿ ರೊಟ್ಟಿ (Akki Rotti) ಎಂದ ತಕ್ಷಣ ನೆನಪಾಗುವುದು ಎಣಗಾಯಿ. ಈ ಬದನೆಕಾಯಿ ಎಣಗಾಯಿ (Badanekayi Ennegayi) ಅಥವಾ ಎಣ್ಣೆಗಾಯಿ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಆದರೆ ಅದನ್ನು ಮಾಡುವುದು ಕಷ್ಟ ಅಂತ ಸುಮ್ಮನಿರುತ್ತಾರೆ. ಆದರೆ ಬದನೆಕಾಯಿ ಎಣಗಾಯಿಯನ್ನು ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು
ಗುಂಡು ಬದನೆಕಾಯಿ - 10-15

ತೆಂಗಿನಕಾಯಿ - ಅರ್ಧ ಹೋಳು

ಚಕ್ಕೆ, ಲವಂಗ - ಸ್ವಲ್ಪ

ಗಸಗಸೆ - ಸ್ವಲ್ಪ

ಈರುಳ್ಳಿ - 2-3

ಬೆಳ್ಳುಳ್ಳಿ - ಸ್ವಲ್ಪ

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡಿ ಈ ಮೈದಾ ದೋಸೆ- ಇಲ್ಲಿದೆ ರೆಸಿಪಿ

ಕೊತ್ತಂಬರಿ ಸೊಪ್ಪು - ಸ್ವಲ್ಪ

ಟೊಮೆಟೋ - 2

ಶುಂಠಿ - ಸ್ವಲ್ಪ

ದನಿಯಾ ಪುಡಿ - 1 ಚಮಚ

ಖಾರದ ಪುಡಿ - 2-3 ಚಮಚ

ಎಣ್ಣೆ – ಸ್ವಲ್ಪ

ಮಾಡುವ ವಿಧಾನ
2 ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಂಡು ಇಟ್ಟುಕೊಳ್ಳಿ. ನಂತರ ತೆಂಗಿನಕಾಯಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಗಸಗಸೆ, ಚಕ್ಕೆ, ಲವಂಗ, ಎಲ್ಲವನ್ನೂ ಸೇರಿಸಿ ರುಬ್ಬಿಕೊಳ್ಳಿ. ನಂತರ ಮತ್ತೊಮ್ಮೆ ಈರುಳ್ಳಿ, ಟೊಮೆಟೋ, ದನಿಯಾ ಪುಡಿ, ಖಾರದ ಪುಡಿ ಹಾಕಿ ನುಣ್ಣಗೆ ರುಬ್ಬಿಟ್ಟುಕೊಂಡರೆ ರುಚಿಯಾದ ಮಸಾಲೆ ತಯಾರಾಗುತ್ತದೆ.

ಈಗ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಗುಂಡು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ.  ಮತ್ತೊಂದು ಪಾತ್ರೆ ತೆಗೆದುಕೊಂಡು ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ,ಅರಿಶಿಣದ ಪುಡಿ, ಉಪ್ಪು ಹಾಗೂ ಎಣ್ಣೆ 2 ಚಮಚ ಹಾಕಿ ಮಿಶ್ರಣ ಮಾಡಿ.

ನಂತರ  ಈ ಮಸಾಲೆಯನ್ನು ಕತ್ತರಿಸಿಕೊಂಡ ಬದನೆಕಾಯಿಯೊಳಗೆ ತುಂಬಿ. ನಂತರ ಒಂದು ಪಾತ್ರೆತೆಗೆದುಕೊಂಡು ಒಲೆಯ ಮೇಲಿಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಿ. ಇದು ಕೆಂಪಾಗಾದ ನಂತರ ಕತ್ತರಿಸಿಟ್ಟುಕೊಂಡ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.

ಇದನ್ನೂ ಓದಿ: ಸೂಪರ್ ಸಂಡೇಗೆ ಟ್ರೈ ಮಾಡಿ ಆರೋಗ್ಯಕರ ರಾಗಿ ಇಡ್ಲಿ- ಇಲ್ಲಿದೆ ರೆಸಿಪಿ

ನಂತರ ಇದಕ್ಕೆ ಮಸಾಲೆ ತುಂಬಿದ ಬದನೆಕಾಯಿ ಹಾಗೂ ಉಳಿದ ಮಸಾಲೆಯನ್ನು ಹಾಕಿ. ಬದನೆಕಾಯಿ ಬೇಯಲು ಬೇಕಾಗುವಷ್ಟು ನೀರು ಹಾಕಿ ಅರ್ಧ ಗಂಟೆಗಳ ಕಾಲ ಬೇಯಲು ಬಿಟ್ಟರೆ ಬದನೆಕಾಯಿ ಎಣ್ಣೆಗಾಯಿ ರೆಡಿ.
Published by:Sandhya M
First published: