ನೀವು ಟೋಫುವನ್ನು (Tofu) ತುಂಬಾನೇ ಇಷ್ಟ ಪಡುವವರಾಗಿದ್ದರೆ, ಇಲ್ಲಿದೆ ನೋಡಿ ಒಂದು ಹೊಸ ಪಾಕವಿಧಾನ. ನಿಮ್ಮ ಮನೆಯಲ್ಲಿರುವ ಮಸೂರ್ ದಾಲ್ (ಚನ್ನಂಗಿ ಬೇಳೆ) (Masoor dal) ಯಿಂದ ಟೋಫುವನ್ನು ಒಮ್ಮೆ ಮಾಡಿಕೊಂಡು ನೋಡಿ, ಇದು ಹೆಚ್ಚಿನ ಪ್ರೋಟೀನ್ (Protein) ಅನ್ನು ಸಹ ಹೊಂದಿರುತ್ತದೆ ಮತ್ತು ಇದು ಸಾಮಾನ್ಯ ಫ್ಯಾನ್ಸಿ ಟೋಫುಗೆ ಒಂದು ಅಗ್ಗದ ಪರ್ಯಾಯವಾಗಿದೆ. ಕ್ಷೀರ ಪರಿಮಳದೊಂದಿಗೆ, ಮಸೂರ್ ದಾಲ್ ಟೋಫು ರುಚಿ ಮತ್ತು ಪೌಷ್ಠಿಕಾಂಶದ (Nutrition) ಮೌಲ್ಯ ಎರಡರಲ್ಲೂ ಸೋಯಾ ಟೋಫುಗೆ ಸಾಕಷ್ಟು ಹೋಲುತ್ತದೆ. ಮನೆಯಲ್ಲಿ ಟೋಫು ತಯಾರಿಸಲು ನಿಮಗೆ ಒಂದು ಕಪ್ ಮಸೂರ್ ದಾಲ್ ಮತ್ತು ಸ್ವಲ್ಪ ನೀರು ಬೇಕು. ಅದೇ ಹಳೆಯ ಪನೀರ್ (Paneer) ರ್ಭಕ್ಷ್ಯಗಳನ್ನು ಸೇವಿಸಿ ನಿಮಗೆ ಬೇಸರವಾಗಿದ್ದರೆ, ಈ ವಿಶಿಷ್ಟವಾದ ಮಸೂರ್ ದಾಲ್ ಟೋಫು ಪಾಕವಿಧಾನವನ್ನು ಒಮ್ಮೆಯಾದರೂ ನೀವು ಪ್ರಯತ್ನಿಸಲೇಬೇಕು.
ಮಸೂರ್ ದಾಲ್ ನೊಂದಿಗೆ ಟೋಫು ಮಾಡಿಕೊಳ್ಳಲು ಮೊದಲಿಗೆ ಏನು ಮಾಡಬೇಕು?
ಮೊದಲನೆಯದಾಗಿ, ಒಂದು ಬೌಲ್ ಗೆ 1 ಕಪ್ ಮಸೂರ್ ದಾಲ್ ಅನ್ನು ಸೇರಿಸಿ. ಅದನ್ನು ನೀರಿನಿಂದ ತುಂಬಿಸಿ, ನಿಧಾನವಾಗಿ ಅದನ್ನು ತೊಳೆಯಿರಿ ಮತ್ತು ನೀರನ್ನು ಬಸಿದುಕೊಳ್ಳಿ. ದಾಲ್ ಅನ್ನು ಸ್ವಚ್ಛಗೊಳಿಸಲು ಕನಿಷ್ಠ 3 ರಿಂದ 4 ಬಾರಿ ಈ ಹಂತವನ್ನು ಪುನರಾವರ್ತಿಸಿ. ಈಗ ತೊಳೆದ ಬೇಳೆಯನ್ನು ಮತ್ತೊಂದು ಬೌಲ್ ಗೆ ಸೇರಿಸಿ ಮತ್ತು 1 1/2 ಕಪ್ ಕುದಿಯುವ ನೀರಿನಲ್ಲಿ ಇದನ್ನು ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ.
ನೀರು ತಣ್ಣಗಾದ ನಂತರ, ನೀರಿನೊಂದಿಗೆ ಬೇಳೆಯನ್ನು ಬ್ಲೆಂಡರ್ ಗೆ ಸೇರಿಸಿ. ಈಗ ನಯವಾದ ಮಿಶ್ರಣವನ್ನು ರೂಪಿಸಲು ಅದನ್ನು ಚೆನ್ನಾಗಿ ಕಲಸಿಕೊಳ್ಳಿರಿ. ಇದನ್ನು 15 ಸೆಕೆಂಡುಗಳ ಅಂತರದಲ್ಲಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸುಮಾರು 1/4 ಕಪ್ ಹೆಚ್ಚು ನೀರನ್ನು ಸೇರಿಸಿ. ನೀವು ಮಧ್ಯದಲ್ಲಿ ಬದಿಗಳನ್ನು ಸ್ಕ್ರ್ಯಾಪ್ ಮಾಡಬಹುದು ಮತ್ತು ನಯವಾದ ಸ್ಥಿರತೆಯನ್ನು ಪಡೆಯಲು ಹೆಚ್ಚಿನ ವೇಗದಲ್ಲಿ ಮತ್ತೆ ಮಿಶ್ರಣ ಮಾಡಬಹುದು.
ಮಸೂರ್ ದಾಲ್ ನೊಂದಿಗೆ ಟೋಫು ಮಾಡಿಕೊಳ್ಳುವ ವಿಧಾನ
ಈಗ ಒಂದು ಬಾಣಲೆಯಲ್ಲಿ 1 1/2 ಕಪ್ ನೀರನ್ನು ಕುದಿಸಿ. ಬಾಣಲೆಗೆ ದಾಲ್ ಮಿಶ್ರಣವನ್ನು ಸೇರಿಸಿರಿ. ಮಧ್ಯಮ ಉರಿಯಲ್ಲಿ ಸುಮಾರು 8 ರಿಂದ 10 ನಿಮಿಷಗಳ ಕಾಲ ಬೇಯಿಸಿ. ಅದು ತಳದಲ್ಲಿ ಅಂಟಿಕೊಳ್ಳುವುದನ್ನು ತಡೆಯಲು ಸ್ಟೋವ್ ನ ಉರಿಯನ್ನು ಮಧ್ಯಮವಾಗಿಡಿ. ಸುಮಾರು 8 ನಿಮಿಷಗಳ ನಂತರ, ಮಿಶ್ರಣವು ದಪ್ಪವಾಗಿದೆ ಮತ್ತು ಹೊಳಪಿನಿಂದ ಕೂಡಿದೆ ಎಂದು ನೀವು ಗಮನಿಸುತ್ತೀರಿ. ಸ್ಟೋವ್ ವನ್ನು ನೀವು ಸ್ವಿಚ್ ಆಫ್ ಮಾಡಿ ಮತ್ತು ಸುಮಾರು 10 ನಿಮಿಷಗಳ ಕಾಲ ಅದನ್ನು ತಣ್ಣಗಾಗಲು ಬಿಡಿ.
ಈಗ ಒಂದು ಗಾಜಿನ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮಿಶ್ರಣವನ್ನು ಸುರಿಯಿರಿ. ಅದನ್ನು ಸಮನಾಗಿ ಹರಡಿ. ಪದರದ ದಪ್ಪವು ಕನಿಷ್ಠ 1 ಇಂಚು ಇರಬೇಕು. ಈಗ ಪಾತ್ರೆಯನ್ನು ಮುಚ್ಚಳದಿಂದ ಮುಚ್ಚಿ ಮತ್ತು ಟೋಫುವನ್ನು ಸುಮಾರು 4 ರಿಂದ 5 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಫ್ರಿಡ್ಜ್ ನಲ್ಲಿಡಿ.
ಮರುದಿನ ಟೋಫುವನ್ನು ಫ್ರಿಡ್ಜ್ ನಿಂದ ಹೊರತೆಗೆದು ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿರಿ ಮತ್ತು ಪಾಕವಿಧಾನಗಳಲ್ಲಿ ಬಳಸಿಕೊಳ್ಳಿರಿ. ನೀವು ಅದರಲ್ಲಿ ಉಳಿದ ಭಾಗವನ್ನು ಮತ್ತೆ ಫ್ರಿಡ್ಜ್ ನಲ್ಲಿ ಒಂದು ಗಾಳಿಯಾಡದ ಕಂಟೇನರ್ ನಲ್ಲಿರಿಸಿ ಸಂಗ್ರಹಿಸಬಹುದು, ಇದು ಸುಲಭವಾಗಿ 4 ರಿಂದ 5 ದಿನಗಳವರೆಗೆ ಉಳಿಯುತ್ತದೆ. ಮಸೂರ್ ದಾಲ್ ಟೋಫುವನ್ನು ಸ್ಟಿರ್ ಫ್ರೈಗಳಲ್ಲಿ ಬಳಸಬಹುದು, ಸಲಾಡ್ ಗಳಿಗೆ ಸೇರಿಸಬಹುದು ಮತ್ತು ಯಾವುದೇ ಪನೀರ್-ಆಧಾರಿತ ಭಕ್ಷ್ಯದಲ್ಲಿ ಸಹ ಬಳಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ